Home ದೇಶ-ವಿದೇಶ ಸಂಕಟ ಬಂದಾಗ ವೆಂಕಟರಮಣನಂತೆ ಧಾವಿಸಿದ ಸಿಎಂ ಪಿಣರಾಯಿ ವಿಜಯನ್

ಸಂಕಟ ಬಂದಾಗ ವೆಂಕಟರಮಣನಂತೆ ಧಾವಿಸಿದ ಸಿಎಂ ಪಿಣರಾಯಿ ವಿಜಯನ್

ಕೋವಿಡ್ ವಿರುದ್ಧ ಎದೆಸೆಟೆಸಿ ನಿಂತ ದೇವರನಾಡು: ಕೊರೊನಾ ಸ್ಪೆಷಲ್ ಪ್ಯಾಕೇಜ್ ರಿಲೀಸ್ ಮಾಡಿದ ಸರ್ಕಾರ

ಕೇರಳ: ವಿಶ್ವದಾದ್ಯಂತ ಕೊರೊನಾ ವೈರಸ್ ನಿಂದ ಜನಜೀವನ ಅಸ್ತವ್ಯಸ್ತವಾಗಿದೆ.

ಕರ್ನಾಟಕದಲ್ಲಿ ಕೂಡ ಕೊರೊನಾ ತಾಂಡವ ಹಿನ್ನಲೆ ಸರ್ಕಾರ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.

ಆದ್ರೆ ಕೋವಿಡ್-19 ವಿರುದ್ಧ ಎದೆ ಸೆಟೆಸಿ ನಿಂತ ಕೇರಳ ಮಾತ್ರ ಇತರ ರಾಜ್ಯಗಳಿಗೂ ಮಾದರಿಯಾಗಿ ನಿಲ್ಲುತ್ತೆ.

ಈಗಾಗಲೇ ಕೇರಳದಲ್ಲಿ ಸುಮಾರು 25 ಮಂದಿ ಕೊರೊನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಹಾಗಾಗಿ ದೇವರನಾಡು ಕೇರಳ ಸರ್ಕಾರ ಇದೀಗ ಜನರ ಸಹಾಯಕ್ಕೆ ಧಾವಿಸಿದೆ.

ಸಂಕಟದ ಸಮಯದಲ್ಲಿ ಜನರ ಸಹಾಯಕ್ಕೆ ಮುಂದಾದ ಕೇರಳ ಸರ್ಕಾರ 20000 ಕೋಟಿ ರೂಪಾಯಿ ಕೋವಿಡ್-19 ಪರಿಹಾರ ಘೋಷಣೆ ಮಾಡಿದೆ.

ಅಲ್ಲದೇ ರಾಜ್ಯದ ಪ್ರತಿಯೊಬ್ಬರಿಗ, ಅದು ಎಪಿಎಲ್ ಇರಲಿ ಬಿಪಿಎಲ್ ಕಾರ್ಡ್ ಇರಲಿ, ಎಲ್ಲರಿಗೂ ಒಂದು ತಿಂಗಳ ಕಾಲ ಉಚಿತ ಪಡಿತರ ಪೂರೈಕೆ ಮಾಡಲಾಗುತ್ತೆ.

ಹಾಗೂ ಏಪ್ರಿಲ್, ಮೇ ಎರಡು ತಿಂಗಳ ಎಲ್ಲಾ ಜನಕಲ್ಯಾಣ ನಿವೃತ್ತಿ ವೇತನಗಳನ್ನು ಮಾರ್ಚ್ ತಿಂಗಳಲ್ಲೇ ಮನೆ ಬಾಗಿಲಿಗೆ ತಲುಪಿಸಲಾಗುತ್ತೆ.

ಮಾತ್ರವಲ್ಲದೇ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ 2000 ಕೋಟಿ ರೂಪಾಯಿ ವಿಶೇಷ ಹೂಡಿಕೆ ಮಾಡಿ, ಅರ್ಹರಿಗೆ ಎರಡು ತಿಂಗಳ ಕೂಲಿ ನೀಡಲಾಗುತ್ತೆ.

ಕುಟುಂಬಶ್ರೀ ಯೋಜನೆಗೆ ಮಾತ್ರವೇ ಸಾಲ ಸೌಲಭ್ಯಕ್ಕಾಗಿ 2000 ಕೋಟಿ ರೂಪಾಯಿ ನೀಡಲಾಗುವುದು.

1000 ಸುಭಿಕ್ಷ ರೆಸ್ಟೋರೆಂಟ್  ಗಳನ್ನು  ಏಪ್ರಿಲ್ ತಿಂಗಳಿನಲ್ಲೇ ತೆರೆದು ರೂ.20ರ ಬೆಲೆಯಲ್ಲಿ ಊಟ ಪೂರೈಸಲಾಗುವುದು.

ಇನ್ನು ವಿಶೇಷವಾಗಿ ಕೋವಿಡ್ 19ರ ಅವಧಿಗೆ ಅಂತಲೇ 500 ಕೋಟಿ ರೂಪಾಯಿ ಆರೋಗ್ಯ ಯೋಜನೆ ಜಾರಿ ಮಾಡಲಾಗುತ್ತೆ.

ಜೊತೆಗೆ ವಿದ್ಯುಚ್ಛಕ್ತಿ ಮತ್ತು ನೀರಿನ ಶುಲ್ಕ ಸಂದಾಯವನ್ನು ಇನ್ನೂ ಒಂದು ತಿಂಗಳ ಕಾಲ ಮುಂದೂಡಲಾಗಿದೆ ಅಂತ ಕೇರಳ ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿಶೇಷ ಪ್ಯಾಕೇಜ್ ಘೋಷಿಸುವ ಮೂಲಕ ಇತರ ರಾಜ್ಯಗಳಿಗೂ ಮಾದರಿಯಾಗಿ ನಿಂತಿದ್ದಾರೆ

video

- Advertisment -

RECENT NEWS

ಮಂಗಳೂರು ಧರ್ಮಪ್ರಾಂತ್ಯದ ಚರ್ಚ್ ಗಳಲ್ಲಿ ಜೂ 13 ರಿಂದ ಪ್ರಾರ್ಥನೆಗೆ ಅವಕಾಶ

ಚರ್ಚ್ ಗಳಲ್ಲಿ ನಡೆಯುತ್ತಿದೆ ಭರದ ಸಿದ್ದತೆ ಮಂಗಳೂರು: ಮಂಗಳೂರು ಧರ್ಮಪ್ರಾಂತ್ಯದಲ್ಲಿ ಜೂ 13ರಿಂದ ಸರಕಾರದ ನಿಯಮಗಳನ್ನು ಪಾಲಿಸಿ ಚರ್ಚ್ ಗಳಲ್ಲಿ ಪ್ರಾರ್ಥನೆಗಳನ್ನು ಆರಂಭಿಸಲಾಗುವುದು ಎಂದು ಧರ್ಮಾಧ್ಯಕ್ಷರಾದ ಡಾ. ಪೀಟರ್ ಪಾವ್ಲ್ ಸಲ್ದಾನ್ಹಾ ತಿಳಿಸಿದ್ದಾರೆ. ಈ ಕುರಿತು...

ಜೂನ್ 8 ರಿಂದ ಮಸೀದಿಗಳಲ್ಲಿ ಪ್ರಾರ್ಥನೆಗೆ ಅವಕಾಶ….!!

 ಶೀತ, ಕೆಮ್ಮು ಇದ್ದವರಿಗೆ ನಮಾಝ್ ಗೆ ಪ್ರವೇಶ ನಿರಾಕರಣೆ ಮಂಗಳೂರು : ರಾಜ್ಯ ಸರಕಾರ ಜೂನ್‌ 8 ರಿಂದ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಅವಕಾಶ ನೀಡಿರುವ ಹಿನ್ನಲೆ ಜೂನ್ 8 ರಿಂದ ಮಸೀದಿಗಳಲ್ಲಿ...

ಜುಲೈವರೆಗೆ ಉಡುಪಿ ಕೃಷ್ಣನ ದರ್ಶನ ಭಾಗ್ಯ ಇಲ್ಲ

20 ರಿಂದ 30 ದಿನಗಳ ನಂತರ ಪರಿಸ್ಥಿತಿ ನೋಡಿ ಅವಕಾಶ ಉಡುಪಿ: ರಾಜ್ಯ ಸರಕಾರ ಈಗಾಗಲೇ ಜೂನ್ 8ರ ನಂತರ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಅವಕಾಶ ನೀಡಿದೆ. ಅದರಂತೆ ಈಗಾಗಲೇ ರಾಜ್ಯದ ಮುಜರಾಯಿ ಇಲಾಖೆ...

ಕೃಷ್ಣನಗರಿಯಲ್ಲಿ ನಿಲ್ಲದ ಕೊರೊನಾ ಪ್ರವಾಹ: ಇಂದು ಮತ್ತೆ 121 ಮಂದಿಗೆ ಪಾಸಿಟಿವ್..!

ಉಡುಪಿಗೆ ಕಂಟಕವಾದ ಮಹಾರಾಷ್ಟ್ರ: ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 889ಕ್ಕೆ ಏರಿಕೆ..! ಉಡುಪಿ: ಕೃಷ್ಣನಗರಿ ಉಡುಪಿಯಲ್ಲಿ ಹೆಮ್ಮಾರಿ ಕೊರೊನಾ ಪ್ರವಾಹ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ದಿನೇ ದಿನೇ ಕೋವಿಡ್-19 ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಇಂದು ಮತ್ತೆ 121...