BIG BOSS
ಮೂರು ತಿಂಗಳು ದೂರ ಇದ್ದ ಅಕ್ಕನ ಗುರುತಿಸಲೇ ಇಲ್ಲ ತಮ್ಮ; ಮೋಕ್ಷಿತಾ ಕಣ್ಣೀರಿಗೆ ಕರುಳು ಕಿವುಚುತ್ತೆ
Published
2 days agoon
By
NEWS DESK2ಕಿಚ್ಚ ಸುದೀಪ್ ಅವರು ನಡೆಸಿ ಕೊಡುವ ಕನ್ನಡದ ಬಿಗ್ ರಿಯಾಲಿಟಿ ಶೋ ಕನ್ನಡಿಗರ ಮನ ಗೆದ್ದಿದೆ. ವಾರದಿಂದ ವಾರಕ್ಕೆ ಹೆಚ್ಚು ಹೆಚ್ಚು ಜನರನ್ನು ಸೆಳೆಯುತ್ತ ಯಶಸ್ವಿಯಾಗಿ ಸಾಗುತ್ತಿದೆ. ನ್ಯೂ ಇಯರ್ ಹಿನ್ನೆಲೆಯಲ್ಲಿ ಮನೆಯಲ್ಲಿರುವ ಎಲ್ಲ ಸ್ಪರ್ಧಿಗಳ ಕುಟುಂಬಸ್ಥರು ಬಂದು ನೋಡಿಕೊಂಡು ಹೋಗುತ್ತಿದ್ದಾರೆ. ಇದೇ ರೀತಿ ಮೋಕ್ಷಿತಾಗೆ ಬಿಗ್ಬಾಸ್ ಬಿಗ್ ಸರ್ಪ್ರೈಸ್ ಕೊಟ್ಟಿದ್ದಾರೆ. ಆದರೆ ತಮ್ಮನನ್ನು ನೋಡಿ ಅಕ್ಕ ಮೋಕ್ಷಿತಾ ಕಣ್ಣೀರು ಹಾಕಿರುವುದು ಎಲ್ಲರ ಕರುಳು ಚುರುಕ್ ಅನ್ನುತ್ತೆ.
ಹೊಸ ವರ್ಷ ಬಿಗ್ಬಾಸ್ ಮನೆಯಲ್ಲೂ ಅದ್ಧೂರಿಯಾಗಿ ಸೆಲೆಬ್ರೆಷನ್ ಮಾಡಲಾಗಿದೆ. ಎಲ್ಲ ಸ್ಪರ್ಧಿಗಳು ಸಖತ್ ಆಗಿಯೇ ಕುಣಿದು ಕುಪ್ಪಳಿಸುತ್ತಿದ್ದರು. ಮೋಕ್ಷಿತಾ ಕೂಡ ನಾನೇನು ಕಮ್ಮಿ ಇಲ್ಲ ಎನ್ನುವಂತೆ ಬಿಗ್ಬಾಸ್ಗೆ ಬಂದ ಮೇಲೆ ಪ್ರೀತಿಯ ಸಹೋದರನ್ನು ಮರೆತು ಡ್ಯಾನ್ಸ್ ಮಾಡುತ್ತಿದ್ದರು. ಆದರೆ ಈ ವೇಳೆ ನೋಡಿ ಫುಲ್ ಶಾಕ್ ಆಗಿರೋದು. ಬಿಗ್ಬಾಸ್ ಮನೆಗೆ ಕುಟುಂಬ ಬರುತ್ತಿದ್ದಂತೆ ತಮ್ಮನನ್ನು ನೋಡಿ ಮೋಕ್ಷಿತಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಇಷ್ಟು ದಿನ ಬಿಟ್ಟು ಇದ್ದಿದ್ದೆ. ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೆ. ಪುಟಾಣಿ ಎಂದು ಕರೆದರೂ ವೀಲ್ ಚೇರ್ ಮೇಲಿದ್ದ ಸಹೋದರ, ಮೋಕ್ಷಿತಾರನ್ನ ಯಾರೆಂದು ಗುರುತಿಸಲಿಲ್ಲ. ಅದಕ್ಕೆ ನನ್ನನ್ನು ಮರೆತು ಹೋಗಿದ್ದಾನೆ. ಇಷ್ಟು ದಿನ ಮನೆಯಲ್ಲಿ ಇರದಿದ್ದಕ್ಕೆ ನನ್ನನ್ನು ಮರೆತು ಹೋಗಿ ಬಿಟ್ಟಿದ್ದಾನೆ ಎಂದು ಮೋಕ್ಷಿತಾ, ತಮ್ಮನನ್ನು ತಬ್ಬಿಕೊಂಡು ಕಣ್ಣೀರು ಹಾಕಿದ್ದಾರೆ. ಇದೇ ವೇಳೆ ಮೋಕ್ಷಿತಾ ತಂದೆ, ತಾಯಿ ಕೂಡ ಕಣ್ಣೀರು ಹಾಕಿರುವುದು ಎಲ್ಲರನ್ನೂ ಮೂಕವಿಸ್ಮಿತರಾಗಿ ಮಾಡುತ್ತದೆ.
