ಕಾರ್ಕಳ : ಕಲ್ಲು ಲೋಡು ಮಾಡಿಕೊಂಡು ಸಾಗುತ್ತಿದ್ದ ಲಾರಿ ಪಲ್ಟಿಯಾಗಿ ಇಬ್ಬರು ಕಾರ್ಮಿಕರು ಮೃ*ತಪಟ್ಟ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಸಮೀಪದ ಕಲ್ಲು ಕೊರೆಯ ಬಳಿ ನಡೆದಿದೆ. ಕೊಪ್ಪಳ ಜಿಲ್ಲೆಯ ಯಲಬುರ್ಗಿ ದೇವಲಾಪುರ ನಿವಾಸಿ ಕರಿಯಪ್ಪ(26) ಮತ್ತು ನರಿಯಪ್ಪ(27) ಮೃ*ತಪಟ್ಟವರು.
ಕಾರ್ಕಳ ನಿಟ್ಟೆ ಭ್ರಾಮರಿ ಕ್ರಾಸ್ ಸಮೀಪ ಲಾರಿಯಲ್ಲಿ ಕಲ್ಲು ಲೋಡ್ ಮಾಡಿಕೊಂಡು ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಕಲ್ಲು ತುಂಬಿಕೊಂಡು ಹೋಗುತ್ತಿದ್ದ ಲಾರಿ ಕೋರೆಯ ಪಕ್ಕದ ಇಳಿಜಾರು ರಸ್ತೆಯಲ್ಲಿ ಚಲಿಸುತ್ತಿದ್ದ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ. ಪರಿಣಾಮ ಕಾರ್ಮಿಕರು ಲಾರಿಯ ಚಕ್ರದ ಅಡಿಯಲ್ಲಿ ಸಿಲುಕಿ ಮೃ*ತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಕಾರ್ಕಳ ಡಿವೈಎಸ್ಪಿ ಅರವಿಂದ ಕಲಗುಜ್ಜಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು/ಮುಂಬೈ: ಐಪಿಎಲ್ ಸೀಸನ್ 18ರ ಮೆಗಾ ಹರಾಜು ಪ್ರಕ್ರಿಯೆ ನಾಳೆಯಿಂದ ಸೌದಿ ಅರೇಬಿಯಾದ ಜಿದ್ದಾದಲ್ಲಿ ನಡೆಯಲಿದೆ. ಆದರೆ ಐಪಿಎಲ್ ಹರಾಜಿನ ನಡುವೆ ಬಿಸಿಸಿಐ ಹೊಸ ಟ್ವಿಸ್ಟ್ ಕೊಟ್ಟಿದೆ.
ಈ ಬಾರಿಯ ಮೆಗಾ ಹರಾಜಿನಲ್ಲಿ 577 ಆಟಗಾರರು ಕಾಣಿಸಿಕೊಳ್ಳಲಿದ್ದಾರೆ. 204 ಸ್ಥಾನಗಳಿಗೆ ನಡೆಯುವ ಈ ಹರಾಜು ಪ್ರಕ್ರಿಯೆಯಲ್ಲಿ ಭಾರತದ ಹಾಗೂ ವಿದೇಶಿ ಆಟಗಾರರು ಕೋಟಿ-ಕೋಟಿ ಮೌಲ್ಯದಲ್ಲಿ ವಿವಿಧ ತಂಡಗಳಿಗೆ ಸೇರಿಕೊಳ್ಳಲಿದ್ದಾರೆ. 10 ಫ್ರಾಂಚೈಸಿಗಳು ಮುಂಬರುವ ಐಪಿಎಲ್ ಸೀಸನ್ ಗಾಗಿ ತಮ್ಮ ತಂಡಗಳನ್ನು ರೂಪಿಸಿಕೊಳ್ಳಲಿದೆ. ಆದರೆ ಬಿಸಿಸಿಐ ಮೆಗಾ ಹರಾಜಿನ ಸಮಯವನ್ನು ಸ್ವಲ್ಪ ಬದಲಾಯಿಸಿದೆ.
ಇದನ್ನೂ ಓದಿ :ಜೈಲಲ್ಲಿ ರಜತ್ ಹೊಸ ವರಸೆ.. ಕಂಬಿ ಹಿಂದೆ ಇದ್ದುಕೊಂಡೇ ಎದುರಾಳಿಗಳ ಆಟವಾಡಿಸಿದ ಸ್ಪರ್ಧಿ..!
