Home ಕರ್ನಾಟಕ ವಾರ್ತೆ ಇಂದು ಮಧ್ಯರಾತ್ರಿಯಿಂದ ಕರ್ನಾಟಕ ಲಾಕ್​ಡೌನ್..? ರಾಜ್ಯದಲ್ಲಿ ಎಲ್ಲವೂ ಬಂದ್..!

ಇಂದು ಮಧ್ಯರಾತ್ರಿಯಿಂದ ಕರ್ನಾಟಕ ಲಾಕ್​ಡೌನ್..? ರಾಜ್ಯದಲ್ಲಿ ಎಲ್ಲವೂ ಬಂದ್..!

ಇಂದು ಮಧ್ಯರಾತ್ರಿಯಿಂದ ಕರ್ನಾಟಕ ಲಾಕ್​ಡೌನ್..? ರಾಜ್ಯದಲ್ಲಿ ಎಲ್ಲವೂ ಬಂದ್..!

ಬೆಂಗಳೂರು: ಕೊರೋನಾ ವೈರಸ್ ಸೋಂಕು ನಿಗ್ರಹಿಸಲು ರಾಜ್ಯ ಸರ್ಕಾರ ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯದ 9 ಜಿಲ್ಲೆಗಳಲ್ಲಿ ಇಂದಿನಿಂದ ಬಂದ್​ ಆದೇಶ ಹೊರಡಿಸಿದೆ. ಆದರೂ ಜನರಿಂದ ನಿರೀಕ್ಷಿತ ಸಹಕಾರ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಮಧ್ಯರಾತ್ರಿಯಿಂದ ಕರ್ನಾಟಕ ಲಾಕ್​ಡೌನ್ ಆಗಲಿದೆ.

ಇಂದು ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ನೇತೃತ್ವದ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಪ್ರತಿಪಕ್ಷ ಸದಸ್ಯರ ಅಭಿಪ್ರಾಯವನ್ನೂ ಪಡೆಯಲಾಗಿದ್ದು ಇಂದು ಸಂಜೆ ಸಿಎಂ ಬಿಎಸ್​ವೈ ಅಂತಿಮ ನಿರ್ಧಾರ ಪ್ರಕಟಿಸಲಿದ್ದಾರೆ. ಆರೋಗ್ಯ, ಗೃಹ, ಕಂದಾಯ, ಅರಣ್ಯ ಸೇರಿದಂತೆ ಪ್ರಮುಖ ಇಲಾಖೆಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಉಳಿದೆಲ್ಲ ಇಲಾಖೆಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂದು ಮೂಲಗಳಿಂದ ಮಾಹಿತಿ ಸಿಕ್ಕಿದೆ.

ಕೊರೋನಾವನ್ನು ತಡೆಗಟ್ಟುವ ಕುರಿತು ಚರ್ಚೆ ನಡೆಸುವ ಸಲುವಾಗಿ ನಿನ್ನೆ ಸಿಎಂ ಬಿಎಸ್‌ವೈ ಹಾಗೂ ಸಚಿವರ ನೇತೃತ್ವದಲ್ಲಿ ಸಭೆ ನಡೆದಿತ್ತು. ಈ ವೇಳೆ ರಾಜ್ಯವನ್ನು ಲಾಕ್‌ಡೌನ್‌ ಮಾಡುವ ಕುರಿತು ಚರ್ಚೆ ನಡಸಲಾಗಿದೆ. ಸಿಎಂಗೆ ಸಲಹೆ ನೀಡಿರುವ ಅಧಿಕಾರಿಗಳು, “ಕೊರೊನಾವನ್ನು ತಡೆಗಟ್ಟೋದು ಅಷ್ಟು ಸುಲಭದ ಕೆಲಸವಲ್ಲ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕಾಗಿದೆ.

ವಿದೇಶಗಳಿಂದ ಬಂದವರಿಂದಲೇ ಕೊರೊನಾ ವೈರಸ್ ಹರಡುತ್ತಿದೆ. ಒಬ್ಬರಿಂದ ಒಬ್ಬರಿಗೆ ಇದು ನಿಧಾನಕ್ಕೆ ಹರಡುತ್ತಿದೆ. ರಾಜ್ಯದಲ್ಲಿ ಕೊರೊನಾ ವೈರಸ್ ಆತಂಕ ನಿರೀಕ್ಷೆಗೂ ಮೀರಿ ವ್ಯಾಪಿಸಲಿದೆ. ಜಾಗೃತೆ ವಹಿಸದಿದ್ದರೆ ಕಷ್ಟ. ನಾವು ಕೈಲಾಗೋ ಪ್ರಯತ್ನ ಮಾಡುತ್ತಿದ್ದೇವೆ. ಸರ್ಕಾರಕ್ಕೆ ಆರ್ಥಿಕ ಹೊಡೆತ ಬೀಳುತ್ತೆ. ಆದರೆ, ಅನಿವಾರ್ಯ ಪರಿಸ್ಥಿತಿ ಎದುರಾಗಿದೆ ಹೀಗಾಗಿ ಇಡೀ ರಾಜ್ಯ ಲಾಕ್ ಡೌನ್ ಮಾಡಬೇಕು ಮತ್ತು ಇದು ಅನಿವಾರ್ಯ” ಎಂದು ತಿಳಿಸಿದ್ದಾರೆ.

