Connect with us

    LATEST NEWS

    ಹೊಳೆ ಹರಿವಿನ ದಿಕ್ಕನ್ನೇ ಬದಲಿಸಿದ ಮಹಾಮಳೆ – ಕಾಪು ಲೈಟ್ ಹೌಸ್ ನ ಸಂಪರ್ಕ ವ್ಯವಸ್ಥೆ ಕಡಿತ

    Published

    on

    ಉಡುಪಿ : ಉಡುಪಿಯಲ್ಲಿ ಸುರಿದ ಭಾರೀ ಮಳೆಗೆ ಕಾಪು ಲೈಟ್ ಹೌಸ್ ಬಳಿಯ ನದಿ ಪಾತ್ರದಿಂದ ನೆರೆ ನೀರು ಸಮುದ್ರ ಸೇರುತ್ತಿದ್ದು ವಿಶ್ವ ಪ್ರಸಿದ್ದ ಲೈಟ್ ಹೌಸ್‌ನ್ನು ಸಂಪರ್ಕಿಸುವ ಕಾಲು ದಾರಿಯ ಮಾರ್ಗವು ಸಂಪೂರ್ಣ ಮಳೆ ನೀರಿನಲ್ಲಿ ಕೊಚ್ಚಿ ಹೋಗಿದೆ.


    ಕಾಪು ಬೀಚ್‌ನಲ್ಲಿ ಬ್ರಿಟೀಷರ ಕಾಲದಲ್ಲಿ ನಿರ್ಮಾಣಗೊಂಡಿರುವ ಲೈಟ್ ಹೌಸ್‌ನ ಹಿಂಭಾಗದಲ್ಲಿ ಸಮುದ್ರ ಮತ್ತು ನದಿ ನೀರಿನ ಸಂಗಮ ಪ್ರದೇಶವಿದ್ದು, ಮಳೆಯಿಂದಾಗಿ ರವಿವಾರ ಸಂಜೆಯ ವೇಳೆ ನದಿ ಪಾತ್ರವೇ ಬದಲಾಗಿದೆ. ನದಿ ಪಾತ್ರ ಬದಲಾಗಿ ಹರಿದು ಬಂದು ನೀರು ಲೈಟ್ ಹೌಸ್‌ನ ಮುಂದಿನಿಂದಲೇ ಸಮುದ್ರವನ್ನು ಸೇರುತ್ತಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.


    ಕಾಪು ಪಡು ಗ್ರಾಮ, ಗರಡಿ ಪ್ರದೇಶ, ಸುಬ್ಬಯ್ಯ ತೋಟ, ಬೈರು ಗುತ್ತು ತೋಟ ಸೇರಿದಂತೆ ಎಲ್ಲೆಡೆ ಸಂಗ್ರಹವಾಗಿ, ನದಿಯ ಮೂಲಕ ರಭಸವಾಗಿ ಹರಿದು ಬರುತ್ತಿರುವ ಮಳೆ ನೀರು ಲೈಟ್ ಹೌಸ್‌ನ ಮುಂಭಾಗದಿಂದಲೇ ಸಮುದ್ರ ಸೇರುತ್ತಿರುವುದರಿಂದ ಕಾಪು ಲೈಟ್ ಹೌಸ್‌ಗೆ ಹೋಗುವ ಸಂಪರ್ಕವೇ ಕಡಿತಕ್ಕೊಳಗಾಗಿದೆ.

    ಮಳೆ ನೀರಿನ ಹರಿವು ಇದೇ ಪ್ರಮಾಣದಲ್ಲಿದ್ದರೆ ಲೈಟ್ ಹೌಸ್‌ನ್ನು ಏರುವ ಮೆಟ್ಟಿಲುಗಳಿಗೂ ಹಾನಿಯ ಭೀತಿ ಎದುರಾಗಿದೆ.
    ಕಾಪು ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವುಡ, ಪುರಸಭಾ ಸದಸ್ಯರು ಮತ್ತು ಲೈಟ್ ಹೌಸ್ ಡಿಪಾರ್ಟ್‌ಮೆಂಟ್‌ನ ಸಿಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೋಮವಾರ ಮುಂಜಾನೆಯಿಂದಲೇ ಇಲ್ಲಿನ ಹಾನಿಯಯನ್ನು ನೋಡಲು ಜನ ಆಗಮಿಸಲಾರಂಭಿಸಿದ್ದಾರೆ.

