Saturday, November 27, 2021

ಸೌಹಾರ್ದತೆಗೆ ಸಾಕ್ಷಿಯಾದ ಕೇರಳ: ಅನಾಥಳಿಗೆ ಮನೆ ಕಟ್ಟಿಸಿ ಧಾರೆಯೆರೆದ ಮುಸ್ಲಿಂ ದಂಪತಿ

ಸೌಹಾರ್ದತೆಗೆ ಸಾಕ್ಷಿಯಾದ ಕೇರಳ: ಅನಾಥಳಿಗೆ ಮನೆ ಕಟ್ಟಿಸಿ ಧಾರೆಯೆರೆದ ಮುಸ್ಲಿಂ ದಂಪತಿ

ತಿರುವನಂತಪುರ :  ಅನಾಥವಾಗಿ ಸಿಕ್ಕ ಬಾಲಕಿಯನ್ನು ತಮ್ಮ ಸ್ವಂತ ಮಗಳಂತೆ ಸಾಕಿದ ಈ ಕುಟುಂಬ, ಮದುವೆ ವಯಸ್ಸಿಗೆ ಬಂದ ನಂತ್ರ ತಾವು ಸಾಕಿದ್ದೇವೆ ಎಂಬುದಾಗಿ ತಮ್ಮ ಮುಸ್ಲೀಂ ಸಂಪ್ರದಾಯದಂತೆ ಮದುವೆ ಮಾಡಿಲ್ಲ. ಬದಲಾಗಿ ಮಾಡಿದ್ದು ಹಿಂದೂ ಸಂಪ್ರದಾಯದ ಮದುವೆ ಮಾಡಿ ಧಾರೆಯೆರೆದು ಸೌಹಾರ್ಧತೆಗೆ ಸಾಕ್ಷಿಯಾಗಿದೆ.ಹೌದು.. ಕೇರಳದ ತ್ರಿಪ್ರಯಾರ್ ಪಟ್ಟಣದಲ್ಲಿನ ವಾಯುಸೇನಾ ಅಧಿಕಾರಿಯಾಗಿರುವ ರಜಾಕ್ ಕುಟುಂಬಕ್ಕೆ 14 ವರ್ಷಗಳ ಹಿಂದೆ ದಾರಿಯಲ್ಲಿ ಅನಾಥವಾಗಿ ಅಲೆದಾಡುತ್ತಿದ್ದಂತ ಬಾಲಕಿ ಕಂಡು ಬಂದಿದ್ದಾಳೆ.

ಈ ಬಾಲಕಿಯನ್ನು ತಮ್ಮ ಮನೆಗೆ ಕರೆದುಕೊಂಡು ಬಂದ ಇವರು, ಕವಿತಾ ಎಂಬುದಾಗಿ ಹೆಸರಿಟ್ಟು, ತಮ್ಮ ಸ್ವಂತ ಮಗಳಂತೆ ಸಾಕಿದ್ದಾರೆ. ರಜಾಕ್ ಅವರಿಗೆ ಮೂವರು ಹೆಣ್ಣಮಕ್ಕಳಿದ್ದರೂ, ಅನಾಥವಾಗಿ ದಾರಿಯಲ್ಲಿ ಸಿಕ್ಕ ಕವಿತಾಳನ್ನು ಕರೆತಂದು ತಮ್ಮ ನಾಲ್ಕನೇ ಮಗಳೆಂಬಂತೆ ಬೆಳೆಸಿದ್ದಾರೆ.

ಈ ಮಧ್ಯೆ ಕೆಲ ವರ್ಷಗಳ ಹಿಂದೆ ಸೇಲಂನಲ್ಲಿರುವ ತಮ್ಮ ಪೋಷಕರ ನೆನಪಾಗಿದ್ದು ಹುಡುಗಿ. ಅವರನ್ನು  ಭೇಟಿ ಮಾಡಿಯೂ ಬಂದಿದ್ದಾಳೆ. ವಯಸ್ಸಿಗೆ ಬಂದಂತ ಕವಿತಾಳಿಗೆ ಖಾಸಗಿ ಕಂಪನಿಯ ಉದ್ಯೋಗಿ ನಾಟ್ವಿಕಾ ಮೂಲದ ಶ್ರೀಜಿತ್ ಜೊತೆಗೆ ಹಿಂದೂ ಸಂಪ್ರದಾಯದಂತೆ 12 ಸವರನ್ ಚಿನ್ನವನ್ನು ಗಿಫ್ಟ್  ನೀಡಿ, ವಿವಾಹ ಮಾಡಿಕೊಟ್ಟಿದ್ದಲ್ಲದೇ, ಕವಿತಾಳಿಗೆ ಮನೆಯನ್ನೂ ಕಟ್ಟಿಸಿಕೊಟ್ಟು, ಎಲ್ಲರಿಗೂ ಮಾದರಿಯಾಗಿದ್ದಾರೆ.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...