ಕಾಸರಗೋಡು : ವಧಿಸಲು ತಂದವನನ್ನೇ ಕೊಣವೊಂದು ಕೊಂಬಿನಿಂದ ತಿವಿದು ಕೊಂದಿರುವ ಘಟನೆಯೊಂದು ಕಾಸರಗೋಡಿನ ಮೊಗ್ರಾಲ್ ಪುತ್ತೂರು ಎಂಬಲ್ಲಿ ಸಂಭವಿಸಿದೆ.
ಲಾರಿಯಲ್ಲಿ ಇಲ್ಲಿನ ವಧಾಗೃಹಕ್ಕೆ ತಂದಿದ್ದ ಕೋಣವೊಂದು ವಾಹನದಿಂದ ಇಳಿಸುತ್ತಿರುವಾಗ ರೊಚ್ಚಿಗೆದ್ದ ಕೋಣ ಹಗ್ಗ ಕಡಿದುಕೊಂಡು ಯುವಕನನ್ನು ಒಂದಷ್ಟು ದೂರ ಎಳೆದುಕೊಂಡು ಹೋಗಿ ಕೊಂಬಿನಿಂದ ತಿವಿದಿದೆ.
ಗಂಭೀರವಾಗಿ ಗಾಯಗೊಂಡ ಯುವಕನನ್ನು ಆಸಪತ್ತೆಗೆ ದಾಖಲಿಸದರೂ ಚಿಕಿತ್ಸೆ ಫಲಕರಿಯಾಗದೇ ಮೃತಪಟ್ಟಿದ್ದಾನೆ.
ಮೃತ ಯುವಕನನ್ನು ಚಿತ್ರದುರ್ಗದ ಸಾದಿಕ್ (22) ಎಂದು ಗುರುತಿಸಲಾಗಿದೆ.
ಹಗ್ಗದಿಂದ ಬಿಡಿಸಿಕೊಂಡ ಕೋಣ ಭಾರಿ ದಾಂಧಲೆ ಎಬ್ಬಿಸಿದ್ದು, ಸಾದಿಕ್ ನ ತಂದೆಗೂ ಗಾಯಗಳಾಗಿವೆ.
ಚಿತ್ರದುರ್ಗದಿಂದಲೇ ಈ ಕೋಣವನ್ನು ಮಾಂಸಕ್ಕಾಗಿ ವಧಿಸಲು ಮೊಗ್ರಾಲ್ ಪುತ್ತೂರಿಗೆ ತರಲಾಗಿತ್ತು.
ಕೋಣ ಮೊಗ್ರಾಲ್ ಪೇಟೆಯಲ್ಲಿ ಸುಮಾರು 4 ಕಿ. ಮೀ. ಓಡಾಡಿ ಭಾರಿ ನಷ್ಟ ಉಂಟುಮಾಡಿದೆ.
ಓರ್ವ ಬಾಲಕನನ್ನು ಗಾಯಗೊಳಿಸಿ,ಬೇಕರಿಗೆ ನುಗ್ಗಿ ದಾಂಧಲೆ ಮಾಡಿದೆ.
ಕೋಣವನ್ನು ಹಿಡಿಯಲು ಪ್ರಯತ್ನಿಸಿದ ಕೆಲವು ಮಂದಿಗೆ ಗಾಯಗಲಾಗಿವೆ.
ಕೊನೆಗೆ ಪೊಲೀಸರು ಮತ್ತು ಅಗ್ನಿಶಾಮಕ ನೆರವಿನಲ್ಲಿ ಕೋಣವನ್ನು ಹಿಡಿದು ಕಟ್ಟಿ ಹಾಕಲಾಗಿದೆ.