ಖತರ್ನಾಕ್ ಕಳ್ಳನೊಬ್ಬನನ್ನು ಹಿಡಿಯಲು ಹೋದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅವರ ರಿವಾಲ್ವರ್ ನ್ನೇ ಕಿತ್ತುಕೊಂಡು ಕಳ್ಳ ಪರಾರಿಯಾಗಿರುವ ಘಟನೆ ಕಲಬುರ್ಗಿ ಜಿಲ್ಲೆಯ ಅಫಜಲಪುರದಲ್ಲಿ ನಡೆದಿದೆ.
ಕಲಬುರ್ಗಿ: ಖತರ್ನಾಕ್ ಕಳ್ಳನೊಬ್ಬನನ್ನು ಹಿಡಿಯಲು ಹೋದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅವರ ರಿವಾಲ್ವರ್ ನ್ನೇ ಕಿತ್ತುಕೊಂಡು ಕಳ್ಳ ಪರಾರಿಯಾಗಿರುವ ಘಟನೆ ಕಲಬುರ್ಗಿ ಜಿಲ್ಲೆಯ ಅಫಜಲಪುರದಲ್ಲಿ ನಡೆದಿದೆ.
ಬಳ್ಳೂರ್ಗಿ ಮೂಲದ ಖಾಜಾ ಎಂಬ ಕಳ್ಳನನ್ನು ಹಿಡಿಯಲು ಬೆಂಗಳೂರು ಸಿಸಿಬಿ ಪೊಲೀಸರು ಅಫಜಲಪುರಕ್ಕೆ ಆಗಮಿಸಿದ್ದು, ಕಳ್ಳನನ್ನು ಬಂಧಿಸುವ ವೇಳೆ ಪಿಎಸ್ ಐ ಭೀಮರಾವ್ ಬಂಕಲಿ ಅವರ ಸರ್ವಿಸ್ ರಿವಾಲ್ವರ್ ಕಸಿದುಕೊಂಡು ಎಸ್ಕೇಪ್ ಆಗಿದ್ದಾನೆ.
ಖಾಜಾ ಬೆಂಗಳೂರು, ಕಲಬುರ್ಗಿ, ಅಫಜಲಪುರ ಸೇರಿದಂತೆ ಹಲವೆಡೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದು 20ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಪೊಲೀಸರು ಹುಡುಕಾಟ ನಡೆಸಿದ್ದರು.
ನಿನ್ನೆಯಿಂದ ಖಾಜಾನ ಬಂಧನಕ್ಕಾಗಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಕಳ್ಳನನ್ನು ಹಿಡಿಯಲು ಹೋದಾಗ ಆತ ಕಾರಿನಲ್ಲಿ ಕುಳಿತಿದ್ದ ಪಿಎಸ್ ಐ ಸರ್ವಿಸ್ ರಿವಾಲ್ವರ್ ಹಿಡಿದು ಕಾರಿನ ಗಾಜು ಒಡೆಯಲು ಯತ್ನಿಸಿದ್ದರು. ಈ ವೇಳೆ ಪಿಎಸ್ ಐ ಕೈಯಲ್ಲಿದ್ದ ಲೋಡೆಡ್ ರಿವಾಲ್ವರ್ ಕಸಿದುಕೊಂಡು ಪರಾರಿಯಾಗಿದ್ದಲ್ಲದೇ ಮರವೇರಿ ಕುಳಿತಿದ್ದಾನೆ.
ಕೊನೆಗೆ ಎಂಟುವರೆ ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಆರೋಪಿ ಶರಣಾಗಿದ್ದಾನೆ.
ಏನಿದು ಘಟನೆ ..?
ಸರಿಸುಮಾರು ಎಂಟುವರೆ ಗಂಟೆಗಳ ಕಾಲ ಕಳ್ಳಾಟವಾಡಿ ಪೊಲೀಸರಿಗೆ ಶರಣಾದ ಕಿಲಾಡಿ ಕಳ್ಳನ ಹೆಸರು ಖಾಜಪ್ಪಾ ಅಂತ.
