ಬಿಗಿ ಭದ್ರತೆಯಲ್ಲಿ ಮುಂಬೈಗೆ ಬಂದಿಳಿದ ಕಂಗನಾಳಿಂದ ಸಿಎಂ ಉದ್ಧವ್ ಠಾಕ್ರೆಗೆ ಬಹಿರಂಗ ಸವಾಲು..!
ಮುಂಬೈ : ಪರವಿರೋಧ ಬೆಂಬಲಿಗರ ಘೋಷಣೆಯೊಂದಿಗೆ ಸದ್ಯ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಮುಂಬೈಗೆ ಬಂದಿಳಿದಿದ್ದಾರೆ. ವಿಮಾನ ನಿಲ್ದಾಣದಲ್ಲಿ ಭಾರೀ ಸಂಖ್ಯೆಯಲ್ಲಿ ಪ್ರತಿಭಟನಾಕಾರರು/ಅಭಿಮಾನಿಗಳು ಜಮಾಯಿಸಿದ್ದರು.
ಈ ನಡುವೆ ಕಂಗನಾ ಅವರ ಕಚೇರಿಯನ್ನು ಅಕ್ರಮ ಕಟ್ಟಡ ಎಂದು ಬೃಹನ್ ಮುಂಬೈ ಮಹಾನಗರಪಾಲಿಕೆ (ಬಿಎಂಸಿ) ನೆಲಸಮ ಮಾಡುವ ಕಾರ್ಯಾಚರಣೆ ಆರಂಭಿಸಿತ್ತು. ಈ ಸಂಬಂಧ ಕಂಗನಾ ಬಾಂಬೈ ಹೈಕೋರ್ಟ್ ಮೆಟ್ಟಲೇರಿದ್ದರು.
ಅರ್ಜಿಯ ತುರ್ತು ವಿಚಾರಣೆ ನಡೆಸಿದ ಹೈಕೋರ್ಟ್, ನೆಲಸಮಗೊಳಿಸುವ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಬಿಎಂಸಿಗೆ ಸೂಚಿಸಿದೆ. ಆ ಮೂಲಕ, ಸದ್ಯಕ್ಕೆ ಕಂಗನಾ ನಿಟ್ಟುಸಿರು ಬಿಡುವಂತಾಗಿದೆ. ಟ್ವಿಟ್ಟರ್ ನಲ್ಲಿ ಮಹಾರಾಷ್ಟ್ರದ ಸಿಎಂ ಉದ್ಧವ್ ಠಾಕ್ರೆಗೆ ಕಂಗನಾ, ಬಹಿರಂಗ ಸವಾಲನ್ನು ಹಾಕಿದ್ದಾರೆ.
ಕಾರ್ಯಾಚಾರಣೆಯ ಫೋಟೋಗಳನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದ ಕಂಗನಾ, “ಇದೇ ಕಾರಣಕ್ಕೆ ನಾನು ಮುಂಬೈ ಅನ್ನು ಪಾಕ್ ಆಕ್ರಮಿತ ಕಾಶ್ಮೀರ ಎಂದು ಹೇಳಿರುವುದು” ಎನ್ನುವ ತಮ್ಮ ಹಿಂದಿನ ಹೇಳಿಕೆಯನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ.
ಮತ್ತೊಂದು ಟ್ವೀಟ್ ಅನ್ನು ಮಾಡಿರುವ ಕಂಗನಾ, “ಇಂದು ನನ್ನ ಮನೆಯನ್ನು ನೆಲಸಮಗೊಳಿಸಿದರು, ನಾಳೆ ಇಂತಹ ಪರಿಸ್ಥಿತಿ ನಿಮಗೂ ಎದುರಾಗಬಹುದು. ನನಗಾದ ಪರಿಸ್ಥಿತಿ ಸಾವಿರಾರು ಜನರಿಗೆ ಬರಬಹುದು’ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.
BMC at kangna's office 🙄#KangnaRanawat #DeathOfDemocracy pic.twitter.com/Y7LLf5H33B
— ___Bharatiya___ (@Bharati07771412) September 9, 2020
ಬನ್ನಿ..ಉದ್ಧವ್ ಠಾಕ್ರೆ ಮತ್ತು ಕರಣ್ ಜೋಹರ್ ಗ್ಯಾಂಗ್, ನೀವು ನನ್ನ ಕಚೇರಿಯನ್ನು ನೆಲಸಮಗೊಳಿಸಿದಿರಿ, ಬನ್ನಿ ನನ್ನ ಮನೆ, ದೇಹವನ್ನೂ ನೆಲಸಮ ಮಾಡಿ. ಇಡೀ ಜಗತ್ತೇ ನೀವು ಮಾಡುತ್ತಿರುವುದನ್ನು ನೋಡಲಿ. ನಾನು ಸಾಯಲಿ ಅಥವಾ ಬದಕಲಿ, ನಿಮ್ಮ ಎಲ್ಲಾ ವಿಷಯಗಳನ್ನು ಬಹಿರಂಗಗೊಳಿಸದೇ ಬಿಡುವುದಿಲ್ಲ”ಎಂದು ಕಂಗನಾ ರಣಾವತ್, ಸವಾಲು ಹಾಕಿದ್ದಾರೆ.
Shiv sena is Defaming Shiv ji and Shiva ji name. it to be changed to Soniya Sena. Salute to the brave Woman of India..🇮🇳🇮🇳🙏 #kangnaranawat #bravewomen #WhereIsDemocracy #DeathOfDemocracyInMumbai #DeathOfDemocracy pic.twitter.com/RBMxS9YWGM
— 🚩Krv Vikash Mehta🚩 (@krvvikashmehta) September 9, 2020