ಮೋಕ್ಷಿತಾ ತಮ್ಮನ ಪರಿಸ್ಥಿತಿಯನ್ನು ನೋಡಿ ಮನೆಯಲ್ಲಿರುವ ಎಲ್ಲ ಸ್ಪರ್ಧಿಗಳು ಬೆರಗಾಗಿದ್ದರು. ಗೌತಮಿಯಂತೂ ದುಃಖಿಸಿರುವುದು ಎಲ್ಲರ ಮನ ಕದಡುವಂತೆ ಇತ್ತು. ಚೈತ್ರಾ, ಮಂಜು, ರಜತ್, ಹನುಮಂತು, ತ್ರಿವಿಕ್ರಮ್, ಧನರಾಜ್ ಎಲ್ಲರ ಮುಖದಲ್ಲಿನ ಭಾವ ಕೂಡ ಏನೋ ಹೇಳುವಂತೆ ಇತ್ತು.
BIG BOSS
BBK 11: 2ನೇ ಮಗುವಿನ ಬಗ್ಗೆ ಮಾತನಾಡಿದ ಧನರಾಜ್- ನಾಚಿ ನೀರಾದ ಪತ್ನಿ
Published
2 hours agoon
03/01/2025By
NEWS DESK2ಬಿಗ್ ಬಾಸ್ ಮನೆಯಲ್ಲಿ ಈ ವಾರ ಫ್ಯಾಮಿಲಿ ವೀಕ್ ನಡೆಯುತ್ತಿದೆ. ಸ್ಪರ್ಧಿಗಳ ಕುಟುಂಬಸ್ಥರು ಮನೆಗೆ ಎಂಟ್ರಿ ಕೊಡುತ್ತಿದ್ದಾರೆ. ಮೋಕ್ಷಿತಾ, ಉಗ್ರಂ ಮಂಜು, ರಜತ್, ಭವ್ಯಾ, ತ್ರಿವಿಕ್ರಮ್ ಮನೆಯವರೆಲ್ಲಾ ಬಿಗ್ ಬಾಸ್‌ಗೆ ಬಂದು ಖುಷಿಪಟ್ಟಿದ್ದಾರೆ. ಇದೀಗ ಧನರಾಜ್ ಪತ್ನಿ ಪ್ರಜ್ಞಾ ದೊಡ್ಮನೆಗೆ ಕಾಲಿಟ್ಟಿದ್ದಾರೆ. ಈ ವೇಳೆ, ಧನರಾಜ್ ಅವರು ಪತ್ನಿ ಬಳಿ ಎರಡನೇ ಮಗುವನ್ನು ಹೊಂದುವ ಬಗ್ಗೆ ಚರ್ಚೆ ನಡೆಸಿದ್ದಾರೆ.
ಜನವರಿ 2ರ ಎಪಿಸೋಡ್‌ನಲ್ಲಿ ಧನರಾಜ್ ಅವರ ಕುಟುಂಬ ದೊಡ್ಮನೆಗೆ ಬಂದಿದೆ. ಅಷ್ಟೇ ಅಲ್ಲ, ಅಲ್ಲಿ ಸಾಕಷ್ಟು ಫನ್ ಆಕ್ಟಿವಿಟಿ ನಡೆದಿದೆ. ಧನರಾಜ್ ಅವರದ್ದು ಕೂಡು ಕುಟುಂಬ ಆಗಿದ್ದು, ಮೊದಲಿಗೆ ಇಡೀ ಫ್ಯಾಮಿಲಿ ಬಿಗ್ ಬಾಸ್‌ಗೆ ಆಗಮಿಸಿ ಧನರಾಜ್ ಜೊತೆ ಹುಲಿ ಡ್ಯಾನ್ಸ್ ಮಾಡಿ ಖುಷಿಪಟ್ಟಿದ್ದಾರೆ. ಆ ನಂತರ ಧನರಾಜ್‌ಗೆ ಧೈರ್ಯ ತುಂಬಿ ಆಲ್ ಬಿ ಬೆಸ್ಟ್ ಹೇಳಿ ಮನೆಯಿಂದ ನಿರ್ಗಮಿಸಿದ್ದಾರೆ.
