ಬಿಗ್ಬಾಸ್ ಶೋ ಯಶಸ್ವಿಯಾಗಿ ಸಾಗುತ್ತಿದ್ದು ಮನೆಯಲ್ಲಿ ಹೊಸ ವರ್ಷದ ವಾತಾವರಣ ಮೂಡಿದೆ. ಎಲ್ಲರ ಮುಖದಲ್ಲಿ ಖುಷಿ ಮೂಡಿದ್ದು ಟಾಸ್ಕ್ ನೀಡಲಾಗಿದೆ. ಸ್ಪರ್ಧಿಗಳಿಗೆ ಈ ಟಾಸ್ಕ್ಗಳೇ ಮುಖ್ಯವಾಗಿರುತ್ತವೆ. ಏಕೆಂದರೆ ಮನೆಯಲ್ಲಿ ಏನನ್ನಾದರೂ ಪಡೆಯಬೇಕು ಎಂದರೆ ಕೊಟ್ಟಿರುವ ಟಾಸ್ಕ್ ಪೂರ್ಣಗೊಳಿಸಲೇಬೇಕು. ಇದೇ ರೀತಿ ನಿಗಧಿತ ಸಮಯದಲ್ಲಿ ಟಾಸ್ಕ್ ಪೂರ್ಣಗೊಳಿಸಿದ್ದೇ ತಡ ಇಬ್ಬರು ಸ್ಪರ್ಧಿಗಳ ತಾಯಂದಿರು ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ಮನೆಯಲ್ಲಿ ಬಿಗ್ಬಾಸ್ ವಿಶೇಷ ಟಾಸ್ಕ್ ಅನ್ನು ನೀಡಿದ್ದರು. ಈ ಟಾಸ್ಕ್ ಅನ್ನು 10 ನಿಮಿಷದಲ್ಲಿ ಪೂರ್ಣಗೊಳಿಸಿದ್ರೆ ಅಮ್ಮನನ್ನು ಭೇಟಿ ಮಾಡಬಹುದು ಎಂದು ಬಿಗ್ ಬಾಸ್ ಹೇಳಿದ್ದರು. ಅದರಂತೆ ಮನೆಯಲ್ಲಿ ತ್ರಿವಿಕ್ರಮ್ ಅವರು, ಪಜಲ್ (ಒಂದು ಚಿತ್ರವನ್ನು ಜೋಡಿಸುವುದು) ಅನ್ನು ಫುಲ್ ಟೆನ್ಷನ್ನಲ್ಲಿ ಬೇಗ ಬೇಗ ಪೂರ್ಣಗೊಳಿಸಿದರು. ಟಾಸ್ಕ್ ಮುಗಿದಿದ್ದೆ ತಡ ಮೇನ್ ಡೋರ್ ಓಪನ್ ಆಗಿದೆ. ಮುಖ್ಯ ಬಾಗಿಲಿನಿಂದ ತ್ರಿವಿಕ್ರಮ್ ಅವರ ತಾಯಿ ಮನೆಯೊಳಗೆ ಬಂದಿದ್ದಾರೆ.
ಈ ವೇಳೆ ತ್ರಿವಿಕ್ರಮ್ ಅವರ ತಾಯಿಯ ಆಶೀರ್ವಾದವನ್ನು ಎಲ್ಲ ಸ್ಪರ್ಧಿಗಳು ಪಡೆದರು. ಭವ್ಯ, ತ್ರಿವಿಕ್ರಮ್ ಅವರ ತಾಯಿಯನ್ನು ತಬ್ಬಿಕೊಂಡು ಸಂತಸ ಪಟ್ಟರು. ಬಳಿಕ ಸೋಫಾ ಮೇಲೆ ಕುಳಿತು ಇಬ್ಬರು ಮಾತನಾಡುವಾಗ, ನನ್ನ ಮಗನ ತಾಯಿಯಾಗಿ, ಫ್ರೆಂಡ್ ಆಗಿ ಎಲ್ಲ ತರದಲ್ಲೂ ಇಬ್ಬರು ಚೆನ್ನಾಗಿದ್ದೀರಿ. ರಾಧಾಕೃಷ್ಣನ ಥರ ಇದೀರಿ ಎಂದು ತ್ರಿವಿಕ್ರಮ್ ತಾಯಿ, ಭವ್ಯಗೆ ಹೇಳಿದ್ದಾರೆ. ಇದರಿಂದ ಭವ್ಯ ಸಖತ್ ಖುಷಿ ಖುಷಿಯಾಗಿ ನಕ್ಕಿದ್ದಾರೆ.
