Connect with us

    LATEST NEWS

    Karnataka NEET UG Counselling 2024: 2ನೇ ಸುತ್ತಿನ ಸೀಟು ತಾತ್ಕಾಲಿಕ ಪಟ್ಟಿ ಪ್ರಕಟ, ಪರಿಶೀಲಿಸುವುದು ಹೇಗೆ? ಇಲ್ಲಿದೆ ಲಿಂಕ್

    Published

    on

    ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಎರಡನೇ ಸುತ್ತಿನ ಯುಜಿ ನೀಟ್ 2024 (UG NEET) ಅಖಿಲ ಭಾರತ ಸೀಟು ಹಂಚಿಕೆ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಎರಡನೇ ಸುತ್ತಿನ ಕೌನ್ಸೆಲಿಂಗ್ ಪ್ರಕ್ರಿಯೆಗೆ ತಮ್ಮನ್ನು ನೋಂದಾಯಿಸಿಕೊಂಡ ಅಭ್ಯರ್ಥಿಗಳು ಈಗ ಅಧಿಕೃತ ವೆಬ್‌ಸೈಟ್‌ನಲ್ಲಿ ಕರ್ನಾಟಕ NEET ಸೀಟು ಹಂಚಿಕೆ ಫಲಿತಾಂಶ 2024 ಅನ್ನು ಪರಿಶೀಲಿಸಬಹುದು ಮತ್ತು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. kea.kar.nic.in ನಲ್ಲಿ ನೀಡಲಾದ ಸರಳ ಹಂತಗಳನ್ನು ಅನುಸರಿಸುವ ಮೂಲಕ ಅಥವಾ ಕೆಳಗೆ ನೀಡಲಾದ ನೇರ ಲಿಂಕ್ ಮೂಲಕ ಸೀಟು ಹಂಚಿಕೆ ಫಲಿತಾಂಶವನ್ನು ನೋಡಬಹುದಾಗಿದೆ.

    ವೈದ್ಯಕೀಯ, ಎಂಜಿನಿಯರಿಂಗ್‌ ಸೇರಿದಂತೆ ಇತರ ವೃತ್ತಿಪರ ಕೋರ್ಸ್‌ಗಳ ಪ್ರವೇಶದ 2ನೇ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಈ ಸುತ್ತಿನ ಸೀಟು ಹಂಚಿಕೆಗೆ ಸೆ.13ರ ಮಧ್ಯಾಹ್ನ 2 ಗಂಟೆವರೆಗೆ ನಮೂದಿಸಿದ ಆಪ್ಷನ್‌ಗಳನ್ನು ಪರಿಗಣಿಸಲಾಗಿದೆ. ಇದು ತಾತ್ಕಾಲಿಕ ಫ‌ಲಿತಾಂಶವಾಗಿರುವ ಕಾರಣ ಅಭ್ಯರ್ಥಿಗಳು ಕಾಲೇಜುಗಳಿಗೆ ಹೋಗಿ ಪ್ರವೇಶ ಪಡೆಯುವಂತಿಲ್ಲ. ಯಾವುದಾದರೂ ನಿರ್ದಿಷ್ಟ ಆಕ್ಷೇಪಣೆಗಳಿದ್ದಲ್ಲಿ ಸೆ.19ರ ಬೆಳಗ್ಗೆ 10 ಗಂಟೆಯೊಳಗೆ ಕೆಇಎಗೆ ಇ-ಮೇಲ್‌ ಮೂಲಕ ಸಲ್ಲಿಸಬಹುದು. ಆಕ್ಷೇಪಣೆ ಪರಿಶೀಲಿಸಿದ ಅನಂತರ ಅಂತಿಮ ಫ‌ಲಿತಾಂಶ ಪ್ರಕಟಿಸಲಾಗುವುದು.

    KEA KCET, ಕರ್ನಾಟಕ NEET UG 2024 ಸೀಟು ಹಂಚಿಕೆ ಫಲಿತಾಂಶವನ್ನು ಡೌನ್‌ಲೋಡ್ ಮಾಡುವುದು ಹೇಗೆ?

