Sunday, November 27, 2022

ಕಮಲ್‌ ಹಾಸನ್‌ ಆಸ್ಪತ್ರೆಗೆ ದಾಖಲು: ಆತಂಕದಲ್ಲಿ ಫ್ಯಾನ್ಸ್‌..!

ಚೆನೈ: ಭಾರತೀಯ ಚಿತ್ರರಂಗದ ಖ್ಯಾತ ನಟ ಕಮಲ್ ಹಾಸನ್ ಅವರ ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರಿಂದ ಕಮಲ್‌ ಅಭಿಮಾನಿಗಳು ಚಿಂತಿತರಾಗಿದ್ದಾರೆ.

ಜ್ವರದ ಜೊತೆಗೆ ಉಸಿರಾಟದಲ್ಲಿ ಸ್ವಲ್ಪ ತೊಂದರೆಯೂ ಇತ್ತು ಎಂದು ಹೇಳಲಾಗಿದೆ. ಸದ್ಯ ಅವರು ಚೆನ್ನೈನ ಪೊರೂರು ರಾಮಚಂದ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ನಿನ್ನೆ ಹೈದರಾಬಾದ್ ಗೆ ಹೋಗಿದ್ದ ಕಮಲ್ ಹಾಸನ್ ಅವರು ತಮ್ಮ ಗುರು ಕಲಾತಪಸ್ವಿ ಕೆ ವಿಶ್ವನಾಥ್ ಜೊತೆಗಿದ್ದರು. ತದನಂತರ ನಿನ್ನೆ ರಾತ್ರಿಯೇ ಚೆನ್ನೈಗೆ ಬಂದಿದ್ದರು.

ಚನ್ನೈ ತಲುಪಿದ ನಂತರ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು ಎಂದು ಹೇಳಲಾಗಿದೆ. ರಾತ್ರಿ ಸ್ವಲ್ಪ ಜ್ವರ ಕಾಣಿಸಿಕೊಂಡು ಉಸಿರಾಟದ ತೊಂದರೆ ಉಂಟಾಗಿತ್ತು ಎಂದು ತಿಳಿದು ಬಂದಿದೆ.

ಆದರೆ ಈಗ ಕಮಲ್ ಹಾಸನ್ ಅವರು ಆರೋಗ್ಯವಾಗಿದ್ದು, ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.ಕಮಲ್ ಹಾಸನ್ ವಿಕ್ರಮ್ ಸಿನಿಮಾದ ಮೂಲಕ ವಿಶ್ವದಾದ್ಯಂತ 400 ಕೋಟಿ ಲೂಟಿ ಮಾಡಿದ್ದರು. ವಿಕ್ರಮ್‌ ಸಿನಿಮಾ ಸಾರ್ವಕಾಲಿಕ ದಾಖಲೆ ನಿರ್ಮಿಸಿತ್ತು.

ಅಲ್ಲದೆ, ಇಂಡಿಯನ್ 2 ಪೂರ್ಣಗೊಳಿಸಲು ಶಂಕರ್ ಜೊತೆ ಕೈಜೋಡಿಸಿದ್ದಾರೆ. ಇತ್ತೀಚೆಗೆ ಕಮಲ್ ಹಾಸನ್ ಹುಟ್ಟುಹಬ್ಬದ ಪಾರ್ಟಿ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದ್ದವರು. ತಮಿಳಿನ ಬಿಗ್ ಬಾಸ್ ಅವತರಣಿಕೆಯನ್ನು ನಿರೂಪಣೆಯನ್ನೂ ಸಹ ಮಾಡುತ್ತಿದ್ದಾರೆ.

ವೈರಲ್‌ ವಿಡಿಯೋದಲ್ಲಿ ಕಮಲ್ ಹಾಸನ್ ತಮ್ಮದೇ ಹಾಡುಗಳಿಗೆ ಹೆಜ್ಜೆ ಹಾಕಿದ್ದರು. ರಾಧಿಕಾ ಮತ್ತು ಕಮಲ್ ಹಾಸನ್ ʼಸತಗ ಸಾತಗʼ ಹಾಡಿಗೆ ಒಟ್ಟಿಗೆ ಡ್ಯಾನ್ಸ್ ಮಾಡಿ ಎಲ್ಲರನ್ನು ರಂಜಿಸಿದರು. ಹೀಗಾಗಿ ಇಡೀ ಕಾಲಿವುಡ್ ಕೂಡ ಕಮಲ್ ಹಾಸನ್ ಬರ್ತ್ ಡೇ ಪಾರ್ಟಿಯಲ್ಲಿ ಸದ್ದು ಮಾಡಿತ್ತು.

ಅಲ್ಲದೆ, ವಿಕ್ರಮ್‌ 2 ಸಿನಿಮಾ ತೆರೆಗೆ ತರಲು ಕಮಲ್‌ ಹಾಸನ್‌ ಸಿದ್ಧತೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿತ್ತು. ವಿಕ್ರಮ್‌ 2 ಸಿನಿಮಾದಲ್ಲಿ ಕಾರ್ತಿ, ಸೂರ್ಯ ಅವರು ಕಮಲ್‌ ಹಾಸನ್‌ ಜೊತೆ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು.

LEAVE A REPLY

Please enter your comment!
Please enter your name here

Hot Topics

ಮಂಗಳೂರಿನಲ್ಲಿ ಹಣದ ಆಮಿಷವೊಡ್ಡಿ ಮತಾಂತರಕ್ಕೆ ಯತ್ನ-ಖ್ಯಾತ ವೈದ್ಯೆ ಸಹಿತ ಮೂವರ ವಿರುದ್ಧ ಸಂತ್ರಸ್ತ ಯುವತಿಯಿಂದಲೇ ದೂರು ದಾಖಲು

ಮಂಗಳೂರು: ಮುಸ್ಲಿಂ ಯುವಕನೊಬ್ಬ ಮತಾಂತರಗೊಳಿಸಿ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಯುವತಿಯೋರ್ವಳು ಮಂಗಳೂರು ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.ಆಕೆ ನೀಡಿರುವ ದೂರಿನಲ್ಲಿ 'ಮಂಗಳೂರಿನ ಬಿಕರ್ನಕಟ್ಟೆಯಲ್ಲಿರುವ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದಾಗ ಬಿಕರ್ನಕಟ್ಟೆಯ ಕೈಕಂಬದಲ್ಲಿರುವ ಖಲೀಲ್‌ನ...

ಬಂಟ್ವಾಳದಲ್ಲಿ ಪಿಕಪ್ ವಾಹನಕ್ಕೆ ಗುದ್ದಿದ ಕಾರು..

ಬಂಟ್ವಾಳ: ವಿರುದ್ಧ ದಿಕ್ಕಿನಲ್ಲಿ ಬಂದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ವಾಹನಕ್ಕೆ ಡಿಕ್ಕಿಯಾಗಿ ಬಳಿಕ ಪಿಕಪ್ ವಾಹನ ರಸ್ತೆಯ ಬದಿಯಲ್ಲಿರುವ ಮನೆಗೆ ನುಗ್ಗಿ ಗೋಡೆ ಜರಿದು ಬಿದ್ದಂತಹ ಘಟನೆ ದಕ್ಷಿಣ ಕನ್ನಡ...

ಉಡುಪಿಯ ಮಂದಾರ್ತಿಯಲ್ಲೂ ಸ್ಯಾಟ್‌ಲೈಟ್ ಫೋನ್ ಸಕ್ರಿಯ-ಉಗ್ರ ಕೃತ್ಯಕ್ಕೆ ಸಂಚು ಶಂಕೆ..?

ಉಡುಪಿ: ಇದುವರೆಗೆ ಕೇವಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಷ್ಟೇ ಕೇಳಿ ಬರುತ್ತಿದ್ದ ಸ್ಯಾಟಲೈಟ್‌ ಫೋನ್‌ ಕರೆ ಈಗ ದೇವಾಲಯಗಳ ನಗರಿ ಉಡುಪಿ ಜಿಲ್ಲೆಯಲ್ಲೂ ಮೊಳಗಿದೆ. ಉಡುಪಿಯಲ್ಲೂ ಉಗ್ರರ ಕರಿನೆರಳು ಕಾಣಿಸಿದೆ.ಉಡುಪಿಯ ಮಂದಾರ್ತಿ ಸಮೀಪದ ಅರಣ್ಯ...