Thursday, September 29, 2022

ಚಿಕ್ಕಮಗಳೂರು: ಸಾವಿನಲ್ಲೂ ಸಾರ್ಥಕತೆ ಮೆರೆದ ರಕ್ಷಿತಾ ಕುಟುಂಬಕ್ಕೆ ಸರ್ಕಾರದಿಂದ 8 ಲಕ್ಷ ರೂ.ಪರಿಹಾರ ಘೋಷಣೆ

ಚಿಕ್ಕಮಗಳೂರು:  ಸಾವಿನಲ್ಲೂ ಸಾರ್ಥಕತೆ ಮೆರೆದ ಚಿಕ್ಕಮಗಳೂರಿನ ಕಡೂರು ಸೋಮನಹಳ್ಳಿ ತಾಂಡಾದ ರಕ್ಷಿತಾ ಕುಟುಂಬಕ್ಕೆ ರಾಜ್ಯ ಸರ್ಕಾರ 8 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ.

ಸಿಎಂ ಪರಿಹಾರ ನಿಧಿಯಿಂದ 5 ಲಕ್ಷ ರೂ. ತಾಂಡಾ ಅಭಿವೃದ್ಧಿ ನಿಗಮದಿಂದ 1 ಲಕ್ಷ ರೂ., ಉದ್ಯಮಶೀಲತೆ ಯೋಜನೆಯಡಿ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಲಾಗಿದೆ.

ಶೇಖರ್ ನಾಯ್ಕ ಮತ್ತು ಲಕ್ಷ್ಮೀಬಾಯಿ ದಂಪತಿಯ ಪುತ್ರಿ ವಿದ್ಯಾರ್ಥಿನಿಯಾಗಿದ್ದ ರಕ್ಷಿತಾ ಬಸ್ ಅಪಘಾತದಲ್ಲಿ ತಲೆಗೆ ಪೆಟ್ಟಾಗಿ ಮಿದುಳು ನಿಷ್ಕ್ರಿಯಗೊಂಡಿತ್ತು.

ಈ ಹಿನ್ನೆಲೆ ಕುಟುಂಬಸ್ಥರು ನೋವಿನಲ್ಲೂ ಮಗಳ ಬಹುಅಂಗಾಂಗ ದಾನ ಮಾಡಿ ಮಾನವೀಯತೆ ಮೆರೆದಿದ್ದರು.

ಪಿಯು ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ರಕ್ಷಿತಾ, ಸೆ.18ರಂದು ಚಿಕ್ಕಮಗಳೂರಿನ ಸಂಬಂಧಿಕರ ಮನೆಗೆ ಬಸ್​ನಲ್ಲಿ ಹೋಗುವಾಗ ಮಾರ್ಗ ಮಧ್ಯೆ ಚಿಕ್ಕಮಗಳೂರಿನ ಹೌಸಿಂಗ್ ಬೋರ್ಡ್ ಬಳಿ ಆಯತಪ್ಪಿ ಬಿದ್ದು ತಲೆಗೆ ಗಂಭೀರ ಪೆಟ್ಟಾಗಿತ್ತು.

ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಮಿದುಳು ನಿಷ್ಕ್ರಿಯಗೊಂಡಿದೆ, ಇನ್ನು ಮಗಳು ಬದುವುದಿಲ್ಲ ಎಂಬ ಸುದ್ದಿ ಕೇಳಿ ಕಂಗಾಲದ ಪಾಲಕರು ಶುಕ್ರವಾರ ಮಗಳ ಕಣ್ಣು, ಹೃದಯ, ಕಿಡ್ನಿ, ಶ್ವಾಸಕೋಶ, ಲಿವರ್​ ದಾನ ಮಾಡುವ ಮೂಲಕ 9 ಜನರ ಬಾಳಿಗೆ ಬೆಳಕಾಗಿದ್ದರು.

 

LEAVE A REPLY

Please enter your comment!
Please enter your name here

Hot Topics

ತ್ರಿಶೂಲ ವಿತರಣೆ ಮಾಡಿ ಗಲಭೆಗೆ ಕುಮ್ಮಕ್ಕು ನೀಡುವ ಭಜರಂಗದಳ ಮಾಡುತ್ತಿರುವುದು ಸರಿಯೇ..?

ಮಂಗಳೂರು: ಇಲ್ಲಿ ಗಲಭೆಗೆ ಕಾರಣವಾಗುತ್ತಿರುವುದು ಕೇವಲ ಈ ಒಂದು ಸಂಘಟನೆ ಮಾತ್ರವೇ...? ಭಜರಂಗದಳದವರು ತ್ರಿಶೂಲ ವಿತರಣೆ ಮಾಡಿ ಗಲಭೆಗೆ ಕುಮ್ಮಕ್ಕು ನೀಡಿಲ್ಲವೇ ಎಂದು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ ಅಶ್ರಫ್‌ ಪ್ರಶ್ನಿಸಿದ್ದಾರೆ.ಕೇಂದ್ರ ಗೃಹ...

5 ವರ್ಷ PFI ಬ್ಯಾನ್ : ಮಂಗಳೂರಿನ ಕಚೇರಿಗಳಿಗೆ ಬೀಗ ಜಡಿದು ಸೀಲ್ ಡೌನ್ ಮಾಡಿದ ಪೊಲೀಸರು..!

ಮಂಗಳೂರು : ಪಿಎಫ್‌ಐ ಮತ್ತು ಅದರ ಅಂಗ ಸಂಘಟನೆಗಳನ್ನು 5 ವರ್ಷ ಕೇಂದ್ರ ಸರ್ಕಾರ ನಿಷೇಧ ಹೇರಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಕೇಂದ್ರ ಸರ್ಕಾರದ ನಿರ್ದೇಶನದ ಮೇಲೆ ಪಿಎಫ್‌ಐ ಕಚೇರಿಗಳನ್ನು ಸೀಲ್ ಡೌನ್...

ಬ್ರೇಕಿಂಗ್ ನ್ಯೂಸ್: PFI ಸಂಘಟನೆ ಇನ್ನು 5ವರ್ಷ ಬ್ಯಾನ್-ಕೇಂದ್ರದ ಮಹತ್ವದ ಆದೇಶ

ನವದೆಹಲಿ: ಇಂದಿನಿಂದಲೇ ಜಾರಿಗೆ ಬರುವಂತೆ ಕೇಂದ್ರ ಸರ್ಕಾರವು ಪಿಎಫ್‌ಐ ಸಂಘಟನೆ ಮತ್ತು ಅದರ ಅಂಗಸಂಸ್ಥೆಗಳನ್ನು ಮುಂದಿನ 5 ವರ್ಷಗಳ ಕಾಲ ನಿಷೇಧ ಮಾಡಿ ಮಹತ್ವದ ಆದೇಶ ಹೊರಡಿಸಿದೆ.ಈ ಸಂಘಟನೆಗಳು ಕಾನೂನುಬಾಹಿರ ಎಂದು ತಕ್ಷಣದಿಂದಲೇ...