Sunday, November 27, 2022

ಬಂಟ್ವಾಳದ ಕಕ್ಯಪದವಿನಲ್ಲಿ ನ.26ರಂದು ತುಳುನಾಡಿನ ಮೊದಲ ಕಂಬಳ

ಬಂಟ್ವಾಳ: ಕರಾವಳಿಯ ಅಪ್ಪಟ ಜನಪದ ಕ್ರೀಡೆಯಾದ ಕೆಸರು ಗದ್ದೆಯ ಕಂಬಳ ಕೂಟಕ್ಕೆ ದಿನಗಣನೆ ಶುರುವಾಗಿದೆ. ಈ ಬಾರಿ ದ.ಕನ್ನಡದ ಮೊದಲ ಕಂಬಳ ಬಂಟ್ವಾಳದ ಕಕ್ಯಪದವಿನ ಮೈರ ಬರ್ಕೆಜಾಲುನಲ್ಲಿ ನಡೆಯುವ ಮೈರ ಶ್ರೀ ರಾಮಾಂಜನೇಯ ಗೆಳೆಯರ ಬಳಗದ ವತಿಯಿಂದ ನಡೆಯುವ ಸತ್ಯ-ಧರ್ಮ ಜೋಡುಕರೆ ಬಯಲು ಕಂಬಳ ಮೊದಲ ಕಂಬಳ ಕ್ರೀಡೆಯಾಗಿದೆ.

ಕಂಬಳದ ಕೂಟಕ್ಕೆ ದಿನ ನಿಗದಿ ಆಗುತ್ತಿದ್ದಂತೆ, ಇತ್ತ ಮಣ್ಣಿನ ಮಕ್ಕಳು ಭರ್ಜರಿ ತಾಲೀಮು ಆರಂಭಿಸಿ, ಕೆಸರು ಗದ್ದೆಯಲ್ಲಿ ಸಂಭ್ರಮಿಸಿ, ಕೋಣಗಳನ್ನು ಸ್ಪರ್ಧೆಗೆ ಸಜ್ಜುಗೊಳಿಸುತ್ತಿದ್ದಾರೆ.


ಕರಾವಳಿಯಲ್ಲಿ ಯಾವ ಕ್ರೀಡೆಗೂ ಇರದ ಕ್ರೇಜ್ ಕಂಬಳಕ್ಕಿದೆ. ಕಂಬಳ ಅಂದರೆ ಸರ್ವಧರ್ಮದವರು ಸೇರಿ, ಬಡವ ಶ್ರೀಮಂತ ಎನ್ನದೇ ಸಂಭ್ರಮಿಸುವ ಒಂದು ಜನಪದ ಆಟ. ಅವಿಭಜಿತ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡಿನಲ್ಲಿ ನಡೆಯುವ ಸಾಂಪ್ರದಾಯಿಕ ಹಾಗೂ ಆಧುನಿಕ ಕಂಬಳಗಳು ನವೆಂಬರ್ ತಿಂಗಳಿನಿಂದ ಆರಂಭವಾಗಲಿದೆ.

ಈ ತಿಂಗಳ ಮೊದಲ ಕಂಬಳ ನವೆಂಬರ್ 26 ಶನಿವಾರ ಪ್ರಾರಂಭವಾಗಲಿದ್ದು, ಹೆಸರಾಂತ ಕಕ್ಯಪದವಿನ ಮೈರ ಬರ್ಕೆಜಾಲುನಲ್ಲಿ ಮೈರ ಶ್ರೀ ರಾಮಾಂಜನೇಯ ಗೆಳೆಯರ ಬಳಗದ ವತಿಯಿಂದ ನಡೆಯುವ ಸತ್ಯ-ಧರ್ಮ ಜೋಡುಕರೆ ಬಯಲು ಕಂಬಳ ಈ ಬಾರಿಯ ಮೊದಲ ಸೀಝನ್ ನ ಕಂಬಳವಾಗಿದೆ.

