Wednesday, August 12, 2020

ಅನಿವಾಸಿ ಕನ್ನಡಿಗರನ್ನು ಹೊತ್ತ KSCCಯ ಮೊದಲ ಚಾರ್ಟೆಡ್ ವಿಮಾನ ಮಂಗಳೂರಿಗೆ ಆಗಮನ..

Array

ಬೆಂಗಳೂರು ಗಲಭೆ – ಧಾರ್ಮಿಕ ಅವಹೇಳನಕಾರಿ ಫೋಸ್ಟ್ ಹಾಕಿದ ನವೀನ್ ಅರೆಸ್ಟ್

ಬೆಂಗಳೂರು ಅಗಸ್ಟ್ 12: ಪುಲಕೇಶಿ ನಗರದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಆಪ್ತನ ಧಾರ್ಮಿಕ ಅವಹೇಳನಕಾರಿ ಪೋಸ್ಟ್ ಗೆ ಹಿನ್ನಲೆ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆ ಮೇಲೆ ತೀವ್ರ...

ಬೆಂಗಳೂರು ಗಲಭೆ : ಪೊಲೀಸ್ ಫೈರಿಂಗ್ ನಲ್ಲಿ ಮೂವರು ಸಾವು..ಕರ್ಫ್ಯೂ ಜಾರಿ..!

ಬೆಂಗಳೂರು ಗಲಭೆ : ಪೊಲೀಸ್ ಫೈರಿಂಗ್ ನಲ್ಲಿ ಮೂವರು ಸಾವು..ಕರ್ಫ್ಯೂ ಜಾರಿ..! ಬೆಂಗಳೂರು : ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಸಂಬಂಧಿಕರೊಬ್ಬರು ಫೇಸ್ ಬುಕ್‌ ನಲ್ಲಿ ಅವಹೇಳಕಾರಿ  ಪೋಸ್ಟ್​ ಮಾಡಿದ್ದರು ಎಂಬ ಕಾರಣಕ್ಕೆ ನಿನ್ನೆ...

ಗಲಭೆಕೋರರ ವಿರುದ್ದ ಕ್ರಮಕ್ಕೆ ಪೊಲೀಸರಿಗೆ ಸಂಪೂರ್ಣ ಅಧಿಕಾರ – ಗೃಹ ಸಚಿವ ಬಸವರಾಜ್ ಬೊಮ್ಮಾಯಿ

ಉಡುಪಿ ಅಗಸ್ಟ್ 12: ಪುಲಕೇಶಿ ನಗರದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆ ಮೇಲೆ ತೀವ್ರ ಪ್ರಮಾಣದಲ್ಲಿ ಕಲ್ಲು ತೂರಾಟ ನಡೆಸಿ ಅದು ಹಿಂಸಾರೂಪಕ್ಕೆ ತಿರುಗಿ ಇಬ್ಬರು ಸಾವಿಗೀಡಾದ ಘಟನೆಗೆ ಸಂಬಂಧಿಸಿದಂತೆ...

ಶಾಸಕ ಅಖಂಡ ಶ್ರೀನಿವಾಸ್ ಸಂಬಂಧಿಯಿಂದ ಮುಸ್ಲಿಂ ವಿರೋಧಿ ಪೋಸ್ಟ್‌; ನಾಯಕನ ಮನೆ ಎದುರು ಬೆಂಕಿ ಹಚ್ಚಿ ದಾಂಧಲೆ..!

ಶಾಸಕ ಅಖಂಡ ಶ್ರೀನಿವಾಸ್ ಸಂಬಂಧಿಯಿಂದ ಮುಸ್ಲಿಂ ವಿರೋಧಿ ಪೋಸ್ಟ್‌; ನಾಯಕನ ಮನೆ ಎದುರು ಬೆಂಕಿ ಹಚ್ಚಿ ದಾಂಧಲೆ..! ಬೆಂಗಳೂರು : ಶಾಸಕ ಅಖಂಡ ಶ್ರೀನಿವಾಸ್‌ ಅವರ ಆಪ್ತರೂ ಆಗಿರುವಂತಹ ನವೀನ್‌ ಎಂಬುವವರು ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ...

