Connect with us

    LATEST NEWS

    ಕಾನೂನುಬಾಹಿರ ಆರಾಧನಾಲಯ ಮುಚ್ಚಲು ಕೇರಳ ಹೈಕೋರ್ಟ್ ಆದೇಶ

    Published

    on

    ಕೊಚ್ಚಿ: ಕಾನೂನುಬಾಹಿರ ಆರಾಧನಾಲಯಗಳನ್ನು ಮುಚ್ಚಬೇಕು. ಕಟ್ಟಡ ನಿರ್ಮಿಸಿದ ಬಳಿಕ ಅದನ್ನು ಆರಾಧನಾಲಯಗಳನ್ನಾಗಿ ಪರಿವರ್ತಿಸಲು ಸಾಧ್ಯವಿಲ್ಲ. ಅನುಮತಿ ಇಲ್ಲದ ಆರಾಧನಾಲಯಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೇರಳ ಸರ್ಕಾರಕ್ಕೆ ಕೇರಳ ಹೈಕೋರ್ಟ್ ಸೂಚಿಸಿದೆ.


    ಮಲಪ್ಪುರಂನ ನೂರುಲ್ ಇಸ್ಲಾಮಿಕ್ ಕಲ್ಚರಲ್ ಗ್ರೂಪ್ ಅಮರಂಬಲಂ ಪಂಚಾಯಿತಿಯ ವಾಣಿಜ್ಯ ಕಟ್ಟಡವನ್ನು ಪ್ರಾರ್ಥನಾಸ ಸ್ಥಳವನ್ನಾಗಿ ಪರಿವರ್ತಿಸಲು ಅನುಮತಿಗಾಗಿ ಈ ಹಿಂದೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತ್ತು.

    ವಾಣಿಜ್ಯ ಕಟ್ಟಡವನ್ನು ಪ್ರಾರ್ಥನಾ ಮಂದಿರವನ್ನಾಗಿ ಬಳಸಿಕೊಳ್ಳಲು ಅನುಮತಿ ನೀಡಬೇಕೆಂಬ ಮನವಿಯನ್ನು ಜಿಲ್ಲಾಧಿಕಾರಿ ತಿರಸ್ಕರಿಸಿದ್ದರು.

    ಇದರ ವಿರುದ್ಧ ಇಸ್ಲಾಮಿಕ್ ಸಾಂಸ್ಕೃತಿಕ ಸಂಘಟನೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ಪರಿಗಣಿಸಿದ ಹೈಕೋರ್ಟ್ ಅನಧಿಕೃತ ಪೂಜಾ ಸ್ಥಳಗಳನ್ನು ಮುಚ್ಚುವಂತೆ ಆದೇಶ ನೀಡಿದೆ.

    ಆರಾಧನಾಲಯಗಳಿಗೆ ಪರವಾನಗಿ ನೀಡಲು ಮಾನದಂಡಗಳನ್ನು ಕಡ್ಡಾಯಗೊಳಿಸಬೇಕು. ಕಟ್ಟಡ ನಿರ್ಮಾಣ ಬಳಿಕ ಅದನ್ನು ಆರಾಧನಾಲಯವಾಗಿ ಪರಿವರ್ತಿಸಲು ಅರ್ಜಿ ಸಲ್ಲಿಸುವಂತಿಲ್ಲ ಎಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಬೇಕು ಎಂದು ಕೇರಳ ಹೈಕೋರ್ಟ್ ಆದೇಶಿಸಿದೆ.

    ಆರಾಧನಾಲಯಗಳಿಗೆ ನಿಯಂತ್ರಣ ಇರಲಿ. ಅರ್ಜಿಯನ್ನು ಪರಿಗಣಿಸುವಾಗ ಸಮಾನ ರೀತಿಯ ಪೂಜಾ ಸ್ಥಳಗಳ ನಡುವಿನ ಅಂತರವನ್ನು ಪರಿಶೀಲಿಸುವುದು ಕಡ್ಡಾಯ ಎಂದು ನ್ಯಾಯಾಲಯ ಆದೇಶಿಸಿದೆ.

