ಮಂಗಳೂರು/ಮಾಸ್ಕೋ: ಬಾಕುವಿನಿಂದ ಗ್ರೋಝ್ನಿಗೆ ತೆರಳುತ್ತಿದ್ದ 60 ಕ್ಕೂ ಅಧಿಕ ಪ್ರಯಾಣಿಕರಿದ್ದ ಅಝರ್ ಬೈಜಾನ್ ಏರ್ ಲೈನ್ಸ್ ಗೆ ಸೇರಿದ ವಿಮಾನವು ಕಝಾಕಿಸ್ತಾನದ ಅಕ್ಟೌದಲ್ಲಿ ಪತನಗೊಂಡಿತ್ತು.
ಕಝಾಕಿಸ್ತಾನದಲ್ಲಿ ಸಂಭವಿಸಿದ ವಿಮಾನ ದುರಂತ ಸಂದರ್ಭದಲ್ಲಿ ಉಕ್ರೇನ್ ಡ್ರೋನ್ ಗಳ ವಿರುದ್ದ ರಷ್ಯಾದ ವಾಯುಸೇನೆ ಕಾರ್ಯಾಚರಣೆ ನಡೆಸುತ್ತಿತ್ತು. ದಕ್ಷಿಣ ರಷ್ಯಾದಿಂದ ಡ್ರೋನ್ ಗಳನ್ನು ಹಾರಿಸಿದ ಬಳಿಕ ಕಝಕಿಸ್ತಾನ್ ನ ಅಕ್ಟೌ ನಗರದ ಬಳಿ ಅಜರ್ಬೈಜಾನ್ ನ J2-8243 ವಿಮಾನ ಪತನಗೊಂಡಿತು. 60ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದ ಈ ವಿಮಾನದಲ್ಲಿ 38 ಮಂದಿ ಸಾ*ವನ್ನಪ್ಪಿದ್ದು, ಉಳಿದು 29 ಮಂದಿ ಗಾಯಗೊಂಡಿದ್ದರು.
ಇದೀಗ ಈ ದುರಂತಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕ್ಷಮೆ ಕೋರಿದ್ದಾರೆ. ಅಝರ್ ಬೈಜಾನ್ ಅಧ್ಯಕ್ಷ ಇಲ್ ಹ್ಯಾಮ್ ಅಲಿಯೆವ್ ಅವರಿಗೆ ಶನಿವಾರ ಕರೆ ಮಾಡಿದ ಪುಟಿನ್ ಕ್ಷಮೆ ಯಾಚಿಸಿದ್ದಾರೆ ಎಂದು ವರದಿಯಾಗಿದೆ.
ದುರಂತದಲ್ಲಿ ಪ್ರಾಣ ಕಳೆದುಕೊಂಡ ಕುಟುಂಬಗಳಿಗೆ ನನ್ನ ಆಳವಾದ ಸಂತಾಪ ಸೂಚಿಸುತ್ತೇನೆ. ಗಾಯಗೊಂಡವರು ಶೀಘ್ರದಲ್ಲೇ ಚೇತರಿಸಿಕೊಳ್ಳುವಂತೆ ಹಾರೈಸುತ್ತೇನೆ ಎಂದು ಕ್ರೆಮ್ಲಿನ್ ವರದಿ ಮಾಡಿದೆ.
ಇದರೊಂದಿಗೆ ಅಝರ್ ಬೈಜಾನ್ ನ ವಿಮಾನವನ್ನು ರಷ್ಯನ್ ಪಡೆಗಳು ಹೊಡೆದುದುರುಳಿಸಿರುವುದನ್ನು ಪುಟಿನ್ ಅವರು ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆಯೆಂದು ವಿದೇಶಿ ಮಾಧ್ಯಮಗಳು ಬಣ್ಣಿಸಿವೆ.
ರಷ್ಯಾದ ವಾಯುರಕ್ಷಣಾ ವ್ಯವಸ್ಥೆಯು ಅಝರ್ ಬೈಜಾನ್ ವಿಮಾನದ ಪತನಕ್ಕೆ ಕಾರಣವಾಗಿದೆಯೆಂದು ವೈಮಾನಿಕ ತಜ್ಞರು ಹೇಳಿದ್ದಾರೆ.