ಗಾಂಜಾದ ಬೃಹತ್ ಜಾಲ ಪತ್ತೆಹಚ್ಚಿದ ದಕ್ಷಿಣಕನ್ನಡ ಪೋಲೀಸರು,175 ಕೆಜಿ ಗಾಂಜಾ ವಶ

ಬಂಟ್ವಾಳ ಅಗಸ್ಟ್ 11: ಬೃಹತ್ ಅಂತರ್ ರಾಜ್ಯ ಗಾಂಜಾ ಸಾಗಾಟಗಾರರ ಬೃಹತ್ ಜಾಲವನ್ನು ದಕ್ಷಿಣಕನ್ನಡ ಜಿಲ್ಲಾ ಪೋಲೀಸರು ಪತ್ತೆಹಚ್ಚಿದ್ದು, ಲಕ್ಷಾಂತರ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಸುಮಾರು 175 ಕೆ.ಜಿ ಗಾಂಜಾವನ್ನು ಬಂಟ್ವಾಳ ತಾಲೂಕಿನ ಕೇದಿಲ...

ಅನಿವಾಸಿ ಕನ್ನಡಿಗರನ್ನು ಹೊತ್ತ KSCCಯ ಮೊದಲ ಚಾರ್ಟೆಡ್ ವಿಮಾನ ಮಂಗಳೂರಿಗೆ ಆಗಮನ..

ಮಂಗಳೂರು: KSCC ಕರ್ನಾಟಕ ಸ್ಪೊರ್ಟ್ಸ್ & ಕಲ್ಚರಲ್ ಕ್ಲಬ್ ನ ಮೊದಲನೇ ಖಾಸಗಿ ಚಾರ್ಟೆಡ್ ವಿಮಾನವು ದುಬೈ ಮೂಲದ ಅನಿವಾಸಿ ಕನ್ನಡಿಗರನ್ನು ಹೊತ್ತು,

ಶಾರ್ಜಾ ವಿಮಾನ ನಿಲ್ದಾಣದಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.

ಯು.ಎ.ಇ.ಯಲ್ಲಿ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಕರ್ನಾಟಕ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ (KSCC) ದುಬೈ ಕಮ್ಯೂನಿಟಿ ಡೆವಲಪ್ ಮೆಂಟ್ ಅಥಾರಿಟಿಯಲ್ಲಿ ನೋಂದಾಯಿತ ಸಾಮಾಜಿಕ ಸಂಸ್ಥೆಯಾಗಿದ್ದು,

ಕೋವಿಡ್ ಹಿನ್ನಲೆಯಲ್ಲಿ ಸಂಕಷ್ಟಕ್ಕೊಳಗಾದ ಅನಿವಾಸಿ ಕನ್ನಡಿಗರನ್ನು ಮರಳಿ ತಾಯ್ನಾಡಿಗೆ ತಲುಪಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ.

ಅದರಂತೆ ಮೊದಲ ವಿಮಾನವು 29 ಗರ್ಭಿಣಿಯರೂ, 5 ನವಜಾತ ಶಿಶು, 16 ಮಕ್ಕಳೂ, ಹಿರಿಯ ನಾಗರಿಕರೂ, ತುರ್ತು ಚಿಕಿತ್ಸಾ ರೋಗಿಗಳೂ, ಸಂದರ್ಶನ ವಿಸಾದಲ್ಲಿ ಉಳಿದುಕೊಂಡವರೂ,