ಈಗಗಾಲೇ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಟೆಸ್ಟ್ ಪಂದ್ಯಾಟ ಆಸ್ಟ್ರೇಲಿಯಾದ ಪರ್ತ್ ನಲ್ಲಿ ನಡೆಯುತ್ತಿದೆ. ಅದೇ ದಿನ ಮೊದಲ ಟೆಸ್ಟ್ ನ ಮೂರನೇ ಮತ್ತು ನಾಲ್ಕನೇ ದಿನದ ಆಟ ನಡೆಯಲಿದೆ. ಟೆಸ್ಷ್ ಪಂದ್ಯವು ಮಧ್ಯಾಹ್ನ 2:50ಕ್ಕೆ ಮುಕ್ತಾಯವಾಗಲಿದೆ. ಒಂದು ವೇಳೆ ಬದಲಾದ ಸಂದರ್ಭದಲ್ಲಿ ಪಂದ್ಯ ಮುಂದುವರಿದರೆ ಮಧ್ಯಾಹ್ನ 3:20ರವರೆಗೂ ನಡೆಯಲಿದೆ. ನಿಗದಿಯಂತೆ ಹರಾಜು ಪ್ರಕ್ರಿಯೆ ನಡೆದರೆ ನೇರ ಪ್ರಸಾರಕ್ಕೆ ತೊಂದರೆಯಾಗಲಿದೆ.
ಪ್ರಸಾರಕರ ಕೋರಿಕೆ ಮೆರೆಗೆ ಬಿಸಿಸಿಐ ಐಪಿಎಲ್ ಹರಾಜಿನ ಸಮಯವನ್ನು ಮಧ್ಯಾಹ್ನ 3ರಿಂದ 3:30ಕ್ಕೆ ಬದಲಾಯಿಸಿದೆ. ಈ ಮೊದಲು ನಿಗಧಿಯಂತೆ 3:30ಕ್ಕೆ ಹರಾಜು ಪ್ರಕ್ರಿಯೆ ಆರಂಭವಾಗಬೇಕಿತ್ತು. ಇದರಿಂದ ನಾಳೆಯ ಹರಾಜು ಪ್ರಕ್ರಿಯೆ ತೀವ್ರ ಕುತೂಹಲ ಕೆರಳಿಸಿದೆ.
ಮಂಗಳೂರು/ಜಾರ್ಖಂಡ್: ಜಾರ್ಖಂಡ್ ನಲ್ಲಿ ಈಗಾಗಲೇ ಮತಎಣಿಕೆ ಕಾರ್ಯ ಭರದಿಂದ ಸಾಗುತ್ತಿದೆ. ಜಾರ್ಖಂಡ್ ನಲ್ಲಿ ಬಿಜೆಪಿ ನೇತೃತ್ವದ ‘ಎನ್ ಡಿಎ’ ಮೈತ್ರಿ ಕೂಟ ಅಧಿಕಾರಕ್ಕೆ ಬರುವುದು ಅನುಮಾನ ಮೂಡಿಸಿದೆ. ಇನ್ನೊಂದು ಕಡೆ ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟ ಭರ್ಜರಿ ಮುನ್ನಡೆ ಸಾಧಿಸುತ್ತಿದೆ.
ನವೆಂಬರ್ 13ರಂದು ಜಾರ್ಖಂಡ್ ನಲ್ಲಿ 43 ಕ್ಷೇತ್ರಗಳ ಮೊದಲ ಹಂತದ ಮತದಾನ ನಡೆದಿತ್ತು. ಎರಡನೇ ಹಂತದ ಮತದಾನ 38 ಕ್ಷೇತ್ರಗಳಿಗೆ ನ.20ರಂದು ನಡೆದಿತ್ತು. ಈಗಾಗಲೇ ಜಾರ್ಖಂಡ್ ನಲ್ಲಿ ಫಲಿತಾಂಶದ ಕಾವು ಜೋರಾಗಿದ್ದು, ಜಾರ್ಖಂಡ್ ನಲ್ಲಿ ಒಟ್ಟು 81 ಸ್ಥಾನಗಳಲ್ಲಿ, ಯಾವುದೇ ಪಕ್ಷ ಅಧಿಕಾರಕ್ಕೆ ಬರಬೇಕೆಂದರೆ 41 ಸ್ಥಾನಗಳಲ್ಲಿ ಜಯ ದಾಖಲಿಸಬೇಕಿದೆ.