    ಹಂತ 1: KEAಯ ಅಧಿಕೃತ ವೆಬ್‌ಸೈಟ್ – kea.kar.nic.in ಗೆ ಭೇಟಿ ನೀಡಿ.
    ಹಂತ 2: ಮುಖಪುಟದಲ್ಲಿ, ಕರ್ನಾಟಕ NEET UG ಸೀಟ್ ಹಂಚಿಕೆ ಫಲಿತಾಂಶ 2024 ಗಾಗಿ ಲಿಂಕ್ ಅನ್ನು ಕ್ಲಿಕ್ ಮಾಡಿ.
    ಹಂತ 3: ಹೊಸದಾಗಿ ತೆರೆಯಲಾದ ಪುಟದಲ್ಲಿ, ನಿಮ್ಮ ಲಾಗಿನ್ ನಮೂದಿಸಿ.
    ಹಂತ 4: ಸಲ್ಲಿಸು ಕ್ಲಿಕ್ ಮಾಡಿ ಮತ್ತು ನಿಮ್ಮ ಕರ್ನಾಟಕ NEET UG 2 ನೇ ಸುತ್ತಿನ ತಾತ್ಕಾಲಿಕ ಸೀಟು ಹಂಚಿಕೆ ಪಟ್ಟಿಯು ಪರದೆಯ ಮೇಲೆ ಕಾಣಿಸಿಕೊಳ್ಳುತ್ತದೆ.
    ಹಂತ 5: PDF ಅನ್ನು ಡೌನ್‌ಲೋಡ್ ಮಾಡಿ.

    FILM

    ಶೀಘ್ರದಲ್ಲಿ ತೆರೆಗೆ ಬರಲಿದೆ ‘ದೃಶ್ಯಂ-3’..! ಕ್ಲೂ ಕೊಟ್ಟ ಚಿತ್ರ ತಂಡ..!

    Published

    on

    ಮಂಗಳೂರು : ಮುಂದೇನಾಗುತ್ತದೆ ಎಂದು ಚಿತ್ರ ಪ್ರೇಮಿಗಳು ಬಹು ನಿರೀಕ್ಷೆಯಿಂದ ಕಾಯುತ್ತಿದ್ದ ಸಿನೆಮಾ ತನ್ನ ಮೂರನೇ ಅಧ್ಯಾಯದಲ್ಲಿ ಉತ್ತರ ನೀಡಲು ಮುಂದಾಗಿದೆ. ಸಿನಿಮಾ ಇಂಡಸ್ಟ್ರೀಯಲ್ಲಿ ಸಾಕಷ್ಟು ಸದ್ದು ಮಾಡಿದ್ದ ‘ದೃಶ್ಯಂ’ ಸಿನೆಮಾ ಈಗಾಗಲೇ ‘ದೃಶ್ಯಂ2’ ಮೂಲಕ ಕಥಾನಾಯಕನ ಕ್ರಿಮಿನಲ್‌ ಮೈಂಡ್‌ ಬಗ್ಗೆ ಚರ್ಚೆ ಹುಟ್ಟು ಹಾಕಿತ್ತು. ಇದೀಗ ‘ದೃಶ್ಯಂ3’ ಮೂಲಕ ಈ ಕಥೆಗೆ ಅಂತ್ಯ ಹಾಡಲು ಚಿತ್ರ ತಂಡ ಸಿದ್ಧವಾಗಿದೆ.

    ಕೇವಲ ಮಲೆಯಾಳಂ ಮಾತ್ರವಲ್ಲದೆ ಇಡೀ ಸಿನೆಮಾ ಇಂಡಸ್ಟ್ರೀಯಲ್ಲೇ ಸಂಚಲನ ಮೂಡಿಸಿದ ಸಿನೆಮಾ ‘ದೃಶ್ಯಂ’. ಸಸ್ಪೆನ್ಸ್‌ ಥ್ರಿಲರ್ ಸಿನೆಮಾವಾಗಿ ಜನರಿಗೆ ಇಷ್ಟವಾಗಿದ್ದ ಈ ಸಿನೆಮಾ ‘ದೃಶ್ಯಂ2’ ಮೂಲಕ ಇಡೀ ಸಿನೆಮಾ ಇಂಡಸ್ಟ್ರೀಯನ್ನೇ ಅಲ್ಲಾಡಿಸಿತ್ತು. ಕಥೆಯನ್ನೂ ಹೀಗೂ ಬರೆಯಬಹುದು ಅನ್ನೋದನ್ನ ‘ದೃಶ್ಯಂ’ ಮತ್ತು ‘ದೃಶ್ಯಂ2’ ಮೂಲಕ ಜೀತು ಜೋಸೆಫ್‌ ತೋರಿಸಿಕೊಟ್ಟಿದ್ದರು.