ಆ ನಂತರ ಧನರಾಜ್ ಅವರ ಪತ್ನಿ ಪ್ರಜ್ಞಾ ಆಚಾರ್ ಎಂಟ್ರಿ ಕೊಟ್ಟಿದ್ದಾರೆ. ಈ ವೇಳೆ, ಐಶ್ವರ್ಯಾಗೆ ಯಾವಾಗಲೂ ಉತ್ತಮ ಕೊಡುತ್ತಾ ಇದ್ರಿ. ಏನು ಸಮಾಚಾರ ಅವರಿಗೆ ಲೈನ್ ಹೊಡೀತಾ ಇದ್ರಿ ಅಂತ ಡೌಂಟ್ ನನಗೆ ಎಂದು ಧನರಾಜ್‌ಗೆ ಪತ್ನಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಆ ನಂತರ ಇತರೆ ಸ್ಪರ್ಧಿಗಳನ್ನು ಪತ್ನಿಗೆ ಪರಿಚಯಿಸಿದ ಬಳಿಕ ಕೆಲ ಕಾಲ ಪತ್ನಿ ಜೊತೆ ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
‘ಬಿಗ್ ಬಾಸ್’ ಮನೆಯ ಮುಖ್ಯದ್ವಾರದ ಎದುರು ಕುಳಿತುಕೊಳ್ಳಲು ಜಾಗವಿದೆ. ಅದು ಧನರಾಜ್ ಹಾಗೂ ಹನುಮಂತ ಅವರ ಫೇವರಿಟ್ ಜಾಗ. ಅಲ್ಲಿಯೇ ಕುಳಿತು ಧನರಾಜ್ ಅವರು ಕ್ಯಾಪ್ಟನ್ ಆಗುವ, ಉತ್ತಮ ಪಡೆಯುವ ಹಾಗೂ ಕಿಚ್ಚನ ಚಪ್ಪಾಳೆ ಪಡೆಯುವ ಕನಸು ಕಂಡಿದ್ದರು. ಅದು ನಿಜವಾಗಿದೆ ಎಂದು ಈ ವಿಚಾರವನ್ನು ಅವರು ಪತ್ನಿ ಬಳಿ ಹೇಳಿಕೊಂಡಿದ್ದಾರೆ. ಅದಕ್ಕೆ ಹೌದಾ, ಹಾಗಾದರೆ ಈಗೇನು ಕೇಳಿಕೊಳ್ಳುತ್ತೀರಿ ಎಂದು ಧನರಾಜ್‌ಗೆ ಪತ್ನಿ ಕೇಳಿದ್ದಾರೆ. ಆಗ ಧನರಾಜ್ ಅವರು ಮುಚ್ಚು ಮರೆ ನೇರವಾಗಿ ಮಾತನಾಡಿದ್ದಾರೆ.
ನನಗೆ ಎರಡನೇ ಮಗು ಬೇಕು ಎಂದಾಗ ಪ್ರಜ್ಞಾ ಅವರು ಎಂತ ಮರ್ರೆ ನೀವು ಎಂದು ನಾಚಿ ನೀರಾದರು. ಆಗ ಧನರಾಜ್, ನೀನು ರೆಡಿ ಇಲ್ವ? ಬೇಡ್ವಾ? ಎಂದು ಕೇಳಿದರು. ಈಗ ಮಾತನಾಡೋದು ಬೇಡ, ಇದನ್ನೆಲ್ಲ ಮನೆಗೆ ಬಂದು ಮಾತಾಡಬೇಕಲ್ವ ಎಂದರು ಪ್ರಜ್ಞಾ. ಆ ಬಳಿಕ ಧನರಾಜ್ ಅವರು ಸೈಲೆಂಟ್ ಆದರು. ಆ ನಂತರ ಮನೆಗೆ ಬಂದ ಮುದ್ದು ಮಗಳನ್ನು ಎತ್ತಿ ಖುಷಿಪಟ್ಟರು.
