Connect with us

LATEST NEWS

ಕಾರ್ಕಳ: ಕಟ್ಟಡ ತೆರಿಗೆಯ ನೆಪದಲ್ಲಿ ಲಕ್ಷಾಂತರ ‌ರೂಪಾಯಿ ವಂಚನೆ- ಕಾಂಗ್ರೆಸ್ ‌ವಕ್ತಾರ ಶುಭದರಾವ್ ಆರೋಪ

Published

on

ಕಾರ್ಕಳ ಪುರಸಭಾ ವ್ಯಾಪ್ತಿಯ ಒಂದು ಸಂಸ್ಥೆಯ ಕಟ್ಟಡಗಳಿಗೆ ತೆರಿಗೆ ನಿಗದಿ ಮಾಡಲು‌ ಬಿಜೆಪಿ ಪುರಸಭಾ ಸದಸ್ಯರು ಲಕ್ಷಾಂತರ ರೂಪಾಯಿ ಹಣ ಪಡೆದು ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಪುರಸಭಾ ‌ಸದಸ್ಯ ಹಾಗೂ ಕಾಂಗ್ರೆಸ್ ‌ವಕ್ತಾರ ಶುಭದ ರಾವ್ ‌ ಆರೋಪಿಸಿದ್ದಾರೆ. 

ಕಾರ್ಕಳ: ಕಾರ್ಕಳ ಪುರಸಭಾ ವ್ಯಾಪ್ತಿಯ ಒಂದು ಸಂಸ್ಥೆಯ ಕಟ್ಟಡಗಳಿಗೆ ತೆರಿಗೆ ನಿಗದಿ ಮಾಡಲು‌ ಬಿಜೆಪಿ ಪುರಸಭಾ ಸದಸ್ಯರು ಲಕ್ಷಾಂತರ ರೂಪಾಯಿ ಹಣ ಪಡೆದು ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಪುರಸಭಾ ‌ಸದಸ್ಯ ಹಾಗೂ ಕಾಂಗ್ರೆಸ್ ‌ವಕ್ತಾರ ಶುಭದ ರಾವ್ ‌ ಆರೋಪಿಸಿದ್ದಾರೆ. 

ಕಾರ್ಕಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಒಂದು ಸಂಸ್ಥೆಯ ಕಟ್ಟಡಕ್ಕೆ ತೆರಿಗೆ ಕಟ್ಟುವ ವಿಷಯದಲ್ಲಿ ಸಂಸ್ಥೆಯ ಮುಖ್ಯಸ್ಥರಿಂದ ರೂಪಾಯಿ 10 ಲಕ್ಷ ಪಡೆದು ಪುರಸಭೆಗೆ ಕೇವಲ 4,25,671 ತೆರಿಗೆ ಕಟ್ಟಿ ಪುರಸಭೆಗೆ ಮತ್ತು ಸಂಸ್ಥೆಗೆ ದ್ರೋಹ ಮಾಡಲಾಗಿದೆ.

ಈ ಪ್ರಕರಣವು ಪುರಸಭೆಯ ದಾಖಲೆಗಳಿಂದ ಬಹಿರಂಗವಾಗಿದ್ದು, ಆ ದಾಖಲೆಯನ್ನು ಶಾಸಕರಿಗೆ ಪೋಸ್ಟ್ ಮೂಲಕ ಕಳುಹಿಸಿ ಕೊಡಲಾಗುವುದು.

ಸ್ವತಃ ಅವರೇ ತನಿಖೆ ನಡೆಸಿ ಸೂಕ್ತ ಕ್ರಮ ಜರುಗಿಸಿ ನೈತಿಕತೆ ಉಳಿಸಿಕೊಳ್ಳಲಿ.  ಅಂತಹ ಸದಸ್ಯರನ್ನು ಪಕ್ಷದಿಂದ ಉಚ್ಚಾಟಿಸಿ, ಸಂಸ್ಥೆಗೆ ಹಣ ಹಿಂತಿರುಗಿಸಲು ಸೂಕ್ತ ಕ್ರಮ ಜರುಗಿಸಬೇಕೆಂದು ‌ಆಗ್ರಹಿಸಿದ್ದಾರೆ.

ತಮ್ಮ ವಿಜಯೋತ್ಸವದ ಸಭೆಯಲ್ಲಿ ಪುರಸಭೆಯ ಲೈಸೆನ್ಸ್ ಗಾಗಿ ಇನ್ನೂರು ಮುನ್ನೂರು ರೂಪಾಯಿಗೆ ಕೈ ಚಾಚುವ ಚಿಲ್ಲರೆ ನಾಯಕ ಎಂದು ನನ್ನ ಮೇಲೆ ಆಧಾರ ರಹಿತ ಆರೋಪ ಮಾಡಿ ಅಪಮಾನ ಮಾಡಿದ್ದೀರಿ.