    LATEST NEWS

    ಪ್ರೀತಿ ಗುಟ್ಟು ರಟ್ಟು: ಆ*ತ್ಮಹ*ತ್ಯೆಗೆ ಶರಣಾದ ಪಿಯುಸಿ ವಿದ್ಯಾರ್ಥಿನಿ

    Published

    on

    ಮಂಗಳೂರು/ಹೈದರಾಬಾದ್‌: ಬಾಯ್‌ಫ್ರೆಂಡ್ ಜೊತೆ ಚಾಟ್ ಮಾಡುತ್ತಿದ್ದ ವಿಷಯ ಮನೆಯವರಿಗೆ ಗೊತ್ತಾಯಿತು ಎಂದು ಹೆದರಿ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಆ*ತ್ಮಹ*ತ್ಯೆಗೆ ಶರಣಾಗಿರುವ ಘಟನೆ ಮಂಗಳವಾರ (ಜ.21ರಂದು) ಹೈದರಾಬಾದ್‌ನಲ್ಲಿ ನಡೆದಿದೆ.

    ಭಾರ್ಗವಿ (19) ಆ*ತ್ಮಹ*ತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ.

    ಇಂಟರ್ ಮೀಡಿಯೇಟ್ ದ್ವಿತೀಯ ವರ್ಷದ ವಿದ್ಯಾರ್ಥಿನಿಯಾಗಿದ್ದ ಭಾರ್ಗವಿ ಹೈದರಬಾದ್‌ನ ಸಿದ್ದಿಪೇಟೆ ಜಿಲ್ಲೆಯ ಹಾಸ್ಟೆಲ್‌ನಲ್ಲಿ ವಾಸವಾಗಿದ್ದಳು.

     

    ಇದನ್ನೂ ಓದಿ : ಶ್ವೇತಾ ಜ್ಯುವೆಲರ್ಸ್‌ನ ಮಾಲಿಕ ಅಶೋಕ್ ಶೇಟ್‌ ನಿ*ಧನ

     

    ಭಾರ್ಗವಿ ಪ್ರಿಯಕರನ ಜತೆ ಮೊಬೈಲ್‌ನಲ್ಲಿ ಚಾಟ್ ಮಾಡುತ್ತಿದ್ದ ವಿಚಾರವನ್ನು ಆಕೆಯ ಸಹೋದರಿ ನೋಡಿದ್ದಾಳೆ. ಸಹೋದರಿ ಇದನ್ನು ಅಪ್ಪ – ಅಮ್ಮನಿಗೆ ಹೇಳುತ್ತಾಳೆ ಎನ್ನುವ ಭೀತಿಯಲ್ಲಿ ಭಾರ್ಗವಿ ಚಲಿಸುತ್ತಿರುವ ರೈಲಿನಿಂದ ಹಾರಿ ಪ್ರಾಣ ಕಳೆದುಕೊಂಡಿದ್ದಾಳೆ.

    ಜಮೈ ಉಸ್ಮಾನಿಯಾ ರೈಲು ಹಳಿಯಲ್ಲಿ ಈ ಘಟನೆ ಸಂಭವಿಸಿದ್ದು, ಪೊಲೀಸರು ಘಟನೆ ಸಂಬಂಧ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಆದರೂ, ಏನು ನಡೆಯದೆಯೇ ಕ್ಷುಲ್ಲಕ ಕಾರಣಕ್ಕೆ ಸು*ಸೈಡ್ ಮಾಡಿಕೊಂಡ ಭಾರ್ಗವಿ ಕಥೆ ದುಡುಕಿನ ಫಲವೇ ಸರಿ.

    Continue Reading

    BIG BOSS

    ಗೌತಮಿ-ಧನರಾಜ್ ಬೆನ್ನಲ್ಲೇ ಈ ವಾರ ಫಸ್ಟ್ ಎಲಿಮಿನೇಟ್ ಆಗೋದ್ಯಾರು ?