ಮೂಲತ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಬಳ್ಳೂರಗಿ ಗ್ರಾಮದ ನಿವಾಸಿ.
ಬಳ್ಳೂರಗಿ ಗ್ರಾಮದವನಾದರೂ ಕೂಡ ಈತ ಇರ್ತಿದ್ದು ಹೆಚ್ಚಾಗಿ ಮಹರಾಷ್ಟ್ರದ ಪುಣೆ, ಅಕ್ಕಲಕೋಟೆ ಸೇರಿದಂತೆ ಅನೇಕ ಬಾಗದಲ್ಲಿಯೇ.
ಈತನ ಮೇಲೆ ಕಲಬುರಗಿ, ಮಹರಾಷ್ಟ್ರ, ತೆಲೆಂಗಾಣದ ವಿವಿಧ ಪೊಲೀಸ್ ಠಾಣೆಗಳಲ್ಲಿ ಬರೋಬ್ಬರಿ 28 ಮನೆಗಳ್ಳತನ ಪ್ರಕರಣಗಳಿವೆ.
ಕಳೆದ ಕೆಲ ದಿನಗಳ ಹಿಂದೆ ಈತ ಮಹರಾಷ್ಟ್ರದ ಅಕ್ಕಲಕೋಟೆಯಲ್ಲಿ ಮನೆಕಳ್ಳತನ ಮಾಡಿದ್ದನಂತೆ.
ಹೀಗಾಗಿ ಖಾಜಪ್ಪನ ಚಲನವಲನದ ಬಗ್ಗೆ ಅಕ್ಕಲಕೋಟೆ ಪೊಲೀಸರು ಮಾಹಿತಿ ಸಂಗ್ರಹಿಸಿದ್ದರು.
ಆದರೆ ಕಳೆದ ರಾತ್ರಿ ಆತ ಅಫಜಲಪುರಕ್ಕೆ ಹೋಗ್ತಿರೋದು ಗೊತ್ತಾಗಿತ್ತು.
ಹೀಗಾಗಿ ಅಫಜಲಪುರ ಪೊಲೀಸರಿಗೆ ಅಕ್ಕಲಕೋಟೆ ಪೊಲೀಸರು ಮಾಹಿತಿ ನೀಡಿದ್ದರು.
ಇಂದು ನಸುಕಿನ ಜಾವ ಮೂರು ಗಂಟೆಯಿಂದ ಅಫಜಲಪುರ ಪೊಲೀಸರು, ಅಫಜಲಪುರ ಹೊರವಲಯದ ಸೊನ್ನ ಕ್ರಾಸ್ ಬಳಿ ಚೆಕ್ ಪೋಸ್ಟ್ ಹಾಕಿಕೊಂಡು ವಾಹನ ತಪಾಸಣೆ ಮಾಡ್ತಿದ್ದರು.
ಮೂರುವರೆ ಸಮಯದಲ್ಲಿ ಖಾಜಪ್ಪಾ ಕಾರ್ನಲ್ಲಿ ಬಂದಿದ್ದ. ಆದರೆ ಪೊಲೀಸರನ್ನು ನೋಡುತ್ತಿದ್ದಂತೆ, ಕಾರ್ನ್ನು ರಿಟರ್ನ್ ತೆಗದುಕೊಂಡು ಹೋಗಲು ಮುಂದಾಗಿದ್ದ.
ಕೂಡಲೇ ಅಫಜಲಪುರ ಪಿಎಸ್‌ಐ ಭೀಮರಾಯ್ ಬಂಕಲಿ, ಕಾರ್ ನ ಗ್ಲಾಸ್ನ್ನು ಒಡೆದು, ಆತನನ್ನು ಹಿಡಿಯುವ ಯತ್ನ ಮಾಡಿದ್ದರು.
