LATEST NEWS
ಕಾಸರಗೋಡು : ಕಲ್ಲಿನ ಕ್ವಾರಿಯಲ್ಲಿ ಮುಳುಗಿ ಅವಳಿ ಮಕ್ಕಳಿಬ್ಬರು ಸಾ*ವು
ಕಾಸರಗೋಡು : ಅವಳಿ ಮಕ್ಕಳಿಬ್ಬರು ಕಲ್ಲಿನ ಕ್ವಾರಿಯಲ್ಲಿ ಮುಳುಗಿ ಮೃ*ತಪಟ್ಟ ಘಟನೆ ಸೋಮವಾರ(ಜೂ.18) ಸಂಜೆ ಚೀಮೇನಿ ಕನಿಯಾಂದಲದಲ್ಲಿ ನಡೆದಿದೆ.
ಚೀಮೇನಿ ಕನಿಯಾಂದಲದಲ್ಲಿ ರಾಧಾಕೃಷ್ಣ ಎಂಬವರ ಮಕ್ಕಳಾದ ಸುದೇವ್ ( 10) ಮತ್ತು ಶ್ರೀದೇವ್ ( 10) ಮೃ*ತಪಟ್ಟವರು. ಮಕ್ಕಳಿಬ್ಬರು ಚೀಮೇನಿ ಸರಕಾರಿ ಹಯರ್ ಸೆಕಂಡರಿ ಶಾಲೆಯ ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು.
ಇದನ್ನೂ ಓದಿ : ಉಡುಪಿಯಲ್ಲಿ ಮತ್ತೊಂದು ಗ್ಯಾಂಗ್ ವಾರ್..!
ಮಧ್ಯಾಹ್ನ ಇಬ್ಬರೂ ಸೈಕಲ್ ನಲ್ಲಿ ಆಟವಾಡಲು ತೆರಳಿದ್ದು, ತಡವಾದರೂ ಮನೆಗೆ ಹಿಂದಿರುಗದ ಕಾರಣ ಮನೆಯವರು ಹುಡುಕಾಟ ನಡೆಸಿದಾಗ ಕ್ವಾರಿಯ ಸಮೀಪ ಸೈಕಲ್ ಪತ್ತೆಯಾಗಿದೆ. ಸಂಶಯಗೊಂಡು ಮನೆಯವರು ಹಾಗೂ ಪರಿಸರವಾಸಿಗಳು ಶೋಧ ನಡೆಸಿದಾಗ ಕ್ವಾರಿಗೆ ಬಿದ್ದಿರುವುದು ಕಂಡುಬಂದಿದೆ.
ಇಬ್ಬರನ್ನು ಮೇಲಕ್ಕೆತ್ತಿ ಸಮೀಪದ ಆಸ್ಪತ್ರೆಗೆ ಕರೆದೊಯ್ದರೂ, ಅದಾಗಲೇ ಇಬ್ಬರೂ ಮೃ*ತಪಟ್ಟಿದ್ದರು.
DAKSHINA KANNADA
ಜಿಲ್ಲೆಯಲ್ಲಿ ರೆಡ್ ಅಲರ್ಟ್..! ಜೂನ್ 27 ಶಾಲೆಗೆ ರಜೆ ಘೋಷಣೆ..!
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜೂನ್ 27 ರ ಗುರುವಾರದಂದು ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಸರ್ಕಾರಿ, ಖಾಸಗಿ, ಅನುದಾನಿತ ಶಾಲೆಗಳು, ಅಂಗನವಾಡಿ , ಹಾಗೂ ಪ್ರೌಡಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಜೂನ್ 27 ರಂದು ವ್ಯಾಪಕ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ರೆಡ್ ಅಲರ್ಟ್ ಘೋಷಣೆ ಮಾಡಿದೆ.
ಈ ಕುರಿತಾಗಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಯಿಲನ್ ಅವರು ಈ ಆದೇಶ ಹೊರಡಿಸಿದ್ದಾರೆ. ಇಷ್ಟೇ ಅಲ್ಲದೆ ತೀವೃ ಮಳೆಯ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಸೂಕ್ತ ಕ್ರಮಗಳ ಬಗ್ಗೆಯೂ ಎಚ್ಚರಿಕೆ ನೀಡಿದ್ದಾರೆ. ಮೀನುಗಾರು ಸಮುದ್ರಕ್ಕೆ ಇಳಿಯದಂತೆ ಆದೇಶದಲ್ಲಿ ಸೂಚಿಸಿದ್ದಾರೆ. ನೀರು ಇರುವ ತಗ್ಗು ಪ್ರದೇಶಗಳಿಗೆ ಜನರು ತೆರಳದೇ ಇರುವುದು, ಹಾಗೂ ಮಳೆ ನೀರಿನಿಂದ ನೆರೆಯ ಆತಂಕ ಇರುವ ಜನರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುವಂತೆಯೂ ಸೂಚನೆ ನೀಡಿದ್ದಾರೆ.