ಇನ್ನು ಅಮ್ಮ ಮನೆಯಿಂದ ಹೊರ ಹೋಗುವಾಗ ತ್ರಿವಿಕ್ರಮ್ ಅವರು ಇನ್ನು 10 ನಿಮಿಷ ಅನುಮತಿ ಕೊಡುವಂತೆ ಮನವಿ ಮಾಡಿದರು. ಆದರೆ ಇದಕ್ಕೆ ಬಿಗ್ ಬಾಸ್ ಅನುಮತಿಸದೇ ಇದ್ದಿದ್ದರಿಂದ ತಾಯಿ ಮನೆಯಿಂದ ಹೊರ ಹೋಗುತ್ತಿದ್ದರು. ಆಗ ತ್ರಿವಿಕ್ರಮ್ ಕಣ್ಣೀರು ಹಾಕಿದ್ದಾರೆ. ಇದು ಅಲ್ಲದೇ ಬಿಗ್ ಬಾಸ್ ಮನೆಗೆ ಭವ್ಯ ಅವರ ತಾಯಿ ಕೂಡ ಬಂದಿದ್ದರು.
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11, 96ನೇ ದಿನಕ್ಕೆ ಕಾಲಿಟ್ಟಿದೆ. ಸದ್ಯ ಬಿಗ್ಬಾಸ್ ಮನೆಯಲ್ಲಿ ಒಟ್ಟು 9 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಈ 10 ಸ್ಪರ್ಧಿಗಳು ಯಾರು ಈ ವಾರ ಬಿಗ್ಬಾಸ್ ಮನೆಯಿಂದ ಆಚೆ ಹೋಗಲಿದ್ದಾರೆ ಅಂತ ಕುತೂಹಲ ಮೂಡಿದೆ.
ಕಳೆದ ವಾರ ಬಿಗ್ಬಾಸ್ ಮನೆಯಿಂದ ಆಚೆ ಹೋಗಲು ಒಟ್ಟು 8 ಸ್ಪರ್ಧಿಗಳು ನಾಮಿನೇಟ್ ಆಗಿದ್ದರು. ಅವರ ಪೈಕಿ ಐಶ್ವರ್ಯಾ ಸಿಂಧೋಗಿ ಬಿಗ್ಬಾಸ್ ಮನೆಯಿಂದ ಆಚೆ ಬಂದಿದ್ದರು. ಆದ್ರೆ ಈ ವಾರ ಬಿಗ್ಬಾಸ್ ಮನೆಯಿಂದ ಯಾವ ಸ್ಪರ್ಧಿಯೂ ಆಚೆ ಹೋಗುವುದಿಲ್ಲ. ಏಕೆಂದರೆ ಈ ವಾರ ಫ್ಯಾಮಿಲಿ ರೌಂಡ್ ಆಗಿದ್ದ ಕಾರಣ ನಾಮಿನೇಷನ್ ಪ್ರಕ್ರಿಯೆ ನಡೆದಿಲ್ಲ.
ಹೀಗಾಗಿ ಈ ವಾರ ಯಾವೊಬ್ಬ ಸ್ಪರ್ಧಿಯೂ ಬಿಗ್ಬಾಸ್ ಮನೆಯಿಂದ ಆಚೆ ಹೋಗುವುದಿಲ್ಲ. 9 ಸ್ಪರ್ಧಿಗಳು ಈ ವಾರ ಸೇಫ್ ಆಗಿದ್ದಾರೆ. ಮುಂದಿನ ವಾರಕ್ಕೆ ಈ 9 ಜನರಲ್ಲಿ ಯಾರು ಬಿಗ್ ಮನೆಯಿಂದ ಆಚೆ ಹೋಗಲಿದ್ದಾರೆ ಎಂದು ಕಾದು ನೋಡಬೇಕಿದೆ.