ಕಝಕಿಸ್ತಾನದ ಗ್ರೋಝ್ನಿಯಲ್ಲಿ ಉಕ್ರೇನ್ ಡ್ರೋನ್ ದಾಳಿ ನಡೆಸಿದ್ದರಿಂದ ರಷ್ಯಾದ ವಾಯುರಕ್ಷಣಾ ವ್ಯವಸ್ಥೆಗಳು ಪ್ರತಿದಾಳಿ ನಡೆಸಿರುವುದಾಗಿ ರಷ್ಯಾವು ಶನಿವಾರ ಅಧಿಕೃತ ಹೇಳಿಕೆಯೊಂದರಲ್ಲಿ ತಿಳಿಸಿದೆ. ಆದರೆ ಇದು ವಿಮಾನದ ಪತನಕ್ಕೆ ಕಾರಣವಾಗಿದೆಯೆಂದು ಹೇಳಿಕೊಂಡಿರಲಿಲ್ಲ.
ಮಂಗಳೂರು/ಕಾಬೂಲ್: ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡು ಸರ್ಕಾರ ರಚಿಸಿದಾಗಿನಿಂದ ಮಹಿಳೆಯರ ವಿರುದ್ದವಾಗಿ ಸಾಕಷ್ಟು ಕಾನೂನುಗಳನ್ನು ಜಾರಿಗೆ ತಂದಿದೆ.
ತಾಲಿಬಾನ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಷರಿಯಾ ಕಾನೂನಿನಂತೆ ಅಲ್ಲಿನ ಸರ್ಕಾರ ಮಹಿಳೆಯರ ವಿರುದ್ದ ವಿಚಿತ್ರ ಕಾನೂನುಗಳನ್ನು ತರಲಾರಂಭಿಸಿದ್ದಾರೆ. ಮೊದಲು ಮಹಿಳೆಯರು ಬ್ಯೂಟಿ ಪಾರ್ಲರ್ ಗೆ ಹೋಗುವಂತಿಲ್ಲ, ಸಾರ್ವಜನಿಕವಾಗಿ ಹಾಡುವಂತೆಯೂ ಇಲ್ಲ, ಮೇಕಪ್ ಮಾಡಿಕೊಳ್ಳುವಂತಿಲ್ಲ, ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ತೆಗೆಯುವಂತಿಲ್ಲ. ಇಷ್ಟು ಸಾಲದಕ್ಕೆ ಹೋಟೆಲ್, ಪಾರ್ಕ್, ಶಾಲೆ-ಕಾಲೇಜುಗಳು ಎಲ್ಲಿಗೂ ಹೋಗುವಂತಿಲ್ಲ.
ಆದರೀಗ ಮತ್ತೊಂದು ಆದೇಶ ಹೊರಡಿಸುವ ಮೂಲಕ ಅಫ್ಘಾನ್ ಮಹಿಳೆಯರಿಗೆ ಶಾಕ್ ನೀಡಿದ್ದಾರೆ.
ಮಹಿಳೆಯರ ವಿರುದ್ದ ತಾಲಿಬಾನ್ ಹೊಸ ಕಾನೂನು
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಮಹಿಳೆಯರ ವಿರುದ್ದ ಹೊಸ ಆದೇಶವನ್ನು ಹೊರಡಿಸಿದೆ. ತಾಲಿಬಾನ್ ಸರ್ಕಾರದ ಪರಮೋಚ್ಚ ನಾಯಕ ಈ ಕುರಿತು ಆದೇಶ ಹೊರಡಿಸಿದ್ದು, ಹೊಸ ತಾಲಿಬಾನ್ ಕಾನೂನಿನ ಪ್ರಕಾರ, ಅಫ್ಘಾನಿಸ್ತಾನದಲ್ಲಿ ನಿರ್ಮಿಸುತ್ತಿರುವ ಹೊಸ ಮನೆಗಳಿಗೆ ಕಿಟಕಿಗಳು ಇರಬಾರದು. ಮಹಿಳೆಯರು ಮನೆಯಿಂದ ಹೊರಗೆ ಕಾಣದಂತೆ ತಾಲಿಬಾನ್ ಈ ಆದೇಶ ನೀಡಿದೆ. ಮಹಿಳೆಯರನ್ನ ನೋಡುವುದರಿಂದ ಅಶ್ಲೀಲ ಕೃತ್ಯಗಳು ಎಸಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ತಾಲಿಬಾನ್ ಸರ್ಕಾರದ ವಕ್ತಾರ ಜಬಿಹುಲ್ಲಾ ಮುಜಾಹಿದ್ ಅವರು ಎಕ್ಸ್ ನಲ್ಲಿ ಈ ಸಂಬಂಧ ಪೋಸ್ಟ್ ಮಾಡಿದ್ದಾರೆ. ಹೊಸ ಮನೆಗಳಲ್ಲಿ ಅಂಗಳ, ಅಡುಗೆ ಮನೆ, ಅಕ್ಕಪಕ್ಕದವರ ಬಾವಿ ಅಥವಾ ಮಹಿಳೆಯರು ಬಳಸುವ ಯಾವುದೇ ಸ್ಥಳದಲ್ಲಿ ಮಹಿಳೆಯರು ಕಾಣಿಸುವಂಥ ಕಿಟಕಿಗಳನ್ನು ಹೊಂದಿರಬಾರದು. ಅಡುಗೆಮನೆಯಲ್ಲಿ ಕೆಲಸ ಮಾಡುವ ಮಹಿಳೆಯರನ್ನು ನೋಡುವುದು, ವರಾಂಡದಲ್ಲಿ ಬರುವುದು ಮತ್ತು ಹೋಗುವುದು ಅಥವಾ ಬಾವಿಯಿಂದ ನೀರು ಸೇದುವುದು ಅಶ್ಲೀಲ ಕೃತ್ಯಗಳಿಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ.
ಈ ಕುರಿತು ಪಾಲಿಕೆ ಅಧಿಕಾರಿಗಳು ಹಾಗೂ ಸಂಬಂಧಿಸಿದ ಇಲಾಖೆಗಳು ನಿಗಾ ವಹಿಸಲಿದ್ದಾರೆ. ತಾಲಿಬಾನ್ ಸರ್ಕಾರದ ಪ್ರಕಾರ, ಪುರಸಭೆಯ ಅಧಿಕಾರಿಗಳು ಮತ್ತು ಇತರ ಸಂಬಂಧಿತ ಇಲಾಖೆಗಳು ಹೊಸದಾಗಿ ನಿರ್ಮಿಸುತ್ತಿರುವ ಮನೆಗಳನ್ನು ಸಹ ಮೇಲ್ವಿಚಾರಣೆ ಮಾಡುತ್ತವೆ. ಈ ಮನೆಗಳಲ್ಲಿ ಕಿಟಕಿಗಳು ಅಥವಾ ಬಾಗಿಲುಗಳು ನೆರೆಹೊರೆಯವರ ಮನೆಗಳ ಕಡೆಗೆ ತೆರೆಯುವಂತೆ ಇರಬಾರದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇರುವ ಕಿಟಕಿಗಳು ಮುಚ್ಚಿ
ಈಗಾಗಲೇ ನಿರ್ಮಿಸಲಾಗಿರುವ ಮನೆ, ಕಟ್ಟಡಗಳಲ್ಲಿ ಕಿಟಕಿಗಳಿದ್ದರೆ ಕೂಡಲೇ ಮುಚ್ಚಬೇಕು ಎಂದು ತಾಲಿಬಾನ್ ಸರ್ಕಾರ ಹೇಳಿದೆ. ಮನೆಯ ಯಜಮಾನನು ತನ್ನ ಮನೆಯ ಕಿಟಕಿ ಇರುವ ಕಡೆಗೆ ಗೋಡೆಯನ್ನು ನಿರ್ಮಿಸಬೇಕು ಅಥವಾ ಯಾವುದೇ ನೆರೆಹೊರೆಯವರು, ಹೊರಗಿನವರು ಆ ಕಿಟಕಿಯ ಮೂಲಕ ಮನೆಯೊಳಗೆ ನೋಡದಂತೆ ಕೆಲವು ವಿಶೇಷ ವ್ಯವಸ್ಥೆಯನ್ನು ಮಾಡುವಂತೆ ಸೂಚಿಸಲಾಗಿದೆ.
