‘ಸಾದಿ ಓಲಕ್ಕ’ ಎಂದು ಕೇಳಿ ಬಂಟ್ವಾಳದಲ್ಲಿ ಕರಿಮಣಿ ಎಗರಿಸಿದ ಭೂಪ..!

ಬಂಟ್ವಾಳ: ಬೈಕ್ ನಲ್ಲಿ ಬಂದ ಇಬ್ಬರು ನಡೆದುಕೊಂಡು ಹೋಗುತ್ತಿದ್ದ ಮಹಿಳೆಯನ್ನು ನಿಲ್ಲಿಸಿ ದಾರಿ ಕೇಳಿ ಬಳಿಕ ಮಹಿಳೆ ವಿಳಾಸ ಹೇಳುವ ಸಂದರ್ಭ ಕರಿಮಣಿಸರವನ್ನು ಸೆಳೆದು ಪರಾರಿಯಾದ ಘಟನೆ ಬಂಟ್ವಾಳ ತಾಲೂಕಿನ ಸಜಿಪಮೂಡ ಗ್ರಾಮದ ಮಾರ್ನಬೈಲು ಸಮೀಪ ನಡೆದಿದೆ. ಮಾರ್ನಬೈಲು ಬೊಳ್ಳಾಯಿಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವತ್ಸಲಾ ನಾರಾಯಣ ಎಂಬವರ ಬಳಿ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು ಈ ಕೃತ್ಯವೆಸಗಿದ್ದು, ಸುಮಾರು 12 ಗ್ರಾಂ ತೂಕದ ಕರಿಮಣಿ ಸರ ಕದ್ದೊಯ್ದಿದ್ದಾರೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.