ಇನ್ನೂ ಬಿಗ್ಬಾಸ್ ಮನೆಗೆ ಒಟ್ಟು 17 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು. ವಾರ ಕಳೆದಂತೆ ಬಿಗ್ಬಾಸ್ ಮನೆಯಿಂದ ಒಬ್ಬೊಬ್ಬರಾಗಿ ಆಚೆ ಬಂದಿದ್ದರು. ಸದ್ಯ ಈಗ ಬಿಗ್ಬಾಸ್ ಮನೆಗೆ ಈ 9 ಸ್ಪರ್ಧಿಗಳ ಕುಟುಂಬಸ್ಥರು ಎಂಟ್ರಿ ಕೊಟ್ಟಿದ್ದಾರೆ. ಜೊತೆಗೆ ಇನ್ನೂ ಕೆಲವೇ ದಿನಗಳು ಬಾಕಿ ಉಳಿದಿವೆ ಚೆನ್ನಾಗಿ ಆಡು ಅಂತ ಕಿವಿ ಮಾತನ್ನು ಹೇಳಿದ್ದಾರೆ. ಇನ್ಮುಂದೆ ಬಿಗ್ಬಾಸ್ ಮನೆಯಲ್ಲಿರೋ ಸ್ಪರ್ಧಿಗಳು ಯಾವ ರೀತಿ ಟೇಕ್ ಆಫ್ ಆಗಲಿದ್ದಾರೆ ಎಂದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
ಕಿಚ್ಚ ಸುದೀಪ್ ಅವರು ನಡೆಸಿಕೊಡುವ ಬಿಗ್ ಬಾಸ್ ಸೀಸನ್ 11 ಕೊನೆ ಹಂತಕ್ಕೆ ತಲುಪುತ್ತಿದೆ. ಕಳೆದ ವಾರ ಐಶ್ವರ್ಯ ಹೊರಗಡೆ ಬಂದಿದ್ದರು. ಈಗ ಮನೆಯಲ್ಲಿ ಕೇವಲ 9 ಸ್ಪರ್ಧಿಗಳು ಮಾತ್ರ ಉಳಿದಿದ್ದು ಇದರಲ್ಲಿ ಈ ವಾರ ಹೊರಗಡೆ ಬರುವವರು ಯಾರು ಎಂಬುದು ಕುತೂಹಲ ಇದೆ. ಇದರ ನಡುವೆ ಬಿಗ್ಬಾಸ್ ಮನೆಯಲ್ಲಿ ಕಿಸ್ ಕೊಡುವ ಟಾಸ್ಕ್ ಕೊಡಲಾಗಿದ್ದು ಯಾವ್ಯಾವ ಸ್ಪರ್ಧಿ ಏನೆಲ್ಲಾ ಮಾಡಿದರು ಎನ್ನುವುದು ಇಲ್ಲಿದೆ.
ಕ್ಯಾಪ್ಟನ್ ಆಗಿರುವ ಭವ್ಯ ಮಧ್ಯೆದಲ್ಲಿ ನಿಂತು ಟಾಸ್ಕ್ ಅನ್ನು ಗಮನಿಸುತ್ತಿದ್ದಾರೆ. ತ್ರಿವಿಕ್ರಮ್- ಚೈತ್ರಾ, ಗೌತಮಿ- ಧನರಾಜ್, ಮಂಜು- ಹನುಮಂತು ಹೀಗೆ ಇಬ್ಬಿಬ್ಬರ ಟೀಮ್ ಮಾಡಲಾಗಿದೆ. ಮೂವರು ಕೋಲಿನಿಂದ ಲಿಫ್ಟ್ಸ್ಟಿಕ್ ಅನ್ನು ಚೈತ್ರಾ, ಧನರಾಜ್ ಹಾಗೂ ಹನುಮಂತು ತುಟಿಗೆ ಹಚ್ಚಬೇಕು. ತಕ್ಷಣ ಈ ಮೂವರು ಓಡಿ ಹೋಗಿ ವೈಟ್ ಬೋರ್ಡ್ ಮೇಲೆ ಕಿಸ್ ಕೊಡಬೇಕು. ಯಾರು ಹೆಚ್ಚು ಕಿಸ್ ಕೊಡುತ್ತಾರೋ ಅವರೇ ಇದರಲ್ಲಿ ಗೆಲುವು ಸಾಧಿಸುವವರು ಎಂದು ಹೇಳಬಹುದು.
