Home ಸಿನೆಮಾ ಶೃಂಗೇರಿಯಲ್ಲಿ ಗೌಡ್ರ ಫ್ಯಾಮಿಲಿ ಯಾಗ, ಡಿಂಪಲ್ ಕ್ವೀನ್ ದಿಢೀರ್ ಭೇಟಿ: ಏನಿದು ಕನೆಕ್ಷನ್.??

ಶೃಂಗೇರಿಯಲ್ಲಿ ಗೌಡ್ರ ಫ್ಯಾಮಿಲಿ ಯಾಗ, ಡಿಂಪಲ್ ಕ್ವೀನ್ ದಿಢೀರ್ ಭೇಟಿ: ಏನಿದು ಕನೆಕ್ಷನ್.??

ಕನ್ನಡ ಚಿತ್ರರಂಗದ ಡಿಂಪಲ್ ಕ್ವೀನ್ ರಚಿತಾ ರಾಮ್ ದಿಢೀರ್ ಅಂತ ಶೃಂಗೇರಿಗೆ ಭೇಟಿ ನೀಡಿ ತಾಯಿ ಶಾರದಾಂಬೆಯ ದರ್ಶನ ಪಡೆದಿದ್ದಾರೆ. ಶಾರದಾಂಬೆಯ ದರ್ಶನ ಮಾಡಿ ಹೊರಬರುತ್ತಿದ್ದಂತೆ, ಡಿಂಪಲ್ ಕ್ವೀನ್ ಜೊತೆ ಸೆಲ್ಫಿಗಾಗಿ ಅಭಿಮಾನಿಗಳು ಮುಗಿಬಿದ್ದರು. ಶೃಂಗೇರಿಯಿಂದ ನೇರವಾಗಿ ರಚಿತಾ ಅವರು ಕೊಲ್ಲೂರಿಗೆ ಪ್ರಯಾಣಿಸಿದ್ದು, ಕೊಲ್ಲೂರು ಶ್ರೀ ಮೂಕಾಂಬಿಕೆ ಕ್ಷೇತ್ರಕ್ಕೆ ಭೇಟಿಯಿತ್ತು, ದೇವಿಯ ಆಶೀರ್ವಾದ ಪಡೆದಿದ್ದಾರೆ.

ಇನ್ನು ಶೃಂಗೇರಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಬೀಡು ಬಿಟ್ಟಿದ್ದು, ಸಹಸ್ರ ಚಂಡಿಕಾಯಾಗ ನಡೆಸುತ್ತಿದ್ದಾರೆ. ವಿಶೇಷ ಹೋಮ ಮಾಡಿಸುವ ಸಲುವಾಗಿ ಎಚ್.ಡಿ.ದೇವೇಗೌಡರು ಕಳೆದ ಗುರುವಾರದಿಂದಲೇ ಶೃಂಗೇರಿಯಲ್ಲಿ ವಾಸ್ತವ್ಯ ಹೂಡಿದ್ದರು. ಇಂದು ಸಹಸ್ರ ಚಂಡಿಕಾ ಯಾಗದ ಪೂರ್ಣಾಹುತಿಯಿದ್ದು, ದೇವಾಲಯದ ಯಾಗ ಮಂಟಪದಲ್ಲಿ ನಡೆಯುತ್ತಿರುವ ಯಾಗದಲ್ಲಿ ದೇವೇಗೌಡರು ಹಾಗೂ ಅವರ ಪತ್ನಿ ಚೆನ್ನಮ್ಮ ಇದ್ದರು. ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಮಾಜಿ ಸಚಿವ ಎಚ್ ಡಿ ರೇವಣ್ಣ ಕುಟುಂಬ ಆಗಮಿಸಿದ್ದರು. ಯಾಗಮಂಟಪದಲ್ಲಿ ಪೂರ್ಣಾಹುತಿ ನಡೆಯುತ್ತಿದ್ದು, 110ಕ್ಕೂ ಅಧಿಕ ಋತ್ವಿಜರು 8 ಯಜ್ಞ ಕುಂಡದಲ್ಲಿ ಹೋಮ ನಡೆಸುತ್ತಿದ್ದಾರೆ. ಸಹಸ್ರ ಚಂಡಿಕಾ ಯಾಗ ಪೂರ್ಣಾಹುತಿ ಕಾರ್ಯಕ್ಕೆ ಇಡೀ ಕುಟುಂಬ ಸಾಕ್ಷಿಯಾಗಿದೆ.

ಇದ್ರ ಬೆನ್ನಲ್ಲೇ ರಚಿತಾ ರಾಮ್ ಕೂಡ ಆಗಮಿಸಿದ್ದು, ಹಲವಾರು ಊಹಾಪೋಹಗಳಿಗೆ ಕಾರಣವಾಗಿದೆ. ನಿಖಿಲ್ ಕುಮಾರ್ ಕೂಡ ಯಾಗದಲ್ಲಿ ಪಾಲ್ಗೊಳ್ಳಲು ಇಂದು ಶೃಂಗೇರಿಗೆ ಆಗಮಿಸಿದ್ದಾರೆ. ಈ ಹಿನ್ನಲೆಯಲ್ಲಿ ರಚಿತಾ ಕೂಡ ಭೇಟಿ ನೀಡಿರಬಹುದಾ ಎಂಬ ಅನುಮಾನ ಕಾಡಿದೆ. ಸೀತಾರಾಮ ಕಲ್ಯಾಣ ಚಿತ್ರದ ನಂತರ ಇವರಿಬ್ಬರ ನಡುವೆ ಅದೇನೋ ಸಂಥಿಂಗ್ ಸಂಥಿಂಗ್ ಇದೆ ಅಂತ ಗಾಂಧಿನಗರದಲ್ಲಿ ಗುಲ್ಲೆದ್ದಿದೆ. ಇದಕ್ಕೆ ತಕ್ಕಂತೆ ಡಿಂಪಲ್ ಕ್ವೀನ್ ಶೃಂಗೇರಿ ಭೇಟಿ ಅನುಮಾನಕ್ಕೆ ಮತ್ತಷ್ಟು ಪುಷ್ಟಿ ನೀಡುವಂತಿದೆ.

