Home ಸಿನೆಮಾ ಟ್ರೇಲರ್: ‘ಮಾಲ್ಗುಡಿ ಡೇಸ್’ ನಲ್ಲಿ ವಿಜಯರಾಘವೇಂದ್ರ ಮಾಡ್ತಾರಾ ಕಮಾಲ್.?

ಟ್ರೇಲರ್: ‘ಮಾಲ್ಗುಡಿ ಡೇಸ್’ ನಲ್ಲಿ ವಿಜಯರಾಘವೇಂದ್ರ ಮಾಡ್ತಾರಾ ಕಮಾಲ್.?

‘ಚಿನ್ನಾರಿಮುತ್ತ’ ನಟ ವಿಜಯ ರಾಘವೇಂದ್ರ ಡಿಫರೆಂಟ್ ಲುಕ್ ಹಾಗೂ ವಿಭಿನ್ನ ಮ್ಯಾನರಿಸಂನಲ್ಲಿ ಕಾಣಿಸಿಕೊಂಡಿರೋ ಬಹುನಿರೀಕ್ಷಿತ ‘ಮಾಲ್ಗುಡಿ ಡೇಸ್’ ಇದೇ ಬರುವ ಫೆಬ್ರವರಿ 7 ರಂದು ರಾಜ್ಯಾದ್ಯಂತ ತೆರೆಗೆ ಅಪ್ಪಳಿಸಲಿದೆ. ಈ ಮೊದಲು ತೆರೆಕಂಡಿದ್ದ ಪೋಸ್ಟರ್ ಹಾಗೂ ಟೀಸರ್ ನಲ್ಲಿ ನಟ ವಿಜಯ ರಾಘವೇಂದ್ರ ಅವರ 70ರ ಹರೆಯದ ಮುತ್ಸದ್ಧಿಯ ಲುಕ್ ಹಾಗೂ ಹಿನ್ನಲೆ ಸಂಗೀತ, ಛಾಯಾಗ್ರಹಣದಿಂದ ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ‘ಮಾಲ್ಗುಡಿ ಡೇಸ್’ ಇದೀಗ ಟ್ರೈಲರ್ ಮೂಲಕ ಇನ್ನಷ್ಟು ಕುತೂಹಲ ಸೃಷ್ಟಿಸಿದೆ.

ಈ ಟ್ರೈಲರ್ ಅನ್ನು ನಟ ರಮೇಶ್ ಅರವಿಂದ್ ರಿಲೀಸ್ ಮಾಡಿದ್ದಾರೆ. ಟೀಸರ್ ನಲ್ಲಿ ಸಾಹಿತಿ ಲಕ್ಷ್ಮಿ ನಾರಾಯಣ ಎಂಬ ವಯಸ್ಸಾದ ಪಾತ್ರವನ್ನು ತೋರಿಸಿದ್ದ ಚಿತ್ರತಂಡ, ಇದೀಗ ಟ್ರೈಲರ್ ನಲ್ಲಿ ನಟ ವಿಜಯ್ ರಾಘವೇಂದ್ರ ಅವರ ಹೈಸ್ಕೂಲ್ ಹುಡುಗನ ಪಾತ್ರವನ್ನು ಬಿಚ್ಚಿಟ್ಟು ಹೊಸ ಹೈಪ್ ಕ್ರಿಯೆಟ್ ಮಾಡಿದೆ.

ತುಳು ಚಿತ್ರರಂಗದಲ್ಲಿ ‘ಅಪ್ಪೆ ಟೀಚರ್‘ ಸಿನಿಮಾ ಮೂಲಕ ಬ್ಲಾಕ್ ಬಾಸ್ಟರ್ ಹಿಟ್ ಕೊಟ್ಟಿದ್ದ ನಿರ್ದೇಶಕ ಕಿಶೋರ್ ಮೂಡಬಿದ್ರೆ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ರೆ, ರತ್ನಾಕರ್ ಕಾಮತ್ ಬಂಡವಾಳ ಹೂಡಿದ್ದಾರೆ. ಗಗನ್ ಬಡೇರಿಯಾರವರ ಮ್ಯೂಸಿಕ್ ಕಂಪೋಸ್ ಮಾಡಿದ್ದು, ನಾಯಕಿಯಾಗಿ ಗ್ರೀಷ್ಮಾ ಇದೇ ಮೊದಲ ಬಾರಿಗೆ ಬಣ್ಣ ಹಚ್ಚಿದ್ದು, ‘ಒಂದು ಮೊಟ್ಟೆಯ ಕಥೆ’ ಖ್ಯಾತಿಯ ಶೈಲಶ್ರೀ ಮುಲ್ಕಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್ಕಿಸಿ…

- Advertisment -

RECENT NEWS

ಮಂಗಳೂರು- ಉಡುಪಿಗೆ ಕೊರೋನಾ ಭಯದಿಂದ ಕೊಂಚ ನೆಮ್ಮದಿ- ಕಾಸರಗೋಡಿಗೆ ಭಾರಿ ಭೀತಿ..!!