ಹೀಗಾಗಿ ಅಧಿಕಾರದ ಕುರ್ಚಿ ಯಾರ ಪಾಲಾಗುತ್ತದೆ ಎಂದು ಕೊನೆವರೆಗೂ ಕುತೂಹಲ ಮೂಡಿಸುವ ಸಾಧ್ಯತೆ ಇದೆ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜಾಮೀನಿನ ಮೇಲೆ ಹೊರಗಿರುವ ಸಿಎಂ ಹೇಮಂತ್ ಸೊರೆನ್ ಅವರು ಈ ಬಾರಿ ತಮ್ಮ ಕ್ಷೇತ್ರ ಬದಲಿಸಿದ್ದು, ಹಿಂದಿನ ಚುನಾವಣೆಯಲ್ಲಿ ದುಮ್ಕಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ಆದರೆ ಈ ಬಾರಿ ಬರ್ಹೈತ್ ಕ್ಷೇತ್ರದಿಂದ ಸ್ಪರ್ಧಿಸಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಇದನ್ನೂ ಓದಿ :3ಕ್ಕೆ 3 ಸೋಲು.. ಮನೆಯಲ್ಲಿನ TV ಒಡೆದು ಹಾಕಿದ ಬಿಜೆಪಿ ನಿಷ್ಠಾವಂತ ಕಾರ್ಯಕರ್ತ
ಇನ್ನೂ ಜಾರ್ಖಂಡ್ ವಿಧಾನಸಭೆಯ ಒಟ್ಟು 81 ಕ್ಷೇತ್ರಗಳ ಪೈಕಿ 68 ಕ್ಷೇತ್ರಗಳಲ್ಲಿ ಬಿಜೆಪಿಯು ಕಣಕ್ಕಿಳಿಸಿದ್ದು, ಉಳಿದವುಗಳನ್ನು ಮಿತ್ರಪಕ್ಷಗಳಿಗೆ ಬಿಟ್ಟುಕೊಟ್ಟಿದೆ. ಚುನಾವಾಣೋತ್ತರ ಸಮಿಕ್ಷೆಯ ಪ್ರಕಾರ ಜಾರ್ಖಂಡ್ ನಲ್ಲಿ ಅಧಿಕಾರದ ಬದಲಾವಣೆಯಾಗಲಿದೆ ಎಂದು ಭವಿಷ್ಯ ನುಡಿದಿತ್ತು. ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿ ಕೂಟ 81 ಸದಸ್ಯರ ವಿಧಾನಸಭೆಯಲ್ಲಿ 34 ಸ್ಥಾನಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿದಿತ್ತು. ಆದರೆ ಈಗ ಬಿಜೆಪಿ ನೇತೃತ್ವದ ‘ಎನ್ ಡಿಎ’ ಮೈತ್ರಿಕೂಟ 23 ಸ್ಥಾನಗಳನ್ನು ಪಡೆದು ಹಿನ್ನಡೆ ಅನುಭವಿಸಿದರೆ, ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಮೈತ್ರಿ ಕೂಟ 57 ಸ್ಥಾನಗಳನ್ನು ಪಡೆದು ಮುನ್ನುಗುತ್ತಿದೆ, ಒಂದು ಸ್ಥಾನ ಪಕ್ಷೇತರರ ಪಾಲಾಗಿದೆ.
ಮಂಗಳೂರು/ಬೆಂಗಳೂರು : ಇತ್ತೀಚೆಗೆ ಹನಿಟ್ರ್ಯಾಪ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬರು ಹನಿಟ್ರ್ಯಾಪ್ ಗೆ ಬ*ಲಿಯಾಗಿದ್ದು, 2 ಕೋಟಿಗೂ ಅಧಿಕ ಹಣ ಕಳೆದುಕೊಂಡಿದ್ದಾರೆ. ಈ ಘಟನೆ ನಡೆದಿರೋದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ.
ಜಿಮ್ ಮಾಲಕನಿಂದ ಪರಿಚಯವಾದ ಮಹಿಳೆ :
2018ರಲ್ಲಿ ಆರ್.ಟಿ ನಗರದ ಜಿಮ್ ಗೆ ಸಂ*ತ್ರಸ್ತ ವ್ಯಕ್ತಿ ಹೋಗುತ್ತಿದ್ದರು. ಈ ವೇಳೆ ಜಿಮ್ ಮಾಲಕ ಅಜೀಂ ಉದ್ದೀನ್ ನ ಸಹೋದರಿ ತಬಸ್ಸುಮ್ ಬೇಗಂ(38) ಎಂಬ ಮಹಿಳೆಯ ಪರಿಚಯವಾಗಿತ್ತು. ಮದುವೆಯಾಗಿ ಮಕ್ಕಳನ್ನು ಹೊಂದಿದ್ದ ಹಿನ್ನೆಲೆ ಸಂತ್ರಸ್ತ ಆಕೆಯೊಂದಿಗೆ ಸಂಬಂಧ ಬೆಳೆಸಲು ಹಿಂದೇಟು ಹಾಕಿದ್ದರು. ತಬಸ್ಸುಮ್ ಬೇಗಂ ಮಾತ್ರ ವ್ಯಕ್ತಿಯನ್ನು ಬಿಡಲು ಸಿದ್ಧಳಿರಲಿಲ್ಲ. ಅವಳ ಹಠಕ್ಕೆ ಮಣಿದ ವ್ಯಕ್ತಿ ಸಂಬಂಧ ಬೆಳೆಸಿದ್ದರು.