ಇನ್ನು, ಈ ಬಾರಿ ಬೆಂಗಳೂರು ಕರಗ ಉತ್ಸವ ನಡೆಸದಂತೆಯೂ ತೀರ್ಮಾನ ಮಾಡಲಾಗಿದೆ. ಕೊರೋನಾ ವೈರಸ್ ಸೋಂಕಿತರು ಪತ್ತೆಯಾಗಿರುವ ಜಿಲ್ಲೆಗಳನ್ನು ಲಾಕ್ ಡೌನ್ ಮಾಡಲು ಈ ಮೊದಲು ನಿರ್ಧರಿಸಲಾಗಿತ್ತು. ಅಂತೆಯೇ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಗಳೂರು, ಮೈಸೂರು, ಬೆಳಗಾವಿ, ಕಲಬುರ್ಗಿ, ಧಾರವಾಡ, ಚಿಕ್ಕಬಳ್ಳಾಪುರ ಮತ್ತು ಕೊಡಗು ಜಿಲ್ಲೆಗಳಲ್ಲಿ ಮಾರ್ಚ್ 31ರವರೆಗೆ ಬಂದ್ ಮಾಡಲು ಆದೇಶಿಸಲಾಗಿತ್ತು.

ಕೊರೋನಾವನ್ನು ತಡೆಗಟ್ಟುವ ಕುರಿತು ಚರ್ಚೆ ನಡೆಸುವ ಸಲುವಾಗಿ ನಿನ್ನೆ ಸಿಎಂ ಬಿಎಸ್‌ವೈ ಹಾಗೂ ಸಚಿವರ ನೇತೃತ್ವದಲ್ಲಿ ಸಭೆ ನಡೆದಿತ್ತು. ಈ ವೇಳೆ ರಾಜ್ಯವನ್ನು ಲಾಕ್‌ಡೌನ್‌ ಮಾಡುವ ಕುರಿತು ಚರ್ಚೆ ನಡಸಲಾಗಿದೆ. ಸಿಎಂಗೆ ಸಲಹೆ ನೀಡಿರುವ ಅಧಿಕಾರಿಗಳು, “ಕೊರೊನಾವನ್ನು ತಡೆಗಟ್ಟೋದು ಅಷ್ಟು ಸುಲಭದ ಕೆಲಸವಲ್ಲ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕಾಗಿದೆ.

ವಿದೇಶಗಳಿಂದ ಬಂದವರಿಂದಲೇ ಕೊರೊನಾ ವೈರಸ್ ಹರಡುತ್ತಿದೆ. ಒಬ್ಬರಿಂದ ಒಬ್ಬರಿಗೆ ಇದು ನಿಧಾನಕ್ಕೆ ಹರಡುತ್ತಿದೆ. ರಾಜ್ಯದಲ್ಲಿ ಕೊರೊನಾ ವೈರಸ್ ಆತಂಕ ನಿರೀಕ್ಷೆಗೂ ಮೀರಿ ವ್ಯಾಪಿಸಲಿದೆ. ಜಾಗೃತೆ ವಹಿಸದಿದ್ದರೆ ಕಷ್ಟ. ನಾವು ಕೈಲಾಗೋ ಪ್ರಯತ್ನ ಮಾಡುತ್ತಿದ್ದೇವೆ. ಸರ್ಕಾರಕ್ಕೆ ಆರ್ಥಿಕ ಹೊಡೆತ ಬೀಳುತ್ತೆ. ಆದರೆ, ಅನಿವಾರ್ಯ ಪರಿಸ್ಥಿತಿ ಎದುರಾಗಿದ್ದು, ಇಡೀ ರಾಜ್ಯ ಲಾಕ್ ಡೌನ್ ಮಾಡಬೇಕು ಮತ್ತು ಇದು ಅನಿವಾರ್ಯ” ಎಂದು ತಿಳಿಸಿದ್ದಾರೆ.

ಭಾರತದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದೆ. ಭಾರತದಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 8 ಏ ಕ್ಕೆರಿದೆ. ಈ ಮೂಲಕ ಮುಂಬೈಯಲ್ಲಿ ಮೂವರು ಕೊರೋನಾಗೆ ಬಲಿಯಾದಂತಾಗಿದೆ.

ಕರ್ನಾಟಕದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ 27ಕ್ಕೆ ಏರಿದೆ. ಭಾರತದಾದ್ಯಂತ ಸೋಂಕು ಪ್ರಕರಣಗಳ ಸಂಖ್ಯೆ 415ರ ಗಡಿದಾಟಿದೆ. ಈ ಹಿನ್ನೆಲೆಯಲ್ಲಿ ನಾಳೆಯಿಂದ ರಾಜ್ಯ ಸಂಪೂರ್ಣ ಬಂದ್‌ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ ಎನ್ನಲಾಗಿದೆ.

RECENT NEWS

ಎಂ ಆರ್‌ ಪಿ ಎಲ್ ಸಿಐಎಸ್‌ಎಫ್ ಅಧಿಕಾರಿ ಕೊರೊನಾಕ್ಕೆ ಬಲಿ..!

ಎಂ ಆರ್‌ ಪಿ ಎಲ್ ಸಿಐಎಸ್‌ಎಫ್ ಅಧಿಕಾರಿ ಕೊರೊನಾಕ್ಕೆ ಬಲಿ..! ಮಂಗಳೂರು : ಇದೇ ಮೊದಲ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾದಿಂದ ಭದ್ರತಾ ಅಧಿಕಾರಿ ಸಾವನ್ನಪ್ಪಿದ್ದಾರೆ. ಮಂಗಳೂರಿನ ಎಂ ಆರ್‌ ಪಿ ಎಲ್‌...

ದಕ್ಷಿಣ ಕನ್ನಡದಲ್ಲಿ ಕೊರೊನಾ ಮರಣಮೃದಂಗ : ಇಂದು ಮತ್ತೆ ಎಂಟು ಬಲಿ ಪಡೆದ ಕೊರೊನಾ..!

ದಕ್ಷಿಣ ಕನ್ನಡದಲ್ಲಿ ಕೊರೊನಾ ಮರಣಮೃದಂಗ : ಇಂದು ಮತ್ತೆ ಎಂಟು ಬಲಿ ಪಡೆದ ಕೊರೊನಾ..! ಮಂಗಳೂರು :ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಮರಣ ಮೃದಂಗ ಬಾರಿಸುತ್ತಲೇ ಇದೆ. ಬೆಂಗ್ಳೂರು ಬಳಿಕ ಕರಾವಳಿ ನಗರಿ, ಮಂಗಳೂರು...

ಕೊರೊನಾ ಸಮುದಾಯಕ್ಕೆ ಹರಡಿರುವುದು ಸತ್ಯ : ಶಾಸಕ ಯು.ಟಿ. ಖಾದರ್..!

ಕೊರೊನಾ ಸಮುದಾಯಕ್ಕೆ ಹರಡಿರುವುದು ಸತ್ಯ : ಶಾಸಕ ಯು.ಟಿ. ಖಾದರ್..! ಮಂಗಳೂರು : ರಾಜ್ಯದಲ್ಲಿ ಕೊರೊನಾ ಸಮುದಾಯಕ್ಕೆ ಹರಡಿದೆ. ಆದ್ದರಿಂದ ಶೀಘ್ರದಲ್ಲೇ ರಾಂಡಮ್ ಟೆಸ್ಟ್‌ ಗೆ ಸರ್ಕಾರ ಮುಂದಾಗಬೇಕು. ಒಂದು ವೇಳೆ ರಾಂಡಂ ಟೆಸ್ಟ್‌...

ಕೊರೊನಾ ಸೊಂಕಿನ ಭೀತಿ- ಸ್ವಯಂ ಲಾಕ್‌ ಡೌನ್ ಘೋಷಿಸಿದ ಪುದು ಗ್ರಾಮ ಪಂಚಾಯತ್..!

ಕೊರೊನಾ ಸೊಂಕಿನ ಭೀತಿ- ಸ್ವಯಂ ಲಾಕ್‌ ಡೌನ್ ಘೋಷಿಸಿದ ಪುದು ಗ್ರಾಮ ಪಂಚಾಯತ್..! ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೊರೊನಾ ಜನ ಸಾಮಾನ್ಯರಲ್ಲಿ ಚಳಿ ಕೂರಿಸಿದೆ. ಕಳೆದ...
error: Content is protected !!