    LATEST NEWS

    ಮೈಕ್ ಪರ್ಮಿಷನ್ ವಿಚಾರವಾಗಿ ಉಡುಪಿಯ ಯಕ್ಷಗಾನದಲ್ಲಿ ಹೈಡ್ರಾಮ

    Published

    on

    ಉಡುಪಿ : ಯಕ್ಷಗಾನ ಎಂಬುವುದು ಕರ್ನಾಟಕದ ಪ್ರಸಿದ್ಧ ಆರಾಧನಾ ಕಲೆಗಳಲ್ಲಿ ಒಂದು. ಆದರೆ ಈಗ ಅದಕ್ಕೆ ಬ್ರೇಕ್‌ ಕಾಟ ಶುರುವಾಗಿದೆ. ‘ಮೈಕ್‌ಗೆ ಅನುಮತಿ ಪಡೆದಿಲ್ಲ’ ಎಂಬ ಕಾರಣಕ್ಕೆ ಕಾರ್ಕಳ ತಾಲೂಕಿನ ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿ ಶಿರ್ಲಾಲುವಿನಲ್ಲಿ ಘಟನೆ ನಡೆದಿದೆ. ಮುಂಡ್ಲಿಯ ಈಶ್ವರ ಯಕ್ಷಗಾನ ಮಂಡಳಿಯಿಂದ ಆಯೋಜನೆಗೊಂಡಿದ್ದ ಪ್ರದರ್ಶನದಲ್ಲಿ ಪೊಲೀಸರು ಈ ರೂಲ್ಸ್‌ ಜಾರಿಗೆ ಮುಂದಾಗಿದ್ದಾರೆ.

    ಅಜೆಕಾರು ಉಪನಿರೀಕ್ಷಕ ಶುಭಕರ್‌ ಅವರಿಂದ ರಾತ್ರಿ 10ರ ನಂತರ ಯಕ್ಷಗಾನ ಪ್ರದರ್ಶನಕ್ಕೆ ಆಕ್ಷೇಪ ವ್ಯಕ್ತವಾಗಿದೆ. 10 ಗಂಟೆ ನಂತರ ಧ್ವನಿವರ್ಧಕ ಬಳಸಿದ್ದಕ್ಕೆ ಯಕ್ಷಗಾನ ಪ್ರದರ್ಶನಕ್ಕೆ ತಡೆಯೊಡ್ಡಲಾಗಿದೆ. ಅಲ್ಲದೆ, ಆಯೋಜಕರನ್ನು ಅರೆಸ್ಟ್ ಮಾಡಲು ಕೂಡ ಪೊಲೀಸರು ಮುಂದಾಗಿದ್ದಾರೆ. ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗಲೇ ಪ್ರದರ್ಶನಕ್ಕೆ ತಡೆಯೊಡ್ಡಿದ್ದಾರೆ. ಈ ವೇಳೆ ಕಿಡಿಕಾರಿದ ಗ್ರಾಮಸ್ಥರು, ಇಡೀ ಗ್ರಾಮದ ಜನರನ್ನು ಅರೆಸ್ಟ್‌ ಮಾಡಿ ಎಂದು ಹೈಡ್ರಾಮಾ ನಡೆಸಿದ್ದಾರೆ. ಕಾರ್ಯಕ್ರಮ ನಿಲ್ಲಿಸದಿದ್ದರೆ ಯಕ್ಷಗಾನ ಮಂಡಳಿ ಅಧ್ಯಕ್ಷನನ್ನು ಬಂಧಿಸುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ ವೇಳೆ ಗ್ರಾಮಸ್ಥರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ.

