ಮಂಗಳೂರು/ಕೇರಳ : ಯೆಮನ್ ಪ್ರಜೆಯನ್ನು ಹತ್ಯೆ ಮಾಡಿದ ಆರೋಪಕ್ಕೆ ಗುರಿಯಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರಿಗೆ ಗಲ್ಲು ಶಿಕ್ಷೆ ನೀಡಲು ಅಲ್ಲಿನ ಅಧ್ಯಕ್ಷ ರಷದ್-ಅಲ್-ಅಮಿನಿ ಅನುಮೋದನೆ ನೀಡಿದ್ದಾರೆ. ಮೂಲಗಳ ಪ್ರಕಾರ ಇನ್ನು ಒಂದು ತಿಂಗಳಲ್ಲಿ ಶಿಕ್ಷೆ ಜಾರಿಯಾಗಲಿದೆ.
ಯೆಮನ್ ಅಧ್ಯಕ್ಷರ ತೀರ್ಮಾನದ ಬಗ್ಗೆ ಪ್ರಿಯಾ ತಾಯಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜತೆಗೆ ಕೇಂದ್ರ ಸರ್ಕಾರ ಸೂಕ್ತ ನೆರವು ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಬಗ್ಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಅಧಿಕೃತ ತಾಣದಲ್ಲಿ ವಕ್ತಾರ ರಣಧೀರ್ ಜೈಸ್ವಾಲ್ ಅವರು ಹೇಳಿಕೆ ಬಿಡುಗಡೆ ಮಾಡಿದ್ದು, ನಿಮಿಷಾ ಪ್ರಿಯಾಗೆ ಯೆಮೆನ್ ಶಿಕ್ಷೆ ವಿಧಿಸುವ ಬಗ್ಗೆ ನಮಗೆ ತಿಳಿದಿದೆ. ನಿಮಿಷಾ ಪ್ರಿಯಾ ಅವರ ಕುಟುಂಬವು ಪರ್ಯಾಯ ಆಯ್ಕೆಗಳನ್ನು ಅನ್ವೇಷಿಸುತ್ತಿದೆ ಎಂಬುವುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಈ ವಿಷಯದಲ್ಲಿ ಸರ್ಕಾರವು ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲಿದೆ’ ಎಂದು ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
2017ರಲ್ಲಿ ಹತ್ಯೆ ಪ್ರಕರಣದಲ್ಲಿ ಪ್ರಿಯಾ ಬಂಧನ
ಕೇರಳದ ಪಾಲಕ್ಕಾಡ್ ಮೂಲದವರಾದ ನಿಮಿಷಾ ಪ್ರಿಯಾ ಅವರನ್ನು ಜುಲೈ 2017ರಲ್ಲಿ ಯೆಮೆನ್ ಪ್ರಜೆಯಾದ ತಲಾಲ್ ಅಬ್ದೋ ಮೆಹದಿ ಹತ್ಯೆ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಯೆಮೆನ್ ರಾಜಧಾನಿ ಸನಾದಲ್ಲಿರುವ ವಿಚಾರಣಾ ನ್ಯಾಯಾಲಯವು 2020ರಲ್ಲಿ ಆಕೆಗೆ ಮರಣದಂಡನೆ ವಿಧಿಸಿತ್ತು. ನವೆಂಬರ್ 2023ರಲ್ಲಿ ಆಕೆಯ ಮನವಿಯನ್ನು ಯೆಮೆನ್ ನ ಸುಪ್ರೀಂ ಜುಡಿಷಿಯಲ್ ಕೌನ್ಸಿಲ್ ವಜಾಗೊಳಿಸಿತ್ತು.
ಮಗಳ ಬಿಡುಗಡೆಗೆ ಪ್ರಯತ್ನಿಸುತ್ತಿರುವ ತಾಯಿ
ಮಗಳ ಬಿಡುಗಡೆಗಾಗಿ ತಾಯಿ ಪ್ರೇಮಾ ಕುಮಾರಿ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಪ್ರಿಯಾ ತಾಯಿ ಪ್ರೇಮಾ ಕುಮಾರಿ ಏಪ್ರೀಲ್ 2024 ರಲ್ಲಿ ಯೆಮೆನ್ ಗೆ ಹೋಗಿ 11 ವರ್ಷಗಳ ನಂತರ ಮೊದಲ ಬಾರಿಗೆ ತಮ್ಮ ಮಗಳನ್ನು ಅಲ್ಲಿನ ಜೈಲಿನಲ್ಲಿ ಭೇಟಿಯಾಗಿದ್ದರು. ಅಂದಿನಿಂದ, ಆಕೆಯ ತಾಯಿ ತನ್ನ ಮಗಳ ಬಿಡುಗಡೆಗಾಗಿ ಪ್ರಯತ್ನಿಸುತ್ತಲೇ ಇದ್ದಾರೆ. ಇತ್ತೀಚೆಗೆ ತಮ್ಮ ಮಗಳನ್ನು ಶಿಕ್ಷೆಯಿಂದ ಪಾರು ಮಾಡಲು ಅಗತ್ಯ ನೆರವನ್ನು ಸಂಬಂಧಪಟ್ಟವರು ನೀಡಬೇಕು ಎಂದು ಮಾಧ್ಯಮದ ಮೂಲಕ ಮೊರೆಯಿಟ್ಟಿದ್ದರು.
