LATEST NEWS
ಕಾಪು : ಪರಿಸರ ಮಾಲಿನ್ಯದ ಆರೋಪ; ಫಿಶ್ ಫ್ಯಾಕ್ಟರಿಗೆ ಬೀಗ
Published
1 month agoon
By
NEWS DESK4ಕಾಪು : ಪರಿಸರ ಮಾಲಿನ್ಯ ಉಂಟು ಮಾಡುತ್ತಿದ್ದ ಉಡುಪಿ ಜಿಲ್ಲೆಯ ಕಾಪು ತಾಲ್ಲೂಕಿನ ಪಡು ಗ್ರಾಮದ ತವಕ್ಕಲ್ ಫಿಶ್ ಫ್ಯಾಕ್ಟರಿಗೆ ಬೀಗ ಜಡಿಯಲಾಗಿದೆ. ಹಲವು ವರ್ಷಗಳಿಂದ ಪರಿಸರ ಮಾಲಿನ್ಯದ ಆರೋಪ ಈ ಕಾರ್ಖಾನೆ ವಿರುದ್ಧ ಕೇಳಿ ಬರುತ್ತಿತ್ತು. ಸಾರ್ವನಿಕರ ವ್ಯಾಪಕ ದೂರಿನ ಹಿನ್ನೆಲೆಯಲ್ಲಿ ಕಾರ್ಖಾನೆಯನ್ನು ತಹಶೀಲ್ದಾರ್ ಪ್ರತಿಭಾ ಅವರು ಮುಟ್ಟುಗೋಲು ಹಾಕಿದ್ದಾರೆ.
ಪರಿಸರ ಮಾಲಿನ್ಯ ತಡೆಗಟ್ಟಲು ಕೈಗೊಳ್ಳಬೇಕಾದ ಯಾವುದೇ ಕ್ರಮಗಳನ್ನು ಈ ಕಾರ್ಖಾನೆ ಕೈಗೊಂಡಿಲ್ಲ. ಅತಿಯಾದ ದುರ್ನಾತ ಬೀರಿ ಗ್ರಾಮಸ್ಥರಿಗೆ ನಿತ್ಯ ನರಕಯಾತನೆ ಆಗಿತ್ತು. ಈ ಹಿನ್ನೆಲೆಯಲ್ಲಿ ಪರಿಸರ ಇಲಾಖೆಯಿಂದ ಮುಟ್ಟುಗೋಲು ಹಾಕಿಕೊಳ್ಳಲು ಶಿಫಾರಸು ಮಾಡಲಾಗಿತ್ತು. ಕಾರ್ಖಾನೆಯನ್ನು ಪರಿಶೀಲಿಸಿ ಅವ್ಯವಸ್ಥೆಯನ್ನು ಮನಗಂಡ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ತವಕ್ಕಲ್ ಫಿಶ್ ಫ್ಯಾಕ್ಟರಿಯನ್ನು ಮುಟ್ಟುಗೋಲು ಹಾಕಲು ಆದೇಶ ಮಾಡಿದ್ದರು.
ಇದನ್ನೂ ಓದಿ : VIDEO : ಕಾಂತಾರ ‘ಪಂಜುರ್ಲಿ’ ದೈವದ ಅಣಕು ಪ್ರದರ್ಶನ; ಜಮೀರ್ ಅಹ್ಮದ್ ಕೈ ಹಿಡಿದು ನರ್ತಿಸಿದ ವೇಷಧಾರಿಗಳು
ಈ ಹಿನ್ನೆಲೆಯಲ್ಲಿ ಪರಿಸರ ವಿರೋಧಿಯಾಗಿ ಕಾರ್ಯಾಚರಿಸುತ್ತಿರುವ ಕಾರ್ಖಾನೆಗಳಿಗೆ ಎಚ್ಚರಿಕೆ ನೀಡಿದ ತಹಶೀಲ್ದಾರ್ ಪ್ರತಿಭಾ ಇದೀಗ ಫ್ಯಾಕ್ಟರಿಗೆ ಬೀಗ ಜಡಿದಿದ್ದಾರೆ. ಈ ಮೂಲಕ ಇದೀಗ ಪುರಸಭಾ ವ್ಯಾಪ್ತಿಯ ಪಡು ಗ್ರಾಮದ ಜನತೆ ನಿರಾಳರಾಗಿದ್ದಾರೆ.