    ತನ್ನ ಕುಟುಂಬದ ರಕ್ಷಣೆಗಾಗಿ ಕಥಾನಾಯಕ ಯಾವ ರೀತಿ ಕೊಲೆ ಪ್ರಕರಣವನ್ನು ಮುಚ್ಚಿ ಹಾಕಲು ಯಶಸ್ವಿಯಾಗಿದ್ದ ಮತ್ತು ಮೃತ ದೇಹವನ್ನು ಹೇಗೆ ಅಡಗಿಸಿ ಇಟ್ಟಿದ್ದ ಅನ್ನೋದು ‘ದೃಶ್ಯಂ’ ಸಿನೆಮಾದ ಕಥಾವಸ್ತು. ಇನ್ನು ‘ದೃಶ್ಯಂ2’ ನಲ್ಲಿ ಕಥಾ ನಾಯಕನ ಪ್ಲ್ಯಾನ್‌ ಬಿ ಪ್ರಕಾರ ಮೆಡಿಕಲ್ ಕಾಲೇಜಿನಲ್ಲಿ ಮೃತದೇಹದ ಅಸ್ತಿಗಳನ್ನು ಬದಲಾಯಿಸಿ ತನ್ನ ಕುಟುಂಬವನ್ನು ಕಾಪಾಡುವುದು ಕಥಾವಸ್ತುವಾಗಿತ್ತು.

    ಇದನ್ನೂ ಓದಿ : ಮಂಗಳೂರು ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ; ಬೆಂಗಳೂರಿನಲ್ಲಿ ಡ್ರ*ಗ್‌ ಮಾಫಿಯಾ ಕಿಂಗ್‌ ಪಿನ್ ಅರೆಸ್ಟ್

    ಕಥಾನಾಯಕನ ಈ ಕ್ರಿಮಿನಲ್‌ ಬುದ್ದಿಗೆ ಕೊನೆ ಇಲ್ಲವಾ ಎಂದು ‘ದೃಶ್ಯಂ2’ ನೋಡಿದ ಚಿತ್ರ ಅಭಿಮಾನಿಗಳು ಪ್ರಶ್ನೆ ಮಾಡಿದ್ದರು. ಇದೀಗ ‘ದೃಶ್ಯಂ3’ ಮೂಲಕ ಚಿತ್ರತಂಡ ಅಭಿಮಾನಿಗಳಿಗೆ ಮತ್ತೊಂದು ಸಸ್ಪೆನ್ಸ್‌ ಮೂಲಕ ಉತ್ತರ ನೀಡಲು ಮುಂದಾಗಿದೆ.
    2025 ರ ಡಿಸೆಂಬರ್‌ನಲ್ಲಿ ಕ್ರಿಸ್‌ಮಸ್‌ ವೇಳೆ ಚಿತ್ರವನ್ನು ತೆರೆ ಮೇಲೆ ತರಲು ಸಿದ್ಧತೆ ನಡೆಸಿದೆ. ಸಿನೆಮಾದ ಚಿತ್ರೀಕರಣ ಆರಂಭವಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹರಡಿದೆ. ಚಿತ್ರದ ಕಥೆ ಸಿದ್ದವಾಗಿದ್ದು, ‘ಕ್ಲಾಸಿಕ್ ಕ್ರಿಮಿನಲ್ ಈಸ್ ಬ್ಯಾಕ್‌’ ಎಂದು ಅಭಿಮಾನಿಗಳು ಪೋಸ್ಟರ್ ಹಂಚಿಕೊಳ್ಳುತ್ತಿದ್ದಾರೆ.

