Connect with us

    LATEST NEWS

    ಮೇಕೆದಾಟು ಪಾದಯಾತ್ರೆ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ..!

    Published

    on

    ಬೆಂಗಳೂರು :  ರಾಜ್ಯ ಕಾಂಗ್ರೆಸ್‌ ಗೆ ಮೇಕೆದಾಟು ವಿಚಾರವಾಗಿ ಹಮ್ಮಿಕೊಂಡ ಪಾದಯಾತ್ರೆಗೆ ಹಿನ್ನಡೆ ಉಂಟಾಗಿದೆ,

    ಮೇಕೆದಾಟು ಪಾದಯಾತ್ರೆಯನ್ನು ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

    ಪಾದಯಾತ್ರೆಯ ವಾಹನ ಸಂಚಾರಕ್ಕೆ ಸರ್ಕಾರ ನಿಷೇಧ ಹೇರಿದ್ದು, ತಕ್ಷಣದಿಂದಲೇ ಪಾದಯಾತ್ರೆ ನಿಲ್ಲಿಸುವಂತೆ ಸೂಚನೆ ನೀಡಲಾಗಿದೆ.

    ಪಾದಯಾತ್ರೆಯ ವಾಹನ ಸಂಚಾರಕ್ಕೂ ಸರ್ಕಾರ ನಿಷೇಧ ಹೇರಿದ್ದು, ತಕ್ಷಣದಿಂದಲೇ ಪಾದಯಾತ್ರೆ ನಿಲ್ಲಿಸುವಂತೆ ಸೂಚನೆ ನೀಡಲಾಗಿದೆ.

    ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಈ ಆದೇಶ ಹೊರಡಿಸಿದ್ದಾರೆ.

    LATEST NEWS

    ಸಾಮಾಜಿಕ ಜಾಲತಾಣ ಸ್ಟಾರ್ ಆರ್.ಜೆ ಸಿಮ್ರಾನ್ ಸಿಂಗ್ ಶ*ವ ಪ*ತ್ತೆ

    Published

    on

    ಮಂಗಳೂರು/ಹರಿಯಾಣ : ಸಾಮಾಜಿಕ ಜಾಲತಾಣದ ಸ್ಟಾರ್ ಎಂದು ಗುರುತಿಸಿಕೊಂಡಿದ್ದ RJ ಸಿಮ್ರಾನ್ ಸಿಂಗ್ ಹರಿಯಾಣದ ಗುರುಗ್ರಾಮ್‌ನಲ್ಲಿ ಮ*ರಣ ಹೊಂದಿದ್ದಾರೆ. ಸದ್ಯಕ್ಕೆ, ಈ ಸಾ*ವನ್ನು ಆ*ತ್ಮಹ*ತ್ಯೆ ಎಂದು ಶಂಕಿಸಲಾಗಿದೆ.

    ರೇಡಿಯೋ ಜಾಕಿ ಸಿಮ್ರಾನ್ ಸಿಂಗ್ ಗುರುಗ್ರಾಮ್‌ ಸೆಕ್ಟರ್ 47 ಅಪಾರ್ಟ್‌ಮೆಂಟ್‌ನಲ್ಲಿ ಶ*ವವಾಗಿ ಪತ್ತೆಯಾಗಿದ್ದಾರೆ. ಲಕ್ಷಾಂತರ ಅಭಿಮಾನಿಗಳಿಂದ RJ ಸಿಮ್ರಾನ್ ಎಂದು ಕರೆಯಲ್ಪಡುವ ಸಿಮ್ರಾನ್ ಸಿಂಗ್ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಡಿಸೆಂಬರ್ 13ರಂದು ಕೊನೆಯದಾಗಿ ರೀಲ್ ಅನ್ನು ಪೋಸ್ಟ್ ಮಾಡಿಕೊಂಡಿದ್ದಾರೆ.

    ಸಿಮ್ರಾನ್‌ ಗುರುಗ್ರಾಮ್‌ ಸೆಕ್ಟರ್‌-47ರಲ್ಲಿರುವ ಅಪಾರ್ಟ್‌ಮೆಂಟ್‌ವೊಂದರಲ್ಲಿ ಶ*ವವಾಗಿ ಪ*ತ್ತೆಯಾಗಿರುವುದಾಗಿ ಆಕೆಯ ಸ್ನೇಹಿತನೊಬ್ಬ ಪೊಲೀಸರಿಗೆ ಮಾಹಿತಿ ನೀಡಿದ್ದು, ನಂತರ ಪ್ರಕರಣ ಬೆಳಕಿಗೆ ಬಂದಿದೆ. ಮ*ರಣೋತ್ತರ ಪರೀಕ್ಷೆ ಬಳಿಕ ಆಕೆಯ ಮೃ*ತದೇ*ಹವನ್ನ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ.