    Published

    on

    ಮಂಗಳೂರು/ಬೆಂಗಳೂರು : ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಅದ್ದೂರಿ ಗ್ರ್ಯಾಂಡ್ ಫಿನಾಲೆ ಇದೇ ವಾರದಲ್ಲಿ ನಡೆಯಲಿದೆ. ಸದ್ಯ ಬಿಗ್ ಮನೆಯಲ್ಲಿ ಒಟ್ಟು 6 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಇವರಲ್ಲಿ ಒಬ್ಬರು ಬಿಗ್ ಬಾಸ್‌ನ ಫಿನಾಲೆ ವಾರದಲ್ಲೇ ಹೊರಬರ್ತಾರೆ ಎಂಬ ಕುತೂಹಲ ಮನೆ ಮಾಡಿದೆ.

    ಸದ್ಯ ಅತಿ ದೊಡ್ಡ ಬಿಗ್ ಬಾಸ್ ಮನೆಯಲ್ಲಿ ಕೇವಲ ಆರು ಸ್ಪರ್ಧಿಗಳು ಮಾತ್ರ ಉಳಿದುಕೊಂಡಿದ್ದಾರೆ. ಈ ಆರು ಸ್ಪರ್ಧಿಗಳಲ್ಲಿ ಮೊದಲು ಬಿಗ್‌ಬಾಸ್ ಮನೆಯಿಂದ ಆಚೆ ಬರೋರು ಯಾರು ಅಂತ ಚರ್ಚೆ ಶುರುವಾಗಿದೆ.

    ಹನುಮಂತ ಟಾಸ್ಕ್ ಗೆದ್ದು ನೇರವಾಗಿ ಫಿನಾಲೆಗೆ ತಲುಪಿದ್ದರು. ಈ ಬೆನ್ನಲ್ಲೇ ಹನುಮಂತು ಸೇಫ್ ಮಾಡಿರುವ ಕಾರಣದಿಂದ ಮೋಕ್ಷಿತಾ ಕೂಡ ಫಿನಾಲೆಗೆ ತಲುಪಿದ್ದರು. ಅದಾದ ಬಳಿಕ ತ್ರಿವಿಕ್ರಮ್ ಅವರು ಕೂಡ ಫಿನಾಲೆಗೆ ಎಂಟ್ರಿ ಕೊಟ್ಟರು.

    ಆದರೆ ಇನ್ನು ಉಳಿದಿರುವ ಭವ್ಯಾ, ಉಗ್ರಂ ಮಂಜು ಹಾಗೂ ರಜತ್ ನಡುವೆ ಯಾರು ಫಿನಾಲೆ ವಾರದಲ್ಲಿರುವಾಗಲೇ ಹೊರ ಹೋಗುತ್ತಾರೆ ಎಂದು ಕಾದು ನೋಡಬೇಕಿದೆ.

    ಇದನ್ನೂ ಓದಿ: ಸ್ಯಾಂಡಲ್‌ವುಡ್ ಸ್ಟಾರ್ ನಟನ ಜೊತೆ ನಟಿಸಲಿರುವ ಮೊನಾಲಿಸಾ

    ಇದರಲ್ಲಿ ಹೆಚ್ಚಾಗಿ ಕೇಳಿಬರುತ್ತಿರುವ ಹೆಸರು ಭವ್ಯಾ. ಧನರಾಜ್ ಹೊರ ಹೋದಾಗಲೂ ವೀಕ್ಷಕರು ಅಸಮಾಧಾನ ಹೊರ ಹಾಕಿದ್ದರು. ಧನರಾಜ್ ಬದಲು ಭವ್ಯಾ ಹೊರಹೋಗಬೇಕಿತ್ತು ಎನ್ನುವ ಮಾತುಗಳು ಕೇಳಿಬರುತ್ತಿತ್ತು.