ಈ ರೀತಿ ಟಾಸ್ಕ್ ಆಡುವಾಗ ಧನರಾಜ್ಗೆ ರಜತ್ ಕರೆಕ್ಟ್ ಆಗಿ ಕಿಸ್ಗಳು ಬರುತ್ತಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಸಖತ್ ಕಾಮಿಡಿಯಾಗಿ ಉತ್ತರಿಸಿದ ಧನು, ಮೂರು ತಿಂಗಳು ಆಯಿತಾಲ್ಲ, ಕರೆಕ್ಟ್ ಆಗಿ ಬರುತ್ತಿಲ್ಲ ಎಂದಿದ್ದಾರೆ. ಇದಾದ ಮೇಲೆ ಮುತ್ತು ಕೊಡುವುದಿಲ್ವಾ ನನಗೆ, ನೀವು ಕೊಡುತ್ತೀರಾ ಎಂದು ಧನು, ಚೈತ್ರಾರನ್ನ ಓಡಿಸಿಕೊಂಡು ಹೋಗಿದ್ದಾರೆ. ಈ ವೇಳೆ ಚೈತ್ರಾ ತಂಗಿ ಸೇರಿ ಎಲ್ಲ ಸ್ಪರ್ಧಿಗಳು ಕೂಡ ಕುಳಿತಲ್ಲೇ ನಕ್ಕಿದ್ದಾರೆ.
ಇನ್ನು ಈ ಟಾಸ್ಕ್ನಲ್ಲಿ ಧನರಾಜ್, ಹನುಂತು ಗೆಲುವು ಸಾಧಿಸಿರಬಹುದೆಂದು ವಿಡಿಯೋದಲ್ಲಿ ಕಾಣುತ್ತೆ. ಈ ವೇಳೆ ಧನರಾಜ್, ಹನುಮಂತುನ ಹಿಡಿದು ಕಿಸ್ ಕೊಡಲು ಹೋಗಿ ತಬ್ಬಿಕೊಂಡಿದ್ದಾರೆ. ಕಿಸ್ ಕೊಡುವ ಟಾಸ್ಕ್ನಲ್ಲಿ ರಜತ್ ಅವರು ಎಲ್ಲ ಸ್ಪರ್ಧಿಗಳನ್ನು ಕಿಚಾಯಿಸಿ, ತಮಾಷೆ ಮಾಡಿದ್ದಾರೆ. ಚೈತ್ರಾ, ಧನು, ಹನುಮಂತು ಅವರ ತಂದೆ, ತಾಯಿರಿಗೂ ಕೂಡ ರಜತ್ ಕಾಮಿಡಿ ಮಾಡಿದ್ದಾರೆ.
ಇಷ್ಟು ದಿನ ಬಿಗ್ಬಾಸ್ ಸ್ಪರ್ಧಿ ಚೈತ್ರಾ ಕುಂದಾಪುರ ಈ ಗಳಿಗೆಗಾಗಿಯೇ ಕಾಯುತ್ತಿದ್ದರು. 95 ದಿನಗಳ ಕಾಲ ಬಿಗ್ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದ ಫೈರ್ ಬ್ರ್ಯಾಂಡ್ ಚೈತ್ರಾ ಕುಂದಾಪುರ ಜೀವನದಲ್ಲೇ ಬಹಳ ಸುಂದರವಾದ ಕ್ಷಣವಿದು.
ಹೌದು, ಬಿಗ್ಬಾಸ್ ಸೀಸನ್ 11 ಶುರುವಾಗಿ ಇಂದಿಗೆ 95 ದಿನಗಳು ಕಳೆದಿವೆ. ಇಷ್ಟು ದಿನಗಳ ಕಾಲ ಬಿಗ್ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದ ಸ್ಪರ್ಧಿಗಳಿಗೆ ಈ ವಾರ ತುಂಬಾನೇ ಸ್ಪೆಷಲ್ ಆಗಿತ್ತು. ಏಕೆಂದರೆ ಈ ವಾರ ಬಿಗ್ಬಾಸ್ ಮನೆಗೆ ಸ್ಪರ್ಧಿಗಳ ಕುಟುಂಬಸ್ಥರು ಎಂಟ್ರಿ ಕೊಟ್ಟು ಮಕ್ಕಳಿಗೆ ಹೊಸ ಹುರುಪನ್ನು ತುಂಬಿದ್ದರು.