LATEST NEWS
ಪೊಲೀಸ್ ವಾಹನದಲ್ಲಿ ಡ್ರೈವಿಂಗ್ ಕಲಿಯುತ್ತಿದ್ದ ಸಬ್ ಇನ್ಸ್ ಪೆಕ್ಟರ್: ತಪ್ಪಿದ ಅನಾಹುತ !
Published
16 minutes agoon
15/01/2025By
NEWS DESK3ಮಂಗಳೂರು/ಪಾಟ್ನಾ : ಪೊಲೀಸ್ ವಾಹನದಲ್ಲಿ ಸಬ್ ಇನ್ಸ್ ಪೆಕ್ಟರ್ ಒಬ್ಬರು ಡ್ರೈವಿಂಗ್ ಕಳಿಯಲು ಹೋಗಿ ಅವಾಂತರ ಸೃಷ್ಟಿಸಿದ್ದಾರೆ. ಈ ಘಟನೆ ನಡೆದಿದ್ದು, ಬಿಹಾರದ ವೈಶಾಲಿಯ ಹತ್ಸರ್ ಗಂಜ್ ನಲ್ಲಿ.
ಅಷ್ಟಕ್ಕೂ, ಹತ್ಸರ್ ಗಂಜ್ ನ ಒಪಿ ಪೊಲೀಸ್ ಠಾಣೆಯ ವಾಹನದಲ್ಲಿ ಸಬ್ ಇನ್ಸ್ ಪೆಕ್ಟರ್ ಡ್ರೈವಿಂಗ್ ಕಲಿಯುತ್ತಿದ್ದರು. ಅದು ಸರ್ಕಾರಿ ವಾಹನವೆಂದು ತಿಳಿಯದೇ, ಅಡ್ಡದಿಡ್ಡಿಯಾಗಿ ಚಲಾಯಿಸಿದ್ದಾರೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಭಾನುವಾರ (ಜನವರಿ 12) ರಾತ್ರಿ ಈ ಘಟನೆ ನಡೆದಿದ್ದು, ವೇಗವಾಗಿ ಬಂದ ಕಾರು ನಿಯಂತ್ರಣ ತಪ್ಪಿ ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದಿದೆ. ನಂತರ ಸುಮಾರು ದೂರದವರೆಗೆ ಎಳೆದೊಯ್ದಿದ್ದು ವಿಡಿಯೋದಲ್ಲಿ ಸೇರೆಯಾಗಿದೆ. ಆದರೂ, ಸಬ್ ಇನ್ಸ್ ಪೆಕ್ಟರ್ ಕಾರು ನಿಲ್ಲಿಸದೇ, ತಾನೂ ಪೊಲೀಸ್ ಅಧಿಕಾರಿ ಅನ್ನೋದನ್ನು ಮರೆತು ಹೋಗಿದ್ದಾನೆ. ಆ ಮೇಲೆ ರಸ್ತೆಯ ಇನ್ನೊಂದು ಬದಿಯಲ್ಲಿದ್ದ ಬಿರಿಯಾನಿ ಅಂಗಡಿಗೆ ಡಿಕ್ಕಿ ಹೊಡೆದಿದ್ದಾನೆ.
ಇದರಿಂದ ವಾಹನದಲ್ಲಿದ್ದ ಪೊಲೀಸರು ಗಾಬರಿಯಾಗಿ ಓಡಲು ಯತ್ನಿಸಿದರು. ಆದರೆ ಸ್ಥಳದಲ್ಲಿದ್ದ ಜನರು ಅವರನ್ನು ಸುತ್ತುವರಿದು ವಾಹನದ ಕೀಗಳನ್ನು ಕಿತ್ತುಕೊಂಡರು. ಸಬ್ ಇನ್ಸ್ ಪೆಕ್ಟರ್ ನನ್ನು ಹಿಡಿದು ನಷ್ಟಕ್ಕೆ ಪರಿಹಾರ ಕೊಡುವವರೆಗೂ ನಿಮ್ಮನ್ನು ಇಲ್ಲಿಂದ ಹೋಗುವುದಕ್ಕೆ ಬೀಡುವುದಿಲ್ಲ ಎಂದು ಪ್ರತಿಭಟನೆಗಿಳಿದರು.
ಇದನ್ನೂ ಓದಿ: ಸರಿಗಮ ವಿಜಿ ಹೆಸರಿಗೆ ‘ಸರಿಗಮ’ ಸೇರಿಕೊಳ್ಳಲು ಆ ಒಂದು ನಾಟಕ ಕಾರಣ !