BIG BOSS
BBKS11: ಬಿಗ್ ಬಾಸ್ ವೀಕ್ಷಕರ ಮನಗೆದ್ದ ಮೋಕ್ಷಿತಾ ಮಾತು.. ಫ್ಯಾನ್ಸ್‌ಗಳಿಂದ ಫುಲ್ ಮಾರ್ಕ್ಸ್!
Published
3 hours agoon
03/01/2025By
NEWS DESK2ಕನ್ನಡದ ಬಿಗ್ ಬಾಸ್ ಸೀಸನ್ 11 ಜಗಳ, ಕೂಗಾಟ, ಕಿತ್ತಾಟದ ಬಳಿಕ ಪ್ರೀತಿ, ಸ್ನೇಹ, ಬಾಂಧವ್ಯ, ಕಣ್ಣೀರು, ಆತ್ಮೀಯ ಸಂಬಂಧಕ್ಕೆ ಸಾಕ್ಷಿಯಾಗಿದೆ. ಈ ವಾರ ಬಿಗ್ ಬಾಸ್ ಮನೆಗೆ 9 ಸ್ಪರ್ಧಿಗಳ ಕುಟುಂಬಸ್ಥರು, ಆತ್ಮೀಯರು ಬಂದು ಹೋಗಿದ್ದಾರೆ. ಇಷ್ಟು ದಿನ ಟಾಸ್ಕ್, ಎಲಿಮಿನೇಷನ್ ಅನ್ನೋ ಹೋರಾಟದಲ್ಲಿದ್ದ ಸ್ಪರ್ಧಿಗಳಿಗೆ ಈಗ ನೆಮ್ಮದಿ ಸಿಕ್ಕಿದೆ.
ಬಿಗ್ ಬಾಸ್ ಮನೆಗೆ ನಿಜವಾದ ಮನೆ ಸದಸ್ಯರು ಬಂದ ಮೇಲೆ ಸ್ಪರ್ಧಿಗಳ ಎನರ್ಜಿ ಲೆವೆಲ್ ಜಾಸ್ತಿಯಾಗಿದೆ. ಪ್ರತಿಯೊಬ್ಬ ಸ್ಪರ್ಧಿಗಳಿಗೂ ಇಷ್ಟು ದಿನ ಕಾಯುತ್ತಿದ್ದ ಗಳಿಗೆ ಎದುರಾಗಿದ್ದು, ಅತ್ಯಂತ ಪ್ರೀತಿಯ ಮಾತುಗಳನ್ನ ಹಂಚಿಕೊಂಡಿದ್ದಾರೆ.
ಭವ್ಯಾ, ಚೈತ್ರಾ, ಮೋಕ್ಷಿತಾ, ಗೌತಮಿ, ತ್ರಿವಿಕ್ರಮ್, ಮಂಜು, ಧನರಾಜ್, ಹನುಮಂತ, ರಜತ್ ಮನೆಯ ಸದಸ್ಯರೆಲ್ಲಾ ಬಿಗ್ ಬಾಸ್ ಮನೆಗೆ ಬಂದು ಹೋಗಿದ್ದಾರೆ. ಇವರೆಲ್ಲರ ಆಗಮನದ ಜೊತೆಗೆ ಬಿಗ್ ಬಾಸ್ ಮನೆ ಕೆಲವು ವಿಶೇಷ ಘಟನೆಗಳಿಗೆ ಸಾಕ್ಷಿಯಾಗಿದೆ. ಅದರಲ್ಲೂ ಮೋಕ್ಷಿತಾ ಅವರ ಕುಟುಂಬಸ್ಥರು ಬಂದು ಹೋಗಿದ್ದು ಬಿಗ್ ಬಾಸ್ ವೀಕ್ಷಕರ ಮನಮುಟ್ಟುವಂತೆ ಮಾಡಿದೆ.
