Home ಕರ್ನಾಟಕ ವಾರ್ತೆ ಲಾಕ್ ಡೌನ್ ಟೈಮ್ ನಲ್ಲಿ ಸಾವಯುವ ಕೃಷಿಕನಾದ ರಿಯಲ್ ಸ್ಟಾರ್ ಉಪೇಂದ್ರ..!

ಲಾಕ್ ಡೌನ್ ಟೈಮ್ ನಲ್ಲಿ ಸಾವಯುವ ಕೃಷಿಕನಾದ ರಿಯಲ್ ಸ್ಟಾರ್ ಉಪೇಂದ್ರ..!

ಕೆಮಿಕಲ್ ಬಳಸದೆ ಶುದ್ಧ ತರಕಾರಿ-ಹೂವು ಬೆಳೆದು ಕೃಷಿಕರಿಗೆ ಪ್ರೋತ್ಸಾಹಿಸಿದ ಕನ್ನಡ ನಟ…

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಚಿತ್ರಗಳ ಮೂಲಕ ತನ್ನದೇ ಆದ ಛಾಪು ಮೂಡಿಸಿರುವ ರಿಯಲ್ ಸ್ಟಾರ್ ಉಪೇಂದ್ರ ಈಗ ತರಕಾರಿ ಕೃಷಿ ಮಾಡಿ ಸುದ್ದಿಯಾಗಿದ್ದಾರೆ.

ಲಾಕ್ ಡೌನ್ ಅವಧಿಯಲ್ಲಿ ನಗರ ಪ್ರದೇಶದ ಬಹುತೇಕರು ಕೈಕಟ್ಟಿ ಕುಳಿತಿದ್ದರೆ, ಉಪೇಂದ್ರ ಮಾತ್ರ ಸುಮ್ಮನೆ ಕೂರಲಿಲ್ಲ.

ಮೂರು ತಿಂಗಳ ಲಾಕ್ ಡೌನ್ ಕಾಲದಲ್ಲಿ ಸಾವಯವ ಪದ್ಧತಿಯಲ್ಲಿ ತರಕಾರಿ, ಹಣ್ಣುಗಳನ್ನು ಬೆಳೆದು ತೋರಿಸಿದ್ದಾರೆ.

ತಾವು ತರಕಾರಿ ಬೆಳೆದಿರುವುದನ್ನು ವಿಡಿಯೋ ಮಾಡಿ, ತನ್ನ ಇನ್ ಸ್ಟಾ ಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಈಗ ಫೇಸ್ ಬುಕ್, ಇನ್ ಸ್ಟಾ ಗ್ರಾಂನಲ್ಲಿ ಭಾರೀ ವೈರಲ್ ಆಗಿದೆ.

“ಕೇವಲ ಎರಡು ತಿಂಗಳಲ್ಲಿ ತರಕಾರಿ ಹೇಗೆ ಬೆಳೆದಿದೆ ನೋಡಿ..  ಬದನೆಕಾಯಿ, ಸೌತೆಕಾಯಿ, ಚೆಂಡು ಹೂವು ಚೆನ್ನಾಗಿ ಬಂದಿವೆ.

ಇದಕ್ಕೆ ಯಾವುದೇ ರಾಸಾಯನಿಕ ಬಳಕೆ ಮಾಡಿಲ್ಲ. ಕೇವಲ ದನದ ಗೊಬ್ಬರ ಮತ್ತು ನೀರು ಹಾಕಿ ಬೆಳೆಸಿದ್ದೇವೆ.

ಎಷ್ಟೊಂದು ತಾಜಾ ಆಗಿ ಬೆಳೆದಿದೆ ನೋಡಿ..”ಎಂದು ಉಪೇಂದ್ರ ತರಕಾರಿ ಹಾಗೂ ಹೂ ರಾಶಿ ಹಾಕಿ ತೋರಿಸುವ ವಿಡಿಯೋ ಇದೆ.

“ಈ ತರಕಾರಿಗೇನೂ ಹುಳ ಬರಲ್ಲ ಅಂತಲ್ಲ.. ಎಲ್ಲೋ ಒಂದಷ್ಟು ಹುಳ ಬಿದ್ದಿರಬಹುದು. ಈ ಭೂಮಿ ಮೇಲೆ ಅದಕ್ಕೂ ಬದುಕುವ ಹಕ್ಕಿದೆಯಲ್ಲಾ..

ಪ್ರಕೃತಿಯಲ್ಲಿ ಹುಳು, ಹುಪ್ಪಟೆ, ಚಿಟ್ಟೆ ಎಲ್ಲವೂ ನಮ್ಮ ಜತೆ ಬದುಕಬೇಕಲ್ಲಾ..? ಇಷ್ಟು ಸಣ್ಣ ಸಮಸ್ಯೆಗಾಗಿ ಹುಳು, ಹುಪ್ಪಟೆಗಾಗಿ ವಿಪರೀತ ಕ್ರಿಮಿನಾಶಕ ಹೊಡೆದು ಭೂಮಿಯನ್ನು ಹಾಳು ಮಾಡುತ್ತಿದ್ದೇವೆ ಎಂದು ವಿಡಿಯೋದಲ್ಲಿ ಉಪೇಂದ್ರ ಹೇಳುತ್ತಾರೆ.