ಮಹಿಳೆಯರ ನೇಮಕಕ್ಕೆ ನಿಷೇಧ
ಅಫ್ಘಾನಿಸ್ತಾನದಲ್ಲಿ ಕಾರ್ಯ ನಿರ್ವಹಿಸುವ ಎನ್ ಜಿಒಗಳಲ್ಲಿ ಮಹಿಳೆಯರ ನೇಮಕವನ್ನೂ ನಿಷೇಧಿಸಿ ತಾಲಿಬಾನ್ ಸರಕಾರ ಆದೇಶ ಹೊರಡಿಸಿದೆ. ರಾಷ್ಟ್ರೀಯ ಮತ್ತು ವಿದೇಶಿ ಎನ್ ಜಿಒಗಳಲ್ಲಿ ಕೆಲಸ ಮಾಡುವ ಮಹಿಳೆಯರು ಇಸ್ಲಾಂ ಸಂಪ್ರದಾಯದ ಪ್ರಕಾರ ಸರಿಯಾಗಿ ಹಿಜಾಬ್ ಧರಿಸುತ್ತಿಲ್ಲ.
ಹೀಗಾಗಿ ಮಹಿಳೆಯರನ್ನು ಕೂಡಲೇ ಕೆಲಸದಿಂದ ವಜಾ ಮಾಡಬೇಕು. ಮುಂದೆ ಅವರನ್ನು ನೇಮಿಸಿಕೊಳ್ಳಬಾರದು. ಈ ಆದೇಶ ಪಾಲಿಸುವಲ್ಲಿ ಎನ್ ಜಿಒಗಳು ವಿಫಲವಾದರೆ ಸಂಸ್ಥೆಗಳ ಪರವಾನಿಗೆಯನ್ನೇ ರದ್ದುಪಡಿಸುವುದಾಗಿ ತಾಲಿಬಾನ್ ಆಡಳಿತ ತಾಕೀತು ಮಾಡಿದೆ.
2021ರಲ್ಲಿ ಅಧಿಕಾರಕ್ಕೆ ಮರಳಿದ ನಂತರ, ತಾಲಿಬಾನ್ ಮಹಿಳೆಯರ ಮೇಲೆ ಹಲವಾರು ನಿರ್ಬಂಧಗಳನ್ನು ವಿಧಿಸಿದೆ.
ಸಮಾಜದ ಎಲ್ಲಾ ಎಲ್ಲೆಗಳನ್ನೂ ಮೀರಿ ಯುವಕನೊಬ್ಬ ತನ್ನ ತಾಯಿಗೆ ಮರು ಮದುವೆ ಮಾಡಿಸಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಅಬ್ದುಲ್ ಅಹದ್ ಎಂಬಾತ ತನ್ನ ತಾಯಿಗೆ ಎರಡನೇ ಮದುವೆ ಮಾಡಿಸಸುವ ಮೂಲಕ ಭಾರೀ ಸುದ್ಧಿಯಲ್ಲಿದ್ದಾನೆ.
ಮಕ್ಕಳಿರುವ ತಾಯಿಗೆ ಒಂದು ವೇಳೆ ಡಿವೋರ್ಸ್ ಬಳಿಕ ಅಥವಾ ಗಂಡ ತೀರಿ ಹೋದ ಬಳಿಕ ಎರಡನೇ ಮದುವೆಯಾದರೆ ಸಮಾಜ ನೂರೊಂದು ಕೊಂಕು ಮಾತುಗಳನ್ನಾಡುತ್ತದೆ “ಕಳೆದ 18 ವರ್ಷಗಳಿಂದ ನನ್ನ ಯೋಗ್ಯತೆಗೆ ಅನುಗುಣವಾಗಿ ಅಮ್ಮನಿಗೆ ವಿಶೇಷ ಜೀವನವನ್ನು ನೀಡಲು ಪ್ರಯತ್ನಿಸಿದ್ದೇನೆ. ಆಕೆ ನಮಗಾಗಿ ತನ್ನ ಇಡೀ ಜೀವನವನ್ನೇ ತ್ಯಾಗ ಮಾಡಿದ್ದಾಳೆ. ಅವಳು ಕೂಡಾ ಸ್ವಂತ ಶಾಂತಿಯುತ ಜೀವನವನ್ನು ನಡೆಸಲು ಅರ್ಹಳು, ಆಕೆಗೂ ಜೀವನ ಮತ್ತು ಪ್ರೀತಿಯಲ್ಲಿ ಎರಡನೇ ಅವಕಾಶವನ್ನು ಪಡೆಯುವ ಹಕ್ಕಿದೆ” ಎನ್ನುತ್ತಾ ತಾಯಿಯ ಖುಷಿಗಾಗಿ ತಾನೇ ಮುಂದೆ ನಿಂತು ಅಹದ್ ಎರಡನೇ ಮದುವೆ ಮಾಡಿಸಿದ್ದಾನೆ. ಈ ಹೃದಯಸ್ಪರ್ಶಿ ಕಥೆಯನ್ನು ಅಹದ್ (muserft.ahad) ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾನೆ.