    Continue Reading

    LATEST NEWS

    ಮನಮೋಹನ್ ಸಿಂಗ್ ನಿ*ಧನ ಹಿ*ನ್ನಲೆ ರಾಜ್ಯಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ

    Published

    on

    ಮಂಗಳುರು/ಬೆಂಗಳೂರು : ಎರಡು ಬಾರಿ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿದಿದ್ದ, ಆರ್ಥಿಕ ತಜ್ಞ ಮನಮೋಹನ್‌ ಸಿಂಗ್‌ ನಿನ್ನೆ (ಡಿ26) ತಮ್ಮ ಸ್ವ ಗೃಹದಲ್ಲಿ ನಿ*ಧನರಾಗಿದ್ದಾರೆ. ಈ ಹಿನ್ನಲೆ ಇಂದು (ಡಿ.27) ರಾಜ್ಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

     

    ವಯೋಸಹಜ ಕಾ*ಯಿಲೆಯಿಂದ ಬಳಲುತ್ತಿದ್ದ ಮನಮೋಹನ್ ಸಿಂಗ್ (92) ದೆಹಲಿಯ ಏಮ್ಸ್​ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಹೀಗಾಗಿ ರಾಜ್ಯಾದ್ಯಂತ ಶಾಲಾ-ಕಾಲೇಜುಗಳಿಗೆ ರಾಜ್ಯ ಸರ್ಕಾರ ರಜೆ ಘೋಷಣೆ ಮಾಡಿದೆ.

    ಇದನ್ನೂ ಓದಿ : ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ..!

     

    ಮನಮೋಹನ ಸಿಂಗ್ ನಿಧನದ ಗೌರವಾರ್ಥ ರಾಜ್ಯದಲ್ಲಿ ಏಳು ದಿನಗಳ ಶೋ*ಕಾಚರಣೆ ಘೋಷಿಸಲಾಗಿದೆ. ಜೊತೆಗೆ ನಾಳೆ ದಿನಾಂಕ 27.12.2024ರಂದು ಸರ್ಕಾರಿ ರಜೆ ಘೋಷಿಸಲಾಗಿದೆ. ಎಲ್ಲ ಸರ್ಕಾರಿ ಕಾರ್ಯಕ್ರಮಗಳನ್ನು ಈಗಾಗಲೇ ಒಂದು ವಾರ ಗಳ ಕಾಲ ರದ್ದು ಮಾಡೋದಾಗಿ ಡಿಸಿಎಂ ಡಿಕೆ ಶಿವಕುಮಾರ್‌ ತಿಳಿಸಿದ್ದಾರೆ. 1991 ರಲ್ಲಿ ರಾಜ್ಯಸಭೆಗೆ ಪ್ರವೇಶ ಮಾಡುವ ತಮ್ಮ ರಾಜಕೀಯ ಇನ್ನಿಂಗ್ಸ್ ಆರಂಭಿಸಿದ್ದ ಸಿಂಗ್, 2024ರ ಏಪ್ರಿಲ್​ನಲ್ಲಿ ಅವರ ರಾಜ್ಯಸಭೆ ಅಧಿಕಾರವಧಿ ಅಂತ್ಯವಾಗಿತ್ತು. ಒಟ್ಟಾರೆ ಸಂಸತ್ತಿನ ಮೇಲ್ಮನೆಯಲ್ಲಿ 33 ವರ್ಷಗಳ ಕಾಲ ಸಸ್ಯಾರಾಗಿದ್ದರು. ಸಧ್ಯ ಸಿಂಗ್ ತಮ್ಮ ಪತ್ನಿ ಗುರುಶರಣ್ ಕೌರ್ ಮತ್ತು ಮೂವರು ಪುತ್ರಿಯರನ್ನು ಅ*ಗಲಿದ್ದಾರೆ.

    Continue Reading

    DAKSHINA KANNADA

    ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ..!