ಬಳಿಕ ದೈಹಿಕ ಸಂಬಂಧವೂ ಬೆಳೆಯಿತು. ಆಮೇಲೆ ಶುರುವಾಯ್ತು ನೋಡಿ ಕಾಟ. ಖಾಸಗಿ ಫೋಟೋ, ವೀಡಿಯೋಗಳನ್ನು ಲೀಕ್ ಮಾಡುವುದಾಗಿ ಬ್ಲ್ಯಾಕ್ ಮೇಲ್ ಮಾಡಲು ತಬಸ್ಸುಮ್ ಶುರು ಮಾಡಿದ್ದಾಳೆ. ಈ ಗ್ಯಾಂಗ್ ನಲ್ಲಿ ಇವಳು ಮಾತ್ರವಲ್ಲ ಆಕೆಯ ಸಹೋದರ ಅಜೀಂ ಉದ್ದೀನ್(41) ಮತ್ತು ಅಭಿಷೇಕ್ ಅಲಿಯಾಸ್ ಅವಿನಾಶ್(33) ಎಂಬವರೂ ಇದ್ದಾರೆ.
ಬೆ*ದರಿಕೆ ಹಾಕಿ ಹಣ ಲೂಟಿ :
ಈ ಬ್ಲಾಕ್ ಮೇಲ್ ಒಂದಲ್ಲ ಎರಡಲ್ಲ ಬರೋಬ್ಬರಿ 5 ವರ್ಷಗಳಿಂದ ನಡೆಯುತ್ತಿತ್ತಂತೆ. ಈ ಗ್ಯಾಂಗ್ ನಲ್ಲಿ ಅಭಿಷೇಕ್ ಇದ್ದಾನಲ್ಲ ಆತ ತಾನು ಪೊಲೀಸ್ ಅಧಿಕಾರಿ ಎಂದಿದ್ದನಂತೆ. ಖಾಸಗಿ, ಫೋಟೋ, ವೀಡಿಯೋಗಳನ್ನು ಸೋರಿಕೆ ಮಾಡುವ ಬೆದ*ರಿಕೆ ಹಾಕಿದ್ದ. ಸುಳ್ಳು ಅತ್ಯಾ*ಚಾರ ಪ್ರಕರಣ ದಾಖಲಿಸುವುದಾಗಿ,. ಅಲ್ಲದೇ, ಡೆ*ತ್ ನೋಟ್ ನಲ್ಲಿ ಹೆಸರು ಬರೆದು ಆ*ತ್ಮಹ*ತ್ಯೆ ಮಾಡಿಕೊಳ್ಳುವುದಾಗಿ ಹೆದರಿಸಿದ್ದರಂತೆ. ಇದರಿಂದ ಭಯಬಿದ್ದ ಸಂತ್ರಸ್ತ ತನ್ನ ಭವಿಷ್ಯ ನಿಧಿ ಉಳಿತಾಯದ ಹಣ ಹಿಂತೆಗೆದುಕೊಂಡಿದ್ದರು. ಅಲ್ಲದೇ, ಬ್ಯಾಂಕ್ ಸಾಲ, ಕೈ ಸಾಲವೂ ಬೆಳೆಯಿತು.
ಸಂತ್ರಸ್ತ ಆರೋಪಿಗೆ ಮಾಸಿಕ 1.25 ಲಕ್ಷ ರೂ. ಹಣ ನೀಡುತ್ತಿದ್ದರು. ಬೇಡಿಕೆ ಹೆಚ್ಚಾಗುತ್ತಿದ್ದಂತೆ ಬೇರೆ ದಾರಿ ಕಾಣದೆ ಸಿಸಿಬಿ ಮೊರೆ ಹೋಗಿದ್ದಾರೆ ಸಂ*ತ್ರಸ್ತನ ದೂರಿನ ಅನ್ವಯ ಸಿಸಿಬಿ ಪೊಲೀಸರು ಮಹಿಳೆ ಹಾಗೂ ಅಜೀಂ, ಅಭಿಷೇಕ್ ನನ್ನು ಬಂಧಿಸಿದ್ದಾರೆ.