    ಹೀಗಾಗಿ ಫಿನಾಲೆ ವಾರದಲ್ಲಿ ಭವ್ಯಾ ಅವರು ಹೊರ ಬರಬಹುದು ಎಂಬುದು ಬಿಗ್ ಬಾಸ್ ವೀಕ್ಷಕರ ಅಭಿಪ್ರಾಯವಾಗಿದೆ. ಇಷ್ಟು ದಿನ ಬಿಗ್‌ಬಾಸ್ ಮನೆಯಲ್ಲಿ ಇದ್ದುಕೊಂಡು ಇನ್ನೇನೂ ಕೊನೆಯ ಕ್ಷಣದಲ್ಲಿ ಎಲಿಮಿನೇಟ್ ಆಗೋದು ಯಾರು ಅಂತ ಭಾನುವಾರದ ಎಪಿಸೋಡ್‌ನಲ್ಲಿ ಗೊತ್ತಾಗಲಿದೆ.

    Continue Reading

    LATEST NEWS

    ಮಹಾಕುಂಭ ಮೇಳ : ಪುಣ್ಯಸ್ನಾನದಲ್ಲಿ ಭಾಗಿಯಾದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್

    Published

    on

    ಮಂಗಳೂರು/ಉತ್ತರ ಪ್ರದೇಶ : ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಮುಸ್ಲೀಮರು ಬಂದು ನದಿಯಲ್ಲಿ ಮಿಂದರೆ ಅದರ ಪಾವಿತ್ರ್ಯತೆ ಹಾಳಾಗುತ್ತದೆ ಎಂದು ನಿಷಿದ್ಧವಿತ್ತು. ಈ ನಡುವೆಯೂ  ಮೊಹಮ್ಮದ್ ಕೈಫ್ ತ್ರಿವೇಣಿ ಸಂಗಮದ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದ್ದು, ಆ ವೇಳೆ ಯಮನಾ ನದಿಯಲ್ಲಿ ಸ್ನಾನ ಮಾಡಿದ್ದು ಸಾಧು ಸಂತರೇ ಇದಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

    ಪ್ರಯಾಗರಾಜ್ ನಲ್ಲಿ ವಿಶ್ವದ ಅತೀ ದೊಡ್ಡ ಧಾರ್ಮಿಕ ಹಬ್ಬ ಮಹಾಕುಂಭ ಮೇಳ ಆರಂಭವಾಗಿದ್ದು, ಬಹಳ ಸಂಭ್ರಮದಿಂದ ಸಾಗುತ್ತಿದೆ. ಅನೇಕ ನಟ-ಟಿಯರು, ಸಾಧು-ಸಂತರು ಆಗಮಿಸಿ ಪುಣ್ಯಸ್ನಾನದಲ್ಲಿ ಬಾಗಿಯಾಗುತ್ತಿದ್ದಾರೆ. ಈ ನಡೆವೆ ಮಾಜಿ ಕ್ರಿಕೆಟರ್ ಮೊಹಮ್ಮದ್ ಕೈಫ್ ಯಮುನಾ ನದಿಯಲ್ಲಿ ಮಿಂದ ಸುದ್ಧಿ ಭಾರೀ ವೈರಲ್ ಆಗುತ್ತಿದೆ. “ಏ.. ಇದೇ ಯಮುನಾ ನದಿಯಲ್ಲಿ ನಾನು ಈಜು ಕಲಿತದ್ದು’ ಎಂಬ ಶೀರ್ಷಿಕೆ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಯಮುನಾ ನದಿ ಮತ್ತು ತಮ್ಮ ಬಾಲ್ಯದ ನೆನಪನ್ನು ಸ್ಮರಿಸಿಕೊಂಡು ಕೈಫ್, ನದಿಯಲ್ಲಿ ಈಜಾಡುವ ಪೋಸ್ಟ್ ಸಾಕಷ್ಟು ಜನರ ಮೆಚ್ಚುಗೆಗೂ ಕಾರಣವಾಗಿದೆ.

    ಇದನ್ನೂ ಓದಿ : ಸ್ಯಾಂಡಲ್‌ವುಡ್ ಸ್ಟಾರ್ ನಟನ ಜೊತೆ ನಟಿಸಲಿರುವ ಮೊನಾಲಿಸಾ 

    Continue Reading

    LATEST NEWS

    Trending