ಉದ್ಯೊಗ ಕಳೆದುಕೊಂಡವರೂ, ತಾಯ್ನಾಡಿನಲ್ಲಿ ಮರಣ ಹೊಂದಿದ ವ್ಯಕ್ತಿಯ ರಕ್ತಸಂಬಂಧಿಕರೂ ಸೇರಿದಂತೆ 179 ಪ್ರಯಾಣಿಕರೊಂದಿಗೆ ಶಾರ್ಜಾ ಮೂಲದ,

ಏರ್ ಅರೇಬಿಯಾ ವಿಮಾನದ ಮೂಲಕ ಶಾರ್ಜಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗ್ಗೆ 6:00 ಗಂಟೆಗೆ ಹೊರಟಿದ್ದು, ಸುಮಾರು 11:00 ಗಂಟೆಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿದೆ.

ಅನಿವಾಸಿ ಕನ್ನಡಿಗರಿಗೆ ಖಾಸಗಿ ಚಾರ್ಟೆಡ್ ವಿಮಾನ ಸೌಲಭ್ಯವನ್ನು ಒದಗಿಸುವಲ್ಲಿ ಎಲ್ಲಾ ಭಾರತೀಯ ಪ್ರಾಧಿಕಾರ ಸಂಸ್ಥೆಗಳೂ ಉತ್ತಮ ಸಹಕಾರ ನೀಡಿರುವುದಾಗಿ ಕರ್ನಾಟಕ ಸ್ಪೊರ್ಟ್ಸ್ & ಕಲ್ಚರಲ್ ಕ್ಲಬ್ ಮ್ಯಾನೇಜರ್ ಮೊಹಮ್ಮದ್ ಶಫಿ ತಿಳಿಸಿದ್ದು,

ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ KSCC ಯ ಹೆಲ್ಪ್ ಡೆಸ್ಕ್ ತಂಡವು 24*7 ಕಾರ್ಯ ನಿರ್ವಹಿಸಿದೆ.

ಟಿಕೆಟ್ ಮೊತ್ತ ಹೊಂದಿಸಲು ಅಶಕ್ತರಾದ ಪ್ರಯಾಣಿಕರಿಗೆ ರಿಯಾಯಿತಿ ದರದಲ್ಲಿ ಟಿಕೆಟ್ ಒದಗಿಸಿ ಸುರಕ್ಷತೆಯ ನಿಟ್ಟಿನಲ್ಲಿ ಎಲ್ಲಾ ಪ್ರಯಾಣಿಕರಿಗೂ ಲಘು ಉಪಹಾರದೊಂದಿಗೆ ಸುರಕ್ಷಾ ಕವಚವನ್ನೊಳಗೊಂಡ ಪಿಪಿಇ ಕಿಟ್ ಉಚಿತವಾಗಿ ಒದಗಿಸಲಾಗಿದೆ.

ಎಲ್ಲಾ ಪ್ರಯಾಣಿಕರಿಗೂ ಶಾರ್ಜಾ ವಿಮಾನ ನಿಲ್ದಾಣದಲ್ಲಿ ಕೋವಿಡ್ 19 ರಾಪಿಡ್ ಟೆಸ್ಟ್ ನಡೆಸಲಾಗಿದ್ದು ಮಂಗಳೂರಿನ ಮೂರು ಹೋಟೇಲ್ ಗಳಲ್ಲಿ ಕ್ವಾರಂಟೈನ್ ಸೌಲಭ್ಯವನ್ನೂ ಮಾಡಲಾಗಿತ್ತು.

ಅನಿವಾಸಿ ಕನ್ನಡಿಗರಿಗೆ ಚಾರ್ಟೆಡ್ ವಿಮಾನ ಸೌಲಭ್ಯವನ್ನು ಒದಗಿಸಲು ಸಹಕರಿಸಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ,

ಜಿಲ್ಲಾ ಪೋಲೀಸ್ ಕಮಿಷನರ್, ಸಾಮಾಜಿಕ ಕಾರ್ಯಕರ್ತ ಉಮರ್ ಯು.ಎಚ್, ಅಥಾವುಲ್ಲಾ ಜೋಕಟ್ಟೆ ಶ್ರಮಿಸಿದ್ದರು.

