Thursday, February 2, 2023

ಕಾಂತಾರ ಚಿತ್ರತಂಡಕ್ಕೆ ಬಿಗ್ ಶಾಕ್: ‘ವರಾಹ ರೂಪಂ’ ಹಾಡು ಬಳಸದಂತೆ ಕೋರ್ಟ್ ಸೂಚನೆ..!

ಬೆಂಗಳೂರು: ಕಾಂತಾರ ಸಿನಿಮಾ ಮಲಯಾಳಂ, ತೆಲುಗು, ತಮಿಳು, ಹಿಂದಿ ಸೇರಿದಂತೆ ಎಲ್ಲಾ ಭಾಷೆಯ ಬಾಕ್ಸ್‌ ಆಫೀಸ್‌ನಲ್ಲಿ ಸೌಂಡ್ ಮಾಡುತ್ತಿದೆ. ಈ ನಡುವೆ ಕಾಂತಾರ ಸಿನಿಮಾದ ಜನಪ್ರಿಯ ವರಾಹ ರೂಪಂ ಹಾಡು ವಿವಾದ ಆಗಿತ್ತು. ಇದೀಗ ಈ ಹಾಡು ಬಳಸದಂತೆ ಕೋಯಿಕ್ಕೋಡ್ ಕೋರ್ಟ್ ಸೂಚನೆ ನೀಡಿರೋದು ಚಿತ್ರತಂಡಕ್ಕೆ ಬಿಗ್ ಶಾಕ್ ಕೊಟ್ಟಿದೆ.


ಈ ಹಾಡನ್ನು ಕಾಂತಾರ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರು ಮಲಯಾಳಂ ಭಾಷೆಯ ‘ನವರಸಂ..’ ಹಾಡಿನಿಂದ ಇದನ್ನು ಕಾಪಿ ಮಾಡಿದ್ದಾರೆ ಎಂಬ ಆರೋಪವನ್ನು ಚಿತ್ರತಂಡ ಎದುರಿಸಿತ್ತು.

ಕಾಂತಾರಾ ಸಿನಿಮಾದ ವರಾಹ ರೂಪಂ ಎನ್ನುವ ಫೇಮಸ್​ ಟ್ಯೂನ್​ ಅನ್ನು 5 ವರ್ಷ ಹಳೆಯ ಮಲಯಾಳಂ ಸಿನಿಮಾದಿಂದ ಕದ್ದಿದ್ದಾರೆ ಎಂಬ ಮಾತು ಬಂದಿತ್ತು. ಈ ಕುರಿತು ಮಲಯಾಳಂನ ‘ತೈಕ್ಕುಡಂ ಬ್ರಿಡ್ಜ್​ ಚಿತ್ರತಂಡ ಕೋರ್ಟ್ ಮೆಟ್ಟಿಲೇರಿತ್ತು.

ಈ ಕೇಸ್ ವಿಚಾರಣೆ ನಡೆಸಿದ ಕೇರಳದ ಕೋಝಿಕೋಡ್ ನ್ಯಾಯಾಲಯ ವರಾಹ ರೂಪಂ ಹಾಡಿಗೆ ತಡೆಯಾಜ್ಞೆ ನೀಡಿದೆ. ಈ ವಿಚಾರವನ್ನು ‘ತೈಕ್ಕುಡಂ ಬ್ರಿಡ್ಜ್​’ ತನ್ನ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ಹಂಚಿಕೊಂಡಿದೆ.

LEAVE A REPLY

Please enter your comment!
Please enter your name here

Hot Topics

ಬೆಂಗಳೂರು : ಹೆಂಡ್ತಿಯ ಶೀಲದ ಶಂಕೆ – ಡಂಬಲ್ಸ್​ನಿಂದ ಹೊಡೆದು ಬಡಿದು ಪತ್ನಿಯ ಹತ್ಯೆ..!

ಬೆಂಗಳೂರು: ಪತ್ನಿಯ ಶೀಲದ ಮೇಲೆ ಶಂಕೆ ಮಾಡಿದ ಗಂಡ ತನ್ನ ಪತ್ನಿಯನ್ನು ಡಂಬಲ್ಸ್‌ನಿಂದ ಹೊಡೆದು ಬಡಿದು ಬೀಕರವಾಗಿ ಹತ್ಯೆಗೈದ ಘಟನೆ ನಗರದ ರಾಮಮೂರ್ತಿನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಕೊಲೆ ಬಳಿಕ ಪತಿಯೇ ಪೊಲೀಸರಿಗೆ...

ಪ್ರೀತಿಸುವಂತೆ ಸಹೋದ್ಯೋಗಿ ವೈದ್ಯನ ಪೀಡನೆಗೆ ಬೇಸತ್ತು ವೈದ್ಯೆ ಜೀವಾಂತ್ಯ..!

ಪ್ರೀತಿಸುವಂತೆ ಸಹೋದ್ಯೋಗಿ ವೈದ್ಯ ನೀಡುತ್ತಿದ್ದ ಪೀಡನೆಯಿಂದ ಮಾನಸಿಕವಾಗಿ ನೊಂದು ಯುವ ವೈದ್ಯೆಯೊಬ್ಬರು ಜೀವಾಂತ್ಯ ಮಾಡಿದ ದಾರುಣ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ.ಬೆಂಗಳೂರು: ಪ್ರೀತಿಸುವಂತೆ ಸಹೋದ್ಯೋಗಿ ವೈದ್ಯ ನೀಡುತ್ತಿದ್ದ ಪೀಡನೆಯಿಂದ ಮಾನಸಿಕವಾಗಿ ನೊಂದು ಯುವ ವೈದ್ಯೆಯೊಬ್ಬರು...

ಬಂಟ್ವಾಳ : ಕೆಲಿಂಜ ಕಲ್ಮಲೆ ವೀರಕಂಭ ರಕ್ಷಿತಾ ಅರಣ್ಯದಲ್ಲಿ ಅಗ್ನಿ ಅವಘಡಕ್ಕೆ ಮರ, ಪ್ರಾಣಿ ಪಕ್ಷಿಗಳು ಬೆಂಕಿಗಾಹುತಿ..!   

ಬಂಟ್ವಾಳ : ಆಕಸ್ಮಿಕವಾಗಿ ಗುಡ್ಡೆಗೆ ಬೆಂಕಿ ತಗುಲಿ ಅಪಾರ ನಷ್ಡ ಸಂಭವಿಸಿದ ಘಟನೆ ದಕ್ಷಿನ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೆಲಿಂಜ ಕಲ್ಮಲೆ  ವೀರಕಂಭ ರಕ್ಷಿತಾ ಅರಣ್ಯದಲ್ಲಿ ನಡೆದಿದೆ.ಬೆಂಕಿ ಬೀಳಲು ಸ್ಪಷ್ಟವಾದ ಕಾರಣ...