ಮಂಗಳೂರು: ಮಂಗಳೂರು ಉರ್ವದ ಬೈಕಾಡಿ ಪ್ರತಿಷ್ಠಾನದ ವತಿಯಿಂದ ಮಕ್ಕಳಿಗಾಗಿ ಕನ್ನಡದಲ್ಲಿ ಕಥೆ ಹೇಳುವ ಆನ್ ಲೈನ್ ಕಥಾ ಸ್ಪರ್ಧೆ”ಕಥಾನಕ” ಎಂಬ ಸ್ಪರ್ಧೆ ಆಯೋಜನೆ ಮಾಡಲಾಗಿದೆ.
ಈ ಕುರಿತು ಪ್ರತಿಷ್ಠಾನದ ಕಾರ್ಯದರ್ಶಿಯಾದ ಭರತ್ ಬೈಕಾಡಿಯವರು ಮಾಧ್ಯಮಗಳೊಂದಿಗೆ ಮಾತನಾಡಿ ಮಕ್ಕಳಿಗಾಗಿ ಏರ್ಪಡಿಸಲಾದ ಕಥಾ ಸ್ಪರ್ಧೆಯು ಇಂದಿನಿಂದ ಆರಂಭಗೊಂಡಿದ್ದು ಜುಲೈ15ಕ್ಕೆ ಮುಕ್ತಾಯವಾಗಲಿದೆ.
ಸ್ಪರ್ಧೆಯು ಪ್ರಥಮ ವಿಭಾಗದಲ್ಲಿ 3 ರಿಂದ 5 ವರ್ಷ , 2ನೇ ವಿಭಾಗದಲ್ಲಿ 5 ರಿಂದ 9 ವರ್ಷ, 3ನೇ ವಿಭಾಗದಲ್ಲಿ 9 ರಿಂದ 13 ವರ್ಷ ಹೀಗೆ ಮೂರು ವಿಭಾಗಗಳನ್ನು ಮಾಡಲಾಗಿದೆ.
ಈ ನಿಟ್ಟಿನಲ್ಲಿ ಎಲ್ಲಾ ಸ್ಪರ್ಧಾಳುಗಳು ಜುಲೈ 15 ರ ಒಳಗಾಗಿ 4 ನಿಮಿಷ ಮಿರದಂತೆ ವೀಡಿಯೋ ರೆಕಾರ್ಡ್ ಮಾಡಿ 9886507605ಕ್ಕೆ ಕಳುಹಿಸಿಕೊಡಬೇಕು.
ಪ್ರಪಂಚದ ಯಾವುದೇ ಮೂಲೆಯಿಂದಲೂ ಸ್ಪರ್ಧಿಗಳು ಭಾಗವಹಿಸಬಹುದು.
ಆದ್ರೆ ಅಗತ್ಯ ದಾಖಲೆಗಳನ್ನು ಒದಗಿಸುವುದು ಅಗತ್ಯವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನದ ಪ್ರಮುಖರು ಉಪಸ್ಥಿತರಿದ್ದರು.