ಯಾವುದೇ ತುರ್ತು ಪರಿಸ್ಥಿತಿಯ ಸಮಯದಲ್ಲಿ ಜಿಲ್ಲಾಡಳಿತದ 1077 ಅಥವಾ 0824-2442590 ನಂಬರ್ ಕರೆ ಮಾಡುವಂತೆ ಸೂಚಿನೆ ನೀಡಲಾಗಿದೆ.
LATEST NEWS
500 ನೌಕರರನ್ನು ಕೆಲಸದಿಂದ ವಜಾಗೊಳಿಸಿದ Yes ಬ್ಯಾಂಕ್..!
ಮಂಗಳೂರು ( ಮುಂಬೈ ) : ದೇಶದಲ್ಲಿ ಹೆಸರು ಮಾಡಿರುವ ಖಾಸಗಿ ಬ್ಯಾಂಕ್ ಆಗಿರುವ Yes ಬ್ಯಾಂಕ್ ತನ್ನ 500 ನೌಕರರಿಗೆ ಮೂರು ತಿಂಗಳ ಸಮಾನ ವೇತನ ನೀಡಿ ಹೊರ ಹಾಕಿದೆ. ಬ್ಯುಸಿನೆಸ್ ಟುಡೆ ವರದಿ ಪ್ರಕಾರ ಯೆಸ್ ಬ್ಯಾಂಕ್ ಇನ್ನೂ ಅನೇಕ ನೌಕರರ ಲಿಸ್ಟ್ ತಯಾರಿಸಿದ್ದು, ಮುಂದಿನ ದಿನದಲ್ಲಿ ಅವರನ್ನೂ ವಜಾಗೊಳಿಸುವ ಸಾದ್ಯತೆ ಇದೆ ಎಂದು ಹೇಳಿದೆ. ಬಹುತೇಕ ಎಲ್ಲಾ ವಿಭಾಗದ ನೌಕರರು ಈ ಪಟ್ಟಿಯಲ್ಲಿ ಒಳಗೊಂಡಿದ್ದು, ನೌಕರರು ಅತಂತ್ರ ಸ್ಥಿತಿಯನ್ನು ಎದುರಿಸುತ್ತಿದ್ದಾರೆ.
ಡಿಜಿಟಲೀಕರಣದಿಂದ ಕಾಸ್ಟ್ ಕಟ್ಟಿಂಗ್ ..!
Yes ಬ್ಯಾಂಕ್ ಡಿಜಿಟಲೀಕರಣದೊಂದಿಗೆ ಗ್ರಾಹಕರ ಜೊತೆ ನೇರ ಸಂಪರ್ಕ ಮಾಡುತ್ತಿದ್ದು, ನಡುವಿನಲ್ಲಿ ಅನಗತ್ಯ ನೌಕರರ ಅಗತ್ಯ ಇಲ್ಲ ಎಂದು ಈ ತೀರ್ಮಾನಕ್ಕೆ ಬಂದಿದೆ ಎಂದು ವರದಿ ಹೇಳಿದೆ. ಬ್ಯಾಂಕ್ ತೆಗೆದುಕೊಂಡಿರುವ ಈ ನಿರ್ಧಾರದಿಂದ ಬ್ಯಾಂಕ್ನ ನಿರ್ವಹಣಾ ವೆಚ್ಚವನ್ನು ಸರಿದೂಗಿಸಲು ಸಾಧ್ಯವಾಗಲಿದೆ. ಬ್ಯಾಂಕ್ ವೇಗವಾಗಿ ಡಿಜಿಟಲೀಕರಣವಾಗುತ್ತಿರುವುದರಿಂದ ನೌಕರರ ಅಗತ್ಯವೂ ಕಡಿಮೆಯಾಗುತ್ತಿರುವುದಾಗಿ ಬ್ಯಾಂಕ್ ಮೂಲಗಳು ತಿಳಿಸಿದೆ. 2023 -24 ರಲ್ಲಿ Yes ಬ್ಯಾಂಕ್ ನೌಕರರಿಗೆ ನೀಡಿದ ಸ್ಯಾಲರಿ ಹಾಗೂ ಭತ್ತೆಗಳು ರೂ.3363 ಕೋಟಿಯಿಂದ ರೂ.3774 ಕೋಟಿಗಳಿಗೆ ಏರಿಕೆಯಾಗಿದೆ. ಇದೀಗ ಅನಗತ್ಯ ನೌಕರರ ವಜಾದಿಂದ ಈ ಏರಿಕೆಯನ್ನು ತಡೆಯಲು ಬ್ಯಾಂಕ್ ಮುಂದಾಗಿದೆ.