ಸದ್ಯ ರಚಿತಾ ರಾಮ್ ಕನ್ನಡ ಸಿನಿಮಾಗಳ ಜೊತೆಗೆ ಮೊದಲ ಬಾರಿಗೆ ತೆಲುಗು ಸಿನಿಮಾ ಮಾಡುತ್ತಿದ್ದಾರೆ. ‘ಸೂಪರ್ ಮಚ್ಚಿ’ ಎಂಬ ಸಿನಿಮಾ ಮೂಲಕ ಗುಳಿಕೆನ್ನೆ ಬೆಡಗಿ ಟಾಲಿವುಡ್ ಗೆ ಕಾಲಿಟ್ಟಿದ್ದಾರೆ.

- Advertisment -

RECENT NEWS

ಮಂಗಳೂರು- ಉಡುಪಿಗೆ ಕೊರೋನಾ ಭಯದಿಂದ ಕೊಂಚ ನೆಮ್ಮದಿ- ಕಾಸರಗೋಡಿಗೆ ಭಾರಿ ಭೀತಿ..!!

ಮಂಗಳೂರು- ಉಡುಪಿಗೆ ಕೊರೋನಾ ಭಯದಿಂದ ಕೊಂಚ ನೆಮ್ಮದಿ- ಕಾಸರಗೋಡಿಗೆ ಭಾರಿ ಭೀತಿ..!! ಮಂಗಳೂರು /ಉಡುಪಿ/ಕಾಸರಗೋಡು : ಇಂದು ಕೂಡ ಕರಾವಳಿಯ ಜನತೆಗೆ ನಮ್ಮದಿಯ ಉಸಿರು ಬಿಟ್ಟಿದ್ದಾರೆ. ಕೋರೊನದ ವಿರುದ್ದದ ಜಿಲ್ಲಾಡಳಿತಗಳು, ಸರ್ಕಾರ, ಜನಪ್ರತಿನಿಧಿಗಳು ನಡೆಸುತ್ತಿರುವ ಸಮರಕ್ಕೆ...

ಗಡಿ ದಾಟಲು ಬಲವಂತದ ಯತ್ನ : ತಡೆದ ಕರ್ನಾಟಕ ಪೊಲೀಸರ ಮೇಲೆ ಕಲ್ಲು ತೂರಾಟ..! 

ಗಡಿ ದಾಟಲು ಬಲವಂತದ ಯತ್ನ : ತಡೆದ ಕರ್ನಾಟಕ ಪೊಲೀಸರ ಮೇಲೆ ಕಲ್ಲು ತೂರಾಟ..!  ಸುಳ್ಯ: ಕೇರಳ ಗಡಿ ದಾಟಲು ಯತ್ನಿಸಿ ವಿಫಲನಾದ ಯುವಕ ಕರ್ನಾಟಕ ಪೊಲೀಸರು ಮತ್ತು ವಾಹನದ ಮೇಲೆ ಕಲ್ಲು ತೂರಿದ...

ಬಂಟ್ವಾಳದಲ್ಲಿ ಆಶಾ ಕಾರ್ಯಕರ್ತೆಯನ್ನು ನಿಂದಿಸಿ ಬೆದರಿಕೆ ಹಾಕಿದ ಆರೋಪಿಗಳು ಎರೆಸ್ಟ್..!

ಬಂಟ್ವಾಳದಲ್ಲಿ ಆಶಾ ಕಾರ್ಯಕರ್ತೆಯನ್ನು ನಿಂದಿಸಿ ಬೆದರಿಕೆ ಹಾಕಿದ ಆರೋಪಿಗಳು ಎರಸ್ಟ್..! ಬಂಟ್ವಾಳ : ಬಂಟ್ವಾಳದಲ್ಲಿ ಆಶಾ ಕಾರ್ಯಕರ್ತೆಯನ್ನು ನಿಂದಿಸಿ ಬೆದರಿಕೆ ಹಾಕಿದ ಆರೋಪಿಗಳನ್ನು ಪೊಲಿಸರು ಬಂಧಿಸಿದ್ದಾರೆ. ಬಂಟ್ವಾಳ ಅಮ್ಟಾಡಿ ನಿವಾಸಿಗಳಾದ ಮಾರಪ್ಪ ಪೂಜಾರಿ ಹಾಗೂ...

ಮಂಗಳೂರು ರೈಲುಗಳಲ್ಲಿ ಕೂಡ ಭರದಿಂದ ಸಾಗಿದೆ ಕೊರೊನಾ ಐಸೋಲೇಷನ್ ವಾರ್ಡ್ ಕಾರ್ಯ

ಮಂಗಳೂರು ರೈಲುಗಳಲ್ಲಿ ಕೂಡ ಭರದಿಂದ ಸಾಗಿದೆ ಕೊರೊನಾ ಐಸೋಲೇಷನ್ ವಾರ್ಡ್ ಕಾರ್ಯ ಮಂಗಳೂರು: ಕೊರೋನ ಸೋಂಕು ವೇಗವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ರೈಲು ಬೋಗಿಗಳಲ್ಲಿ ಐಸೋಲೇಶನ್ ವಾರ್ಡ್ ತೆರೆಯುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಮಂಡಳಿ ಕೊಂಕಣ...