    Published

    on

    ಮಂಗಳೂರು:ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್(92) ಡಿ.26 ರ ರಾತ್ರಿ  ವಿಧಿವಶರಾಗಿದ್ದಾರೆ. ರಾತ್ರಿ 8 ಗಂಟೆಗೆ ಏಮ್ಸ್ ಆಸ್ಪತ್ರೆಗೆ ದಾಖಲಾದ ಮನಮೋಹನ್ ಸಿಂಗ್ ಅವರು ರಾತ್ರಿ 9.30 ರ ಸುಮಾರಿಗೆ ಇಹಲೋಕ ತ್ಯಜಿಸಿದ್ದಾರೆ. 2004 ರಿಂದ 2014 ರ ವರೆಗೆ ಎರಡು ಅವಧಿಗೆ ದೇಶದ ಮೊದಲ ಸಿಕ್ ಪ್ರಧಾನಿಯಾಗಿದ್ದರು. ನೆಹರು ಇಂದಿರಾ ಗಾಂಧಿ ಮತ್ತು ಮೋದಿ ಬಳಿಕ ಹೆಚ್ಚು ಕಾಲ ದೇಶದ ಪ್ರಧಾನಿಯಾಗಿದ್ದ ಹೆಗ್ಗಳಿಕೆ ಇವರದು.

    1932 ರ ಸೆಪ್ಟಂಬರ್ 26 ರಲ್ಲಿ ಪಶ್ಚಿಮ ಪಂಜಾಬ್ ನಲ್ಲಿ ಜನಿಸಿದ್ದ ಮನಮೋಹನ್ ಸಿಂಗ್
    ಅಮೃತಸರ ಹಿಂದೂ ಕಾಲೇಜಿನಲ್ಲಿ ಅದ್ಯಯನ ಮಾಡಿದ್ದು ಉನ್ನತ ವ್ಯಾಸಂಗವನ್ನು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಟ್ರೈಪೋಸ್ ಪೂರ್ಣ ಮಾಡಿದ್ದರು.

    ಖ್ಯಾತ ಅರ್ಥ ಶಾಸ್ತ್ರಜ್ಞರಾಗಿ, ಶಿಕ್ಷಣ ತಜ್ಞರಾಗಿ ಮನಮೋಹನ್ ಸಿಂಗ್ ಆರ್ಥಿಕ ಕ್ರಾಂತಿಯನ್ನು ದೇಶದಲ್ಲಿ ಮಾಡಿದ್ದರು. ದೇಶದ ಪ್ರಧಾನಿಯಾಗುವ ಮೊದಲು ಹಲವು ದೇಶಗಳ ಆರ್ಥಿಕ ಸಲಹೆಗಾರರಾಗಿ ಆ ದೇಶಗಳನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಿದ್ದರು.
    ಮಿತಭಾಷಿಯಾಗಿದ್ದ ಅವರು ತಮ್ಮ ಕೆಲಸದ ಮೂಲಕವೇ ಎಲ್ಲದಕ್ಕೂ ಉತ್ತರ ನೀಡುತ್ತಿದ್ದರು.

    ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ದೇಶದ ಜಿಡಿಪಿ ಶೇಖಡಾ9 ರಲ್ಲಿ ಇದ್ದು ಅಭಿವೃದ್ಧಿಶೀಲ ದೇಶಗಳ ಸಾಲಿನಲ್ಲಿ ದೇಶವನ್ನು ಗುರುತಿಸುವಂತೆ ಮಾಡಿದ್ದರು.

    ಮಾಜಿ ಪ್ರಧಾನಿ ಅಗಲುವಿಕೆಯ ಸುದ್ದಿ ಕೇಳಿ ಸೋನಿಯಾ ಗಾಂಧಿ ಆದಿಯಾಗಿ ಕಾಂಗ್ರೆಸ್ ನಾಯಕರ ದಂಡು ಏಮ್ಸ್ ಆಸ್ಪತ್ರೆಗೆ ದಾವಿಸಿದ್ದಾರೆ. ಅಗಲಿದ ನಾಯಕನಿಗೆ ಪ್ರಧಾನಿ ಮೋದಿ ಸಹಿತ ಪ್ರಮುಖ ನಾಯಕರು ಶೃದ್ದಾಂಜಲಿ ಸಲ್ಲಿಸಿದ್ದಾರೆ.

    Continue Reading

    LATEST NEWS

    Trending