ಬಿಗ್ ಬಾಸ್ ಸ್ಪರ್ಧಿ ಮೋಕ್ಷಿತಾ ಅವರನ್ನ ನೋಡಲು ಅವರ ತಂದೆ-ತಾಯಿ, ತಮ್ಮ ಆಗಮಿಸಿದ್ದರು. ಇವರನ್ನೆಲ್ಲಾ ನೋಡಿದ ಮೋಕ್ಷಿತಾ ಭಾವುಕರಾಗಿ ಕಣ್ಣೀರು ಹಾಕಿದರು. ಇದರ ಜೊತೆಗೆ ಬಿಗ್ ಬಾಸ್ ವೇದಿಕೆಯಲ್ಲಿ ಮನ ತುಂಬಿ ಮಾತನಾಡಿದ್ದಾರೆ. ಅದರಲ್ಲೂ ತನ್ನ ತಮ್ಮನ್ನೇ ತುಂಬಾ ದಿನಗಳಾದ ಬಳಿಕ ನನ್ನ ಮರೆತು ಬಿಟ್ಟಿದ್ದಾನೆ ಅನ್ನೋ ಮೋಕ್ಷಿತಾ ಅವರ ಮಾತು ಬಿಗ್ ಬಾಸ್ ನೋಡುಗರನ್ನ ಕಾಡುವಂತೆ ಮಾಡಿದೆ.
ತನ್ನ ತಮ್ಮನ ಬಗ್ಗೆ ವಿಶೇಷವಾದ ಮಾತುಗಳನ್ನಾಡಿದ ಮೋಕ್ಷಿತಾ ಅವರು, ನನ್ನ ತಮ್ಮನ ಬಗ್ಗೆ ಹೇಳಬೇಕು ಅಂದ್ರೆ ಅವನು ಹುಟ್ಟಿದ ಮೇಲೆ ನನಗೆ ಜವಾಬ್ದಾರಿ ಜಾಸ್ತಿ ಆಯಿತು. ನಾನು ಅವನಿಗೆ ಅಕ್ಕ ಮಾತ್ರ ಆಗಿರಲಿಲ್ಲ. ಅಮ್ಮ ಕೂಡ ಆದೆ. ಚಿಕ್ಕ ವಯಸ್ಸಿನಿಂದಲೂ ನನಗೆ ಅವನೇ ನನ್ನ ಪ್ರಪಂಚ. ಈಗಲೂ ಅಷ್ಟೇ ಅವನೇ ನನ್ನ ಪ್ರಪಂಚ. ಇವತ್ತಿಗೆ ನಾನು ಏನೇ ಮಾಡುತ್ತಾ ಇದ್ದರೂ ಏನೇ ಮಾಡೋದು ಇದ್ರೂ ಅದು ಅವನೊಬ್ಬನಿಗೋಸ್ಕರನೇ. ನನ್ನ ತಲೆಯಲ್ಲಿ ಏನೇ ಇದ್ರೂ ಅವನಿಗೋಸ್ಕರನೇ ಎಂದಿದ್ದಾರೆ.
ಇನ್ನು, ಸುಮಾರು ಜನ ಹೇಳ್ತಾರೆ ಮೋಕ್ಷಿತಾ ಮದುವೆ ಆಗು, ಮದುವೆ, ಮದುವೆ ಅಂತ. ಮದುವೆ ಅಂದ್ರೆ ನನಗೆ ಒಂದು ಭಯ ಇದೆ. ಮದುವೆ ಆಗೋ ಹುಡುಗ ಈ ಮೂರು ಜನರಿಂದ ನನ್ನ ಎಲ್ಲಿ ದೂರ ಮಾಡಿ ಬಿಡುತ್ತಾನೋ ಅನ್ನೋ ಭಯ ಇದೆ. ಹಾಗಾಗಿ ನಾನು ಮದುವೆಯನ್ನ ಮುಂದಕ್ಕೆ ಹಾಕುತ್ತಾ ಬರುತ್ತಾ ಇದ್ದೀನಿ. ಅಪ್ಪ, ಅಮ್ಮನಿಗೆ ನಾನು ಈ ವಿಷಯ ಹೇಳಿರಲಿಲ್ಲ ಎಂದು ಮೋಕ್ಷಿತಾ ಹೇಳಿದ್ದಾರೆ.