ವೇದಮೂರ್ತಿ ಶ್ರೀ ರಾಘವೇಂದ್ರ ಭಟ್ ಕೊಡಂಬೆಟ್ಟು ಕಾರಿಂಜ ಇವರ ಶುಭಾಶಿರ್ವಾದದೊಂದಿಗೆ , ಕಂಬಳದ ಗೌರವಾಧ್ಯಕ್ಷರಾದ ಉಳಿಪಾಡಿಗುತ್ತು ರಾಜೇಶ್ ನಾಯ್ಕ್ ಇವರ ನೇತೃತ್ವ ಹಾಗು ಕುಸುಮಾಧರ ಉರ್ಕಿ ಅಧ್ಯಕ್ಷತೆಯಲ್ಲಿ ಹೊನಲು ಬೆಳಕಿನ ಸತ್ಯ ಧರ್ಮ ಜೋಡುಕರೆ ಬಯಲು ಕಂಬಳ ನಡೆಯಲಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ರಂಜಿತ್ ಮೈರಾ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here

Hot Topics

ಸುಳ್ಯ: ಸಚಿವ ಅಂಗಾರ ಅವರಿಗೆ ಡೆಂಗ್ಯೂ ದೃಢ-ಆಸ್ಪತ್ರೆಗೆ ದಾಖಲು

ಸುಳ್ಯ: ಶಾಸಕ, ಬಂದರು, ಮೀನುಗಾರಿಕೆ ಹಾಗೂ ಒಳ ನಾಡು ಜಲ ಸಾರಿಗೆ ಸಚಿವ ಎಸ್‌. ಅಂಗಾರ ಅವರಿಗೆ ಡೆಂಗ್ಯೂ ದೃಢಪಟ್ಟ ಕಾರಣ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ.  ಈ ಹಿನ್ನೆಲೆ ಅವರು ಸುಳ್ಯ ಕೆವಿಜಿ ಆಸ್ಪತ್ರೆಗೆ ದಾಖಲಾಗಿರುವುದಾಗಿ...

ಕುಕ್ಕೆ ಕ್ಷೇತ್ರದಲ್ಲಿ 116 ಮಂದಿ ಭಕ್ತರಿಂದ ಎಡೆಮಡೆ ಸ್ನಾನ..

ಸುಬ್ರಹ್ಮಣ್ಯ: ದಕ್ಷಿಣ ಕನ್ನಡ ಜಿಲ್ಲೆಯ ಪುರಾಣ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿರುವ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿ ಉತ್ಸವದ ಪ್ರಯುಕ್ತ 116 ಮಂದಿ ಭಕ್ತರಿಂದ ಇಂದು ಎಡೆಮಡೆ ಸ್ನಾನ ನಡೆಯಿತು.ದೇವರ ನೈವೇದ್ಯದ ಮೇಲೆ...

ಸುಳ್ಯದಲ್ಲಿ ಪತ್ನಿಯನ್ನು ಕೊಂದು ಮೃತದೇಹವನ್ನು ಗೋಣಿಚೀಲದಲ್ಲಿಟ್ಟಿದ್ದ ಪಾಪಿ ಪತಿ ಪ.ಬಂಗಾಳದಲ್ಲಿ ಅರೆಸ್ಟ್

ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಬೀರಮಂಗಲ ಸಮೀಪದ ಬಾಡಿಗೆ ಮನೆಯೊಂದರಲ್ಲಿ ಗೋಣಿಚೀಲದೊಳಗೆ ಮಹಿಳೆಯ ಮೃತದೇಹ ಪತ್ತೆಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಪೊಲೀಸರು ಪಶ್ಚಿಮ ಬಂಗಾಲದಲ್ಲಿ ಬಂಧಿಸಿದ್ದಾರೆ.ಪ್ರಕರಣಕ್ಕೆ ಸಂಬಂಧಪಟ್ಟಂತೆ ಪತಿ ಇಬ್ರಾನ್ ಶೇಖ್...