ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಮುಖ್ಯ ಬೇಡಿಕೆ ಈಡೇರಿಕೆ ಬಗ್ಗೆ ಮನವಿ
ಮಂಗಳೂರು: ಕೋವಿಡ್ ಸೋಂಕಿನ ಮಹಾಮಾರಿ ಏರಿಕೆ ಸಂದರ್ಭದಲ್ಲಿ ಅಂಗನವಾಡಿ ಕಾರ್ಯರ್ತೆಯರು ನಿರಂತರವಾಗಿ ದುಡಿದಿದ್ದಾರೆ. 45ವರ್ಷಗಳಿಂದ ವಿವಿಧ ಸ್ತರಗಳಲ್ಲಿ ಕಾರ್ಯಕರ್ತೆಯರನ್ನು ದುಡಿಸಿದ್ದಾರೆ.
ಮೊಟ್ಟೆ 6ರೂಪಾಯಿಗೆ ಏರಿಕೆಯಾಗಿದ್ದು, ಸರ್ಕಾರದಿಂದ ಕೇವಲ ಐದು ರೂಪಾಯಿ ಸಿಗುತ್ತಿದೆ. ಕಾರ್ಯಕರ್ತೆಯರು ಕೈಯಿಂದ ಉಳಿದ ಹಣವನ್ನು ಹಾಕಬೇಕಾಗಿದ್ದು ಸರ್ಕಾರ ಈ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಅಂಗನವಾಡಿ ಸಂಘದ ರಾಜ್ಯಾಧ್ಯಕ್ಷೆ ಜಯಲಕ್ಷ್ಮಿ ನೇತೃತ್ವದ ನಿಯೋಗ ಮಂಗಳೂರಿನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿತು.
ಅಂಗನವಾಡಿ ಕಾರ್ಯಕರ್ತೆ ಯರು ಮತ್ತು ಸಹಾಯಕಿಯರಿಗೆ ಕನಿಷ್ಟ ವೇತನ ನಿಗಧಿಪಡಿಸಬೇಕು.
ಸರ್ಕಾರಿ ನೌಕರರಂತೆ ಇಳಿ ವಯಸ್ಸಿನ ಪಿಂಚಣಿಗೆ ಒತ್ತಾಯ ಮಿನಿ ಅಂಗನವಾಡಿ ಕಾರ್ಯಕರ್ತೆಯರನ್ನು ಮೇಲ್ದರ್ಜೆ ಗೆ ಏರಿಸುವುದು, .ಸೇರಿದಂತೆ
ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಿದರು.