LATEST NEWS
ಕೃಷ್ಣ ನಗರಿಗೆ ಆಗಮಿಸಿ ದೇವರ ದರ್ಶನ ಪಡೆದ ಶಿವ ತಾಂಡವ ಸ್ತೋತ್ರ ಖ್ಯಾತಿಯ ಕಾಳಿ ಚರಣ್ ಮಹಾರಾಜ್..!
Published
4 years agoon
By
Adminಕೃಷ್ಣ ನಗರಿಗೆ ಆಗಮಿಸಿ ದೇವರ ದರ್ಶನ ಪಡೆದ ಶಿವ ತಾಂಡವ ಸ್ತೋತ್ರ ಖ್ಯಾತಿಯ ಕಾಳಿ ಚರಣ್ ಮಹಾರಾಜ್..!
ಉಡುಪಿ : ಶಿವ ತಾಂಡವ ಸ್ತೋತ್ರ ದ ಮೂಲಕ ವಿಶ್ವವಿಖ್ಯಾತಿಗಳಿಸಿದ ಕಾಳಿ ಚರಣ್ ಮಹಾರಾಜರು ಉಡುಪಿಗೆ ಭೇಟಿ ನೀಡಿ ಉಡುಪಿಯ ಅನಂತೇಶ್ವರ ಸ್ವಾಮಿಯ ದರ್ಶನ ಪಡೆದರು.
ಮಧ್ಯಪ್ರದೇಶದ ರಾಜೇಶ್ವರದಲ್ಲಿ ಇವರು ಹಾಡಿದ ಶಿವ ತಾಂಡವ ಸ್ತೋತ್ರ ಕೋಟ್ಯಾಂತರ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು.
ಅತ್ಯಂತ ತಲ್ಲೀನತೆಯಿಂದ ಶಿವತಾಂಡವ ಸ್ತೋತ್ರ ವನ್ನು ಹಾಡುವ ಜೊತೆಗೆ ಕಟ್ಟುಮಸ್ತಾದ ತನ್ನ ಆಕರ್ಷಕ ವ್ಯಕ್ತಿತ್ವ ಮತ್ತು ಹಾವಭಾವದಿಂದ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಕಾಳಿ ಚರಣ್ ಮಹಾರಾಜ್ ಅವರು ದಕ್ಷಿಣ ಭಾರತದ ತೀರ್ಥಯಾತ್ರೆ ಯಲ್ಲಿ ತೊಡಗಿದ್ದಾರೆ.
ಉಡುಪಿಯ ಜನಾರ್ದನ ಮಹಾಕಾಳಿ ದೇವಸ್ಥಾನ ಅನಂತೇಶ್ವರ ಚಂದ್ರಮೌಳಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಇವರು ಭಾವಪರವಶರಾಗಿ ಶಿವ ತಾಂಡವ ಸ್ತೋತ್ರ ವನ್ನು ಹಾಡಿದರು.
ಅನಂತೇಶ್ವರ ದಲ್ಲಿ ಇವರ ಹಾಡನ್ನು ಕೇಳಿ ಸ್ಥಳದಲ್ಲಿದ್ದ ಭಕ್ತರು ಮಂತ್ರಮುಗ್ಧರಾದರು.
ಮಹಾರಾಷ್ಟ್ರ ಮೂಲದವರಾಗಿರುವ ಕಾಳಿ ಚರಣ್ ಮಹಾರಾಜ ಅವರು ಇಂದೋರಿನಲ್ಲಿ ಆಶ್ರಮವನ್ನು ಹೊಂದಿದ್ದಾರೆ.
ಗೋರಕ್ಷಣೆ ಮತ್ತು ರಾಷ್ಟ್ರ ಕಾರ್ಯಕ್ಕಾಗಿ ತನ್ನ ಜೀವನ ಮುಡಿಪು ಎಂದು ಸ್ವಾಮೀಜಿ ಅವರು ಘೋಷಿಸಿಕೊಂಡಿದ್ದಾರೆ.
DAKSHINA KANNADA
ರಾಜ್ಯ ಮಟ್ಟದ ತ್ರೋಬಾಲ್ ನಲ್ಲಿ ದ್ವಿತೀಯ ಸ್ಥಾನ ಪಡೆದ ದರ್ಬೆ ಬೆಥನಿ ಶಾಲೆ ವಿದ್ಯಾರ್ಥಿಗಳಿಗೆ ಸನ್ಮಾನ
Published
12 minutes agoon
16/01/2025ಪುತ್ತೂರು: ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಕೋಲಾರ ಜಿಲ್ಲೆಯ ಕೆಜಿಎಫ್ ಪ್ರೌಢ ಶಾಲೆಯಲ್ಲಿದಿನಾಂಕ 8/9ರಂದು ನಡೆದ ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗದ ತ್ರೋಬಾಲ್ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ ವನ್ನು ಪಡೆದ ಪುತ್ತೂರು ದರ್ಬೆಯ ಬೆಥನಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಆದ್ಯ ಕೆ, ಶಾನ್ವಿ ಪ್ರೀಷ್ಮ, ಫಾತಿಮಾತ್ ಮುನವರ, ಫಾತಿಮಾತ್ ಝುಲ್ಫ, ನಿರೀಕ್ಷಾ H ಶೆಟ್ಟಿ , ಸ್ನಿಗ್ಧ, ಆಯಿಷಾತ್ ಹಿಬಾ ಸಮನ್ವಿ, ಹಿತಾಶ್ರೀ, ಜೆರುಷ, ರೇಯ ಇವರಿಗೆ ಶಾಲಾ ಸಂಚಾಲಕಿ ಭಗಿಣಿ ಪ್ರಶಾಂತಿ ಬಿ ಎಸ್ ಇವರ ನೇತೃತ್ವ ದಲ್ಲಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಪ್ರೌಢ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರು ಗಳು, ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಗಳು ಹಾಗೂ ಎರಡು ವಿಭಾಗದ ಮುಖ್ಯಪಾಧ್ಯಾಯರು ಗಳು ಭಾಗವಹಿಸಿದ್ದರು. ಜೊತೆಗೆ ರಾಜ್ಯಮಟ್ಟದಲ್ಲಿ ಸಾಧನೆಗೈದ ಮಕ್ಕಳ ಪೋಷಕರು ಕೂಡ ಭಾಗವಹಿಸಿದ್ದರು…ಮಕ್ಕಳು ರಾಜ್ಯಮಟ್ಟದಲ್ಲಿ ಉತ್ತಮ ಸಾಧನೆಯನ್ನು ಮಾಡಲು ಕಾರಣಕರ್ತರದ ಸಂಸ್ಥೆಯ ದೈಹಿಕ ಶಿಕ್ಷಕರಾದ ಶ್ರೀಯುತ ನಿರಂಜನ್, ಅಕ್ಷಯ್ ಹಾಗೂ ಹರೀಶ್ ಇವರನ್ನು ಕೂಡ ಸನ್ಮಾನಿಸಲಾಯಿತು. ಶಿಕ್ಷಕಿ ಪವಿತ್ರ ಇವರು ಸ್ವಾಗತ ಮಾಡಿದರು, ಅನಿತಾ ರೋಡ್ರಿ ಗಸ್ ವಂದನಾರ್ಪಣೆ ಗೈದರು,ಶಿಕ್ಷಕಿ ಸೌಮ್ಯ ಇವರು ಕಾರ್ಯಕ್ರಮವನ್ನು ನಿರೂಪಿಸಿದರು
BANTWAL
ರಸ್ತೆ ಬದಿ ನಿಲ್ಲಿಸಿದ್ದ ಸ್ಕೂಟರಿಗೆ ಕಾರು ಢಿಕ್ಕಿ; ಸವಾರ ದುರ್ಮರಣ
Published
17 minutes agoon
16/01/2025By
NEWS DESK3ಬಂಟ್ವಾಳ : ಕಾರೊಂದು ಢಿಕ್ಕಿಯಾದ ಪರಿಣಾಮ ಸ್ಕೂಟರ್ ಸವಾರ ಗಂಭಿರ ಗಾಯಗೊಂಡು ಮೃತಪಟ್ಟ ಘಟನೆ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಬಂಟ್ವಾಳ ತಾಲೂಕಿನ ಪೆರಮುಗೇರು ಸತ್ತಿಕಲ್ಲು ಎಂಬಲ್ಲಿ ಬುಧವಾರ ಸಂಜೆ ನಡೆದಿದೆ.
ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಕುದ್ಮಾನ್ ನಿವಾಸಿ ಅಬ್ಬಾಸ್ ಎಂಬವರ ಪುತ್ರ ಉಸ್ಮಾನ್ (24) ಮೃತರು ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಪೈಂಟರ್ ಆಗಿದ್ದ ಉಸ್ಮಾನ್ ಅವರು ತನ್ನ ಸ್ಕೂಟರ್ ನಲ್ಲಿ ಮನೆಗೆ ತೆರಳುತ್ತಿದ್ದು ಸತ್ತಿಕಲ್ಲಿನಲ್ಲಿ ರಸ್ತೆ ಬದಿಯಲ್ಲಿ ಸ್ಕೂಟರ್ ನಿಲ್ಲಿಸಿ ಮೊಬೈಲ್ ನಲ್ಲಿ ಮಾತನಾಡುತ್ತಿರುವ ವೇಳೆ ನೋಂದಣಿಯಾಗದ ಕಾರೊಂದು ಏಕಾಏಕಿ ಅವರ ಸ್ಕೂಟರ್ ಗೆ ಢಿಕ್ಕಿಯಾಗಿತ್ತು.
ಇದನ್ನೂ ಓದಿ: ಬೈಕ್‌ಗಳು ಪರಸ್ಪರ ಮು*ಖಾಮು*ಖಿ ; ಬಾಲಕಿ ಸಾ*ವು
ಈ ಸಂದರ್ಭ ಸ್ಕೂಟರ್ ನಲ್ಲಿ ಕುಳಿತಿದ್ದ ಉಸ್ಮಾನ್ ಅವರು ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಘಟನೆಯಿಂದ ಕಾರು ಮತ್ತು ಬೈಕ್ ರಸ್ತೆ ಬದಿಯ ಚರಂಡಿಗೆ ಉರುಳಿ ಬಿದ್ದಿದೆ. ಪುತ್ತೂರು ಸಂಚಾರಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
LATEST NEWS
ಅ*ಪಘಾ*ತದಲ್ಲಿ ಗಾ*ಯಗೊಂಡವರನ್ನು ರಕ್ಷಿಸಿದ್ರೆ ಸಿಗುತ್ತೆ ಸ್ಪೆಶಲ್ ಕ್ಯಾಶ್ ಪ್ರೈಸ್
Published
16 hours agoon
15/01/2025ಮಂಗಳೂರು/ನಾಗಪುರ : ಅ*ಪಘಾ*ತದಲ್ಲಿ ಗಾ*ಯಗೊಂಡವರಿಗೆ ಸಹಾಯ ಮಾಡುವ ಪರೋಪಕಾರಿಗಳಿಗೆ ರೂ.25 ಸಾವಿರವನ್ನು ಬಹುಮಾನವಾಗಿ ನೀಡಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಘೋಷಿಸಿದ್ದಾರೆ.
ನಾಗಪುರದಲ್ಲಿ ನಡೆದ ರಸ್ತೆ ಸುರಕ್ಷಾ ಕಾರ್ಯಕ್ರಮದಲ್ಲಿ ಮಾತನಾಡಿದ ಗಡ್ಕರಿ , “ಅ*ಪಘಾ*ತವಾದಾಗ ಮೊದಲ 1 ಗಂಟೆ ನಿರ್ಣಾಯಕವಾಗಿದ್ದು, ಆ ಅವಧಿಯಲ್ಲಿ ಸಂತ್ರಸ್ತರನ್ನು ಆಸ್ಪತ್ರೆಗಳಿಗೆ ಸಾಗಿಸುವ ವ್ಯಕ್ತಿಗೆ ಈಗ ನೀಡುತ್ತಿರುವ ಸಾವಿರ ರೂ.