ಆದರೆ ಪಿಎಸ್‌ಐ ಕೈಯಲ್ಲಿದ್ದ ಲೋಡೆಡ್ ಸರ್ವಿಸ್ ಪಿಸ್ತೂಲ್ ಕೈಜಾರಿ ಕಾರ್ನೊಳಗೆ ಬಿದಿತ್ತು.
ಕಳ್ಳ ಖಾಜಪ್ಪ ಕಾರ್ನ್ನು ರಿಟರ್ನ್ ಮಾಡಿಕೊಂಡು ಪರಾರಿಯಾಗಿದ್ದ.
ಲೋಡೆಡೆ ಸರ್ವಿಸ್ ಪಿಸ್ತೂಲ್ ತಗೆದುಕೊಂಡು ಹೋಗಿದ್ದ ಪೊಲೀಸರ ತಲೆಬಿಸಿ ಹೆಚ್ಚಿಸಿತ್ತು.
ನಸುಕಿನ ಜಾವ ನಾಲ್ಕು ಗಂಟೆಯಿಂದ ಖಾಜಪ್ಪನಿಗಾಗಿ ಕಲಬುರಗಿ ಜಿಲ್ಲಾ ಪೊಲೀಸರು ಹುಡುಕಾಟ ನಡೆಸಿದ್ದರು.
ಆದ್ರೆ ಮುಂಜಾನೆ ಎಂಟು ಗಂಟೆಗೆ ಗೊತ್ತಾಗಿತ್ತು, ಆತ ಬಳ್ಳೂರಗಿ ಹೊರವಲಯದ ಮಹಾಲಕ್ಷ್ಮಿ ದೇವಸ್ಥಾನದ ಬಳಿಯಿದ್ದಾನೆ ಅಂತ.
ಅಲ್ಲಿಗೆ ಬರುವಷ್ಟರಲ್ಲಿ ಖಾಜಪ್ಪ ಮರವೇರಿ ಕೂತಿದ್ದ. ಮತ್ತೊಂದಡೆ ಆತನ ಸಹಚರರಾದ ಸಂಜು ಮತ್ತು ರವಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಮುಂಜಾನೆ ಎಂಟು ಗಂಟೆಯಿಂದ ಆತನನ್ನು ಮರದಿಂದ ಕೆಳಗಿಳಿಸೋ ಯತ್ನವನ್ನು ಪೊಲೀಸರು ಮಾಡಿದ್ದರು.
ಆದ್ರೆ ನನ್ನ ಸಮೀಪ ಬಂದ್ರೆ ನಾನೇ ಪೈರ್ ಮಾಡಿಕೊಂಡು ಸಾಯ್ತೇನೆ ಅಂತ ಬೆದರಿಕೆ ಹಾಕಿದ್ದನಂತೆ.
ಕೊನೆಗೆ ಆತನ ಕುಟುಂಬದವರನ್ನು ಕರೆಸಿ, ಆತನಿಗೆ ಏನು ಮಾಡೋದಿಲ್ಲಾ ಅಂತ ಹೇಳಿ, ಮನವೊಲಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಇಂದು ಮಧ್ಯಾಹ್ನ 12-45 ಕ್ಕೆ ಆರೋಪಿ ಖಾಜಪ್ಪ ಪೊಲೀಸರಿಗೆ ಶರಣಾಗಿದ್ದು, ತನ್ನ ಬಳಿಯಿದ್ದ ಸರ್ವಿಸ್ ಪಿಸ್ತೂಲ್ನ್ನು ಪೊಲೀಸರಿಗೆ ನೀಡಿದ್ದಾನೆ.
ಯಾವುದೇ ತೊಂದರೆಯಿಲ್ಲದೆ ಕಾರ್ಯಾಚರಣೆ ಯಶಸ್ವಿಯಾಗಿದ್ದ ಹಿನ್ನೆಲೆ, ಮರವಿದ್ದ ದೇವಸ್ಥಾನದ ಕೆಳಗಿದ್ದ ಮಹಾಲಕ್ಷ್ಮಿ ದೇವಿಗೆ ಕಲಬುರಗಿ ಎಸ್ಪಿ ಇಶಾ ಪಂತ್ ಪೂಜೆ ಮಾಡಿ ನಿಟ್ಟುಸಿರು ಬಿಟ್ಟಿದ್ದಾರೆ.