ಈ ಸಂಧರ್ಭದಲ್ಲಿ ಶಾರ್ಜಾ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸೇವೆಗಾಗಿ ಕರ್ನಾಟಕ ಸ್ಪೊರ್ಟ್ಸ್ & ಕಲ್ಚರಲ್ ಕ್ಲಬ್ ನ ಪದಾಧಿಕಾರಿಗಳಾದ ಶಫಿ,

ಅಲ್ತಾಫ್, ಜಾವೇದ್, ನಾಸಿರ್ ಸೇರಿದಂತೆ ಸಂಸ್ಥೆಯ ಸ್ವಯಂ ಸೇವಕರು ಉಪಸ್ಥಿತರಿದ್ದರು.

Hot Topics

ಕದ್ರಿ ಕಂಬ್ಳ ಜಂಕ್ಷನ್‌ ನಲ್ಲಿ ಭೀಕರ ರಸ್ತೆ ಅಪಘಾತ ಯುವತಿಯ ಮೈಮೇಲೆ ಹರಿದ ಕಾರು..! 

ಕದ್ರಿ ಕಂಬ್ಳ ಜಂಕ್ಷನ್‌ ನಲ್ಲಿ ಭೀಕರ ರಸ್ತೆ ಅಪಘಾತ ಯುವತಿಯ ಮೈಮೇಲೆ ಹರಿದ ಕಾರು..!  ಮಂಗಳೂರು : ಇಂದು ಬೆಳಿಗ್ಗೆ ಮಂಗಳೂರು ನಗರದ ಕದ್ರಿಯಲ್ಲಿ ನಡೆದಿದ್ದ ರಸ್ತೆ ಅಪಘಾತವೊಂದರಲ್ಲಿ ಯುವತಿಯೊಬ್ಬಳು ಗಂಭೀರ ಗಾಯಗೊಂಡಿದ್ದಾಳೆ. ನಗರದ ಕದ್ರಿ...

ಚಾರ್ಮಾಡಿ ಪರಿಸರದಲ್ಲಿ ಭಾರೀ ಮಳೆ :ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ ಮೃತ್ಯಂಜಯ ಹೊಳೆ..!

ಚಾರ್ಮಾಡಿ ಪರಿಸರದಲ್ಲಿ ಭಾರೀ ಮಳೆ :ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ ಮೃತ್ಯಂಜಯ ಹೊಳೆ..! ಬೆಳ್ತಂಗಡಿ : ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟ್ ಪರಿಸರದಲ್ಲಿ ಭಾರೀ ಮಳೆಯಾಗುತ್ತಿದ್ದು, ಸನಿಹದ ಮೃತ್ಯಂಜಯ ಹೊಳೆ ಅಪಾಯದ ಮಟ್ಟದಲ್ಲಿ...

ಕೇರಳ ಮನ್ನಾರ್ ಭೂ ಕುಸಿತಕ್ಕೆ 13 ಬಲಿ..ಮಣ್ಣಿನಡಿ ಸಿಲುಕಿರುವ 80ಕ್ಕೂ ಅಧಿಕ ಮಂದಿ

ತಿರುವನಂತಪುರಂ : ಕೇರಳದ ಇಡುಕ್ಕಿಯಲ್ಲಿ ಇಂದು ಬೆಳಗ್ಗೆ ಭೂಕುಸಿತವಾಗಿ 13 ಜನರು ಸಾವನ್ನಪ್ಪಿದ್ದಾರೆ. ಕೇರಳದ ಪ್ರಸಿದ್ಧ ಪ್ರವಾಸಿತಾಣ ಮುನ್ನಾರ್​​ನಿಂದ 25 ಕಿ.ಮೀ ದೂರದಲ್ಲಿರೋ ರಾಜಮಲೈ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ....
Copy Protected by Chetans WP-Copyprotect.