Monday, July 4, 2022

ಕೇರಳದಲ್ಲಿ ಕರ್ನಾಟಕ ಮೂಲದ ನಕ್ಸಲ್‌ ಬಿ.ಜಿ.ಕೃಷ್ಣಮೂರ್ತಿ ಜೊತೆಗೆ ಸಾವಿತ್ರಿಯೂ ATS ಬಲೆಗೆ

ತಿರುವನಂತಪುರಂ: ಹಿರಿಯ ನಕ್ಸಲ್ ಕಮಾಂಡರ್ ಆಗಿರುವ ಕರ್ನಾಟಕ ಮೂಲದ ಬಿ.ಜಿ.ಕೃಷ್ಣಮೂರ್ತಿಯನ್ನು ಕೇರಳ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್) ಬಂಧಿಸಿದೆ.

ವಯನಾಡ್‌ನ ಸುಲ್ತಾನ್ ಬತ್ತೇರಿಯಲ್ಲಿ ಯಲ್ಲಿ ಆ್ಯಂಟಿ ಟೆರರಿಸ್ಟ್‌ ಸ್ಕಾಡ್‌ ನಿನ್ನೆ ಕೃಷ್ಣಮೂರ್ತಿಯನ್ನು ಬಂಧಿಸಲಾಗಿದೆ. ಈತನ ಜತೆಗೆ ಸಿಪಿಐ (ಎಂ)ನ ಕಬನಿ ದಳಂ ಕಮಾಂಡರ್ ಆಗಿ ರುವ ಸಾವಿತ್ರಿ ಅಲಿಯಾಸ್ ವಿಜೇತಾ ಎಂಬುವರನ್ನು ಸಹ ಎಟಿಎಸ್ ಅಧಿ ಕಾರಿಗಳು ಬಂಧಿಸಿದ್ದಾರೆ.


ಈ ಇಬ್ಬರ ಬಂಧನದಿಂದ ಎಟಿಎಸ್‌ಗೆ ನಕ್ಸಲೀಯರ ವಿರುದ್ಧದ ಹೋರಾಟದಲ್ಲಿ ಮಹತ್ವದ ಮುನ್ನಡೆ ಸಿಕ್ಕಂತಾಗಿದೆ. ಶೃಂಗೇರಿಯವನಾದ ಕೃಷ್ಣಮೂರ್ತಿ ವಿರುದ್ಧ 50ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದ್ದವು.
ಪಶ್ಚಿಮ ಘಟ್ಟಗಳ ವಿಶೇಷವಲಯ ಸಮಿತಿಯ ಕಾರ್ಯದರ್ಶಿ ಯಾಗಿಯೂ ಕೃಷ್ಣಮೂರ್ತಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗಿದೆ.
ನಕ್ಸಲ್ ಮುಖಂಡನಾಗಿರುವ ಕೃಷ್ಣಮೂರ್ತಿ ಸಿಪಿಐ(ಎಂ)ನಲ್ಲಿ ಇತ್ತೀಚೆಗೆ ಮುನ್ನಲೆಗೆ ಬರುತ್ತಿದ್ದ. ಚಳವಳಿಯಲ್ಲಿ 2006ರಲ್ಲಿ ವಿಭಜನೆ ಉಂಟಾದ ಹಾಗೂ 2005ರಲ್ಲಿ ಸಾಕೇತ್ ರಾಜನ್ ಎನ್‌ಕೌಂಟರ್‌ನಲ್ಲಿ ಹತ್ಯೆಯಾದ ಬಳಿಕ ಕರ್ನಾಟಕ ದಲ್ಲಿ ಪಕ್ಷದ ನಾಯಕನಾಗಿ ಹೊರಹೊಮ್ಮಿದ್ದ.

2016ರ ನವೆಂಬರ್‌ನಲ್ಲಿ ಮಲಪುರಂನ ನೀಲಾಂಬುರ್‌ನಲ್ಲಿ, ಕಪ್ಪು ದೇವರಾಜ್ ಹತ್ಯೆಗೀಡಾದ ಬಳಿಕ ಸಿಪಿಐ(ಎಂ)ನ ತಾತ್ಕಾಲಿಕ ಕಾರ್ಯದರ್ಶಿಯಾಗಿಯೂ ಆಯ್ಕೆಯಾಗಿದ್ದ. ಆದರೆ, 2017ರಲ್ಲಿ ವಲಯ ಸಮಿತಿಯು ಆತನನ್ನು ಕಾಯಂ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿತ್ತು.