    Continue Reading

    DAKSHINA KANNADA

    ಮಂಗಳೂರು ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ; ಬೆಂಗಳೂರಿನಲ್ಲಿ ಡ್ರ*ಗ್‌ ಮಾಫಿಯಾ ಕಿಂಗ್‌ ಪಿನ್ ಅರೆಸ್ಟ್

    Published

    on

    ಮಂಗಳೂರು : ಡ್ರ*ಗ್ಸ್ ಜಾಲದ ಬೆನ್ನು ಹತ್ತಿ ಬೇಟೆಯಾಡಿದ ಮಂಗಳೂರು ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಆರು ಕೋಟಿ ರೂ. ಮೌಲ್ಯದ ಡ್ರ*ಗ್ಸ್ ವಶಪಡಿಸಿಕೊಂಡಿದ್ದಾರೆ. ಡ್ರ*ಗ್‌ ಫ್ರೀ ಮಂಗಳೂರು ಮಾಡುವ ನಿಟ್ಟಿನಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತರು ಕೈಗೊಂಡ ಕಟ್ಟು ನಿಟ್ಟಿನ ಕ್ರಮಕ್ಕೆ ಇದೊಂದು ದೊಡ್ಡ ಗೆಲುವಾಗಿದೆ. ಈ ಕಾರ್ಯಾಚರಣೆಯ ವಿಚಾರವಾಗಿ ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್‌ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

    ಸೆಪ್ಟಂಬರ್ 29 ರಂದು ಪಂಪ್‌ವೆಲ್ ಬಳಿಯ ಲಾಡ್ಜ್‌ ಒಂದರಲ್ಲಿ ಹೈದರ್ ಎಂಬಾತನನ್ನು ಮಂಗಳೂರು ಪೂರ್ವ ಪೊಲೀಸರು ಡ್ರಗ್ ಸಮೇತ ಬಂಧಿಸಿದ್ದರು. ಬಳಿಕ ಈ ಪ್ರಕರಣವನ್ನು ಸಿಸಿಬಿಗೆ ಹಸ್ತಾಂತರಿಸಲಾಗಿದ್ದು, ಸಿಸಿಬಿ ಪೊಲೀಸರು ಆರೋಪಿಗೆ ಡ್ರ*ಗ್ ಪೂರೈಕೆ ಮಾಡುವ ಜಾಲದ ತನಿಖೆ ಆರಂಭಿಸಿದ್ದರು.

    ಆರೋಪಿಯಿಂದ ಹಲವು ಮಾಹಿತಿ ಪಡೆದುಕೊಂಡ ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿದ್ದ ನೈಜೇರಿಯಾ ಮೂಲದ ಪೀಟರ್ ಅಕೆಡಿ ಬೆಲನೋವು ಎಂಬಾತನ ಮನೆಗೆ ದಾಳಿ ಮಾಡಿದ್ದಾರೆ. ಈ ವೇಳೆ ಆತನ ಮನೆಯಲ್ಲಿ ಒಟ್ಟು 6 ಕೋಟಿ ಮೌಲ್ಯದ 6 ಕೆಜಿ 310 ಗ್ರಾಂ ಎಂಡಿಎಂಎ ಪತ್ತೆಯಾಗಿದೆ.

    ಇದನ್ನೂ ಓದಿ :  ಕೇಕ್ ತಿಂದು ಒಂದೇ ಕುಟುಂಬದ ಮೂವರು ಅಸ್ವಸ್ಥ; 5 ವರ್ಷದ ಮಗು ದಾರುಣ ಸಾ*ವು

    ಈತ ಕರ್ನಾಟಕ, ಕೇರಳ ಸೇರಿದಂತೆ ಹಲವು ರಾಜ್ಯಗಳಿಗೆ ಈ ಮಾ*ದಕ ವಸ್ತು ಪೂರೈಕೆ ಮಾಡುತ್ತಿದ್ದ ಎಂಬ ವಿಚಾರ ಕೂಡ ತಿಳಿದು ಬಂದಿದೆ. ಈತನ ಮೇಲೆ ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಮಾ*ದಕ ವಸ್ತು ಮಾರಾಟಕ್ಕೆ ಸಂಬಂಧಪಟ್ಟಂತೆ ಈ ಹಿಂದೆಯೇ ಪ್ರಕರಣ ದಾಖಲಾಗಿದೆ.

