ತಮ್ಮ ಚೊಚ್ಚಲ ಚಿತ್ರ ಬಿಡುಗಡೆಯಾಗುವ ಮುನ್ನವೇ ಮಲಯಾಳಂ ನಿರ್ದೇಶಕ ಜೋಸೆಫ್ ಮನು ಜೇಮ್ಸ್ ಎರ್ನಾಕುಲಂ ಜಿಲ್ಲೆಯ ಅಲುವಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ.
ಎರ್ನಾಕುಲಂ: ತಮ್ಮ ಚೊಚ್ಚಲ ಚಿತ್ರ ಬಿಡುಗಡೆಯಾಗುವ ಮುನ್ನವೇ ಮಲಯಾಳಂ ನಿರ್ದೇಶಕ ಜೋಸೆಫ್ ಮನು ಜೇಮ್ಸ್ ಎರ್ನಾಕುಲಂ ಜಿಲ್ಲೆಯ ಅಲುವಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ.
ವೈದ್ಯರ ಪ್ರಕಾರ, 31 ವರ್ಷದ ಜೇಮ್ಸ್ ಅವರಲ್ಲಿ ನ್ಯುಮೋನಿಯಾ ಲಕ್ಷಣಗಳು ಪತ್ತೆಯಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿತ್ತು ಹಾಗೂ ಕಾಮಾಲೆಯಿಂದ ಸಾವನ್ನಪ್ಪಿದ್ದಾರೆ.
ಅವರ ಚೊಚ್ಚಲ ನಿರ್ದೇಶನದ ಚಿತ್ರ ‘ನಾನ್ಸಿ ರಾಣಿ’ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಮನು ಬಾಲ ಕಲಾವಿದನಾಗಿ ನಿರ್ದೇಶಕ ಸಾಬು ಜೇಮ್ಸ್ ಅವರ ‘ಐ ಆ್ಯಮ್ ಕ್ಯೂರಿಯಸ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು.
ಈ ಚಿತ್ರ 2004ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಇದಾದ ನಂತರ ಮಲಯಾಳಂ, ಕನ್ನಡ ಹಾಗೂ ಹಿಂದಿಯ ಹಲವಾರು ಚಿತ್ರಗಳಲ್ಲಿ ಸಹಾಯಕ ಹಾಗೂ ಸಹ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.
ಶ್ರೀನಿವಾಸನ್, ಲಾಲ್, ಲೀನಾ ಹಾಗೂ ಇಂದ್ರನ್ ಸೇರಿದಂತೆ ಹಲವಾರು ಹಿರಿಯ ಕಲಾವಿದರು ಮನುವಿನ ಅಂತಿಮ ದರ್ಶನ ಪಡೆದು, ಶ್ರದ್ಧಾಂಜಲಿ ಸಲ್ಲಿಸಿದರು.