ಇಂದು ನಿಮ್ಮದೇ ಪಕ್ಷದ ಸದಸ್ಯರ ಚಿಲ್ಲರೆ ಕೆಲಸವನ್ನು ದಾಖಲೆ ಸಹಿತ ಬಹಿರಂಗ ಪಡಿಸಿದ್ದೇನೆ.

ಈ ಬಗ್ಗೆ ಸೂಕ್ತ ಕ್ರಮ ಜರುಗಿಸಿ. ಇಲ್ಲವಾದರೆ ಕ್ಷೇತ್ರದ ಜನ ನಿಮ್ಮನ್ನೆ ಚಿಲ್ಲರೆ ನಾಯಕ ಎಂದು ತಿಳಿದುಕೊಳ್ಳುವರು ಎಂದು  ಆಕ್ರೋಶ ವ್ಯಕ್ತಪಡಿಸಿದರು.

LATEST NEWS

ಭೀಕರ ಬ್ಲಾಸ್ಟ್: ಮೊಬೈಲ್ ಬಳಿಯಲ್ಲಿ ಡಿಯೋಡರೆಂಟ್ ಬಾಟಲಿಗಳನ್ನು ಇಡ್ಡುತ್ತೀರಾ ಹಾಗಾದ್ರೆ ಹುಷಾರ್..!!

Published

on

ಮಹಾರಾಷ್ಟ್ರ: ಮೂವರು ಮೊಬೈಲ್ ಫೋನ್ ಸ್ಫೋಟದಿಂದ ತೀವ್ರ ಸುಟ್ಟ ಗಾಯಗಳಿಂದ ಬಳಲುತ್ತಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿದ ಘಟನೆ ಮಹಾರಾಷ್ಟ್ರದ ನಾಸಿಕ್‌ನ ಸಿಡ್ಕೋ ಉತ್ತಮ್ ನಗರ ಪ್ರದೇಶದಲ್ಲಿ ಮಂಗಳವಾರದಂದು ನಡೆದಿದೆ.

ಮನೆಯೊಳಗೆ ಚಾರ್ಜ್ ಮಾಡಲು ಇಟ್ಟಿದ್ದ ಮೊಬೈಲ್ ಸ್ಫೋಟಗೊಂಡ ಕಾರಣ ಈ ಘಟನೆ ನಡೆದಿದೆ.

ಫೋನ್ ಪಕ್ಕದಲ್ಲಿ ಡಿಯೋಡರೆಂಟ್ ಕ್ಯಾನ್ ಸ್ಫೋಟದ ತೀವ್ರತೆ ಮತ್ತಷ್ಟು ಹೆಚ್ಚಿಸಿದೆ.

ಸ್ಫೋಟದ ತೀವ್ರತೆಯು ಎಷ್ಟು ದೊಡ್ಡದಾಗಿದೆ ಎಂದರೆ ಅದು ಸುತ್ತಮುತ್ತಲಿನ ಪ್ರತಿಯೊಂದು ಕಿಟಕಿಗಳನ್ನು ಒಡೆದು ಹಾಕಿತು.

ಸ್ಫೋಟದ ತೀವ್ರತೆಯಿಂದಾಗಿ ಹೊರಗೆ ನಿಲ್ಲಿಸಿದ್ದ ಕಾರಿನ ಗಾಜುಗಳು ಕೂಡ ಒಡೆದಿವೆ.

ಅಕ್ಕಪಕ್ಕದ ಮನೆಗಳ ಕಿಟಕಿ ಗಾಜುಗಳೂ ಒಡೆದಿರುವ ಬಗ್ಗೆ ವರದಿಯಾಗಿದೆ.

ಸ್ಫೋಟದ ವೇಳೆ ಮನೆಯಲ್ಲಿದ್ದ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅವರು ವೈದ್ಯರ ಮೇಲ್ವಿಚಾರಣೆಯಲ್ಲಿದ್ದಾರೆ ಹಾಗೂ ಪೊಲೀಸರ ತನಿಖೆ ಮುಂದುವರೆದಿದೆ.

 

Continue Reading

DAKSHINA KANNADA

ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ‘ಸ್ಕಿಲ್ ಅಪ್’ ಕಾರ್ಯಕ್ರಮ

Published

on

ಮಂಗಳೂರು: ಮಂಗಳೂರಿನ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಹಾಸ್ಪಿಟಲ್ ಮ್ಯಾನೇಜ್‌ಮೆಂಟ್ ವತಿಯಿಂದ ‘ಸ್ಕಿಲ್ ಅಪ್’ ಎಂಬ ಕಾರ್ಯಕ್ರಮ ಸೆ. 23 ರಂದು ನಡೆಯಿತು.