    ಎಫ್ಐಆರ್ ತೋರಿಸುವಂತೆ ದೂರು ದಾಖಲಾದ ಬಗ್ಗೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಗ್ರಾಮಸ್ಥರ ಆಕ್ರೋಶ ವ್ಯಕ್ತವಾದ ಹಿನ್ನೆಲೆ ಪೊಲೀಸರು ಸ್ಥಳದಿಂದ ತೆರಳಿದ್ದಾರೆ. ಜನವರಿ 10 ರಂದು ಪರವಾನಿಗೆಗೆ ಪಿಡಿಒ ಬಳಿ ಆಯೋಜಕರು ತೆರಳಿದ್ದು ವೇಳೆ ಮೂರು ದಿನಗಳ ರಜೆಯ ಕಾರಣಕ್ಕೆ ಅನುಮತಿ ದೊರಕಿರಲಿಲ್ಲ. ಜನವರಿ 13ರಂದು ಅನುಮತಿಗಾಗಿ ಆಯೋಜಕರು ಅಜೆಕಾರು ಠಾಣೆಗೆ ಹೋಗಿದ್ದರು.  ಪಂಚಾಯತ್ ಅನುಮತಿ ತರುವಂತೆ ಪೊಲೀಸರ ತಾಕಿತು ಮಾಡಿದ್ದಾರೆ. ಈ ಘಟನೆಗೆ ಸಂಬಧಪಟ್ಟಂತೆ ಯಕ್ಷಗಾನ ಮಂಡಳಿ ಅಧ್ಯಕ್ಷ ಸದಾನಂದ ಶೆಟ್ಟಿ ವಿರುದ್ಧ ಪ್ರಕರಣ ದಾಖಲಾಗಿದೆ. ಮಹಾಲಕ್ಷ್ಮಿ ಸೌಂಡ್ಸ್ ಮುಖ್ಯಸ್ಥ ಅಪ್ಪು ವಿರುದ್ಧವೂ ಕೇಸ್‌ ಹಾಕಲಾಗಿದೆ. ಸುಪ್ರೀಂ ಕೋರ್ಟ್ ಆದೇಶದ ಕಟ್ಟುನಿಟ್ಟಿನ ಕ್ರಮಕ್ಕೆ ಜಾರಿಗೆ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಡಾ .ಅರುಣ್ ಮುಂದಾಗಿದ್ದಾರೆ. ಆದೇಶ ಪಾಲಿಸದಿದ್ದರೆ ಆಯಾ ಠಾಣಾಧಿಕಾರಿ ಮೇಲೆ ಕ್ರಮ ಕೈಗೊಳ್ಳುವುದಾಗಿ ಎಸ್‌ಪಿ ಎಚ್ಚರಿಸಿದ್ದಾರೆ. ಇದರಿಂದಾಗಿ ಪೊಲೀಸರಿಗೆ ಯಕ್ಷಗಾನದ ವಿರುದ್ಧ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ.

    Continue Reading

    LATEST NEWS

    ಪೊಲೀಸ್ ವಾಹನದಲ್ಲಿ ಡ್ರೈವಿಂಗ್ ಕಲಿಯುತ್ತಿದ್ದ ಸಬ್ ಇನ್ಸ್ ಪೆಕ್ಟರ್: ತಪ್ಪಿದ ಅನಾಹುತ !

    Published

    on

    ಮಂಗಳೂರು/ಪಾಟ್ನಾ : ಪೊಲೀಸ್ ವಾಹನದಲ್ಲಿ ಸಬ್ ಇನ್ಸ್ ಪೆಕ್ಟರ್ ಒಬ್ಬರು ಡ್ರೈವಿಂಗ್ ಕಳಿಯಲು ಹೋಗಿ ಅವಾಂತರ ಸೃಷ್ಟಿಸಿದ್ದಾರೆ. ಈ ಘಟನೆ ನಡೆದಿದ್ದು, ಬಿಹಾರದ ವೈಶಾಲಿಯ ಹತ್ಸರ್ ಗಂಜ್ ನಲ್ಲಿ.

