Home ಉಡುಪಿ ಕಟಪಾಡಿ ವಿಶ್ವನಾಥ ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವ : ಹಸಿರು ಹೊರೆಕಾಣಿಕೆ ಸಮರ್ಪಣೆ

ಕಟಪಾಡಿ ವಿಶ್ವನಾಥ ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವ : ಹಸಿರು ಹೊರೆಕಾಣಿಕೆ ಸಮರ್ಪಣೆ

ಕಟಪಾಡಿ ವಿಶ್ವನಾಥ ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವ : ಹಸಿರು ಹೊರೆಕಾಣಿಕೆ ಸಮರ್ಪಣೆ

ಉಡುಪಿ : ಉಡುಪಿ ಕಟಪಾಡಿ ವಿಶ್ವನಾಥ ಕ್ಷೇತದ್ರ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ಹಸಿರು ಹೊರೆಕಾಣಿಕೆ ಸಮರ್ಪಣೆ ಮೆರವಣಿಗೆ ನಡೆಯಿತು.

ಕಟಪಾಡಿ ಏಣ ಗುಡ್ಡ ಬ್ರಹ್ಮಬೈದೆರ್ಕಳ ಗರಡಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಶ್ರೀ ಕ್ಷೇತ್ರಕ್ಕೆ ಹೊರೆ ಕಾಣಿಕೆಯನ್ನು ಸಮರ್ಪಿಸಲಾಯಿತು.

ಇನ್ನು ಮೆರವಣಿಗೆಯಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಬೃಹತ್ ಗಾತ್ರದ ಟ್ಯಾಬ್ಲೊ, ಹುಲಿವೇಶ , ಕಳಶಗಳನ್ನು ಹಿಡಿದ ಮಹಿಳೆ ಸಾಲು ಈ ಸಂಭ್ರಮಕ್ಕೆ ಇನ್ನಷ್ಟು ಕಳೆಯನ್ನು ತಂದಿತ್ತು.

ಸ್ಥಳೀಯ ಸಂಘ -ಸಂಸ್ಥೆಗಳು ಊರಿನ ಗುರಿಕಾರರು ಭಕ್ತರು ವಿವಿಧ ತರಕಾರಿಗಳನ್ನು ಮತ್ತು ಅಕ್ಕಿ ದವಸ ದಾನ್ಯಗಳನ್ನು ಹೊರ ಕಾಣಿಕೆ ರೂಪದಲ್ಲಿ ಭಕ್ತಿಯಿಂದ ಶ್ರೀ ಕ್ಷೇತ್ರಕ್ಕೆ ಸಮರ್ಪಿಸಿದರು .

ಸುಮಾರು ಒಂದು ವಾರಗಳ ಕಾಲ ಕ್ಷೇತ್ರದಲ್ಲಿ ಜಾತ್ರಾ ಮಹೋತ್ಸವ ನಡೆಯಲಿದ್ದು, ಭಕ್ತರೆಲ್ಲರೂ ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಬೇಕೆಂದು ದೇವಸ್ಥಾನದ ಅಧ್ಯಕ್ಷರಾದ ಬಿ. ಎನ್. ಶಂಕರ್ ಪೂಜಾರಿ ತಿಳಿಸಿದ್ದಾರೆ.

ಈ ಸಂದರ್ಭ ದೇವಾಲಯದ ಪ್ರಧಾನ ಕಾರ್ಯದರ್ಶಿಯಾದ ಯು.ಶಿವಾನಂದ, ಕೋಶಾಧಿಕಾರಿ ವೀರೇಶ್ ಸುವರ್ಣ, ಕ್ಷೇತ್ರ ಆಡಳಿತ ಮಂಡಳಿಯ ಸದಸ್ಯರು ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಸಲಹಾ ಸಮಿತಿಯ ಸದಸ್ಯರು, ಗುರಿಕಾರರು ಉಪಸ್ಥಿತಿರಿದ್ದರು.