ಆರೋಗ್ಯ ಕ್ಷೇತ್ರದ ಕಾರ್ಯನಿರ್ವಾಹಕರಿಗೆ ಅಗತ್ಯವಾದ, ಆಡಳಿತ ಮತ್ತು ನಿರ್ವಹಣಾ ಕೌಶಲ್ಯಗಳನ್ನು ಒದಗಿಸುವುದು ಇದರ ಉದ್ದೇಶವಾಗಿತ್ತು.

ಮಂಗಳೂರಿನ ಸುಶಾಂತ್ ಕನ್ಸಲ್ಟೆನ್ಸಿಯ ಎಚ್. ಪ್ರಶಾಂತ್ ಮಿರಾಂಡ, ಎಂಡಿಪಿ ನಿರ್ದೇಶಕ ಪ್ರೊ.ವೆಂಕಟೇಶ್ ಅಮೀನ್ ಮತ್ತು ಮಂಗಳೂರಿನ ಶ್ರೀನಿವಾಸ್ ವಿಶ್ವವಿದ್ಯಾನಿಲಯದ ಡೀನ್ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.

ಕಾರ್ಯಕ್ರಮವನ್ನು ಎಚ್‌. ಪ್ರಶಾಂತ್ ಮಿರಾಂಡ, ಪ್ರೊ. ವೆಂಕಟೇಶ್ ಶೇಖರ್ ಅಮಿನ್, ಪ್ರೊ. ಡಾ. ಅಮುತಾ ಪಿ. ಮಾರ್ಲಾ, ಡಾ. ಶಾಶ್ವತ್ ಎಸ್., ಎ.ಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ನಿರ್ವಹಣೆಗಾರ ಪ್ರೊ. ವಿಜಯ ಪಿ., ಎ.ಜೆ ಇನ್‌ಸ್ಟಿಟ್ಯೂಟ್ ಆಫ್ ಹಾಸ್ಪಿಟಲ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ಮುಖ್ಯಾಧಿಕಾರಿ ಅವರು ಉದ್ಘಾಟಿಸಿದರು.

ಚೆನ್ನೈ ಅಪೋಲೊ ಪ್ರೋಟಾನ್ ಕ್ಯಾನ್ಸರ್ ಸೆಂಟರ್, ಆಥರ್ವ ಆರ್ಥೋ ಕೇರ್ ಮಂಗಳೂರು, ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು(ಸಿಎಂಸಿ) ವೆಲ್ಲೂರು, ಡಾಕ್ಟರ್ ಟಿಎಂಎ ಪೈ ಆಸ್ಪತ್ರೆ, ಉಡುಪಿ, ಫಾದರ್ ಮುಲ್ಲರ್ ಹೋಮಿಯೋಪತಿ ಕಾಲೇಜು ಮತ್ತು ಆಸ್ಪತ್ರೆ ದೇರೆಳಕಟ್ಟೆ, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಮಂಗಳೂರು, ಫಾದರ್ ಮುಲ್ಲರ್ ಆಸ್ಪತ್ರೆ ತುಂಬೆ, ಕಸ್ತೂರ್ಬಾ ಮೆಡಿಕಲ್ ಕಾಲೇಜು (ಕೆಎಂಸಿ) ಅತ್ತಾವರ, ಮಣಿಪಾಲ್ ಹೆಲ್ತ್ ಎಂಟರ್ಪ್ರೈಸ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರು, ರಾಜಗಿರಿ ಆಸ್ಪತ್ರೆ ಬೆಂಗಳೂರು, ರಾಮಯ್ಯ ಮೆಮೋರಿಯಲ್ ಆಸ್ಪತ್ರೆ ಬೆಂಗಳೂರು, ರಾಮಯ್ಯ ಯೂನಿವರ್ಸಿಟಿ ಆಫ್ ಆಪ್ಲೈಡ್ ಸೈನ್ಸೆಸ್ ಬೆಂಗಳೂರು, ಶ್ರೀ ರೇಂಗ ಆಸ್ಪತ್ರೆ ತಮಿಳುನಾಡು, ಶ್ರೀನಿವಾಸ್ ಆಸ್ಪತ್ರೆ ಮುಕ್ಕ, ಸೈಂಟ್‌ ಜಾನ್ಸ್ ಮೆಡಿಕಲ್ ಕಾಲೇಜು ಆಸ್ಪತ್ರೆ ಬೆಂಗಳೂರು, ಯೂನಿಟಿ ಆಸ್ಪತ್ರೆ ಮಂಗಳೂರು, ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ, ಮಂಗಳೂರು ಮತ್ತಿತರ ಸಂಸ್ಥೆಗಳಿಂದ ಆಧಿಕಅರಿ ಮತ್ತು ಸಿಬಂದಿ ಭಾಗವಹಿಸಿದ್ದರು. ಎ. ಜೆ. ಹ್ಯೂಮನ್ ರಿಸೋರ್ಸಸ್ ನ ಮ್ಯಾನೇಜರ್ ಶಶಧರ ಆಚಾರ್ಯ ಪ್ರಸ್ತಾವನೆಗೈದರು.