ಅದರಂತೆ ಮಂಗಳವಾರದ ಸಂಚಿಕೆಯಲ್ಲಿ ಬಿಗ್ಬಾಸ್ ಮನೆಗೆ ಭವ್ಯಾ ಗೌಡ, ತ್ರಿವಿಕ್ರಮ್ ಹಾಗೂ ರಜತ್ ಕಿಶನ್ ಫ್ಯಾಮಿಲಿಯವರು ಬಂದಿದ್ದರು. ನಿನ್ನೆ ಬಿಗ್ಬಾಸ್ ಮನೆಗೆ ಮೋಕ್ಷಿತಾ ಪೈ, ಉಗ್ರಂ ಮಂಜು ಹಾಗೂ ಗೌತಮಿ ಕುಟುಂಬಸ್ಥರು ಎಂಟ್ರಿ ಕೊಟ್ಟಿದ್ದರು. ಇಂದಿನ ಸಂಚಿಕೆಯಲ್ಲಿ ಬಿಗ್ ಮನೆಗೆ ಧನರಾಜ್ ಆಚಾರ್ಯ, ಹನುಮಂತ ಹಾಗೂ ಚೈತ್ರಾ ಕುಂದಾಪುರ ಫ್ಯಾಮಿಲಿಯವರು ಎಂಟ್ರಿ ಕೊಟ್ಟಿದ್ದಾರೆ.
ಬಿಗ್ಬಾಸ್ ಮನಗೆ ಚೈತ್ರಾ ಕುಂದಾಪುರ ತಾಯಿ ಹಾಗೂ ತಂಗಿ ಎಂಟ್ರಿ ಕೊಟ್ಟ. ಅಮ್ಮನನ್ನು ನೋಡುತ್ತಿದ್ದಂತೆ ಚೈತ್ರಾ ಭಾವುಕರಾಗಿದ್ದಾರೆ. ಆದ್ರೆ ತಾಯಿ ಆಡಿದ ಅದೊಂದು ಮಾತಿಗೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ ಚೈತ್ರಾ. ಹೌದು ಬಿಗ್ಬಾಸ್ ಮನೆಗೆ ಬಂದಿದ್ದ ಚೈತ್ರಾ ಕುಂದಾಪುರ ಸತತವಾಗಿ 4 ಬಾರಿ ಸ್ಪರ್ಧಿಗಳಿಂದ ಕಳಪೆ ಪಟ್ಟ ಸಿಕ್ಕಿತ್ತು. ಹೀಗಾಗಿ ಇದೇ ವಿಚಾರವಾಗಿ ಚೈತ್ರಾ ಅವರ ತಾಯಿ ಮಾತಾಡಿದ್ದಾರೆ. ನನ್ನ ಮಗಳಿಗೆ ಇಷ್ಟು ವಾರದಲ್ಲಿ ಕಳಪೆ ಕೊಟ್ಟಿದ್ಧೀರಾ, ಆದ್ರೆ ನಮ್ಮ ಮಗಳು ಯಾವತ್ತಿದ್ರೂ ನಮಗೆ ಉತ್ತಮನೇ ಅಂತ ಹೇಳುತ್ತಾ ಮೆಡಲ್ ಹಾಕಿದ್ದಾರೆ. ಇದಾದ ಬಳಿಕ ಮಾತಾಡಿದ ಚೈತ್ರಾ, ನನ್ನ ತಂಗಿ ಹುಟ್ಟಿದ್ದಾಗ ನಮಗೆ ನಿಜವಾದ ಚಾಲೆಂಜ್ ಶುರುವಾಗುತ್ತೆ, ಮೂರನೇದು ಹೆಣ್ಣಾಯ್ತು, ಅಪ್ಪ ಅಮ್ಮನ ಹೆಣಕ್ಕೆ ಬೆಂಕಿ ಇಡೋಕು ಇವರ ಮನೆಯಲ್ಲಿ ಗಂಡು ದಿಕ್ಕಿಲ್ಲ ಅಂತ ಜನ ಹೇಳಿದ್ದಾರೆ ಎಂದು ಕಣ್ಣೀರು ಹಾಕಿದ್ದಾರೆ.