Tuesday, July 5, 2022

ಕಾರ್ತಿಕ್‌ ಕಂಠಸಿರಿಯಲ್ಲಿ  ಕೊರಗಜ್ಜನ ಹಾಡು ಸೂಪರ್‌ ಹಿಟ್‌: ಜಾರಿಗೆ ಕಟ್ಟೆ ಕ್ಷೇತ್ರದಲ್ಲಿ ಕಾರ್ತಿಕ್ ‌ಗೆ ಸನ್ಮಾನ

ಕಾರ್ತಿಕ್‌ ಕಂಠಸಿರಿಯಲ್ಲಿ  ಕೊರಗಜ್ಜನ ಹಾಡು ಸೂಪರ್‌ ಹಿಟ್‌: ಜಾರಿಗೆ ಕಟ್ಟೆ ಕ್ಷೇತ್ರದಲ್ಲಿ ಕಾರ್ತಿಕ್ ‌ಗೆ ಸನ್ಮಾನ

    ಕಾರ್ಕಳ: ಕಾರ್ಕಳ  ಹಿರ್ಗಾನದ ಬಾಲಕ ಕಾರ್ತಿಕ್ ಹಾಡಿದ ಕೊರಗಜ್ಜ ದೈವವನ್ನು ಸ್ತುತಿಸುವ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೀಗ ಈ ಬಾಲಕನಿಗೆ ಜಾರಿಗೆಕಟ್ಟೆ ಶ್ರೀ ಕೊರಗಜ್ಜ ಕೊರಗರ ಪಂಜುರ್ಲಿ ದೈವಸ್ಥಾನದ ವತಿಯಿಂದ ಶ್ರೀ ಕ್ಷೇತ್ರದಲ್ಲಿ  ಸನ್ಮಾನ ನಡೆಯಿತು, ಶ್ರೀ ಕ್ಷೇತ್ರದ ಧರ್ಮದರ್ಶಿ ದಿವಾಕರ ಪೂಜಾರಿ ದಂಪತಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಡಮರುಗ ಬಳಗವು ಬಾಲಕ ಕಾರ್ತಿಕ್ ಹಾಡಿದ  ಕರಿಯಜ್ಜ ಧ್ವನಿಸುರುಳಿಯನ್ನು  ಬಿಡುಗಡೆಗೊಳಿಸಿದರು, ಶ್ರೀ ಕ್ಷೇತ್ರದ ಬಗ್ಗೆ ಭಕ್ತರಿಗೆ ಮಾಹಿತಿ   ನೀಡುವುದಕ್ಕೋಸ್ಕರ   ಕ್ಷೇತ್ರದ ನೂತನ ವೆಬ್ ಸೈಟ್ ನ್ನು ಅನಾವರಣಗೊಳಿಸಲಾಯಿತು,

ನಂತರ ಬಾಲಕ ಕಾರ್ತಿಕ್  ಕೊರಗಜ್ಜನ ಹಾಡನ್ನು ಹಾಡುವ ಮೂಲಕ ನೆರೆದಿದ್ದ ಭಕ್ತರನ್ನು ಮತ್ತೆ ರಂಜಿಸಿದರು. ಈ ಸಂದರ್ಭ ಡಮರುಗ ಬಳಗದವರನ್ನು ಗೌರವಿಸಲಾಯಿತು,

ಜಿಲ್ಲಾ  ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ ವೆಬ್‌ಸೈಟ್ ಬಿಡುಗಡೆಗೊಳಿಸಿದರು.

ಕ್ಷೇತ್ರದ ಧೀರಜ್ ದಿವಾಕರ ಪೂಜಾರಿ, ದೈವಾರಾಕ ಸಂಘದ ಅಶೋಕ್ ಶೆಟ್ಟಿ, ಗಾಯಕಿ ಚೈತ್ರಾ ಕಲ್ಲಡ್ಕ, ಡಮರುಗ ತಂಡದ ಜಿ.ಎಸ್.ಗುರುಪುರ, ನಿರೂಪಕ ಮಧುರಾಜ್ ಗುರುಪುರ, ಸುಶಾಂತ್ ಚಕ್ರಪಾಣಿ, ವೆಬ್‌ಸೈಟ್‌ನ ಯಶು ಐಕಳ, ಕಾರ್ತಿಕ್‌ನ ಮಾತಾಪಿತರಾದ ಪೂವಪ್ಪ ಹಾಗೂ ಲೋಲಾಕ್ಷಿ , ಶರತ್ ಶೆಟ್ಟಿ ಕಿನ್ನಿಗೋಳಿ ಮತ್ತಿತರರ‍್ದಿರು.

LEAVE A REPLY

Please enter your comment!
Please enter your name here

Hot Topics

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ : ಶಾಲಾ- ಕಾಲೇಜುಗಳಿಗೆ ಇಂದು (ಜು5) ರಜೆ ಘೋಷಿಸಿದ ಜಿಲ್ಲಾಧಿಕಾರಿ..!

ಮಂಗಳೂರು " ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಹವಾಮಾನ ಇಲಾಖಾ ಮುನ್ಸೂಚನೆಯನ್ನು ಗಮನದಲ್ಲಿರಿಸಿ, ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು, ದಿನಾಂಕ 05/07/ 2022ರಂದು ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕಶಾಲೆ ಪ್ರೌಢಶಾಲೆ, ಪದವಿ ಪೂರ್ವ...