ಗಾಯಾಳುಗಳನ್ನು ಸ್ಥಳೀಯರು ಚಿಕಿತ್ಸೆಗಾಗಿ ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳೀಯರು ಪೊಲೀಸರ ನಿರ್ಲಕ್ಷ್ಯದ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ. ಘಟನೆಯ ಬಗ್ಗೆ, ಸಿಸಿಟಿವಿ ದೃಶ್ಯಾವಳಿಯಲ್ಲಿ ಯುವಕನನ್ನು ವಾಹನದ ಕೆಳಗೆ ಎಳೆದುಕೊಂಡು ಹೋಗುವುದು ಮತ್ತು ಕಾರು ಬಿರಿಯಾನಿ ಅಂಗಡಿಗೆ ಡಿಕ್ಕಿ ಹೊಡೆಯುವುದನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರ ವಿರುದ್ದ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವರದಿಯಾಗಿದೆ.
LATEST NEWS
ಇದು ನಾಗಾ ಸಾಧುಗಳ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿ : ಭಾಗ – 1
Published
30 minutes agoon
15/01/2025ಪ್ರಯಾಗ್ ರಾಜ್‌ನಲ್ಲಿ ಆರಂಭವಾಗಿರುವ ಮಹಾಕುಂಭ ಮೇಳಕ್ಕೆ ಲೆಕ್ಕವಿಲ್ಲದಷ್ಟು ನಾಗಾಸಾಧುಗಳ ಆಗಮನವಾಗಿದೆ. ಕುಂಭ ಮೇಳದಲ್ಲಿ ಮಾತ್ರ ಕಾಣಿಸಿಕೊಳ್ಳುವ ಈ ನಾಗಾ ಸಾಧುಗಳು ಇದುವರೆಗೆ ಎಲ್ಲಿದ್ರು ? ಇವರು ನಾಗಾಸಾಧುಗಳಾಗಿ ಬದಲಾಗಿದ್ದು ಹೇಗೆ ? ನಾಗಾಸಾಧುಗಳಲ್ಲಿ ಎಷ್ಟು ವಿಧವಾದ ಗುಂಪು ಇದೆ ಮತ್ತು ಅವರು ನಾಲ್ಕು ಶಾಹಿ ಸ್ನಾನದಲ್ಲಿ ಎಲ್ಲೆಲ್ಲಿ ತೀರ್ಥಸ್ನಾನ ಮಾಡ್ತಾರೆ ಅನ್ನೋ ಕುರಿತು ಮಾಹಿತಿ ಇಲ್ಲಿದೆ.
ನಾಗಾ ಸಾಧುಗಳು ಆಗೋದು ಹೇಗೆ ?
ಯಾರಲ್ಲಿ ತನ್ನನ್ನು ತಾನೇ ಕಳೆದುಕೊಳ್ಳಬೇಕು ಎಂಬ ಆಲೋಚನೆ ಉಂಟಾಗುತ್ತದೆಯೋ ಮತ್ತು ತನ್ನನ್ನು ತಾನು ದೇವರ ಜೊತೆ ಕಲ್ಪಿಸಿಕೊಳ್ಳುತ್ತಾನೋ ಅಂತವರು ನಾಗಾಸಾಧುಗಳಾಗುತ್ತಾರೆ. ಹಾಗಂತ ನಾಗಾ ಸಾಧು ಆಗಬೇಕು ಅಂದರೆ ಅದಕ್ಕೆ ಕಠಿಣ ವೃತಾಚರಣೆಯ ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಇಂತಹ ಪರೀಕ್ಷೆಯಲ್ಲಿ ಪಾಸ್ ಆದ್ರೆ ಮಾತ್ರ ಅಂತಹ ವ್ಯಕ್ತಿಗೆ ನಾಗಾಸಾಧುಗಳಾಗಿ ದೀಕ್ಷೆ ಪಡೆಯಲು ಸಾಧ್ಯ.
ನಾಗಾ ಸಾಧು ಎಂಬ ಪರಂಪರೆ ಆರಂಭ ಯಾವಾಗ ?
ನಾಗ ಎಂಬ ಪದ ಸಂಸ್ಕೃತದ ನಗ್ ಎಂಬ ಪದದಿಂದ ಬಂದಿದ್ದು, ಸಂಸ್ಕತದಲ್ಲಿ ನಗ್ ಅಂದರೆ ಪರ್ವತ ಎಂದು ಅರ್ಥ. ಪರ್ವತ ಅಥವಾ ಪರ್ವತದ ಗುಹೆಯಲ್ಲಿ ವಾಸವಾಗುವ ಸನ್ಯಾಸಿಗಳೇ ಈ ನಾಗಾ ಸಾಧುಗಳು. 9 ನೇ ಶತಮಾನದಲ್ಲಿ ಆದಿ ಶಂಕರಾಚಾರ್ಯ ಅವರಿಂದ ಈ ಪರಂಪರೆ ಆರಂಭವಾಯಿತು ಅನ್ನೋ ಐತಿಹ್ಯ ಇದೆ. ಶಂಕರಾಚಾರ್ಯರು ಸ್ಥಾಪಿಸಿದ ದಶನಾಮಿ ಸಂಪ್ರದಾಯದ ಭಾಗವೇ ಈ ನಾಗಾಸಾಧುಗಳು. ದಶನಾಮಿ ಎಂಬುವುದು ಒಂದು ಸಂನ್ಯಾಸ ಮಠ ಪಂಕ್ತಿಯಾಗಿದ್ದು, ಇದು ಹತ್ತು ಉಪಶಾಖೆಯನ್ನು ಹೊಂದಿದೆ. ಇದರಲ್ಲೇ ನಾಗಸಾಧುಗಳು ಸಾಮಾನ್ಯವಾಗಿ ಗಿರಿ , ಪುರಿ, ಮತ್ತು ಭಾರತೀ ಎಂಬ ಉಪಶಾಖೆಯಲ್ಲಿ ಸೇರಿದ ಸಂನ್ಯಾಸಿಗಳಾಗಿದ್ದಾರೆ.
ನಾಗ ಸಾಧುಗಳಲ್ಲಿ ಎರಡು ವಿಧ ಮೂರು ಹಂತದ ಸಾಧಕರು..!
ನಾಗ ಸಾಧುಗಳಲ್ಲಿ ಎಡರು ವಿಭಾಗವಿದ್ದು, ಒಂದು ಶಸ್ತ್ರಧಾರಿ ನಾಗ ಸಾಧು ಎಂದು ಕರೆಯಲ್ಪಡುತ್ತಿದ್ದು ಇವರು ಯುದ್ಧಕಲೆಗಳಲ್ಲಿ ಪರಿಣಿತಿಯನ್ನು ಪಡೆದುಕೊಂಡು ಕೈನಲ್ಲಿ ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ತಿರುಗಾಡುತ್ತಿರುತ್ತಾರೆ. ಮತ್ತೊಂದು ವಿಭಾಗ ಶಾಸ್ತ್ರಧಾರಿ ನಾಗ ಸಾಧು ಎಂದು ಕರೆಯಲ್ಪಡುತ್ತಿದ್ದು ಇವರು ಶಾಸ್ತ್ರಗಳ ಅಧ್ಯಯನ ಮಾಡಿಕೊಂಡು ಜ್ಞಾನದ ಕೋಲನ್ನು ಹಿಡಿದುಕೊಂಡು ತಿರುಗಾಡುತ್ತಾರೆ. ಈ ಶಸ್ತ್ರಧಾರಿ ನಾಗಾಸಾಧುಗಳನ್ನು ಮೊದಲು ಪರಿಚಯಿಸಿದ್ದು ಶೃಂಗೇರಿ ಮಠ ಎಂಬ ಇತಿಹಾಸ ಇದೆಯಾದ್ರೂ ಅದಕ್ಕೆ ಸರಿಯಾದ ಪುರಾವೆಗಳು ಸಿಕ್ಕಿಲ್ಲ. ಆರಂಭದಲ್ಲಿ ಶಸ್ತ್ರನಾಗ ತಂಡದಲ್ಲಿ ಕ್ಷತ್ರಿಯರನ್ನು ಮಾತ್ರ ಸೇರಿಸಲಾಗುತ್ತಿದ್ದು, ಬಳಿಕ ಅದರಿಂದ ಜಾತಿಬೇದವನ್ನು ಅಳಿಸಲಾಗಿತ್ತು ಎಂದು ಹೇಳಲಾಗುತ್ತದೆ.