ಎ..ಜೆ ಇನ್‌ಸ್ಟಿಟ್ಯೂಟ್ ಆಫ್ ಹಾಸ್ಪಿಟಲ್ ಮ್ಯಾನೇಜ್‌ಮೆಂಟ್ ನ ಸಹಾಯಕ ಪ್ರಾಧ್ಯಾಪಕಿ ಪ್ರೀಮ್ ರೋಸ್ ವಿಷ್ಣು ಸ್ವಾಗತಿಸಿದರು.

Continue Reading

LATEST NEWS

ಕಟ್ಟಡ ನಿರ್ಮಾಣ ಸಾಮಾಗ್ರಿ ಸಾಗಾಟ ಸ್ಥಗಿತ-ಸಮಸ್ಯೆ ಬಗೆಹರಿಸಲು ಕೊರಗಜ್ಜನ ಮೊರೆ

Published

on

ಉಡುಪಿ: ಉಡುಪಿ ಜಿಲ್ಲಾಡಳಿತ ಮತ್ತು ಸರಕಾರದ ನೀತಿಗಳನ್ನು ಖಂಡಿಸಿ ಲಾರಿ, ಟೆಂಪೋ ಚಾಲಕ, ಮಾಲಕರು ಕಟ್ಟಡ ಸಾಮಾಗ್ರಿ ಸಾಗಾಟವನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟವಾದಿ ಮುಷ್ಕರ ಕೈಗೊಂಡಿದ್ದಾರೆ.

ಈ ನಿಟ್ಟಿನಲ್ಲಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಗಳಲ್ಲಿ ಲಾರಿಗಳನ್ನು ಪಾರ್ಕಿಂಗ್ ಮಾಡಲಾಗಿದೆ.

ಉದ್ಯಾವರ, ಕಟಪಾಡಿ, ಬ್ರಹ್ಮಾವರ, ಕೋಟ ಸಾಸ್ತಾನ, ಕುಂದಾಪುರ, ಬೈಂದೂರು ಭಾಗದಲ್ಲಿ ರಸ್ತೆ ಬದಿ ಲಾರಿ, ಟೆಂಪೋ ಸಾಲುಗಟ್ಟಿ ನಿಂತಿರುವ ದೃಶ್ಯ ಕಂಡು ಬಂದಿದೆ.

ಒನ್ ಸ್ಟೇಟ್ ಒನ್ ಜಿಪಿಎಸ್, ಲಾರಿಗಳ ಮೇಲೆ ಅಕ್ರಮ ಸಾಗಾಟ ನೆಪದಲ್ಲಿ ಕೇಸ್, ಪರವಾನಿಗೆ ಅವ್ಯವಸ್ಥೆ ಮತ್ತು ಜಿಲ್ಲಾಡಳಿತದ ಏಕಾಏಕಿ ಹೊಸ ನಿಯಮಗಳ ಜಾರಿಯಿಂದ ಸಂಕಷ್ಟಕ್ಕೆ ಒಳಗಾಗಿರುವ ಲಾರಿ ಮಾಲಕರು ಸಮಸ್ಯೆ ಬಗೆಹರಿಯುವವರೆಗೆ ಮುಷ್ಕರ ಮುಂದುವರೆಯಲಿದೆ.

ಈ ನಡುವೆ ಸಮಸ್ಯೆ ಬಗೆಹರಿಸಬೇಕೆಂದು ಕೋರಿ ಲಾರಿ ಮಾಲಿಕರು ಕೊರಗಜ್ಜನ ಮೊರೆ ಹೋಗಿದ್ದಾರೆ.

ಶ್ರೀ ಕ್ಷೇತ್ರ ಪೇಟೆಬೆಟ್ಟು ಶ್ರೀ ಭಗವಾನ್ ಬಬ್ಬು ಸ್ವಾಮಿ ದೇವಸ್ಥಾನ ಮತ್ತು ಕೊರಗಜ್ಜ ಕ್ಷೇತ್ರ ಕಟಪಾಡಿಯಲ್ಲಿ ಲಾರಿ ಚಾಲಕರು ಮತ್ತು ಮಾಲಕರು ತಮಗೆ ಬಂದಿರುವ ಸಂಕಷ್ಟ ಬಗೆಹರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸರಿಪಡಿಸುವ ಬುದ್ದಿ ಕೊಡಲಿ ಎಂದು ಪ್ರಾರ್ಥನೆ ಮಾಡಿದರು.

Continue Reading

LATEST NEWS

Trending