Saturday, February 4, 2023

ನ.1 ರ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಲು ಸಚಿವರಿಗೆ ಜವಾಬ್ದಾರಿ ಹಂಚಿಕೆ..!

ನ.1 ರ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಲು ಸಚಿವರಿಗೆ ಜವಾಬ್ದಾರಿ ಹಂಚಿಕೆ..!

ಬೆಂಗಳೂರು :ಕನ್ನಡ ರಾಜ್ಯೋತ್ಸವಕ್ಕೆ ಇನ್ನೇರಡು ದಿನಗಳು ಮಾತ್ರ ಬಾಕಿ ಉಳಿದಿವೆ. ಈ ಹಿನ್ನೆಲೆಯಲ್ಲಿ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಲು ಅನುಕೂಲವಾಗುವಂತೆ ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಂಗಳೂರಿನಲ್ಲಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಲಿದ್ದು, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ-ಬಾಗಲಕೋಟೆ, ಡಾ. ಅಶ್ವತ್ಥ್ ನಾರಾಯಣ-ರಾಮನಗರ, ಲಕ್ಷ್ಮಣ ಸವದಿ- ರಾಯಚೂರಿನಲ್ಲಿ ಧ್ವಜಾರೋಹಣದ ಜವಾಬ್ದಾರಿ ವಹಿಸಲಿದ್ದಾರೆ.
ಕೆ.ಎಸ್.ಈಶರಪ್ಪ-ಶಿವಮೊಗ್ಗ, ಆರ್.ಅಶೋಕ್-ಬೆಂ. ಗ್ರಾಮಾಂತರ, ಜಗದೀಶ್ ಶೆಟ್ಟರ್- ಧಾರವಾಡ, ಬಿ.ಶ್ರೀರಾಮುಲು-ಚಿತ್ರದುರ್ಗ, ಎಸ್.ಸುರೇಶ್ ಕುಮಾರ್- ಚಾಮರಾಜನಗರ, ವಿ. ಸೋಮಣ್ಣ-ಕೊಡಗು, ಸಿ.ಟಿ.ರವಿ-ಚಿಕ್ಕಮಗಳೂರು, ಬಸವರಾಜ್ ಬೊಮ್ಮಾಯಿ-ಹಾವೇರಿ, ಕೋಟ ಶ್ರೀನಿವಾಸ ಪೂಜಾರಿ-ದಕ್ಷಿಣಕನ್ನಡ ಮತ್ತು ತುಮಕೂರಿನಲ್ಲಿ ಜೆ.ಸಿ. ಮಾಧುಸ್ವಾಮಿ ಅವರಿಗೆ ದ್ವಜಾರೋಹಣದ ಜವಾಬ್ದಾರಿ ನೀಡಲಾಗಿದೆ.
ಉಳಿದಂತೆ ಸಿ.ಸಿ. ಪಾಟೀಲ-ಗದಗ, ಎಚ್.ನಾಗೇಶ- ಕೋಲಾರ, ಪ್ರಭು ಚೌವ್ಹಾಣ್- ಬೀದರ, ಶಶಿಕಲಾ ಜೊಲ್ಲೆ- ವಿಜಯಪುರ, ಆನಂದ ಸಿಂಗ್- ಬಳ್ಳಾರಿ, ಬಿ.ಎ. ಬಸವರಾಜ್- ದಾವಣಗೆರೆ, ಎಸ್.ಟಿ. ಸೋಮಶೇಖರ- ಮೈಸೂರು, ಬಿ.ಸಿ. ಪಾಟೀಲ-ಕೊಪ್ಪಳ, ಡಾ.ಕೆ. ಸುಧಾಕರ- ಚಿಕ್ಕಬಳ್ಳಾಪುರ, ಕೆ.ಸಿ. ನಾರಾಯಣಗೌಡ-ಮಂಡ್ಯ, ಅರಬೈಲ್ ಶಿವರಾಮ್ ಹೆಬ್ಬಾರ-ಉತ್ತರ ಕನ್ನಡ, ರಮೇಶ್ ಜಾರಕಿಹೊಳಿ-ಬೆಳಗಾವಿ, ಕೆ. ಗೋಪಾಲಯ್ಯ-ಹಾಸನ, ಶ್ರೀಮಂತ ಪಾಟೀಲ್- ಕಲಬುರ್ಗಿ, ಉಡುಪಿ ಹಾಗೂ ಯಾದಗಿರಿಯಲ್ಲಿ ಜಿಲ್ಲಾಧಿಕಾರಿಗಳು ಧ್ವಜರೋಹಣ ನಡೆಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here

Hot Topics

ದಕ್ಷಿಣ ಅಮೇರಿಕದಲ್ಲಿ ಭಾರಿ ಬೆಂಕಿ ದುರಂತ : ಕಾಡ್ಗಿಚ್ಚಿಗೆ 13 ಬಲಿ – ಸಾವಿರಾರು ಎಕರೆ ಅರಣ್ಯ ಬೆಂಕಿಗೆ ಆಹುತಿ..!

ಚಿಲಿ : ದಕ್ಷಿಣ ಅಮೇರಿಕದ ಚಿಲಿ ರಾಜಧಾನಿಯ ಸ್ಯಾಂಟಿಯಾಗೋ ಸಮೀಪ ಭಾರಿ ಬೆಂಕಿ ಅನಾಹುತ ಸಂಭವಿಸಿದ್ದು, ಕಾಡ್ಗಿಚ್ಚಿನ ಕಾರಣದಿಂದ ಸಾವಿರಾರು ಎಕರೆ ಅರಣ್ಯ ಹೊತ್ತಿ ಉರಿದು, 13ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 35,000 ಎಕರೆ ಪ್ರದೇಶ...

ಮಂಗಳೂರು ಮುಸ್ಲಿಂ ಯುವಕನನ್ನು ವರಿಸಿದ ನೆದರ್ಲೆಂಡ್ ಕ್ರೈಸ್ತ ಕನ್ಯೆ..!

ಪ್ರೀತಿ ಎಂಬ ಮಾಯೆಗೆ ಅಂತರವಿಲ್ಲ,ಜಾತಿ - ಪಂಗಡವಿಲ್ಲ, ಭಾಷೆ ಬೇಕಿಲ್ಲ ಪ್ರೀತಿಸುವ ಮನಸ್ಸುಗಳಿದ್ದರೆ ಸಾಕು, ಯಾರಿಗೆ, ಯಾವಾಗ, ಯಾರಮೇಲಾದರೂ ಎಲ್ಲಿ ಬೇಕಾದರೂ ಪ್ರೀತಿ ಹುಟ್ಟಬಹುದು. ಮಂಗಳೂರು: ಪ್ರೀತಿ ಎಂಬ ಮಾಯೆಗೆ ಅಂತರವಿಲ್ಲ,ಜಾತಿ - ಪಂಗಡವಿಲ್ಲ,...

ಮುಲ್ಕಿ : ಇಬ್ಬರ ಸಾವಿಗೆ ಕಾರಣರಾದ ತುಳು ಕಾಮಿಡಿಯನ್ ಅರ್ಪಿತ್ ಅರೆಸ್ಟ್..!

ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಸಮೀಪದ ಪಡುಪಣಂಬೂರು ಪೆಟ್ರೋಲ್ ಬಂಕ್ ಬಳಿ ಮಂಗಳವಾರ ಮಧ್ಯರಾತ್ರಿ ಕಾರುಡಿಕ್ಕಿ ಹೊಡೆದು ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದು ಓರ್ವ ಗಂಭೀರ ಗಾಯಗೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ...