Wednesday, October 20, 2021

ಇತಿಹಾಸದ ಪುಟ ಸೇರಿದ ಮೂರು ತಲೆಮಾರಿನ ಕಲ್ಲಡ್ಕ ಕೆ.ಟಿ ಹೋಟೇಲ್‌…!

ಮಂಗಳೂರು: ಸಿನಿಮಾ ನಟರು, ರಾಜಕಾರಣಿಗಳು, ಜನಸಾಮಾನ್ಯರು, ಉದ್ಯಮಿಗಳು ಅಥವಾ ವಿವಿಐಪಿಗಳೇ ಇರಲಿ ಕಲ್ಲಡ್ಕಕ್ಕೆ ಬಂದರೆ ಈ ಹೋಟೆಲ್‌ ಭೇಟಿ ನೀಡದವರಿಲ್ಲ.

ಭೇಟಿ ನೀಡಿ ಮೊದಲು ಆರ್ಡರ್‌ ಮಾಡೋದೆ ಕೆಟಿ. ಆಮೇಲೆ ಉಳಿದೆಲ್ಲಾ ಈ ಚಹದ ಸ್ವಾದ ಅಂಥದ್ದು. ಇದೀಗ ಹಳೇ ಕಟ್ಟಡ ಇತಿಹಾಸದ ಪುಟ ಸೇರಲಿದ್ದು, ಹೊಸ ರೂಪದೊಂದಿಗೆ ಗ್ರಾಹಕರ ಸೇವೆಗೆ ಸಿದ್ಧವಾಗಲಿದೆ.

ಕಲ್ಲಡ್ಕ ಕೆ.ಟಿ ಹೀಗಂದ್ರೆ ಚಹಾ ಪ್ರಿಯರ ಕಿವಿ ನೆಟ್ಟಗಾಗುತ್ತದೆ. ಅಷ್ಟರ ಮಟ್ಟಿಗೆ ಕಲ್ಲಡ್ಕ ಕೆಟಿ ಫೇಮಸ್ಸು. ಚಹಾ ಅಂದ್ರೆ ಬಹುತೇಕ ಎಲ್ಲರಿಗೂ ಇಷ್ಟು.

ಹೊಟ್ಟೆ ತುಂಬಾ ಬಿಸಿ ಬಿಸಿ ಯಾಗಿರೋ ರುಚಿಕರ ತಿಂಡಿ ತಿಂದ್ರೆ ಕೊನೆಗೆ ಸ್ಟ್ರಾಂಗ್ ಆಗಿರೋ ಚಹಾ ಕುಡಿಲೇಬೇಕು ಅನ್ಸುತ್ತೆ.

ಅದ್ರಲ್ಲಿ ಈ ಕಲ್ಲಡ್ಕ ಟೀ ಸ್ವಲ್ಪ ಸ್ಪೆಷಲ್. ಎಲ್ಲೆಲ್ಲಿಂದಲೋ ಈ ಕೆ.ಟಿ ಚಹಾ ಸವಿಯೋಕೆ ಬರ್ತಾರೆ ಅಂದ್ರೆ ಊಹೆ ಮಾಡಿ ಈ ಚಹಾ ಅದೆಂಥಾ ಮೋಡಿ ಮಾಡ್ರೋದು ಅಂತ.

ಮಂಗಳೂರು-ಬೆಂಗಳೂರು ರಾಷ್ಟ್ರಿಯ ಹೆದ್ದಾರಿ 75ರಲ್ಲಿ ಹಾಗೆ ಹಾದು ಕಲ್ಲಡ್ಕದ ಲಕ್ಷ್ಮೀ ನಿವಾಸ ಹೋಟೆಲ್ ಕಾಣಸಿಗುತ್ತೆ. ಇಲ್ಲೆ ಸ್ಪೆಷಲ್ ಟೀ ಕಲ್ಲಡ್ಕ ಟೀ ಸಿಗೋದು.
ಸುಮಾರು 70 ವರ್ಷಗಳಷ್ಟು ಹಳೆಯದಾದ ಈ ಹೊಟೇಲನ್ನು ಮೂರು ತಲೆಮಾರುಗಳಿಂದ ನಡೆಸಿಕೊಂಡು ಬರಲಾಗ್ತ ಇದೆ.

ಲಕ್ಷ್ಮೀ ನಾರಾಯಣ ಹೊಳ್ಳ ಈ ಹೋಟೆಲನ್ನು ಪ್ರಾರಂಭಿಸಿದರು. ಬೈಕ್ ರೈಡ್, ಲಾಂಗ್ ಡ್ರೈವ್‌ಗಾಗಿ ಈ ದಾರಿಯಲ್ಲಿ ತೆರಳುವವರು ಇಲ್ಲಿನ ಚಹಾ ಕುಡಿಯದೇ ಹೋಗುವ ಮಾತೇ ಇಲ್ಲ.

ಪುತ್ತೂರು ಮಾರ್ಗವಾಗಿ ಬೆಂಗಳೂರು ಸಾಗುವವರು ಕೂಡ ಹೆಚ್ಚಾಗಿ ಇಲ್ಲಿ ಕೇಟಿ ಕುಡಿದೇ ಮುಂದೆ ಸಾಗುತ್ತೀರಿ. ಅಷ್ಟರ ಮಟ್ಟಿಗೆ ನಮ್ಮ ಕಲ್ಲಡ್ಕ ಕೆಟಿ ಫೇಮಸ್ಸು. ಆ ದಾರಿಯಲ್ಲಿ ಯಾವತ್ತಾದರೂ ಓಡಾಡಿದರೆ ನೀವೂ ಸವಿಯಿರಿ ಕಲ್ಲಡ್ಕ ಚಾ.
ಆದ್ರೆ ಈಗ ಈ ಲಕ್ಷ್ಮೀ ನಿವಾಸ ಹೋಟೆಲ್ ಧರಶಾಹಿಯಾಗುತ್ತಿದೆ. ಬಂಟ್ವಾಳ ತಾಲೂಕಿನ ಹೆದ್ದಾರಿ ಬದಿಯ ಕಲ್ಲಡ್ಕದಲ್ಲಿ ಫ್ಲೈ ಓವರ್ ನಿರ್ಮಾಣ ಹಾಗೂ ರಸ್ತೆ ಅಗಲಗೊಳಿಸುವ ಕಾರ್ಯಕ್ಕೆ ಪೂರ್ವಭಾವಿಯಾಗಿ ಕಟ್ಟಡಗಳನ್ನು ಕೆಡವಲಾಗುತ್ತಿದೆ.

ರಸ್ತೆ ಅಭಿವೃದ್ಧಿ ಹಿನ್ನೆಲೆ ಈ ಹಳೆಯ ಹೋಟೆಲ್ ಧರಾಶಾಹಿಯಾದರೆ, ಈಗ ಇರುವ ಜಾಗದ ಹಿಂದೆಯೇ ಹೊಸ ಕಟ್ಟಡ ನಿರ್ಮಾಣವಾಗುತ್ತಿದ್ದು, ಕೆಲ ಸಮಯದಲ್ಲೇ ಹೊಸ ವಿನ್ಯಾಸದೊಂದಿಗೆ ಗ್ರಾಹಕರ ಸೇವೆಗೆ ಸಿದ್ಧವಾಗಲಿದೆ.
ಅದೇನೇ ಇರಲಿ 70 ವರ್ಷಗಳ ಹಿಂದಿನ ಟೇಸ್ಟೇ ಇಂದಿಗೂ ಇದೆ. ಮಂಗಳೂರಿಗೆ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಕೂಡ ಕಲ್ಲಡ್ಕಕ್ಕೆ ಬಂದು ಕೆಟಿ ಸವಿದಿದ್ದರು. ನೀವು ಒಮ್ಮೆ ಕೇಟಿ ಕುಡ್ದು ಟೇಸ್ಟ್ ನೋಡಿ ಮಾರ್ರೇ

ವರದಿ ಮತ್ತು ಚಿತ್ರ:
ನಿತಿನ್ ಅಮೀನ್ ಕಲ್ಲಡ್ಕ , ನಮ್ಮ ಕುಡ್ಲ ನ್ಯೂಸ್ ಮಂಗಳೂರು

ವಿಡಿಯೋ..

 

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...