Connect with us

    BIG BOSS

    BIGG BOSS: ಬಿಗ್​​ಬಾಸ್​​ ಮನೆಯಲ್ಲಿ ಕಿಸ್ಸಿಂಗ್ ಟಾಸ್ಕ್​.. ಮೂರು ತಿಂಗಳು ಆಗಿದೆ ಪ್ರ್ಯಾಕ್ಟೀಸ್ ಇಲ್ಲವೆಂದ ಧನು..!

    Published

    on

    ಕಿಚ್ಚ ಸುದೀಪ್ ಅವರು ನಡೆಸಿಕೊಡುವ ಬಿಗ್ ಬಾಸ್​ ಸೀಸನ್ 11 ಕೊನೆ ಹಂತಕ್ಕೆ ತಲುಪುತ್ತಿದೆ. ಕಳೆದ ವಾರ ಐಶ್ವರ್ಯ ಹೊರಗಡೆ ಬಂದಿದ್ದರು. ಈಗ ಮನೆಯಲ್ಲಿ ಕೇವಲ 9 ಸ್ಪರ್ಧಿಗಳು ಮಾತ್ರ ಉಳಿದಿದ್ದು ಇದರಲ್ಲಿ ಈ ವಾರ ಹೊರಗಡೆ ಬರುವವರು ಯಾರು ಎಂಬುದು ಕುತೂಹಲ ಇದೆ. ಇದರ ನಡುವೆ ಬಿಗ್​ಬಾಸ್​​ ಮನೆಯಲ್ಲಿ ಕಿಸ್ ಕೊಡುವ ಟಾಸ್ಕ್ ಕೊಡಲಾಗಿದ್ದು ಯಾವ್ಯಾವ ಸ್ಪರ್ಧಿ ಏನೆಲ್ಲಾ ಮಾಡಿದರು ಎನ್ನುವುದು ಇಲ್ಲಿದೆ.

    ಕ್ಯಾಪ್ಟನ್ ಆಗಿರುವ ಭವ್ಯ ಮಧ್ಯೆದಲ್ಲಿ ನಿಂತು ಟಾಸ್ಕ್ ಅನ್ನು ಗಮನಿಸುತ್ತಿದ್ದಾರೆ. ತ್ರಿವಿಕ್ರಮ್- ಚೈತ್ರಾ, ಗೌತಮಿ- ಧನರಾಜ್, ಮಂಜು- ಹನುಮಂತು ಹೀಗೆ ಇಬ್ಬಿಬ್ಬರ ಟೀಮ್ ಮಾಡಲಾಗಿದೆ. ಮೂವರು ಕೋಲಿನಿಂದ ಲಿಫ್ಟ್​​ಸ್ಟಿಕ್ ಅನ್ನು ಚೈತ್ರಾ, ಧನರಾಜ್ ಹಾಗೂ ಹನುಮಂತು ತುಟಿಗೆ ಹಚ್ಚಬೇಕು. ತಕ್ಷಣ ಈ ಮೂವರು ಓಡಿ ಹೋಗಿ ವೈಟ್​ ಬೋರ್ಡ್​ ಮೇಲೆ ಕಿಸ್​ ಕೊಡಬೇಕು. ಯಾರು ಹೆಚ್ಚು ಕಿಸ್ ಕೊಡುತ್ತಾರೋ ಅವರೇ ಇದರಲ್ಲಿ ಗೆಲುವು ಸಾಧಿಸುವವರು ಎಂದು ಹೇಳಬಹುದು.

    ಈ ರೀತಿ ಟಾಸ್ಕ್​​ ಆಡುವಾಗ ಧನರಾಜ್​ಗೆ ರಜತ್ ಕರೆಕ್ಟ್​ ಆಗಿ ಕಿಸ್​ಗಳು ಬರುತ್ತಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಸಖತ್ ಕಾಮಿಡಿಯಾಗಿ ಉತ್ತರಿಸಿದ ಧನು, ಮೂರು ತಿಂಗಳು ಆಯಿತಾಲ್ಲ, ಕರೆಕ್ಟ್​ ಆಗಿ ಬರುತ್ತಿಲ್ಲ ಎಂದಿದ್ದಾರೆ. ಇದಾದ ಮೇಲೆ ಮುತ್ತು ಕೊಡುವುದಿಲ್ವಾ ನನಗೆ, ನೀವು ಕೊಡುತ್ತೀರಾ ಎಂದು ಧನು, ಚೈತ್ರಾರನ್ನ ಓಡಿಸಿಕೊಂಡು ಹೋಗಿದ್ದಾರೆ. ಈ ವೇಳೆ ಚೈತ್ರಾ ತಂಗಿ ಸೇರಿ ಎಲ್ಲ ಸ್ಪರ್ಧಿಗಳು ಕೂಡ ಕುಳಿತಲ್ಲೇ ನಕ್ಕಿದ್ದಾರೆ.

    ಇನ್ನು ಈ ಟಾಸ್ಕ್​ನಲ್ಲಿ ಧನರಾಜ್, ಹನುಂತು ಗೆಲುವು ಸಾಧಿಸಿರಬಹುದೆಂದು ವಿಡಿಯೋದಲ್ಲಿ ಕಾಣುತ್ತೆ. ಈ ವೇಳೆ ಧನರಾಜ್, ಹನುಮಂತುನ ಹಿಡಿದು ಕಿಸ್ ಕೊಡಲು ಹೋಗಿ ತಬ್ಬಿಕೊಂಡಿದ್ದಾರೆ. ಕಿಸ್ ಕೊಡುವ ಟಾಸ್ಕ್​ನಲ್ಲಿ ರಜತ್ ಅವರು ಎಲ್ಲ ಸ್ಪರ್ಧಿಗಳನ್ನು ಕಿಚಾಯಿಸಿ, ತಮಾಷೆ ಮಾಡಿದ್ದಾರೆ. ಚೈತ್ರಾ, ಧನು, ಹನುಮಂತು ಅವರ ತಂದೆ, ತಾಯಿರಿಗೂ ಕೂಡ ರಜತ್ ಕಾಮಿಡಿ ಮಾಡಿದ್ದಾರೆ.

    BIG BOSS

    BBK 11: ಬಿಗ್ ಬಾಸ್ ಫಿನಾಲೆಗೆ ಇನ್ನೆಷ್ಟು ದಿನಗಳಿವೆ?- ಅನೌನ್ಸ್ ಮಾಡಿದ ಕಿಚ್ಚ

    Published

    on

    ಕನ್ನಡ ‘ಬಿಗ್ ಬಾಸ್’ ಸೀಸನ್ 11ರ ಆಟ ಇನ್ನೇನು ಕೆಲವೇ ದಿನಗಳಲ್ಲಿ ಮುಗಿಯಲಿದೆ. 97 ದಿನಗಳು ಪೂರೈಸಿರುವ ಬಿಗ್ ಬಾಸ್ ಆಟ ಇನ್ನೆಷ್ಟು ದಿನಗಳು ಇರಲಿದೆ ಎಂಬುದನ್ನು ಸುದೀಪ್ ದೊಡ್ಮನೆ ವೇದಿಕೆಯಲ್ಲಿ ತಿಳಿಸಿದ್ದಾರೆ. ಫಿನಾಲೆ ಬಗ್ಗೆ ಸುದೀಪ್ ಕ್ಲ್ಯಾರಿಟಿ ಕೊಟ್ಟಿದ್ದಾರೆ.