ಮೋಕ್ಷಿತಾ ಅವರ ಈ ಮಾತು ಕೇಳಿದ ತಂದೆ- ತಾಯಿ ಆ ಭಯನಾ ಬಿಗ್ ಬಾಸ್ ಮನೆಯಿಂದಲೇ ತೆಗೆದು ಹಾಕಬೇಕು. ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಮದುವೆ ಆಗಬೇಕು ಅಷ್ಟೇ ಎಂದಿದ್ದಾರೆ. ಮೋಕ್ಷಿತಾ ಮನೆಯವರ ಈ ಮಾತಿಗೆ ಬಿಗ್ ಬಾಸ್ ಸ್ಪರ್ಧಿಗಳು ಅರ್ಥ ಆಯಿತಾ, ಅರ್ಥ ಆಯಿತಾ ಎಂದು ನಗಿಸೋ ಪ್ರಯತ್ನ ಮಾಡಿದ್ದಾರೆ.
ಮೋಕ್ಷಿತಾ ಅವರ ಈ ಭಾವನಾತ್ಮಕ ಮಾತುಗಳು ಬಿಗ್ ಬಾಸ್ ವೀಕ್ಷಕರಿಗೆ ಬಹಳ ಇಷ್ಟವಾಗಿದೆ. ಸಾಕಷ್ಟು ಮಂದಿ ಮೋಕ್ಷಿತಾ ಅವರ ವಿಡಿಯೋಗಳನ್ನ ಹಂಚಿಕೊಂಡು ಪ್ರೀತಿಯಿಂದ ಶುಭಾಶಯ ಕೋರುತ್ತಿದ್ದಾರೆ.
BIG BOSS
BBK11: ಈ ವಾರ ಬಿಗ್ ಬಾಸ್ ಮನೆಯಿಂದ ಆಚೆ ಬರೋದು ಯಾರು? ಎಲಿಮಿನೇಷನ್‌ನಲ್ಲಿ ಬಿಗ್ ಟ್ವಿಸ್ಟ್!
Published
5 hours agoon
03/01/2025By
NEWS DESK2ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11, 96ನೇ ದಿನಕ್ಕೆ ಕಾಲಿಟ್ಟಿದೆ. ಸದ್ಯ ಬಿಗ್ಬಾಸ್ ಮನೆಯಲ್ಲಿ ಒಟ್ಟು 9 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಈ 10 ಸ್ಪರ್ಧಿಗಳು ಯಾರು ಈ ವಾರ ಬಿಗ್ಬಾಸ್ ಮನೆಯಿಂದ ಆಚೆ ಹೋಗಲಿದ್ದಾರೆ ಅಂತ ಕುತೂಹಲ ಮೂಡಿದೆ.
ಕಳೆದ ವಾರ ಬಿಗ್ಬಾಸ್ ಮನೆಯಿಂದ ಆಚೆ ಹೋಗಲು ಒಟ್ಟು 8 ಸ್ಪರ್ಧಿಗಳು ನಾಮಿನೇಟ್ ಆಗಿದ್ದರು. ಅವರ ಪೈಕಿ ಐಶ್ವರ್ಯಾ ಸಿಂಧೋಗಿ ಬಿಗ್ಬಾಸ್ ಮನೆಯಿಂದ ಆಚೆ ಬಂದಿದ್ದರು. ಆದ್ರೆ ಈ ವಾರ ಬಿಗ್ಬಾಸ್ ಮನೆಯಿಂದ ಯಾವ ಸ್ಪರ್ಧಿಯೂ ಆಚೆ ಹೋಗುವುದಿಲ್ಲ. ಏಕೆಂದರೆ ಈ ವಾರ ಫ್ಯಾಮಿಲಿ ರೌಂಡ್ ಆಗಿದ್ದ ಕಾರಣ ನಾಮಿನೇಷನ್ ಪ್ರಕ್ರಿಯೆ ನಡೆದಿಲ್ಲ.
ಹೀಗಾಗಿ ಈ ವಾರ ಯಾವೊಬ್ಬ ಸ್ಪರ್ಧಿಯೂ ಬಿಗ್ಬಾಸ್ ಮನೆಯಿಂದ ಆಚೆ ಹೋಗುವುದಿಲ್ಲ. 9 ಸ್ಪರ್ಧಿಗಳು ಈ ವಾರ ಸೇಫ್ ಆಗಿದ್ದಾರೆ. ಮುಂದಿನ ವಾರಕ್ಕೆ ಈ 9 ಜನರಲ್ಲಿ ಯಾರು ಬಿಗ್ ಮನೆಯಿಂದ ಆಚೆ ಹೋಗಲಿದ್ದಾರೆ ಎಂದು ಕಾದು ನೋಡಬೇಕಿದೆ.