ಭೂಗತ ನಕ್ಸಲ್ ಬಂಧನ
ಕೇರಳದ ಎಡಕ್ಕರಾದಲ್ಲಿ ತಲೆಮರೆಸಿಕೊಂಡಿದ್ದ 32 ವರ್ಷದ ನಕ್ಸಲ್ ಆರ್. ರಾಘವೇಂದ್ರನ್ ಅಲಿಯಾಸ್ ವಿನೋದ್ ಕುಮಾರ್‌ನನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಬಂಧಿ ಸಿದೆ. ತಮಿಳುನಾಡಿನ ವೆಲ್ಲೂರು ನಿವಾಸಿ ಯಾದ ರಾಘವೇಂದ್ರನ್, 2016ರಿಂದಲೂ ಸಿಪಿಐ (ಮಾವೋವಾದಿ) ಆಯೋಜಿಸುತ್ತಿದ್ದ ಶಸ್ತ್ರಾಸ್ತ್ರ ತರಬೇತಿ ಕಾರ್ಯಾಗಾರಗಳಲ್ಲಿ ಭಾಗಿಯಾಗುತ್ತಿದ್ದ.

ಜತೆಗೆ ನಕ್ಸಲ್ ಚಟುವಟಿಕೆಗಳಿಗೆ ಆರ್ಥಿಕ ಸಹಾಯ ಕೂಡ ಮಾಡುತ್ತಿದ್ದ ಎನ್ನಲಾಗಿದೆ. ನಿಲಂಬೂರು ಅರಣ್ಯ ಪ್ರದೇಶದಲ್ಲಿ 2016ರ ಸೆಪ್ಟೆಂಬರ್ ನಲ್ಲಿ ನಡೆದಿದ್ದ ನಕ್ಸಲರ ಧ್ವಜಾರೋಹಣ, ತರಬೇತಿ ಕಾರ್ಯಕ್ರಮ ವಿರುದ್ಧ 2017ರ ಸೆ. 30ರಂದು ಪ್ರಕರಣ ದಾಖಲಾಗಿತ್ತು.

ಬಳಿಕ ಎನ್‌ಐಎ ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡು ಈ ಆ.20ರಂದು ಮಲಪುರಂ ವ್ಯಾಪ್ತಿಯಲ್ಲಿ ಪ್ರಕರಣವನ್ನು ಪುನಃ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಬಂಟ್ವಾಳದ ವಿಶ್ವ ಹಿಂದು ಪರಿಷತ್ ವತಿಯಿಂದ ರಕ್ತದಾನ ಶಿಬಿರ

ಬಂಟ್ವಾಳ: ವಿಶ್ವಹಿಂದುಪರಿಷತ್ ಬಜರಂಗದಳ ಪರಶುರಾಮ ಶಾಖೆ ಬಂಟ್ವಾಳ ಪ್ರಖಂಡದ ವತಿಯಿಂದ ಕೆಎಮ್‌ಸಿ ಮಂಗಳೂರು ಮತ್ತು ವೆನ್ಲಾಕ್ ಆಸ್ಪತ್ರೆ ಮಂಗಳೂರು ಇವರ ಸಹಯೋಗದೊಂದಿಗೆ ರಕ್ತದಾನ ಶಿಬಿರ ನಡೆಯಿತು.ರಕ್ತದಾನ ಶಿಬಿರದಲ್ಲಿ 180 ಯೂನಿಟ್ ರಕ್ತ ಸಂಗ್ರಹ...

ಪುತ್ತೂರಿನಲ್ಲಿ ಬೈಕ್‌ – ಕಾರು ಡಿಕ್ಕಿ: ಓರ್ವ ಜೀವಾಂತ್ಯ

ಪುತ್ತೂರು: ಬೈಕ್ ಮತ್ತು ಮಾರುತಿ ಕಾರು ನಡುವೆ ಡಿಕ್ಕಿ ಸಂಭವಿಸಿ ಓರ್ವ ಮೃತಪಟ್ಟು ಇನ್ನೋರ್ವ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಹೊರ ವಲಯದ ಕುಂಬ್ರದಲ್ಲಿ ನಡೆದಿದೆ.ಕು೦ಬ್ರ...

ಭಾರೀ ಮಳೆ ಹಿನ್ನೆಲೆ: ಮಡಿಕೇರಿ- ಮಂಗಳೂರು ಹೆದ್ದಾರಿ ಮಧ್ಯೆ ಮಣ್ಣು ಕುಸಿತ

ಸುಳ್ಯ: ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಹಿನ್ನೆಲೆ ಮಡಿಕೇರಿ- ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯ ತಾಳತ್ತಮನೆ ಸಮೀಪ ರಸ್ತೆಗೆ ಮಣ್ಣು ಕುಸಿದಿದೆ.ಸದ್ಯ ಸಣ್ಣ ಪ್ರಮಾಣದ ಮಣ್ಣು ಕುಸಿದದ್ದರಿಂದ ಒಂದು ಕಡೆಯ...