Home ಕರ್ನಾಟಕ ವಾರ್ತೆ ಓಟ ನಿಲ್ಲಿಸಿದ ‘ಆಟಗಾರ’.. ಚಿರನಿದ್ರೆಗೆ ಚಾರಿದ ಚಿರಂಜೀವಿ ಸರ್ಜಾ…!

ಓಟ ನಿಲ್ಲಿಸಿದ ‘ಆಟಗಾರ’.. ಚಿರನಿದ್ರೆಗೆ ಚಾರಿದ ಚಿರಂಜೀವಿ ಸರ್ಜಾ…!

ಇಹಲೋಕ ತ್ಯಜಿಸಿದ ಸರ್ಜಾ ಕುಟುಂಬದ ಕುಡಿ, ನಟಿ ಮೇಘನಾ ರಾಜ್ ಮುದ್ದಿನ ಪತಿ…!

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.

ಚಿರಂಜೀವಿ ಸರ್ಜಾ ಅವರಿಗೆ ನಿನ್ನೆ ರಾತ್ರಿಯಿಂದ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು.

ಈ ಹಿನ್ನೆಲೆ ಇಂದು ಮಧ್ಯಾಹ್ನ 3:30ರ ಸುಮಾರಿಗೆ ಅಶೋಕ ಪಿಲ್ಲರ್ ಬಳಿ ಇರುವ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು.

ನಿಯಮಗಳಂತೆ ಅವರ ಸ್ವಾಬ್ ಕಲೆಕ್ಟ್ ಮಾಡಿ ಲ್ಯಾಬ್ ಗೆ ಕಳಿಸಲಾಗಿದೆ. ಅನಾರೋಗ್ಯಕ್ಕೆ ಕಾರಣವೇನು ಎನ್ನುವುದು ತಿಳಿದುಬಂದಿಲ್ಲ.

ಸದ್ಯ ಜಯನಗರದ ಅಪೊಲೊ ಆಸ್ಪತ್ರೆಯಲ್ಲಿ ಚಿರಂಜೀವಿ ಸರ್ಜಾ ಮೃತದೇಹ ಇಡಲಾಗಿದೆ.

ಕೆಲವೇ ಕ್ಷಣಗಳಲ್ಲಿ ಪೋಲೀಸ್ ಇಲಾಖೆಗೆ ಹಸ್ತಾಂತರ ಮಾಡಲಾಗುತ್ತದೆ ಎಂದು ಅಪೊಲೊ ಆಸ್ಪತ್ರೆ ಮೂಲಗಳ ಮಾಹಿತಿ ನೀಡಿವೆ.

ಇವರು ಹುಟ್ಟಿದ್ದು ಬೆಂಗಳೂರಿನಲ್ಲಿ. ತಮ್ಮ ಬಾಲ್ಯ ಶಿಕ್ಷಣವನ್ನು ಬಾಲ್ಡ್ವಿನ್ ಬಾಲಕರ ಫ್ರೌಡ ಶಾಲೆಯಲ್ಲಿ ಪೂರ್ಣಗೊಳಿಸಿದರು.

ಇವರು ಸುಮಾರು 4 ವರ್ಷಗಳಿಂದ ಅವರ ಚಿಕ್ಕಪ್ಪರಾದ ಅರ್ಜುನ್ ಸರ್ಜಾ ಅವರ ಸಹಾಯಕ ನಿರ್ದೇಶಕರಾಗಿ ಕೆಲಸವನ್ನು ಮಾಡಿದರು.

ಇವರು 2009 ರಲ್ಲಿ ‘ವಾಯುಪುತ್ರ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದರು.

ಬಳಿಕ ದಂಡಂ ದಶಗುಣಂ, ವರದ ನಾಯಕ, ಸಿಂಗ ಸೇರಿ ಸುಮಾರು 22 ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದರು.

ಕನ್ನಡ ಚಿತ್ರರಂಗದಲ್ಲಿ ವಿಶಿಷ್ಠ ನಟನೆಯ ಮೂಲಕ ಗುರುತಿಸಿಕೊಂಡಿರುವ ನಟ ಚಿರಂಜೀವಿ ಸರ್ಜಾ ಅವರು ನಟಿ ಮೇಘನಾ ರಾಜ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು.

ನಟಿ ಮೇಘನಾ ರಾಜ್​ ಅವರ ಜೊತೆ 2017ರಲ್ಲಿ ನಿಶ್ವಿತಾರ್ಥ ಮಾಡಿಕೊಂಡು, 2018 ರಲ್ಲಿ ವಿವಾಹವಾಗಿದ್ದರು.

ಇದಾದ ಎರಡೇ ವರ್ಷದಲ್ಲಿ ಇದೀಗ ಅವರು ಮೃತಪಟ್ಟಿದ್ದಾರೆ.