Yes ಬ್ಯಾಂಕ್ನ ಈ ನಿರ್ಧಾರ ಕೇವಲ ನೌಕರರ ಮೇಲೆ ಮಾತ್ರವಲ್ಲದೆ ಶೇರ್ ಮಾರುಕಟ್ಟೆಯಲ್ಲೂ ಪ್ರಭಾವ ಬೀರಿದ್ದು Yes ಬ್ಯಾಂಕ್ ಶೇರು ಬೆಲೆ ಕುಸಿತವಾಗಿದೆ. ಮಂಗಳವಾರ 24.02 ರೂಗಳಲ್ಲಿ ಅಂತ್ಯವಾಗಿದ್ದ Yes ಬ್ಯಾಂಕ್ ಶೇರ್ ಬುಧವಾರ ನೌಕರರನ್ನು ವಜಾಗೊಳಿಸಿದ ವಿಚಾರ ಬಹಿರಂಗವಾಗುತ್ತಿದ್ದಂತೆ 23.90 ರೂಪಾಯಿಗೆ ಕುಸಿತವಾಗಿದೆ.
LATEST NEWS
ಪ್ರಜ್ವಲ್ ರೇವಣ್ಣಗೆ ಬಿಗ್ ಶಾಕ್; ಜಾಮೀನು ಅರ್ಜಿ ವಜಾಗೊಳಿಸಿದ ನ್ಯಾಯಾಲಯ
ಬೆಂಗಳೂರು : ಹಾಸನ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ವಜಾಗೊಳಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶಿಸಿದೆ. ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಲೈಂ*ಗಿಕ ದೌ*ರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿರುವ ಪ್ರಜ್ವಲ್ ರೇವಣ್ಣ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಬುಧವಾರ (ಜೂನ್ 26) ಅರ್ಜಿ ವಿಚಾರಣೆ ನಡೆಸಿದ್ದು, ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ವಜಾಗೊಳಿಸಿದೆ.
ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಮೊದಲನೇ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಪರ ವಕೀಲರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್, ಜಾಮೀನು ಆದೇಶ ಕಾಯ್ದಿರಿಸಿತ್ತು. ಆದರೆ, ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಪ್ರಜ್ವಲ್ ಜಾಮೀನು ಅರ್ಜಿಯನ್ನು ವಜಾ ಮಾಡಿ ಆದೇಶ ಹೊರಡಿಸಿದ್ದಾರೆ. ಇನ್ನು ಜಾಮೀನಿಗಾಗಿ ಪ್ರಜ್ವಲ್ ಹೈಕೋರ್ಟ್ ಮೆಟ್ಟಿಲೇರಬೇಕಿದೆ.
ಇದನ್ನೂ ಓದಿ : ಖ್ಯಾತ ನಟ ಜಯಂ ರವಿ – ಆರತಿ ದಾಂಪತ್ಯ ಜೀವನದಲ್ಲಿ ಬಿರುಕು!?
ಲೈಂ*ಗಿಕ ದೌರ್ಜ*ನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ 42ನೇ ಎಸಿಎಂಎಂ ನ್ಯಾಯಾಲಯವು ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೂನ್ 29ರ ವರೆಗೂ ಎಸ್ಐಟಿ ಕಸ್ಟಡಿಗೆ ನೀಡಿದೆ.
- LATEST NEWS4 days ago
ಮುಂದಿನ ಐದು ದಿನ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆ; ಹವಾಮಾನ ಇಲಾಖೆ ಎಚ್ಚರಿಕೆ
- LATEST NEWS5 days ago
ನಟ ದರ್ಶನ್ ಅಭಿಮಾನಿಯ ವಿರುದ್ಧ ಬಿತ್ತು ಕೇಸ್
- DAKSHINA KANNADA2 days ago
ಕರಾವಳಿಯಲ್ಲಿ ಬಿರುಸು ಪಡೆದುಕೊಂಡ ಮಳೆ; ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ
- DAKSHINA KANNADA7 days ago
ಇನ್ಮುಂದೆ ಶಾಲೆಗಳಲ್ಲಿ ಹುಟ್ಟುಹಬ್ಬ ಆಚರಿಸುವಂತಿಲ್ಲ; ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ
Pingback: ಮನೆಯಲ್ಲಿದ್ದ ರೆಫ್ರಿಜರೇಟರ್ ಸ್ಫೋಟ..! - NAMMAKUDLA NEWS - ನಮ್ಮಕುಡ್ಲ ನ್ಯೂಸ್