ಒಬ್ಬ ಬಳಕೆದಾರರು “ನೀವು ನಿಮ್ಮ ತಾಯಿಯ ಖುಷಿಗಾಗಿ ಬಹಳ ಅದ್ಭುತ ಕೆಲಸವನ್ನು ಮಾಡಿದ್ದೀರಿ” ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು “ನಿಜವಾಗಿಯೂ ಒಂಟಿಯಾಗಿ ಬದುಕುವುದು ತುಂಬಾ ಕಷ್ಟ, ಪ್ರತಿಯೊಬ್ಬರಿಗೂ ಸುಖ ದುಃಖವನ್ನು ಹಂಚಿಕೊಳ್ಳಲು ಸಂಗಾತಿಯ ಅವಶ್ಯಕತೆಯಿದೆ” ಎಂದು ಹೇಳಿದ್ದಾರೆ. ಇನ್ನೂ ಅನೇಕರು ಅಹದ್‌ನ ಈ ನಡೆಗೆ ಭಾರೀ ಮೆಚ್ಚುಗೆ ಸೂಚಿಸಿದ್ದಾರೆ.
ಮಂಗಳೂರು/ಲಂಡನ್: ಡಿಸೆಂಬರ್ 6 ರಿಂದ ನಾಪತ್ತೆಯಾಗಿದ್ದ 22 ವರ್ಷದ ಭಾರತೀಯ ವಿದ್ಯಾರ್ಥಿನಿಯ ಶ*ವ ಸ್ಕಾಟ್ಲೆಂಡಿನ ನದಿಯೊಂದರಲ್ಲಿ ಪತ್ತೆಯಾಗಿದೆ.
ಕೇರಳದ ಕೋಲೆಂಚೇರಿಯ ಮೂಲದ ಸಂತ್ರಾ ಸಾಜು ಅವರು ಸ್ಕಾಟಿಷ್ ನ ಎಡಿನ್ ಬರ್ಗ್ ನಲ್ಲಿರುವ ಹೆರಿಯಟ್-ವ್ಯಾಟ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಡಿಸೆಂಬರ್ 6ರ ಸಂಜೆ ಲಿವಿಂಗ್ ಸ್ಟನ್ ನ ಆಲ್ಮಂಡ್ ವೇಲ್ ನಲ್ಲಿರುವ ಅಸ್ಡಾ ಸೂಪರ್ ಮಾರ್ಕೆಟ್ ನಲ್ಲಿ ಕೊನೆಯದಾಗಿ ಸಂತ್ರಾ ಕಾಣಿಸಿಕೊಂಡಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
‘ಡಿಸೆಂಬರ್ 27ರ ಬೆಳಿಗ್ಗೆ 11:55ರ ವೇಳೆ ಎಡಿನ್ ಬರ್ಗ್ ನ ನ್ಯೂಬ್ರಿಡ್ಜ್ ಬಳಿ ನದಿಯಲ್ಲಿ ಯುವತಿಯೊಬ್ಬಳ ಶ*ವ ಪತ್ತೆಯಾಗಿದ್ದು, ನಾಪತ್ತೆಯಾಗಿರುವ ಸಂತ್ರಾ ಅವರ ಮೃ*ತದೇಹವೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಮೃ*ತದೇಹದ ಗುರುತು ಖಚಿತಪಡಿಸಿಕೊಳ್ಳಲು ಸಂತ್ರಾ ಅವರ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ’ ಎಂದು ಸ್ಕಾಟ್ಲೆಂಡ್ ಪೊಲೀಸರು ತಿಳಿಸಿದ್ದಾರೆ.
ಸಂತ್ರಾ ಅವರ ಸಾವಿನ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.