    2024ರಲ್ಲಿ ಸೆ.29ರಂದು ‘ಬಿಗ್ ಬಾಸ್ ಕನ್ನಡ 11’ಕ್ಕೆ ಅದ್ಧೂರಿ ಚಾಲನೆ ನೀಡಲಾಗಿತ್ತು. 17 ಸ್ಪರ್ಧಿಗಳು ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟಿದ್ದರು. ಒಬ್ಬೊಬ್ಬರೇ ಎಲಿಮಿನೇಟ್ ಆಗಿ ಪ್ರಸ್ತುತ 9 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. 97 ದಿನಗಳು ಪೂರೈಸಿರುವ ಈ ಆಟಕ್ಕೆ ಅಂತ್ಯ ಯಾವಾಗ? ಎಂಬುದಕ್ಕೆ ಈಗ ಉತ್ತರ ಸಿಕ್ಕಿದೆ.

    ಸುದೀಪ್ ವೇದಿಕೆಯಲ್ಲಿ ಹೇಳಿರುವಂತೆ ಇನ್ನೂ ಫಿನಾಲೆಗೆ ಇನ್ನು ಮೂರು ವಾರ ಇದೆ. ಅಂದರೆ ಇನ್ನು 21 ದಿನದಲ್ಲಿ ಫಿನಾಲೆ ನಡೆದು ಈ ಬಾರಿ ವಿನ್ನರ್ ಯಾರು ಎಂಬುದು ಖಾತ್ರಿ ಆಗಲಿದೆ. ಶೋ ಅಂತ್ಯವಾಗಲಿದೆ. ಈ ಸೀಸನ್ ಮೂಲಕ ಬಿಗ್ ಬಾಸ್ ಜೊತೆ ಸುದೀಪ್ ಅವರ ಪಯಣವೂ ಅಂತ್ಯವಾಗಲಿದೆ.

    ಅಂದಹಾಗೆ, ಈ ವಾರ ಎಲಿಮಿನೇಷನ್ ಪ್ರಕ್ರಿಯೆ ನಡೆಯಲ್ಲ. ಫ್ಯಾಮಿಲಿ ರೌಂಡ್ ಆಗಿದ್ದ ಹಿನ್ನೆಲೆ ವೋಟಿಂಗ್ ಲೈನ್ ಕ್ಲೋಸ್ ಇತ್ತು. ಹಾಗಾಗಿ ಮುಂದಿನ ವಾರ ಡಬಲ್ ಎಲಿಮಿನೇಷನ್ ಅಥವಾ ಮಿಡ್ ವೀಕ್ ಎಲಿಮಿನೇಷನ್ ನಡೆಯುವ ಸಾಧ್ಯತೆ ಇದೆ. 9 ಸ್ಪರ್ಧಿಗಳಿರುವ ಮನೆಯಲ್ಲಿ ಫಿನಾಲೆಗೆ 5 ಮಂದಿಯಷ್ಟೇ ಆಯ್ಕೆಯಾಗಲಿದ್ದಾರೆ. ಉಗ್ರಂ ಮಂಜು, ಗೌತಮಿ, ಭವ್ಯಾ, ತ್ರಿವಿಕ್ರಮ್, ಚೈತ್ರಾ, ಮೋಕ್ಷಿತಾ, ರಜತ್, ಧನರಾಜ್, ಹನುಮಂತ ಸ್ಪರ್ಧಿಗಳಿದ್ದಾರೆ. ಇವರಲ್ಲಿ ಯಾವ 5 ಸ್ಪರ್ಧಿಗಳಿಗೆ ಫಿನಾಲೆ ಟಿಕೆಟ್ ಸಿಗಲಿದೆ. ಯಾರು ಬಿಗ್ ಬಾಸ್ ವಿನ್ನರ್ ಪಟ್ಟ ಗೆಲ್ತಾರೆ? ಎಂಬ ಕುತೂಹಲ ವೀಕ್ಷಕರಲ್ಲಿ ಮೂಡಿದೆ.