ಬಹುಮಾನ ಸಾಲುತ್ತಿಲ್ಲ. ಹೀಗಾಗಿ ಅವರಿಗೆ 25 ಸಾವಿರ ರೂ. ನೀಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಕೇಂದ್ರ ಸರಕಾರವು, ಅಪಘಾತಗಳಲ್ಲಿ ಗಾಯಗೊಂಡವರಿಗೆ ಮೊದಲ 7 ದಿನಗಳವರೆಗೆ 1.5 ಲಕ್ಷರೂ. ವರೆಗಿನ ಆಸ್ಪತ್ರೆ ವೆಚ್ಚವನ್ನು ಸಹ ಭರಿಸಲಿದೆ. ಇದು ರಾಜ್ಯ ಹೆದ್ದಾರಿಗಳಲ್ಲಿ ಗಾಯಗೊಂಡರೂ ಅನ್ವಯಿಸುತ್ತದೆ” ಎಂದು ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಅಪಘಾತದಲ್ಲಿ ಗಾಯಗೊಂಡವರಿಗೆ ನೆರವಾಗುವವರಿಗೆ ಬಹುಮಾನ ನೀಡುವ ಯೋಜನೆಯ ಪ್ರಕಾರ, ಮಾರಣಾಂತಿಕ ಅಪಘಾತಕ್ಕೊಳಗಾದವರ ಜೀವವನ್ನು ತಕ್ಷಣದ ಸಹಾಯವನ್ನು ಒದಗಿಸುವ ಮೂಲಕ ಮತ್ತು ವೈದ್ಯಕೀಯ ಚಿಕಿತ್ಸೆಗಾಗಿ ಗೋಲ್ಡನ್ ಅವರ್ (ಅ*ಪಘಾ*ತದ ನಂತರದ ಮೊದಲ ಗಂಟೆ) ಒಳಗೆ ಆಸ್ಪತ್ರೆಗೆ ಸಾಗಿಸುವ ಮೂಲಕ ಉಳಿಸುವ ಜನರಿಗೆ ಬಹುಮಾನ ನೀಡಲಾಗುತ್ತದೆ.
LATEST NEWS
ಹೊಸ ದಾಖಲೆ ಬರೆದ ಸ್ಮೃತಿ ಮಂದಾನಾ
ಮೈಕ್ ಪರ್ಮಿಷನ್ ವಿಚಾರವಾಗಿ ಉಡುಪಿಯ ಯಕ್ಷಗಾನದಲ್ಲಿ ಹೈಡ್ರಾಮ
ಪೊಲೀಸ್ ವಾಹನದಲ್ಲಿ ಡ್ರೈವಿಂಗ್ ಕಲಿಯುತ್ತಿದ್ದ ಸಬ್ ಇನ್ಸ್ ಪೆಕ್ಟರ್: ತಪ್ಪಿದ ಅನಾಹುತ !
ಇದು ನಾಗಾ ಸಾಧುಗಳ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿ : ಭಾಗ – 1
ಬಾಲಕಿಯರಿಬ್ಬರ ಮೇಲೆ ಅ*ತ್ಯಾಚಾ*ರವೆಸಗಿ ಬ್ಲ್ಯಾ*ಕ್ಮೇಲ್ ಮಾಡಿದ ಗ್ಯಾಂಗ್ ಅರೆಸ್ಟ್
ಫಿನಾಲೆಗೆ ಡೇಟ್ ಫಿಕ್ಸ್; ಈ ಸಲ ಬಿಗ್ ಬಾಸ್ ಗೆಲ್ಲುವವರು ಯಾರು ?
Trending
- BIG BOSS5 days ago
BBK11: ಐವರು ನಾಮಿನೇಟ್, ಕಿಚ್ಚನ ಪಂಚಾಯ್ತಿಯಲ್ಲಿ ಗೇಟ್ಪಾಸ್ ಯಾರಿಗೆ..?
- LATEST NEWS6 days ago
ಹಲ್ಲು ಹುಳುಕಾಗಿದ್ಯಾ.? ಈ ಮನೆಮದ್ದು ಪ್ರಯತ್ನಿಸಿ, ತಕ್ಷಣ ಎಲ್ಲಾ ಹಲ್ಲಲ್ಲಿರುವ ಹುಳುಗಳು ಹೊರ ಬರುತ್ತವೆ.!
- BIG BOSS3 days ago
ಕಣ್ಣೀರು ಒರೆಸಿದ ಸುದೀಪ್.. ಕಿಚ್ಚನ ಈ ದೊಡ್ಡ ಗುಣಕ್ಕೆ ಸೆಲ್ಯೂಟ್ ಹೊಡೆದ ಫ್ಯಾನ್ಸ್..!
- BIG BOSS2 days ago
ಮಿಡ್ ವೀಕ್ ಎಲಿಮಿನೇಷನ್ ನಿಂದ ಬಚಾವ್ ಆಗುವವರು ಯಾರು ?