ಮಂಗಳೂರು- ಉಡುಪಿಗೆ ಕೊರೋನಾ ಭಯದಿಂದ ಕೊಂಚ ನೆಮ್ಮದಿ- ಕಾಸರಗೋಡಿಗೆ ಭಾರಿ ಭೀತಿ..!! ಮಂಗಳೂರು /ಉಡುಪಿ/ಕಾಸರಗೋಡು : ಇಂದು ಕೂಡ ಕರಾವಳಿಯ ಜನತೆಗೆ ನಮ್ಮದಿಯ ಉಸಿರು ಬಿಟ್ಟಿದ್ದಾರೆ. ಕೋರೊನದ ವಿರುದ್ದದ ಜಿಲ್ಲಾಡಳಿತಗಳು, ಸರ್ಕಾರ, ಜನಪ್ರತಿನಿಧಿಗಳು ನಡೆಸುತ್ತಿರುವ ಸಮರಕ್ಕೆ...

ಗಡಿ ದಾಟಲು ಬಲವಂತದ ಯತ್ನ : ತಡೆದ ಕರ್ನಾಟಕ ಪೊಲೀಸರ ಮೇಲೆ ಕಲ್ಲು ತೂರಾಟ..! 

ಗಡಿ ದಾಟಲು ಬಲವಂತದ ಯತ್ನ : ತಡೆದ ಕರ್ನಾಟಕ ಪೊಲೀಸರ ಮೇಲೆ ಕಲ್ಲು ತೂರಾಟ..!  ಸುಳ್ಯ: ಕೇರಳ ಗಡಿ ದಾಟಲು ಯತ್ನಿಸಿ ವಿಫಲನಾದ ಯುವಕ ಕರ್ನಾಟಕ ಪೊಲೀಸರು ಮತ್ತು ವಾಹನದ ಮೇಲೆ ಕಲ್ಲು ತೂರಿದ...

ಬಂಟ್ವಾಳದಲ್ಲಿ ಆಶಾ ಕಾರ್ಯಕರ್ತೆಯನ್ನು ನಿಂದಿಸಿ ಬೆದರಿಕೆ ಹಾಕಿದ ಆರೋಪಿಗಳು ಎರೆಸ್ಟ್..!

ಬಂಟ್ವಾಳದಲ್ಲಿ ಆಶಾ ಕಾರ್ಯಕರ್ತೆಯನ್ನು ನಿಂದಿಸಿ ಬೆದರಿಕೆ ಹಾಕಿದ ಆರೋಪಿಗಳು ಎರಸ್ಟ್..! ಬಂಟ್ವಾಳ : ಬಂಟ್ವಾಳದಲ್ಲಿ ಆಶಾ ಕಾರ್ಯಕರ್ತೆಯನ್ನು ನಿಂದಿಸಿ ಬೆದರಿಕೆ ಹಾಕಿದ ಆರೋಪಿಗಳನ್ನು ಪೊಲಿಸರು ಬಂಧಿಸಿದ್ದಾರೆ. ಬಂಟ್ವಾಳ ಅಮ್ಟಾಡಿ ನಿವಾಸಿಗಳಾದ ಮಾರಪ್ಪ ಪೂಜಾರಿ ಹಾಗೂ...

ಮಂಗಳೂರು ರೈಲುಗಳಲ್ಲಿ ಕೂಡ ಭರದಿಂದ ಸಾಗಿದೆ ಕೊರೊನಾ ಐಸೋಲೇಷನ್ ವಾರ್ಡ್ ಕಾರ್ಯ

ಮಂಗಳೂರು ರೈಲುಗಳಲ್ಲಿ ಕೂಡ ಭರದಿಂದ ಸಾಗಿದೆ ಕೊರೊನಾ ಐಸೋಲೇಷನ್ ವಾರ್ಡ್ ಕಾರ್ಯ ಮಂಗಳೂರು: ಕೊರೋನ ಸೋಂಕು ವೇಗವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ರೈಲು ಬೋಗಿಗಳಲ್ಲಿ ಐಸೋಲೇಶನ್ ವಾರ್ಡ್ ತೆರೆಯುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಮಂಡಳಿ ಕೊಂಕಣ...