39 ವರ್ಷದ ಚಿರಂಜೀವಿ ಸರ್ಜಾ ಅವರ ಅಕಾಲಿಕ ನಿಧನಕ್ಕೆ ಕನ್ನಡ ಚಿತ್ರರಂಗ, ಅಭಿಮಾನಿಗಳು ದಿಗ್ಬ್ರಮೆಗೊಂಡಿದ್ದಾರೆ.

ಆಸ್ಪತ್ರೆಯಲ್ಲಿ ಚಿರಂಜೀವಿ ಸರ್ಜಾ ಅವರ ತಮ್ಮ ಧ್ರುವ ಸರ್ಜಾ, ಪತ್ನಿ ಮೇಘನಾ ರಾಜ್ ಹಾಗೂ ಸುಂದರರಾಜ್, ಪ್ರಮೀಳಾ ಜೋಷಾಯ್ ಇದ್ದಾರೆ. ಕುಟುಂಬಸ್ಥರು ಹಾಗೂ ಅಭಿಮಾನಿಗಳ ಆಕ್ರಂದನ ಮುಗಿಲುಮುಟ್ಟಿದೆ.

RECENT NEWS

ಅತ್ಯಾಚಾರ ಪ್ರಕರಣ: ಕೇರಳ ಬಿಷಪ್‌ ಮುಲಾಕ್ಕಲ್​​​ ವಿರುದ್ಧ ಜಾಮೀನು ರಹಿತ ವಾರೆಂಟ್​​ ಹೊರಡಿಸಿದ ಕೋರ್ಟ್​..!

ಅತ್ಯಾಚಾರ ಪ್ರಕರಣ: ಕೇರಳ ಬಿಷಪ್‌ ಮುಲಾಕ್ಕಲ್​​​ ವಿರುದ್ಧ ಜಾಮೀನು ರಹಿತ ವಾರೆಂಟ್​​ ಹೊರಡಿಸಿದ ಕೋರ್ಟ್​..! ತಿರುವಂತನಪುರ : ಸಾಲುಸಾಲು ಲೈಂಗಿಕ ದೌರ್ಜನ್ಯ ಆರೋಪಗಳನ್ನು ಎದುರಿಸುತ್ತಿರುವ ಜಲಂಧರ್​ನ ಮಾಜಿ ಬಿಷಪ್ ಫ್ರಾಂಕೊ ಮುಲಾಕ್ಕಲ್ ಜಾಮೀನು ಅರ್ಜಿಯನ್ನು...

9 ವರ್ಷಗಳ ಅನಂತಪದ್ಮನಾಭ ಸ್ವಾಮಿ ದೇಗುಲ ವಿವಾದ ಇತ್ಯರ್ಥ ಮಾಡಿದ ಸುಪ್ರೀಂ ಕೋರ್ಟ್..!

9 ವರ್ಷಗಳ ಅನಂತಪದ್ಮನಾಭ ಸ್ವಾಮಿ ದೇಗುಲ ವಿವಾದ ಇತ್ಯರ್ಥ ಮಾಡಿದ ಸುಪ್ರೀಂ ಕೋರ್ಟ್..! ನವದೆಹಲಿ : ಕೇರಳದ ತಿರುವನಂತಪುರದಲ್ಲಿರುವ ಪ್ರಸಿದ್ಧ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಆಡಳಿತ ಮತ್ತು ಪೂಜೆ ನಡೆಸುವ ಅಧಿಕಾರವನ್ನು ರಾಜಮನೆತನಕ್ಕೆ ವಹಿಸಿ...

ದ.ಕ‌ ಜಿಲ್ಲೆಯಲ್ಲಿ ಅರ್ಧಶತಕ ದಾಖಲಿಸಿದ ಕೊರೊನಾ ಸಾವಿನ ಸಂಖ್ಯೆ: ಇಂದು ಕೂಡ ಸ್ಪೋಟ 131 ಪ್ರಕರಣ ಪತ್ತೆ..!

ದ.ಕ‌ ಜಿಲ್ಲೆಯಲ್ಲಿ ಅರ್ಧಶತಕ ದಾಖಲಿಸಿದ ಕೊರೊನಾ ಸಾವಿನ ಸಂಖ್ಯೆ: ಇಂದು ಕೂಡ ಸ್ಪೋಟ 131 ಪ್ರಕರಣ ಪತ್ತೆ..! ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮತ್ತೆ ನಾಲ್ವರು ಸಾವನ್ನಪ್ಪಿದ್ದಾರೆ. ಈ ಮೂಲಕ ಕೊರೊನಾ...

ನಾಳೆ ಮಂಗಳವಾರ 11:30ಕ್ಕೆ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ..!

ನಾಳೆ ಮಂಗಳವಾರ 11:30ಕ್ಕೆ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ..! ಬೆಂಗಳೂರು : ರಾಜ್ಯ ದ್ವಿತೀಯ ಪಿಯುಸಿ ಪರೀಕ್ಷೆಗಳ ಫಲಿತಾಂಶ  ನಾಳೆ ಮಂಗಳವಾರ  ಪ್ರಕಟವಾಗಲಿದೆ. ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್...
error: Content is protected !!