Friday, August 19, 2022

ಅಕ್ರಮ ಗಾಂಜಾ ವಶಪಡಿಸಿದ ಕಲ್ಬುರ್ಗಿ ಪೊಲೀಸರು..! 12 ಲಕ್ಷದ ಸೊತ್ತುಗಳ ವಶ,,

ಕಲಬುರ್ಗಿ  : ಕರ್ನಾಟಕ-ಮಹಾರಾಷ್ಟ್ರ ನಡುವೆ ಗಾಂಜಾ ಸಾಗಾಟ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್‍ನ ಇಬ್ಬರು ಆರೋಪಿಗಳನ್ನು ಕಲಬುರ್ಗಿ ಆಳಂದ ಪೊಲೀಸರು ಬಂಧಿಸಿದ್ದಾರೆ.

ಆಳಂದ ತಾಲೂಕಿನ ಕೋಡಲಹಂಗರಗಾ ತಾಂಡಾದ ರಾಜು ಪವಾರ ಹಾಗೂ ಜೀರಹಳ್ಳಿ ತಾಂಡಾದ ಸಂತೋಷ ಚೌವ್ಹಾಣ ಬಂಧಿತರು.

ಸ್ಕಾರ್ಪಿಯೋ ವಾಹನದಲ್ಲಿ ಗಾಂಜಾ ಸಾಗಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಡಿವೈಎಸ್​​ಪಿ ಮಲ್ಲಿಕಾರ್ಜುನ್ ಸಾಲಿ ಅವರಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ವಿಶೇಷ ತಂಡ ರಚಿಸಿದ ಆಳಂದ ಪೊಲೀಸರು ಮಹಾರಾಷ್ಟ್ರದ ಉಮರ್ಗಾ- ಕರ್ನಾಟಕದ ಆಳಂದ ಮಾರ್ಗದ ಚಿತಲಿ ಕ್ರಾಸ್ ಬಳಿ ಆರೋಪಿಗಳನ್ನು ಬಂಧಿಸಿದ್ದಾರೆ‌.

ಆರೋಪಿಗಳು ಜಿಲ್ಲೆಯ ಹಲವೆಡೆ ಬೆಳೆದ ಗಾಂಜಾ ಸಂಗ್ರಹಿಸಿ ಗುಪ್ತವಾಗಿ ಮಹಾರಾಷ್ಟ್ರಕ್ಕೆ ಸಾಗಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಬಂಧಿತರಿಂದ 6 ಲಕ್ಷ ರೂ. ಮೌಲ್ಯದ 59 ಕೆಜಿ ಒಣ ಗಾಂಜಾ ಹಾಗು 6 ಲಕ್ಷ ರೂ. ಮೌಲ್ಯದ ಸ್ಕಾರ್ಪಿಯೋ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡ ಆಳಂದ ಪೊಲೀಸರು, ಗಾಂಜಾ ಸಾಗಾಟದ ಹಿಂದಿರುವ ಗ್ಯಾಂಗ್ ಪತ್ತೆಗಾಗಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಇಂದು ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ: ಭರದ ಸಿದ್ದತೆ-ನಾಳೆ ವಿಟ್ಲ ಪಿಂಡಿ

ಉಡುಪಿ: ಕೃಷ್ಣಮಠದಲ್ಲಿ ಇಂದು ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಆ.20 ರಂದು ವಿಟ್ಲಪಿಂಡಿ ಉತ್ಸವ ನಡೆಯಲಿದ್ದು, ಪರ್ಯಾಯ ಕೃಷ್ಣಾಪುರ ಮಠದ ನೇತೃತ್ವದಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ.ಭಕ್ತರಿಗೆ ಪ್ರಸಾದವಾಗಿ ಹಂಚಲು ಚಕ್ಕುಲಿ ಹಾಗೂ ಬಗೆಬಗೆಯ ಉಂಡೆಗಳ...

ದೆಹಲಿ ಉಪ ಮುಖ್ಯಮಂತ್ರಿ ಮನೆ ಮೇಲೆ CBI ದಾಳಿ: ಶೋಧ ಕಾರ್ಯ

ನವದೆಹಲಿ: ದೆಹಲಿ ಉಪ ಮುಖ್ಯಮಂತ್ರಿ ಮನೀಶ್​ ಸಿಸೊಡಿಯಾ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಸ್ಥಳಗಳ ಮೇಲೆ ಸಿಬಿಐ ಇಂದು ಬೆಳಗ್ಗೆ ದಾಳಿ ಮಾಡಿದ್ದು, ಶೋಧ ಕಾರ್ಯ ಮುಂದುವರಿಸಿದೆ. ದೆಹಲಿಯ ಅಬಕಾರಿ ನೀತಿಯಲ್ಲಿ ಅಕ್ರಮ ನಡೆದಿರುವ...

ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ಎಂಟು ಲಕ್ಷ ಪಂಗನಾಮ…!

ಕಾಸರಗೋಡು: ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ಎಂಟು ಲಕ್ಷ ಪಂಗನಾಮ ಹಾಕಿದ ಘಟನೆಗೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ ಘಟನೆ ಕಾಸರಗೋಡಿನಲ್ಲಿ ನಡೆದಿದೆ.ಸುರತ್ಕಲ್ ನ ಬಿನೋಯ್ ಯಾನೆ ಸನತ್ ಶೆಟ್ಟಿ ಬಂಧಿತ ಆರೋಪಿ.ಈತ ಸಂಗಮ್...