Sunday, December 4, 2022

ಲೀಫ್ ಆರ್ಟಿಸ್ಟ್  ಅಕ್ಷಯ್ ಕೋಟ್ಯಾನ್ ಗೆ ಸಿಎಂ ಪ್ರಶಂಸೆ :ಲಕ್ಷ ರೂಪಾಯಿಗಳ ಪ್ರೋತ್ಸಾಹ ಧನದ ಗೌರವ..!   

ಲೀಫ್ ಆರ್ಟಿಸ್ಟ್  ಅಕ್ಷಯ್ ಕೋಟ್ಯಾನ್ ಗೆ ಸಿಎಂ ಪ್ರಶಂಸೆ :ಲಕ್ಷ ರೂಪಾಯಿಗಳ ಪ್ರೋತ್ಸಾಹ ಧನದ ಗೌರವ..!   

ಮಂಗಳೂರು : ಅಶ್ವತ್ಥ ಎಲೆಯನ್ನು ಕಲಾತ್ಮಕವಾಗಿ ಕತ್ತರಿಸಿ ಚಿತ್ರ ರಚಿಸುವ ಕಲೆ ಇತ್ತೀಚೆನ ದಿನಗಳಲ್ಲಿ ಪ್ರಸಿದ್ಧಿ ಪಡೆಯುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಅಕ್ಷಯ್ ಕೋಟ್ಯಾನ್ ಕಲ್ಲಬೆಟ್ಟು ಅವರು ಈ ಕ್ಷೇತ್ರದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಇದೀಗ ರಾಜ್ಯದ ಮುಖ್ಯಮಂತ್ರಿ ಬಿ ಎಸ್. ಯಡ್ಡಿಯೂರಪ್ಪರ ಚಿತ್ರವನ್ನು ಬಿಡಿಸುವ ಮೂಲಕ ಮತ್ತೊಮ್ಮೆ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ವೆಕ್ಟರ್ ಆರ್ಟ್ ಮಾದರಿಯಲ್ಲಿ ಸೂಕ್ಷ್ಮವಾಗಿ ಎಲೆಯನ್ನು ಕತ್ತರಿಸಿ ವ್ಯಕ್ತಿಯ ಮುಖದ ಚಿತ್ರ ರಚಿಸಲಾಗುತ್ತದೆ. ಬಳಿಕ ಅದರ ಹಿಂಭಾಗದಲ್ಲಿ ಹಸಿರು ಹೊರತಾದ ಬಣ್ಣದ ಕಾಗದ ಅಥವಾ ಆಕಾಶದ ಕಡೆಗೆ ಹಿಡಿದಾಗ ಚಿತ್ರ ಸ್ಪಷ್ಟವಾಗಿ ಕಾಣುತ್ತದೆ.

ಇಂಥ ಚಿತ್ರ ರಚಿಸಲು ತಾಳ್ಮೆ ಅಗತ್ಯ. ಇನ್ನು ತಮ್ಮ ಲೀಫ್ ಆರ್ಟ್ ಚಿತ್ರವನ್ನು ಮೆಚ್ಚಿ ಹುಡುಗನ್ನು ಅಭಿನಂದಿಸಿದ ಸಿಎಂ ಬಿಎಸ್ ವೈ ಮುಂದಿನ ವಿದ್ಯಾಭ್ಯಾಸಕ್ಕಾಗಿ ಒಂದು ಲಕ್ಷ ರೂಪಾಯಿಗಳ ಪ್ರೋತ್ಸಾಹ ಧನವನ್ನು ಕೂಡ ನೀಡಿದ್ದಾರೆ.

ಈ ಸಮಯದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಜೊತೆಗಿದ್ದರು. ಇತ್ತೀಚೆಗಷ್ಟೇ ಧರ್ಮಸ್ಥಳದ ಧರ್ಮಧಿಕಾರಿ ಡಾ:ವೀರೇಂದ್ರ ಹೆಗ್ಗಡೆಯವರ ಚಿತ್ರ ಬಡಿಸಿದ್ದು, ಹೆಗ್ಗಡೆಯವರು ಮೆಚ್ಚಿ ಅಭಿನಂದಿಸಿದ್ದರು.

ಜೊತೆಗೆ ಬ್ರಹ್ಮಶ್ರೀ ಪ್ರಧಾನಿ ನರೇಂದ್ರ ಮೋದಿ ಇತರ ಗಣ್ಯ ವ್ಯಕ್ತಿಗಳ ಚಿತ್ರ ಬಿಡಿಸಿ ಮೆಚ್ಚುಗೆಗೆ ಪಾತ್ರವಾಗಿದ್ದರು.

LEAVE A REPLY

Please enter your comment!
Please enter your name here

Hot Topics