LATEST NEWS
ಬಾಲಕಿಯರಿಬ್ಬರ ಮೇಲೆ ಅ*ತ್ಯಾಚಾ*ರವೆಸಗಿ ಬ್ಲ್ಯಾ*ಕ್‌ಮೇಲ್ ಮಾಡಿದ ಗ್ಯಾಂಗ್ ಅರೆಸ್ಟ್
Published
1 hour agoon
15/01/2025ಮಂಗಳೂರು/ಬೆಳಗಾವಿ: ಮೂವರು ಸೇರಿಕೊಂಡು ಬಾಲಕಿಯರಿಬ್ಬರ ಮೇಲೆ ಗ್ಯಾಂ*ಗ್ ರೇ*ಪ್ ಮಾಡಿದ ಘಟನೆ ಬೆಳಗಾವಿಯ ರಾಯಭಾಗ ತಾಲೂಕಿನ ಸವಸುದ್ದಿ ಗ್ರಾಮದ ಬಳಿಯ ಗುಡ್ಡಗಾಡು ಪ್ರದೇಶದಲ್ಲಿ ನಡೆದಿದೆ.
ಆರೋಪಿಗಳಾದ ಅಭಿಷೇಕ್, ಆದಿಲ್ ಜಮಾದಾರ್ ಮತ್ತು ಚಾಲಕ ಕೌತುಕ್ ಬಡಿಗೇರ ಎಂಬುವವರನ್ನು ಬಂಧಿಸಲಾಗಿದೆ.
ಪ್ರಕರಣ ಸಂಬಂಧ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಗುಳೇದ್ ಮಾತನಾಡಿ, “ಆರೋಪಿ ಅಭಿಷೇಕ್ ಇನ್‌ಸ್ಟಾಗ್ರಾಂ ಮೂಲಕ ಓರ್ವ ಬಾಲಕಿಗೆ ಪರಿಚಯವಾಗಿದ್ದಾನೆ. ಸವದತ್ತಿಗೆ ಹೋಗುತ್ತಿದ್ದೇನೆ ನೀನು ಬಾ ಎಂದು ಬಾಲಕಿಗೆ ಪುಸಲಾಯಿಸಿದ್ದಾನೆ. ಈತನ ಮಾತು ನಂಬಿ, ನೊಂದ ಬಾಲಕಿ ತನ್ನ ಸ್ನೇಹಿತೆಯನ್ನ ಕರೆದುಕೊಂಡು, ಇಬ್ಬರೂ ಒಟ್ಟಾಗಿ ಹಾರೂಗೇರಿ ಬಸ್ ನಿಲ್ದಾಣದಕ್ಕೆ ಹೋಗಿದ್ದಾರೆ. ಅಲ್ಲಿಂದ ಅಭಿಷೇಕ್ ಬಾಲಕಿಯರನ್ನು ಎರ್ಟಿಗಾ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾನೆ. ಎರ್ಟಿಗಾ ಕಾರಿನಲ್ಲಿ ಮೂರೂ ಜನ ಆರೋಪಿಗಳಿದ್ದರು. ಸಂತ್ರಸ್ತ ಬಾಲಕಿಯರನ್ನು ರಾಯಬಾಗ ತಾಲೂಕಿನ ಸವಸುದ್ದಿ ಗ್ರಾಮದ ಬಳಿಯ ಗುಡ್ಡಗಾಡು ಪ್ರದೇಶಕ್ಕೆ ಕರೆದುಕೊಂಡು ಹೋಗಿ ಜನವರಿ 3ರಂದು ಮಧ್ಯಾಹ್ನದ ವೇಳೆಗೆ ಗುಡ್ಡದಲ್ಲಿ ಬಾಲಕಿಯರ ಮೇಲೆ ಅ*ತ್ಯಾಚಾರವೆಸಗಿದ್ದಾರೆ” ಎಂದು ತಿಳಿಸಿದರು.
ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದ ಆರೋಪಿಗಳು ‘ಮುಂದಿನ ವಾರ ಗೋವಾಕ್ಕೆ ಬರಬೇಕು. ಇಲ್ಲವಾದಲ್ಲಿ ವಿಡಿಯೋ ಪಬ್ಲಿಶ್ ಮಾಡುತ್ತೇವೆ. ದೂರು ಕೊಟ್ಟರೆ ಕೊ*ಲೆ ಮಾಡುತ್ತೇವೆ’ ಎಂದು ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ಬಾಲಕಿಯರು ಮನೆಯಲ್ಲಿ ಈ ವಿಚಾರ ತಿಳಿಸಿದ್ದಾರೆ. ಬಳಿಕ, ಸಂತ್ರಸ್ತ ಬಾಲಕಿ ತಮ್ಮ ಸೋದರ ಸಂಬಂಧಿ ಜೊತೆಗೆ ಬಂದು ಜನವರಿ 13ರಂದು ಹಾರೂಗೇರಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ಕೊಟ್ಟ 24 ಗಂಟೆಯೊಳಗೆ ಇಬ್ಬರು ಆರೋಪಿಯನ್ನ ಬಂಧಿಸಲಾಗಿದೆ. ನಂತರ, ಮತ್ತೋರ್ವ ಆರೋಪಿಯನ್ನು ಬಂಧಿಸಲಾಗಿದೆ. “ಆರೋಪಿಗಳ ಹಿನ್ನಲೆಯನ್ನು ಪರಿಶೀಲನೆ ಮಾಡುತ್ತೇವೆ. ಇನ್‌ಸ್ಟಾಗ್ರಾಂನಲ್ಲಿ ಹುಡಗಿ ಹಾಕಿದ್ದ ರೀಲ್ಸ್ ಪಾಲೋ ಮಾಡುತ್ತಿದ್ದ. ಅವರ ಮೊಬೈಲ್ಗಳನ್ನು ಜಪ್ತಿ ಮಾಡಿದ್ದು ಅದರಲ್ಲಿ ವಿಡಿಯೋಗಳು ಸಿಕ್ಕಿವೆ. ಗ್ಯಾಂಗ್ ರೇಪ್ ಪ್ರಕರಣ ಅಂತ ಕೇಸ್ ದಾಖಲಿಸಿದ್ದೇವೆ” ಎಂದು ಮಾಹಿತಿ ನೀಡಿದರು.
LATEST NEWS
ಫಿನಾಲೆಗೆ ಡೇಟ್ ಫಿಕ್ಸ್; ಈ ಸಲ ಬಿಗ್ ಬಾಸ್ ಗೆಲ್ಲುವವರು ಯಾರು ?
ಗೆಳತಿಯ ಖಾ*ಸಗಿ ಫೊಟೋ, ವಿಡಿಯೋ ಶೇರ್ ಮಾಡಿ ಆ*ತ್ಮಹ*ತ್ಯೆಗೆ ಶರಣಾದ ಯುವಕ
ಧನರಾಜ್ ಗೆ ಒಲಿದ ಅದೃಷ್ಟ; ಭವ್ಯಾಗೆ ಆಘಾತ !
ಸರಿಗಮ ವಿಜಿ ಹೆಸರಿಗೆ ‘ಸರಿಗಮ’ ಸೇರಿಕೊಳ್ಳಲು ಆ ಒಂದು ನಾಟಕ ಕಾರಣ !
ಬೈಕ್ಗಳು ಪರಸ್ಪರ ಮು*ಖಾಮು*ಖಿ ; ಬಾಲಕಿ ಸಾ*ವು
ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಿ ಇ*ನ್ನಿಲ್ಲ
Trending
- BIG BOSS4 days ago
BBK11: ಐವರು ನಾಮಿನೇಟ್, ಕಿಚ್ಚನ ಪಂಚಾಯ್ತಿಯಲ್ಲಿ ಗೇಟ್ಪಾಸ್ ಯಾರಿಗೆ..?
- LATEST NEWS5 days ago
ಹಲ್ಲು ಹುಳುಕಾಗಿದ್ಯಾ.? ಈ ಮನೆಮದ್ದು ಪ್ರಯತ್ನಿಸಿ, ತಕ್ಷಣ ಎಲ್ಲಾ ಹಲ್ಲಲ್ಲಿರುವ ಹುಳುಗಳು ಹೊರ ಬರುತ್ತವೆ.!
- BIG BOSS2 days ago
ಕಣ್ಣೀರು ಒರೆಸಿದ ಸುದೀಪ್.. ಕಿಚ್ಚನ ಈ ದೊಡ್ಡ ಗುಣಕ್ಕೆ ಸೆಲ್ಯೂಟ್ ಹೊಡೆದ ಫ್ಯಾನ್ಸ್..!
- FILM6 days ago
ಮಗುವಿನೊಂದಿಗೆ ಕೊಲ್ಲೂರು ದೇಗುಲಕ್ಕೆ ಹರ್ಷಿಕಾ ದಂಪತಿ ಭೇಟಿ