    ಅಷ್ಟಕ್ಕೂ, ಹತ್ಸರ್ ಗಂಜ್ ನ ಒಪಿ ಪೊಲೀಸ್ ಠಾಣೆಯ ವಾಹನದಲ್ಲಿ ಸಬ್ ಇನ್ಸ್ ಪೆಕ್ಟರ್ ಡ್ರೈವಿಂಗ್ ಕಲಿಯುತ್ತಿದ್ದರು. ಅದು ಸರ್ಕಾರಿ ವಾಹನವೆಂದು ತಿಳಿಯದೇ, ಅಡ್ಡದಿಡ್ಡಿಯಾಗಿ ಚಲಾಯಿಸಿದ್ದಾರೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಭಾನುವಾರ (ಜನವರಿ 12) ರಾತ್ರಿ ಈ ಘಟನೆ ನಡೆದಿದ್ದು, ವೇಗವಾಗಿ ಬಂದ ಕಾರು ನಿಯಂತ್ರಣ ತಪ್ಪಿ ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದಿದೆ. ನಂತರ ಸುಮಾರು ದೂರದವರೆಗೆ ಎಳೆದೊಯ್ದಿದ್ದು ವಿಡಿಯೋದಲ್ಲಿ ಸೇರೆಯಾಗಿದೆ. ಆದರೂ, ಸಬ್ ಇನ್ಸ್ ಪೆಕ್ಟರ್ ಕಾರು ನಿಲ್ಲಿಸದೇ, ತಾನೂ ಪೊಲೀಸ್ ಅಧಿಕಾರಿ ಅನ್ನೋದನ್ನು ಮರೆತು ಹೋಗಿದ್ದಾನೆ. ಆ ಮೇಲೆ ರಸ್ತೆಯ ಇನ್ನೊಂದು ಬದಿಯಲ್ಲಿದ್ದ ಬಿರಿಯಾನಿ ಅಂಗಡಿಗೆ ಡಿಕ್ಕಿ ಹೊಡೆದಿದ್ದಾನೆ.

    ಇದರಿಂದ ವಾಹನದಲ್ಲಿದ್ದ ಪೊಲೀಸರು ಗಾಬರಿಯಾಗಿ ಓಡಲು ಯತ್ನಿಸಿದರು. ಆದರೆ ಸ್ಥಳದಲ್ಲಿದ್ದ ಜನರು ಅವರನ್ನು ಸುತ್ತುವರಿದು ವಾಹನದ ಕೀಗಳನ್ನು ಕಿತ್ತುಕೊಂಡರು. ಸಬ್ ಇನ್ಸ್ ಪೆಕ್ಟರ್ ನನ್ನು ಹಿಡಿದು ನಷ್ಟಕ್ಕೆ ಪರಿಹಾರ ಕೊಡುವವರೆಗೂ ನಿಮ್ಮನ್ನು ಇಲ್ಲಿಂದ ಹೋಗುವುದಕ್ಕೆ ಬೀಡುವುದಿಲ್ಲ ಎಂದು ಪ್ರತಿಭಟನೆಗಿಳಿದರು.

    ಇದನ್ನೂ ಓದಿ: ಸರಿಗಮ ವಿಜಿ ಹೆಸರಿಗೆ ‘ಸರಿಗಮ’ ಸೇರಿಕೊಳ್ಳಲು ಆ ಒಂದು ನಾಟಕ ಕಾರಣ !

    ಗಾಯಾಳುಗಳನ್ನು ಸ್ಥಳೀಯರು ಚಿಕಿತ್ಸೆಗಾಗಿ ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳೀಯರು ಪೊಲೀಸರ ನಿರ್ಲಕ್ಷ್ಯದ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ. ಘಟನೆಯ ಬಗ್ಗೆ, ಸಿಸಿಟಿವಿ ದೃಶ್ಯಾವಳಿಯಲ್ಲಿ ಯುವಕನನ್ನು ವಾಹನದ ಕೆಳಗೆ ಎಳೆದುಕೊಂಡು ಹೋಗುವುದು ಮತ್ತು ಕಾರು ಬಿರಿಯಾನಿ ಅಂಗಡಿಗೆ ಡಿಕ್ಕಿ ಹೊಡೆಯುವುದನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ.

    ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರ ವಿರುದ್ದ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವರದಿಯಾಗಿದೆ.

    Continue Reading

    LATEST NEWS

    ಇದು ನಾಗಾ ಸಾಧುಗಳ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿ : ಭಾಗ – 1

    Published

    on

    ಪ್ರಯಾಗ್ ರಾಜ್‌ನಲ್ಲಿ ಆರಂಭವಾಗಿರುವ ಮಹಾಕುಂಭ ಮೇಳಕ್ಕೆ ಲೆಕ್ಕವಿಲ್ಲದಷ್ಟು ನಾಗಾಸಾಧುಗಳ ಆಗಮನವಾಗಿದೆ. ಕುಂಭ ಮೇಳದಲ್ಲಿ ಮಾತ್ರ ಕಾಣಿಸಿಕೊಳ್ಳುವ ಈ ನಾಗಾ ಸಾಧುಗಳು ಇದುವರೆಗೆ ಎಲ್ಲಿದ್ರು ? ಇವರು ನಾಗಾಸಾಧುಗಳಾಗಿ ಬದಲಾಗಿದ್ದು ಹೇಗೆ ? ನಾಗಾಸಾಧುಗಳಲ್ಲಿ ಎಷ್ಟು ವಿಧವಾದ ಗುಂಪು ಇದೆ ಮತ್ತು ಅವರು ನಾಲ್ಕು ಶಾಹಿ ಸ್ನಾನದಲ್ಲಿ ಎಲ್ಲೆಲ್ಲಿ ತೀರ್ಥಸ್ನಾನ ಮಾಡ್ತಾರೆ ಅನ್ನೋ ಕುರಿತು ಮಾಹಿತಿ ಇಲ್ಲಿದೆ.

    ನಾಗಾ ಸಾಧುಗಳು ಆಗೋದು ಹೇಗೆ ?

    ಯಾರಲ್ಲಿ ತನ್ನನ್ನು ತಾನೇ ಕಳೆದುಕೊಳ್ಳಬೇಕು ಎಂಬ ಆಲೋಚನೆ ಉಂಟಾಗುತ್ತದೆಯೋ ಮತ್ತು ತನ್ನನ್ನು ತಾನು ದೇವರ ಜೊತೆ ಕಲ್ಪಿಸಿಕೊಳ್ಳುತ್ತಾನೋ ಅಂತವರು ನಾಗಾಸಾಧುಗಳಾಗುತ್ತಾರೆ. ಹಾಗಂತ ನಾಗಾ ಸಾಧು ಆಗಬೇಕು ಅಂದರೆ ಅದಕ್ಕೆ ಕಠಿಣ ವೃತಾಚರಣೆಯ ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಇಂತಹ ಪರೀಕ್ಷೆಯಲ್ಲಿ ಪಾಸ್ ಆದ್ರೆ ಮಾತ್ರ ಅಂತಹ ವ್ಯಕ್ತಿಗೆ ನಾಗಾಸಾಧುಗಳಾಗಿ ದೀಕ್ಷೆ ಪಡೆಯಲು ಸಾಧ್ಯ.

     

    ನಾಗಾ ಸಾಧು ಎಂಬ ಪರಂಪರೆ ಆರಂಭ ಯಾವಾಗ ?