ಇಂಥ ತರಕಾರಿಗಳಿಂದ ಆರೋಗ್ಯವೂ ಒಳ್ಳೆದಿರತ್ತೆ ಎನ್ನುವ ಮೂಲಕ ಉಪೇಂದ್ರ ಅವರು ಸಾವಯವ ತರಕಾರಿ ಬೆಳೆಸುವಂತೆ ಕೃಷಿಕರನ್ನು ಪ್ರೋತ್ಸಾಹಿಸಿದ್ದಾರೆ.

ಜೊತೆಗೆ ತಾವು ನಟನೆಗೂ ಸೈ, ಕೃಷಿಯಲ್ಲೂ ಸೈ ಎಂದು ತನ್ನ ರಿಯಲ್ ಕಥೆಯನ್ನು ಉಪೇಂದ್ರ ತೋರಿಸಿಕೊಟ್ಟಿದ್ದಾರೆ.

ಆದರೆ, ಈ ತರಕಾರಿ ಬೆಳೆದಿರುವುದು ಎಲ್ಲಿ ಎನ್ನುವುದನ್ನು ಮಾತ್ರ ಉಪೇಂದ್ರ ವಿಡಿಯೋದಲ್ಲಿ ಹೇಳಿಕೊಂಡಿಲ್ಲ..

RECENT NEWS

ನಾಳೆ ಮಂಗಳವಾರ 11:30ಕ್ಕೆ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ..!

ನಾಳೆ ಮಂಗಳವಾರ 11:30ಕ್ಕೆ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ..! ಬೆಂಗಳೂರು : ರಾಜ್ಯ ದ್ವಿತೀಯ ಪಿಯುಸಿ ಪರೀಕ್ಷೆಗಳ ಫಲಿತಾಂಶ  ನಾಳೆ ಮಂಗಳವಾರ  ಪ್ರಕಟವಾಗಲಿದೆ. ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್...

ಉಡುಪಿ ಜಿಲ್ಲೆಗೆ ಸದ್ಯಕ್ಕೆ ಲಾಕ್ಡೌನ್ ಅಗತ್ಯವಿಲ್ಲ – ರಘುಪತಿ ಭಟ್

ಉಡುಪಿ : ಉಡುಪಿ ಜಿಲ್ಲೆ ಸದ್ಯಕ್ಕೆ ಲಾಕ್ಡೌನ್ ಅಗತ್ಯವಿಲ್ಲ ಅಂತ ಶಾಸಕ ರಘುಪತಿ ಭಟ್ ಹೇಳಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು ಜನಜೀವನ ಈಗಷ್ಟೇ ಚೇತರಿಸಿಕೊಳ್ಳುತ್ತಿದೆ. ಮತ್ತೆ ಲಾಕ್ಡೌನ್ ಮಾಡಿದರೆ ಆರ್ಥಿಕತೆಯ ಮೇಲೆ ಭಾರಿ ಹೊಡೆತ ಬೀಳಲಿದೆ....

ಗುರುವಾರದಿಂದ ಒಂದು ವಾರ ದಕ್ಷಿಣಕನ್ನಡ ಜಿಲ್ಲೆ ಲಾಕ್ ಡೌನ್

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿರುವ ಕೊರೊನಾ ಸೋಂಕು ಆತಂಕಕ್ಕೆ ಕಾರಣವಾಗಿರುವ ಹಿನ್ನಲೆಯಲ್ಲಿ ಜುಲೈ 16 ರಿಂದ ಜಿಲ್ಲೆಯಲ್ಲಿ ಒಂದು ವಾರಗಳ ಕಾಲ ಲಾಕ್ ಡೌನ್ ಜಾರಿಗೆ ತರಲಾಗುವುದು...

ಪಾಣೆಮಂಗಳೂರು ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಮಹಿಳೆ ಶವ ಪತ್ತೆ

ಬಂಟ್ವಾಳ: ಪಾಣೆ ಮಂಗಳೂರು ನೂತನ ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಮಹಿಳೆಯ ಮೃತ ದೇಹ ಇಂದು ಪತ್ತೆಯಾಗಿದೆ. ಮೃತ ಮಹಿಳೆಯನ್ನು ಮೂಡ ಗ್ರಾಮದ ನಿವಾಸಿ ಗೋಪಿ ಪೂಜಾರಿ(49) ಎಂದು ಗುರುತಿಸಲಾಗಿದೆ. ಇವರು...
error: Content is protected !!