ಮರಣದಂಡನೆಯಿಂದ ಪಾರಾಗಲು ಇದೆ ಒಂದು ಅವಕಾಶ !
ನಿಮಿಷಾ ಪ್ರಿಯಾ ಅವರಿಗೆ ಮರಣದಂಡನೆ ಶಿಕ್ಷೆ ಜಾರಿಯಾಗಿದ್ದರೂ, ಅದರಿಂದ ವಿನಾಯಿತಿ ಪಡೆದುಕೊಳ್ಳಲು ಒಂದು ಅವಕಾಶ ಇದೆ. ಅದುವೇ, ಮೃತ ತಲಾಲ್ ಅಬ್ದೋ ಮೆಹದಿಯ ಕುಟುಂಬ ಮತ್ತು ಅವರ ಬುಡಕಟ್ಟು ನಾಯಕ ಕ್ಷಮೆ ನೀಡುವುದರ ಮೇಲೆ ಅವಲಂಬಿತವಾಗಿದೆ.
ಮೃತ ವ್ಯಕ್ತಿಯ ಕುಟುಂಬವು ಕೇರಳದ ನರ್ಸ್ ನಿಮಿಷಾ ಅವರನ್ನು ಕ್ಷಮಿಸಿ, ಪರಿಹಾರ ಹಣವನ್ನು ಸ್ವೀಕರಿಸಿದರೆ ಆಕೆಯ ಮರಣದಂಡನೆಯನ್ನು ಮನ್ನಾ ಮಾಡುವ ಅವಕಾಶ ಸಿಗಲಿದೆ. ಒಂದು ವೇಳೆ ಅವರು ಕ್ಷಮೆಯನ್ನು ಪಡೆಯಲು ವಿಫಲವಾದರೆ ಪ್ರಿಯಾಗೆ ಒಂದು ತಿಂಗಳೊಳಗೆ ಮರಣದಂಡನೆ ಶಿಕ್ಷೆಯಾಗಲಿದೆ.
ಮೃತ ತಲಾಲ್ ಅಬ್ದೋ ಮೆಹದಿಯ ಕುಟುಂಬ ಮತ್ತು ಅವರ ಬುಡಕಟ್ಟು ನಾಯಕನ ಜೊತೆ ಈ ಕುರಿತು ಮಾತುಕತೆ ನಡೆಯುತ್ತಿದ್ದು, ನಿಮಿಷಾ ಪ್ರಿಯಾ ಅವರಿಗೆ ನೇಮಕವಾದ ವಕೀಲರಿಗೆ ಹಣ ಪಾವತಿ ವಿಳಂಬವಾದ್ದರಿಂದ ಮಾತುಕತೆ ಸ್ಥಗಿತಗೊಂಡಿದೆ. ವಕೀಲರು ಮಾತುಕತೆ ಪೂರ್ವ ಶುಲ್ಕವಾಗಿ ಎರಡು ಕಂತುಗಳಲ್ಲಿ 40,000 ಡಾಲರ್ (32,45,500 ರೂ.) ಗೆ ಬೇಡಿಕೆ ಇಟ್ಟಿದ್ದಾರೆ. ಸಂಪೂರ್ಣ ಮೊತ್ತವನ್ನು ಅವರಿಗೆ ನೀಡದ ಹೊರತು ಅವರು ಮಾತುಕತೆ ಮುಂದುವರೆಸಲು ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ.
ಏನಿದು ಪ್ರಕರಣ ?