    Continue Reading

    BIG BOSS

    ಇತಿಹಾಸದಲ್ಲೇ ಮೊದಲು.. ಬಿಗ್​ಬಾಸ್ ಕಂಟೆಸ್ಟಂಟ್ ಆಗಿ​ ಮನೆಗೆ ಎಂಟ್ರಿ ಕೊಟ್ಟ ಕತ್ತೆ; ಏನಿದರ ಗುಟ್ಟು?

    Published

    on

    ಈಗಂತೂ ಎಲ್ಲಾ ಭಾಷೆಯಗಳಲ್ಲಿ ಬಿಗ್​ಬಾಸ್​ನ​ದ್ದೇ ಹವಾ ಸೃಷ್ಟಿಯಾಗಿದೆ. ಭಾರತದಲ್ಲಿ ಹಲವು ಭಾಷೆಗಳಲ್ಲಿ ಬಿಗ್​​ಬಾಸ್ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಕೆಲವೊಂದು ಭಾಷೆಯಲ್ಲಿ ಈಗಾಗಲೇ ಬಿಗ್​ಬಾಸ್​ ಸೀಸನ್​ ಮುಕ್ತಾಯಗೊಂಡಿದೆ. ಹೀಗೆ ಬಿಗ್​ಬಾಸ್​ ಕಾರ್ಯಕ್ರಮ ಅಪಾರ ಪ್ರೇಕ್ಷಕರ ಬಳಗವನ್ನು ಹೊಂದಿಕೊಂಡು ಮುನ್ನುಗ್ಗುತ್ತಿದೆ.

    ಈಗಾಗಲೇ ಕನ್ನಡದ ದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11 ಶುರುವಾಗಿ ಒಂದು ವಾರ ಕಳೆದಿದೆ. ಇದರ ನಡುವೆ ನಿನ್ನೆ ಅಂದ್ರೆ ಭಾನುವಾರ ಹಿಂದಿ ಬಿಗ್​ಬಾಸ್​ ಸೀಸನ್​ 18 ಶುರುವಾಗಿದೆ. ಹೌದು, ಹಿಂದಿ ಬಿಗ್​ಬಾಸ್​ ಸೀಸನ್​ 18 ಶುರುವಾಗಿದೆ. ಆದರೆ ಬಿಗ್​ಬಾಸ್​ ಇತಿಹಾಸದ ಮೊಟ್ಟ ಮೊದಲ ಬಾರಿಗೆ ಸಾಕು ಪ್ರಾಣಿಯೊಂದನ್ನು ಮನೆಗೆ ಕಳುಹಿಸಲಾಗಿದೆ. ಒಟ್ಟು 19 ಕಂಟೆಸ್ಟೆಂಟ್​ಗಳ ಜೊತೆಗೆ ಒಂದು ಕತ್ತೆ ಕೂಡ ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟಿದೆ.

    ಸಲ್ಮಾನ್ ಖಾನ್ ನಡೆಸಿಕೊಡುತ್ತಿರೋ ಬಿಗ್​ಬಾಸ್​ ಸೀಸನ್​ 18 ಕಾರ್ಯಕ್ರಮದಲ್ಲಿ ಈ ಕತ್ತೆ ಎಂಟ್ರಿ ಕೊಟ್ಟಿದೆ. ವೇದಿಕೆಗೆ 19ನೇ ಸ್ಪರ್ಧಿಯಾಗಿ ಬಂದ ಕತ್ತೆಯನ್ನು ನೋಡಿದ ವೀಕ್ಷಕರು ಫುಲ್ ಶಾಕ್ ಆಗಿದ್ದಾರೆ. ಬಿಗ್​ಬಾಸ್​ ಮನೆಗೆ ಬಂದ ‘ಗಧರಾಜ್’ ಕತ್ತೆಯನ್ನು ಕಂಡು ಮನೆ ಮಂದಿ ಫುಲ್​ ಶಾಕ್​ ಆಗಿದ್ದಾರೆ. ಸದ್ಯ ಹೊಸ ಪ್ರೋಮೋಗಳನ್ನು ನೋಡಿದ ವೀಕ್ಷಕರು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.

    Continue Reading

    LATEST NEWS

    Trending