ವಿಡಿಯೋಗಾಗಿ..

- Advertisment -

RECENT NEWS

ಚೀನಾದಲ್ಲಿ ಕೊರೊನಾ ವೈರಸ್‌ ಅಟ್ಟಹಾಸ: 75,000 ಜನರಲ್ಲಿ ಸೋಂಕು ಪತ್ತೆ 

ಚೀನಾದಲ್ಲಿ ಕೊರೊನಾ ವೈರಸ್‌ ಅಟ್ಟಹಾಸ: 75,000 ಜನರಲ್ಲಿ ಸೋಂಕು ಪತ್ತೆ  ಚೀನಾ: ಚೀನಾದ ಹುಬೈನಲ್ಲಿ ಕೊರೊನಾ ವೈರಸ್ ಗೆ ಮತ್ತೆ 115 ಜನರು ಬಲಿಯಾಗಿದ್ದು ಮೃತರ ಸಂಖ್ಯೆ 2,236ಕ್ಕೆ ತಲುಪಿದೆ. ಚೀನಾದಲ್ಲಿ 75,000 ಜನರು...

ಮಾಜಿ ಸಚಿವ, ಹಿರಿಯ ಜೆಡಿಎಸ್ ನಾಯಕ ಸಿ.ಚೆನ್ನಿಗಪ್ಪ ಇನ್ನಿಲ್ಲ

ಮಾಜಿ ಸಚಿವ, ಹಿರಿಯ ಜೆಡಿಎಸ್ ನಾಯಕ ಸಿ. ಚೆನ್ನಿಗಪ್ಪ ಇನ್ನಿಲ್ಲ ಬೆಂಗಳೂರು: ಮಾಜಿ ಸಚಿವ, ಜೆಡಿಎಸ್ ಪಕ್ಷದ ಹಿರಿಯ ಮುಖಂಡರಾಗಿದ್ದ ಸಿ. ಚೆನ್ನಿಗಪ್ಪ ಇಂದು ನಿಧನರಾಗಿದ್ದಾರೆ. ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ ಚೆನ್ನಿಗಪ್ಪ ಅವರಿಗೆ...

ತ್ಯಾಜ್ಯ ಸಂಸ್ಕರಣಾ ಘಟಕ ಕಡ್ಡಾಯ: ಉಲ್ಲಂಘಿಸಿದವರಿಗೆ ಮ.ನ.ಪಾ ದಂಡ

ತ್ಯಾಜ್ಯ ಸಂಸ್ಕರಣಾ ಘಟಕ ಕಡ್ಡಾಯ: ಉಲ್ಲಂಘಿಸಿದವರಿಗೆ ಮ.ನ.ಪಾ ದಂಡ ಮಂಗಳೂರು: ತ್ಯಾಜ್ಯ ಸಂಸ್ಕರಣಾ ಘಟಕ ಹೊಂದುವಂತೆ ಮಹಾನಗರ ಪಾಲಿಕೆ ಆಯುಕ್ತರು ನೀಡಿದ್ದ ಆದೇಶವನ್ನು ಉಲ್ಲಂಘಿಸಿದ ಹತ್ತು ಅಪಾರ್ಟ್ ಮೆಂಟ್ ಗಳಿಗೆ ದಂಡ ವಿಧಿಸಲಾಗಿದೆ. ಕಳೆದ ಸೆಪ್ಟಂಬರ್...

ಪಾಕ್ ಪರ ಅಮೂಲ್ಯ ಘೋಷಣೆ: 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶ

ಪಾಕ್ ಪರ ಅಮೂಲ್ಯ ಘೋಷಣೆ: 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶ ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿ ಸಮಾವೇಶದ ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗಿದ ಅಮೂಲ್ಯ ಲಿಯೋನಾಳನ್ನು ಬಂಧಿಸಿದ ಪೋಲಿಸರು...