    Continue Reading

    BIG BOSS

    BBK11; ಹನುಮಂತು, ಧನರಾಜ್ ಫುಲ್ ಟ್ರೋಲ್​.. ಇಣುಕಿ ನೋಡಿದ್ದಕ್ಕೆ ಕಿಚ್ಚನ ಕಚಗುಳಿ ಮಾತುಗಳು

    Published

    on

    ಶನಿವಾರದ ಎಪಿಸೋಡ್​ನಲ್ಲಿ ಕೋಪಗೊಂಡು ಮನೆಯಿಂದ ಹೊರ ಹೋಗಿದ್ದ ಕಿಚ್ಚ ಸುದೀಪ್ ಅವರು ಭಾನುವಾರದ ಸಂಚಿಕೆಯಲ್ಲಿ ಸಖತ್ ಖುಷಿ ಖುಷಿಯಾಗಿದ್ದಾರೆ. ಬಿಗ್​ಬಾಸ್​ ಸ್ಪರ್ಧಿಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹೇಗೆಲ್ಲಾ ಟ್ರೋಲ್ ಮಾಡುತ್ತಿದ್ದಾರೆ ಎನ್ನುವುದನ್ನು ಎಲ್ಲರಿಗೂ ಮನವರಿಕೆ ಮಾಡಿದ್ದಾರೆ. ಅಲ್ಲದೇ ಬಿಗ್​ಬಾಸ್​ ಫ್ರೆಂಡ್ಸ್​ ಧನರಾಜ್ ಹಾಗೂ ಹನುಮಂತು ಇಣುಕಿ ನೋಡಿದ್ದರ ಬಗ್ಗೆ ಕಿಚ್ಚ ಫುಲ್ ತಮಾಷೆ ಮಾಡಿದ್ದಾರೆ.

    ಬಾದ್​ಷಾ ಸುದೀಪ್ ಜೊತೆ ಸೂಪರ್ ಸಂಡೇ ಸ್ಪೆಶಲ್ ಟಾಕ್​ನ ಪ್ರೋಮೋ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಕಿಚ್ಚನ ಮಾತುಗಳಿಗೆ ಮನೆ ಸದಸ್ಯರೆಲ್ಲಾ ನಕ್ಕು ನಕ್ಕು ಸುಸ್ತಾಗಿದ್ದಾರೆ. ಹೊರಗಡೆ ಟ್ರೋಲ್ ಅಂತ ನಡೆಯುತ್ತಿರುತ್ತೆ. ನಿಮಗೆ ಯಾವ ಥರ ಇಮೇಜ್ ಇರಬಹುದು ಎಂದು ಸುದೀಪ್ ಪ್ರಶ್ನಿಸಿದ್ದಾರೆ. ವಿಡಿಯೋಗಳನ್ನು ಕೂಡ ಪ್ಲೇ ಮಾಡಿಸಿದ್ದಾರೆ.

    ಗೌತಮಿ ಜಾಧವ್​ರನ್ನ ಮಾತನಾಡಿಸಲು ಗಂಡ ಅಭಿಷೇಕ್ ಅವರು ಬಂದಾಗ ಇಬ್ಬರು ಬೇರೆ ರೂಮ್​ಗೆ ಹೋಗಿ ಒಬ್ಬರಿಗೊಬ್ಬರು ಕೇಕ್ ತಿನ್ನಿಸುತ್ತಿದ್ದರು. ಈ ವೇಳೆ ರೂಮ್ ಹೊರಗಡೆಯಿಂದ ಹನುಮಂತು, ಧನರಾಜ್ ಇಣುಕಿ ನೋಡುತ್ತಿದ್ದರು. ಇದು ಸದ್ಯ ಎಲ್ಲ ಕಡೆ ವೈರಲ್ ಆಗಿದೆ. ಇದರ ಬಗ್ಗೆ ಪ್ರಶ್ನೆ ಮಾಡಿರುವ ಸುದೀಪ್ ಅವರು, ನಿಮಗೆ ಏನ್ ನೋಡುವ ಕ್ಯೂರಾಸಿಟಿ ಇತ್ತು ಎಂದಿದ್ದಾರೆ. ಇದಕ್ಕೆ ಹನುಮಂತು ಕೇಕ್ ತಿನ್ನಿಸುತ್ತಿದ್ದರಲ್ಲ, ಅದನ್ನ ನೋಡುತ್ತಿದ್ದೇವು ಸರ್ ಎಂದಿದ್ದಾರೆ.

