ವಿಜಯಪುರ: ನಟ ಚೇತನ್ ಒಬ್ಬ ನಾಲಾಯಕ್ ಮನುಷ್ಯ ಅಷ್ಟೇ ಅಲ್ಲ ಆತ ಮುಸ್ಲಿಂ ಏಜೆಂಟ್ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಕಿಡಿ ಕಾರಿದ್ದಾರೆ.
ಇಡೀ ದೇಶವೇ ತುಳು ಸಂಸ್ಕೃತಿಯನ್ನು ಒಮ್ಮೆ ತಿರುಗಿ ನೋಡುವಂತೆ ಮಾಡಿದ ‘ಕಾಂತಾರ’ ಸಿನಿಮಾದ ಬಗ್ಗೆ ನಟ ಚೇತನ್ ಅವರು ವಿವಾದಾತ್ಮಕವಾದ ಹೇಳಿಕೆ ನೀಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಅವರು ನಟ ಚೇತನ ಸಾಬ್ರ (ಮುಸ್ಲಿಂ) ಏಜೆಂಟ್ ಆಗಿದ್ದಾನೆ. ಮುಸ್ಲಿಮರು ದುಡ್ಡು ಕೊಟ್ಟು ಇಂತಹ ಅಯೋಗ್ಯ ಕೆಲಸ ಮಾಡಿಸುತ್ತಾರೆ. ಈತ ಮಾಡುತ್ತಾನೆ ಅಷ್ಟೇ.
ಅಂಬೇಡ್ಕರ್ ಜಯಂತಿ ವೇಳೆ ನಾಟಕ ಮಾಡಲು ವಿಜಯಪುರಕ್ಕೂ ಅವನು ಬಂದಿದ್ದ’ ಎಂದು ವ್ಯಂಗ್ಯವಾಡಿದರು.
ದೈವಾರಾಧನೆ ಸಂಸ್ಕೃತಿಯ ಭಾಗವಾಗಿದೆ. ಹಿಂದೂ ವಿರೋಧಿ ಮಾತನಾಡಿದವರು ಏನೇನು ಆಗಿ ಹೋಗಿದ್ದಾರೆ. ನಮ್ಮ ಆರಾಧನೆ ಬಗ್ಗೆ ಮಾತನಾಡುವವರಿಗೆ ದೇವರು ಶಿಕ್ಷೆ ನೀಡುತ್ತಾನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಹಿಂದುತ್ವದ ಹೆಸರು ಹೇಳಿ ರಾತ್ರಿ ಹಿಂದೂ ವಿರೋಧಿ ಕೆಲಸ ಮಾಡುತ್ತಾರೆ. ಅಂತಹವರು ವಿಜಯಪುರದಲ್ಲೂ ಕೆಲವರಿದ್ದಾರೆ. ಹಿಂದೂ ವಿರೋಧಿ ಮಾತನಾಡಿದರೆ ಶಹಬ್ಬಾಸ್ ಎನ್ನುತ್ತಾರೆ ಎಂದು ಆಕ್ರೋಶಭರಿತರಾಗಿ ನುಡಿದರು.