    ನಾಗ ಎಂಬ ಪದ ಸಂಸ್ಕೃತದ ನಗ್ ಎಂಬ ಪದದಿಂದ ಬಂದಿದ್ದು, ಸಂಸ್ಕತದಲ್ಲಿ ನಗ್ ಅಂದರೆ ಪರ್ವತ ಎಂದು ಅರ್ಥ. ಪರ್ವತ ಅಥವಾ ಪರ್ವತದ ಗುಹೆಯಲ್ಲಿ ವಾಸವಾಗುವ ಸನ್ಯಾಸಿಗಳೇ ಈ ನಾಗಾ ಸಾಧುಗಳು. 9 ನೇ ಶತಮಾನದಲ್ಲಿ ಆದಿ ಶಂಕರಾಚಾರ್ಯ ಅವರಿಂದ ಈ ಪರಂಪರೆ ಆರಂಭವಾಯಿತು ಅನ್ನೋ ಐತಿಹ್ಯ ಇದೆ. ಶಂಕರಾಚಾರ್ಯರು ಸ್ಥಾಪಿಸಿದ ದಶನಾಮಿ ಸಂಪ್ರದಾಯದ ಭಾಗವೇ ಈ ನಾಗಾಸಾಧುಗಳು. ದಶನಾಮಿ ಎಂಬುವುದು ಒಂದು ಸಂನ್ಯಾಸ ಮಠ ಪಂಕ್ತಿಯಾಗಿದ್ದು, ಇದು ಹತ್ತು ಉಪಶಾಖೆಯನ್ನು ಹೊಂದಿದೆ. ಇದರಲ್ಲೇ ನಾಗಸಾಧುಗಳು ಸಾಮಾನ್ಯವಾಗಿ ಗಿರಿ , ಪುರಿ, ಮತ್ತು ಭಾರತೀ ಎಂಬ ಉಪಶಾಖೆಯಲ್ಲಿ ಸೇರಿದ ಸಂನ್ಯಾಸಿಗಳಾಗಿದ್ದಾರೆ.

    ನಾಗ ಸಾಧುಗಳಲ್ಲಿ ಎರಡು ವಿಧ ಮೂರು ಹಂತದ ಸಾಧಕರು..!

    ನಾಗ ಸಾಧುಗಳಲ್ಲಿ ಎಡರು ವಿಭಾಗವಿದ್ದು, ಒಂದು ಶಸ್ತ್ರಧಾರಿ ನಾಗ ಸಾಧು ಎಂದು ಕರೆಯಲ್ಪಡುತ್ತಿದ್ದು ಇವರು ಯುದ್ಧಕಲೆಗಳಲ್ಲಿ ಪರಿಣಿತಿಯನ್ನು ಪಡೆದುಕೊಂಡು ಕೈನಲ್ಲಿ ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ತಿರುಗಾಡುತ್ತಿರುತ್ತಾರೆ. ಮತ್ತೊಂದು ವಿಭಾಗ ಶಾಸ್ತ್ರಧಾರಿ ನಾಗ ಸಾಧು ಎಂದು ಕರೆಯಲ್ಪಡುತ್ತಿದ್ದು ಇವರು ಶಾಸ್ತ್ರಗಳ ಅಧ್ಯಯನ ಮಾಡಿಕೊಂಡು ಜ್ಞಾನದ ಕೋಲನ್ನು ಹಿಡಿದುಕೊಂಡು ತಿರುಗಾಡುತ್ತಾರೆ. ಈ ಶಸ್ತ್ರಧಾರಿ ನಾಗಾಸಾಧುಗಳನ್ನು ಮೊದಲು ಪರಿಚಯಿಸಿದ್ದು ಶೃಂಗೇರಿ ಮಠ ಎಂಬ ಇತಿಹಾಸ ಇದೆಯಾದ್ರೂ ಅದಕ್ಕೆ ಸರಿಯಾದ ಪುರಾವೆಗಳು ಸಿಕ್ಕಿಲ್ಲ. ಆರಂಭದಲ್ಲಿ ಶಸ್ತ್ರನಾಗ ತಂಡದಲ್ಲಿ ಕ್ಷತ್ರಿಯರನ್ನು ಮಾತ್ರ ಸೇರಿಸಲಾಗುತ್ತಿದ್ದು, ಬಳಿಕ ಅದರಿಂದ ಜಾತಿಬೇದವನ್ನು ಅಳಿಸಲಾಗಿತ್ತು ಎಂದು ಹೇಳಲಾಗುತ್ತದೆ.

    Continue Reading

    LATEST NEWS

    Trending