    ಮತ್ತೆ ಪ್ರಶ್ನೆ ಮಾಡಿದ ಸುದೀಪ್ ಅವರು, ಏನ್ ಎಕ್ಸ್​ಪರ್ಟ್ ಮಾಡುತ್ತಿದ್ದೀರಿ ಧನರಾಜ್ ಎಂದು ಕೇಳಿದಾಗ, 3 ತಿಂಗಳು ಆಯಿತಲ್ಲ ಸರ್.. ಎನ್ನುತ್ತಿದ್ದಂತೆ ಎಲ್ಲರು ನಕ್ಕಿದ್ದಾರೆ. ಒಂದು ವೇಳೆ ನೀವಿಬ್ಬರು ನೋಡುವಾಗ ಏನಾದರೂ ಕಂಟೇಂಟ್ ಸಿಕ್ಕಿದ್ದರೇ ಏನ್ ಮಾಡುತ್ತಿದ್ದೀರಿ ಎಂದು ಕಿಚ್ಚ ಪ್ರಶ್ನೆ ಮಾಡುತ್ತಿದ್ದಂತೆ, ಅದನ್ನೇ ರಿವೆಂಡ್ ಮಾಡಿ.. ರಿವೆಂಡ್ ಮಾಡಿ ಮನಸಲ್ಲೇ ಯೋಚನೆ ಮಾಡುತ್ತಿದ್ದೆ ಎಂದು ಹೇಳಿ ಎಲ್ಲರನ್ನೂ ಧನರಾಜ್ ನಗಿಸಿದ್ದಾರೆ.

    Continue Reading

    BIG BOSS

    BBK11: ಮೈ ಮರೆತು ಮಾತಾಡಿದ ತ್ರಿವಿಕ್ರಮ್‌, ಮಂಜು, ಗೌತಮಿ; ಮೂವರಿಗೂ ಬಿಗ್ ಶಾಕ್‌!

    Published

    on

    ಬಿಗ್ ಬಾಸ್ ಸೀಸನ್ 11 ಮನೆಯಲ್ಲಿ ಮತ್ತೆ ಹೋರಾಟದ ಕಿಚ್ಚು ಹಚ್ಚಿಕೊಳ್ಳುವ ಸುಳಿವು ಸಿಕ್ಕಿದೆ. ವಾರದ ಕತೆ ಕಿಚ್ಚನ ಜೊತೆ ಪಂಚಾಯ್ತಿಯಲ್ಲಿ ಸುದೀಪ್ ಮನೆಯವರು ಮಾಡಿರೋ ತಪ್ಪುಗಳನ್ನ ಹುಡುಕಿದ್ದು, ಇವತ್ತು ತ್ರಿವಿಕ್ರಮ್, ಮಂಜು, ಗೌತಮಿ ಈ ಮೂವರಿಗೆ ಚಳಿ ಬಿಡಿಸೋ ಸಾಧ್ಯತೆ ಇದೆ.

    ಬಿಗ್ ಬಾಸ್ ಮನೆಯಲ್ಲಿ ಈ ವಾರ ಕಂಟೆಸ್ಟೆಂಟ್ ತಮ್ಮ ರಕ್ತ ಸಂಬಂಧಗಳನ್ನ ಭೇಟಿ ಮಾಡಿದ್ದಾರೆ. ಆದರೆ ಮನೆ ಊಟ ತಿಂದು ಬಿಗ್ ಬಾಸ್ ಆಟದ ಮೈ ಮರೆತು ಮಾತನಾಡಿದ್ದಾರೆ. ಮನೆಯವರ ಮಾತನ್ನ ಕೇಳಿ ಎಚ್ಚರ ಆದವರು ಇದ್ದಾರೆ.