ಇನ್ನೂ ಬಿಗ್ಬಾಸ್ ಮನೆಗೆ ಒಟ್ಟು 17 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು. ವಾರ ಕಳೆದಂತೆ ಬಿಗ್ಬಾಸ್ ಮನೆಯಿಂದ ಒಬ್ಬೊಬ್ಬರಾಗಿ ಆಚೆ ಬಂದಿದ್ದರು. ಸದ್ಯ ಈಗ ಬಿಗ್ಬಾಸ್ ಮನೆಗೆ ಈ 9 ಸ್ಪರ್ಧಿಗಳ ಕುಟುಂಬಸ್ಥರು ಎಂಟ್ರಿ ಕೊಟ್ಟಿದ್ದಾರೆ. ಜೊತೆಗೆ ಇನ್ನೂ ಕೆಲವೇ ದಿನಗಳು ಬಾಕಿ ಉಳಿದಿವೆ ಚೆನ್ನಾಗಿ ಆಡು ಅಂತ ಕಿವಿ ಮಾತನ್ನು ಹೇಳಿದ್ದಾರೆ. ಇನ್ಮುಂದೆ ಬಿಗ್ಬಾಸ್ ಮನೆಯಲ್ಲಿರೋ ಸ್ಪರ್ಧಿಗಳು ಯಾವ ರೀತಿ ಟೇಕ್ ಆಫ್ ಆಗಲಿದ್ದಾರೆ ಎಂದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
LATEST NEWS
ಶುಭ್ ಮನ್ ಗಿಲ್ ಸೇರಿ 4 ಕ್ರಿಕೇಟಿಗರಿಗೆ ಸಿಐಡಿ ಸಮನ್ಸ್ !
BBK 11: 2ನೇ ಮಗುವಿನ ಬಗ್ಗೆ ಮಾತನಾಡಿದ ಧನರಾಜ್- ನಾಚಿ ನೀರಾದ ಪತ್ನಿ
ದೆಹಲಿಯಲ್ಲಿ ದಟ್ಟವಾದ ಮಂಜು, ಶೀತ ಗಾಳಿ – ವಿಮಾನ, ರೈಲು ಸಂಚಾರದಲ್ಲಿ ವ್ಯತ್ಯಯ
ಪ್ಲೇಯಿಂಗ್-11ನಿಂದ ರೋಹಿತ್ ಶರ್ಮಾ ಡ್ರಾಪ್; ಸ್ಪಷ್ಟನೆ ಕೊಟ್ಟ ಬುಮ್ರಾ !
ಫೆ.17, 18ರಂದು ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ವರ್ಷಾವಧಿ ಮಹಾಪೂಜೆ ಸಂಭ್ರಮ
185 ರನ್ ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿದ ಭಾರತ; ಆಸೀಸ್ ಗೆ ಆರಂಭಿಕ ಆಘಾತ
Trending
- DAKSHINA KANNADA7 days ago
ದಿ।ಮನಮೋಹನ್ ಸಿಂಗ್ ಸಹಿ ಇರುವ ರೂ 1ರ ನೋಟು ರೂ.100 ಕ್ಕೆ ಮಾರಾಟ…!
- DAKSHINA KANNADA2 days ago
ಬೊಜ್ಜು ಕರಗಿಸಲು ವ್ಯಾಯಾಮದ ಅಗತ್ಯ ಇಲ್ಲ : ಮಾತ್ರೆ ತಿಂದರೆ ಸಾಕು..!
- BIG BOSS6 days ago
ಎಂಟು ಮಂದಿ ನಾಮಿನೇಟ್; ಈ ವಾರ ಮನೆಯಿಂದ ಹೊರ ಬರೋದು ಇವರೇ ?
- DAKSHINA KANNADA6 days ago
‘ದಿ ಅಕ್ಸಿಡೆಂಟಲ್ PM’ ಸುಳ್ಳಿನ ಕಂತೆ..! ಕ್ಷಮಿಸಿ ಎಂದ ಚಿತ್ರ ನಿರ್ಮಾಪಕ..!