ಕಾರ್ಕಳ: ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್ಹಾಜ್ ಕೆ.ಎಸ್. ಮೊಹಮ್ಮದ್ ಮಸೂದ್ ರವರು ಹಾಜಿ ಕಾರ್ಕಳ ಶೇಖ್ ಸಾಬು ಸಾಹೇಬ್ ಮೆಮೋರಿಯಲ್
ಟ್ರಸ್ಟ್ ವತಿಯಿಂದ ಮಿತ್ತಬೈಲ್ ಜಮಾಅತ್ ಗೊಳಪಟ್ಟ ತಲೆಯ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಮೊಹಮ್ಮದ್ ಮುಸ್ತಫ ಎಂಬ ರೋಗಿಗೆ ಮಿತ್ತಬೈಲ್ ಜಮಾಅತ್ ಅಧ್ಯಕ್ಷ ಮುಹಮ್ಮದ್ ಸಾಗರ್ ಹಾಗೂ ಪಧಾದಿಕಾರಿಗಳ ಸಮ್ಮುಖದಲ್ಲಿ 25 ಸಾವಿರ ರೂಪಾಯಿಯ ಚೆಕ್ ಅನ್ನು ನೀಡಿದರು.
ಅದೇ ಜಮಾಅತ್ ಗೊಳಪಟ್ಟ ಬಡ ಕುಟುಂಬಕ್ಕೆ ತಲಾ 10 ಕೆ.ಜಿ ಯಂತೆ 15 ಬ್ಯಾಗ್ ಅಕ್ಕಿಯನ್ನು ನೀಡಿದರು ಮತ್ತು ದಾರುಸಫಕತ್ ಹಿರಿಯರ ಅನಾಥ ಮಂದಿರದಲ್ಲಿ ಅಡುಗೆ ಕೆಲಸ ಮಾಡುವ (ಕುಕ್) ಒಬ್ಬರಿಗೆ 21ಸಾವಿರ ರೂಪಾಯಿಯ ಸಾಲವಿದ್ದು,
ಆ ಸಾಲವನ್ನು ದಾರುಸಫಕತ್ ಸಂಸ್ಥೆಯ ಅಧ್ಯಕ್ಷರೂ ಆದ ಅಲ್ ಹಾಜ್ ಕೆ.ಎಸ್. ಮೊಹಮ್ಮದ್ ಮಸೂದ್ ರವರು ಧನ ಸಹಾಯ ನೀಡುವ ಮೂಲಕ ಸಾಲ ತೀರಿಸಲು ನೆರವಾದರು.
ಈ ಸಂದರ್ಭ ಸಂಸ್ಥೆಯ ಕಾರ್ಯದರ್ಶಿ ಡಾ.ಮೊಹಮ್ಮದ್ ಆರೀಫ್ ಮಸೂದ್, ಸ್ಥಳಿಯ ಕಾರ್ಪೊರೇಟರಾದ ಶಂಸುದ್ಧೀನ್ ಎಚ್.ಬಿ.ಟಿ, ಅಬೀದ್ ಜಲಿಹಾಲ್, ಎನ್.ಕೆ. ಅಬೂಬಕ್ಕರ್ ಮೊದಲಾದವರು ಉಪಸ್ಥಿತರಿದ್ದರು.