ಕೇರಳದ ಪಾಲಕ್ಕಾಡ್ ಮೂಲದ ನಿಮಿಷಾ 2008 ರಲ್ಲಿ ಯೆಮೆನ್ ಗೆ ತೆರಳಿದ್ದರು. ಮೊದಲು ಅಲ್ಲಿನ ಕೆಲವು ಆಸ್ಪತ್ರೆಗಳಲ್ಲಿ ಕೆಲಸ ಮಾಡಿಕೊಂಡಿದ್ದರು. 2015ರಲ್ಲಿ ಯೆಮೆನ್ ನಲ್ಲಿ ತನ್ನದೇ ಆದ ಕ್ಲಿನಿಕ್ ಅನ್ನು ಪ್ರಾರಂಭಿಸಲು ಮುಂದಾಗಿದ್ದರು. ಅದಕ್ಕಾಗಿ ಅಲ್ಲಿನ ನಿಯಮದಂತೆ ಸ್ಥಳೀಯ ತಲಾಲ್ ಅಬೊ ಮೆಹದಿ ಜತೆಗೆ ಪಾಲುದಾರಿಕೆ ಮಾಡಿಕೊಂದ್ದರು. ಒಂದು ಹಂತದಲ್ಲಿ ಆತನ ಜತೆಗೆ ಭಿನ್ನಾಭಿಪ್ರಾಯ ಉಂಟಾಗಿತ್ತು.
ಈ ನಡುವೆ ನರ್ಸ್ ದೇಶ ತೊರೆಯದಂತೆ ಆತ ಪಾಸ್ ಪೋರ್ಟ್ ವಶಪಡಿಸಿಕೊಂಡಿದ್ದ. ಅದನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಅವರು ಆತನಿಗೆ ಮತ್ತು ಬರುವ ಇಂಜೆಕ್ಷನ್ ನೀಡಿದ್ದರು. ಆದರೆ, ಅದು ಓವರ್ ಡೋಸ್ ಆದ ಪರಿಣಾಮ ಆತ ಮೃತಪಟ್ಟಿದ್ದ.
ಸುರತ್ಕಲ್: ಚಿತ್ರಾಪುರ ಕುಳಾಯಿ ಸಮುದ್ರ ತೀರದಲ್ಲಿ ಉತ್ತರ ಪ್ರದೇಶ ಮೂಲದ ವ್ಯಕ್ತಿಯೊಬ್ಬರ ಶವ ಶುಕ್ರವಾರ ಸಂಜೆ ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.
ಮೃತ ವ್ಯಕ್ತಿಯನ್ನು ಮುಹಮ್ಮದ್ ಖುರೇಶಿ (35) ಎಂದು ಗುರುತಿಸಲಾಗಿದೆ.
ಮೃತದೇಹದ ಪ್ಯಾಂಟಿನ ಜೇಬಿನಲ್ಲಿ ಪತ್ತೆಯಾದ ಕೆಲವು ದಾಖಲೆಗಳ ಆಧಾರದಲ್ಲಿ ಮೃತದೇಹದ ಗುರುತು ಪತ್ತೆಹಚ್ಚಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸಮುದ್ರದಲ್ಲಿ ಈಜುವಾಗ ಅಥವಾ ಯಾವುದೋ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು/ಬೀಜಿಂಗ್ : ಚೀನಾದಲ್ಲಿ ಕೊರೊನಾ ವೈರಸ್ ಮಾದರಿಯ ಹೂಮನ್ ಮೆಟಾಪ್ ನ್ಯುಮೋ (HMPV) ಸೋಂಕು ಹರಡಿ ಭಾರೀ ಆತಂಕ ಸೃಷ್ಟಿಸಿದೆ.
ಈ ಹಿಂದೆ ಚೀನಾದಲ್ಲಿ ಜನ್ಮ ತಾಳಿದ್ದ ಕೊರೊನಾ ವೈರಸ್ ಮಹಾಮಾರಿ ಇಡೀ ಜಗತ್ತನ್ನು ಆವರಿಸಿ, ಲಾಕ್ ಡೌನ್ ಪರಿಸ್ಥಿತಿಗೆ ದೂಡಿತ್ತು. ವೈರಲ್ ಸೋಂಕಿಗೆ ಲೆಕ್ಕವಿಲ್ಲದಷ್ಟು ಜನ ಜೀವವನ್ನು ಕಳೆದುಕೊಂಡರು. ಅಂದು ಜನರನ್ನು ಕಾಡಿದ್ದ ಕೋವಿಡ್ ಈಗ ಐದು ವರ್ಷಗಳ ನಂತರ ಮತ್ತೊಂದು ರೂಪದಲ್ಲಿ ಚೀನಾದಲ್ಲಿ ಪತ್ತೆಯಾಗಿರುವುದು ಸದ್ಯ ಜಗತ್ತನ್ನು ಭಾರೀ ಆತಂಕಕ್ಕೆ ದೂಡಿದೆ.