    ಮನೆಯವರ ಭೇಟಿಯಿಂದ ಬಿಗ್ ಬಾಸ್ ಮನೆಯಲ್ಲಿ ಪ್ರೀತಿ, ಸಂತೋಷ ಹೆಚ್ಚಾಗಿರಬಹುದು. ಆದರೆ ಸ್ಪರ್ಧಿಗಳ ಆಟದಲ್ಲೂ ಬದಲಾವಣೆ ಆಗಲಿದೆ. ಇದಕ್ಕೆ ಸಾಕ್ಷಿಯಾಗಿ ಮನೆಯವರ ಜೊತೆ ಮಾತಾಡಿದ ತ್ರಿವಿಕ್ರಮ್‌, ಮಂಜು, ಗೌತಮಿ ಅವರ ಮಾತುಗಳಾಗಿದೆ. ತ್ರಿವಿಕ್ರಮ್ ಅವರ ತಾಯಿ ಬಿಗ್ ಬಾಸ್ ಮನೆಯಲ್ಲಿ ಭವ್ಯ ಜೊತೆ ಸ್ವಲ್ಪ ದೂರ ಇರು ಅಂತ ನೇರವಾಗಿ ಹೇಳಿದ್ದಾರೆ. ಇದು ತ್ರಿವಿಕ್ರಮ್ ಅವರ ಮನಮುಟ್ಟಿದ್ದು, ಇನ್ಮುಂದೆ ಭವ್ಯಾ, ತ್ರಿವಿಕ್ರಮ್ ಅವರ ಗೇಮ್ ಪ್ಲಾನ್ ಚೇಂಜ್ ಆಗುವ ಸಾಧ್ಯತೆ ಇದೆ.

    ಇನ್ನು ಗೌತಮಿ ಅವರ ಪತಿ ಬಿಗ್ ಬಾಸ್ ಮನೆಯಲ್ಲಿ ನಿನ್ನನ್ನ ಉಪಯೋಗಿಸಿಕೊಳ್ಳುತ್ತಾ ಇರೋರು ಅವರು. ಬಿ ಕೇರ್ ಫುಲ್ ಎಂದ ಎಚ್ಚರಿಕೆ ಕೊಟ್ಟಿದ್ದಾರೆ. ಇದಕ್ಕೆ ಪ್ರತಿಯಾಗಿ ಮಂಜು ಅವರ ತಂಗಿ ಕೂಡ ಬೇಡ ಅವರ ಜೊತೆ ಇರೋದು ಬೇಡ. ಫ್ರೆಂಡ್‌ ಶಿಪ್‌ನ ಬ್ರೇಕ್ ಅಪ್ ಮಾಡು. ನನಗೆ ಪ್ರಾಮಿಸ್ ಮಾಡಬೇಕು ಎಂದು ಮಂಜು ತಂಗಿ ಭಾಷೆ ಕೂಡ ತೆಗೆದುಕೊಂಡಿದ್ದಾರೆ.

    ಇವತ್ತಿನ ಕಿಚ್ಚನ ಪಂಚಾಯ್ತಿಯಲ್ಲಿ ಮನೆಯವರ ಜೊತೆ ಕಾಲ ಕಳೆದ ಖುಷಿಯ ಜೊತೆಗೆ ಮೈ ಮರೆತು ಮಾತನಾಡಿರೋ ಮಾತು ಚರ್ಚೆಯಾಗಲಿದೆ. ಮನೆಯವರಿಗೆ ಮಾತು ಕೊಟ್ಟಂತೆ ತ್ರಿವಿಕ್ರಮ್, ಗೌತಮಿ, ಮಂಜು ಅವರು ನಡೆದುಕೊಳ್ತಾರಾ. ಗೆಳೆತನ, ಸ್ನೇಹ ಆಟದ ದಿಕ್ಕು ಬದಲಿಸುತ್ತಾ ಅನ್ನೋದು ರೋಚಕವಾಗಿದೆ.

    Continue Reading

    LATEST NEWS

    Trending