ಭಾರತೀಯ ಆರೋಗ್ಯ ಸಂಸ್ಥೆ ಮಾಹಿತಿ
ಕೋವಿಡ್ ನ ರೀತಿಯಲ್ಲಿ ಪತ್ತೆಯಾಗಿರುವ ಈ ವೈರಸ್ ನ ಹೆಸರು ಹ್ಯೂಮನ್ ಮೆಟಾಪ್ ನ್ಯುಮೋ ವೈರಸ್ (HMPV) ಎಂದು ಹೇಳಲಾಗಿದೆ. ಈ ಖಾಯಿಲೆ ಕೋವಿಡ್ ನಷ್ಟೇ ಮಾರಕ ಎನ್ನಲಾಗಿದ್ದು, ಈಗಾಗಲೇ ಹಲವರು ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ ಹಾಗೂ ಚೀನಾದ ಆಸ್ಪತ್ರೆಗಳಲ್ಲಿ ಹಾಸಿಗೆಯು ಸಿಗದಷ್ಟು ರೋಗಿಗಳು ಆವರಿಸಿಕೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಈ ಕುರಿತು ಭಾರತೀಯ ಆರೋಗ್ಯ ಸಂಸ್ಥೆ ಮಾಹಿತಿ ಹಂಚಿಕೊಂಡಿದ್ದು, ಯಾರೂ ಸಹ ಆತಂಕ, ಭಯ ಪಡುವ ಅಗತ್ಯವಿಲ್ಲ ಎಂದು ತಿಳಿಸಿದೆ.
ಈ ಬಗ್ಗೆ ಮಾತನಾಡಿದ ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯದ (DGHS) ಡಾ. ಅತುಲ್ ಗೋಯೆಲ್, ‘ಎಚ್ಚರಿಕೆಯ ಅಗತ್ಯವಿಲ್ಲ, ಅಲಾರಂ ಬೇಕಿಲ್ಲ. ಚೀನಾದಲ್ಲಿ HMPV ನಿಗೂಢ ವೈರಸ್ ಶೀತವನ್ನು ಉಂಟುಮಾಡುವ ಇತರೆ ಉಸಿರಾಟದ ವೈರಸ್ ನಂತೆ. ಇದು ಶೀತ-ಕೆಮ್ಮು ರೋಗ ಲಕ್ಷಣಗಳನ್ನು ತೋರಿಸುತ್ತದೆ. ಇದಕ್ಕೆ ತೀರ ಭಯ ಪಡುವ ಅಗತ್ಯವಿಲ್ಲ’ ಎಂದು ತಿಳಿಸಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯದ ಅಡಿಯಲ್ಲಿ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (NCDC), ಅಂತರಾಷ್ಟ್ರೀಯ ಏಜೆನ್ಸಿಗಳೊಂದಿಗೆ ಸಂಪರ್ಕದಲ್ಲಿದೆ. ನಾವು ಇಲ್ಲಿನ ಪರಿಸ್ಥಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುತ್ತೇವೆ. ಮಾಹಿತಿಯನ್ನು ಆಗಾಗ್ಗೆ ಅಪ್ಡೇಟ್ ಮಾಡುತ್ತಿರುತ್ತೇವೆ ಮತ್ತು ಅದಕ್ಕೆ ಅನುಗುಣವಾಗಿ ನವೀಕರಿಸುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.
HMPV ವೈರಸ್ ಲಕ್ಷಣಗಳು ಏನು ?
ಕೆಮ್ಮು, ಜ್ವರ, ಮೂಗು ಕಟ್ಟುವುದು, ಶೀತ ಈ ವೈರಸ್ ನ ಸಾಮಾನ್ಯ ಲಕ್ಷಣಗಳಾಗಿವೆ. HMPV ವೈರಸ್ ತಡೆಗಟ್ಟಲು ಯಾವುದೇ ಲಸಿಕೆ ಲಭ್ಯವಿಲ್ಲ. ಜನದಟ್ಟಣೆ ಇರುವ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ, ಆಗಾಗ್ಗೆ ಕೈ ತೊಳೆಯುವುದಾಗಿದೆ. ಜೊತೆಗೆ ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು. ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದಾಗಿದೆ.
ಮಂಗಳುರು/ಛತ್ತೀಸ್‌ಗಢ : ಭ್ರಷ್ಟಾಚಾರದ ಕುರಿತು ವರದಿ ಮಾಡಿದ ಕೆಲವೇ ದಿನಗಳಲ್ಲಿ ಸ್ವತಂತ್ರ ಪತ್ರಕರ್ತ ಮುಖೇಶ್ ಚಂದ್ರಕರ್ ಸೆಪ್ಟಿಕ್ ಟ್ಯಾಂಕ್ ನಲ್ಲಿ ಮೃ*ತಪಟ್ಟ ಸ್ಥಿತಿಯಲ್ಲಿ ಪ*ತ್ತೆಯಾದ ಘಟನೆ ಛತ್ತೀಸ್‌ಗಢದ ಬಿಜಾಪುರದಲ್ಲಿ ನಡೆದಿದೆ.
ಬಸ್ತಾರ್ ಎಂಬ ಪ್ರದೇಶದಲ್ಲಿ ಮಾವೋವಾದಿ ಸಂಘರ್ಷದ ಕುರಿತು ವರದಿ ಮಾಡಿ ಮನ್ನಣೆ ಗಳಿಸಿದ್ದ ಪತ್ರಕರ್ತ ಮುಖೇಶ್ ಚಂದ್ರಕರ್ ಹೆದ್ದಾರಿ ಯೋಜನೆಯಲ್ಲಿನ ಹಗರಣದ ಕುರಿತು ಇತ್ತೀಚೆಗೆ ವರದಿ ಮಾಡಿದ್ದರು. ಹೆದ್ದಾರಿ ಯೋಜನೆಯಲ್ಲಿನ ಹಗರಣವನ್ನು ಬಹಿರಂಗಪಡಿಸಿದ್ದಕ್ಕಾಗಿ ಅವರಿಗೆ ಬೆದರಿಕೆ ಕರೆ ಬಂದಿತ್ತು ಎಂದು ಮೃ*ತ ಪತ್ರಕರ್ತನ ಕುಟುಂಬವು ಆರೋಪಿಸಿದೆ. ಜ.1ರಂದು ಮನೆಯಿಂದ ತೆರಳಿದ್ದ ಮುಖೇಶ್ ಬಳಿಕ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ, ಮೊಬೈಲ್ ಸಹ ಫೋನ್ ಸ್ವಿಚ್ ಆಫ್ ಆಗಿತ್ತು. ಈ ಕುರಿತು ಮುಖೇಶ್ ಸಹೋದರ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಮುಖೇಶ್ ನಾಪತ್ತೆ ಹಿನ್ನೆಲೆ ಪೊಲೀಸರು ಮೊಬೈಲ್ ಲೊಕೇಶನ್ ಪರಿಶೀಲಿಸಿದಾಗ ಗುತ್ತಿಗೆದಾರ ಸುರೇಶ್ ಚಂದ್ರಕರ್ ಅವರ ಮನೆಯ ಅಂಗಳದಲ್ಲಿ ಕೊನೆಯ ಬಾರಿಗೆ ಅವರ ಮೊಬೈಲ್ ನೆಟ್ ವರ್ಕ್ ತೋರಿಸಿತ್ತು. ಸ್ಥಳಕ್ಕೆ ತೆರಳಿ ಹೆಚ್ಚಿನ ಪರಿಶೀಲನೆ ನಡೆಸಿದಾಗ ಪೊಲೀಸರಿಗೆ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಮುಖೇಶ್‌ನ ಮೃ*ತದೇಹ ಪತ್ತೆಯಾಗಿತ್ತು. ಶ*ವವು ಊದಿಕೊಂಡಿದ್ದು, ತಲೆ ಮತ್ತು ಬೆನ್ನಿನ ಮೇಲೆ ಗಾ*ಯಗಳು ಕಂಡು ಬಂದಿದೆ. ಮುಖೇಶ್ ಧರಿಸಿದ್ದ ಬಟ್ಟೆಯಿಂದ ಮೃ*ತದೇಹ ಅವರದ್ದೇ ಎಂದು ಗುರುತಿಸಲಾಗಿದೆ.
ಮುಖೇಶ್ ‘ಬಸ್ತಾರ್ ಜಂಕ್ಷನ್ʼ ಎಂಬ ಯೂಟ್ಯೂಬ್ ಚಾನೆಲ್ ಮಾಡಿ 1.59 ಲಕ್ಷ ಚಂದಾದಾರರನ್ನು ಹೊಂದಿದ್ದರು. ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ.
Pingback: ಬ್ರೇಕ್ ಫೇಲ್ ಆಗಿ ಉರುಳಿದ ಶಾಲಾ ಬಸ್; ಓರ್ವ ವಿದ್ಯಾರ್ಥಿ ಬಲಿ - NAMMAKUDLA NEWS - ನಮ್ಮಕುಡ್ಲ ನ್ಯೂಸ್