ಸದ್ಯ ಖಾಜಪ್ಪನನ್ನು ವಶಕ್ಕೆ ಪಡೆದಿರೋ ಪೊಲೀಸರು ಆತನಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಿ, ವಿಚಾರಣೆ ನಡೆಸಲು ಮುಂದಾಗಿದ್ದಾರೆ.
ಮಂಗಳೂರು/ಬೆಳಗಾವಿ: ಮೂವರು ಸೇರಿಕೊಂಡು ಬಾಲಕಿಯರಿಬ್ಬರ ಮೇಲೆ ಗ್ಯಾಂ*ಗ್ ರೇ*ಪ್ ಮಾಡಿದ ಘಟನೆ ಬೆಳಗಾವಿಯ ರಾಯಭಾಗ ತಾಲೂಕಿನ ಸವಸುದ್ದಿ ಗ್ರಾಮದ ಬಳಿಯ ಗುಡ್ಡಗಾಡು ಪ್ರದೇಶದಲ್ಲಿ ನಡೆದಿದೆ.
ಆರೋಪಿಗಳಾದ ಅಭಿಷೇಕ್, ಆದಿಲ್ ಜಮಾದಾರ್ ಮತ್ತು ಚಾಲಕ ಕೌತುಕ್ ಬಡಿಗೇರ ಎಂಬುವವರನ್ನು ಬಂಧಿಸಲಾಗಿದೆ.
ಪ್ರಕರಣ ಸಂಬಂಧ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಗುಳೇದ್ ಮಾತನಾಡಿ, “ಆರೋಪಿ ಅಭಿಷೇಕ್ ಇನ್‌ಸ್ಟಾಗ್ರಾಂ ಮೂಲಕ ಓರ್ವ ಬಾಲಕಿಗೆ ಪರಿಚಯವಾಗಿದ್ದಾನೆ. ಸವದತ್ತಿಗೆ ಹೋಗುತ್ತಿದ್ದೇನೆ ನೀನು ಬಾ ಎಂದು ಬಾಲಕಿಗೆ ಪುಸಲಾಯಿಸಿದ್ದಾನೆ. ಈತನ ಮಾತು ನಂಬಿ, ನೊಂದ ಬಾಲಕಿ ತನ್ನ ಸ್ನೇಹಿತೆಯನ್ನ ಕರೆದುಕೊಂಡು, ಇಬ್ಬರೂ ಒಟ್ಟಾಗಿ ಹಾರೂಗೇರಿ ಬಸ್ ನಿಲ್ದಾಣದಕ್ಕೆ ಹೋಗಿದ್ದಾರೆ. ಅಲ್ಲಿಂದ ಅಭಿಷೇಕ್ ಬಾಲಕಿಯರನ್ನು ಎರ್ಟಿಗಾ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾನೆ. ಎರ್ಟಿಗಾ ಕಾರಿನಲ್ಲಿ ಮೂರೂ ಜನ ಆರೋಪಿಗಳಿದ್ದರು. ಸಂತ್ರಸ್ತ ಬಾಲಕಿಯರನ್ನು ರಾಯಬಾಗ ತಾಲೂಕಿನ ಸವಸುದ್ದಿ ಗ್ರಾಮದ ಬಳಿಯ ಗುಡ್ಡಗಾಡು ಪ್ರದೇಶಕ್ಕೆ ಕರೆದುಕೊಂಡು ಹೋಗಿ ಜನವರಿ 3ರಂದು ಮಧ್ಯಾಹ್ನದ ವೇಳೆಗೆ ಗುಡ್ಡದಲ್ಲಿ ಬಾಲಕಿಯರ ಮೇಲೆ ಅ*ತ್ಯಾಚಾರವೆಸಗಿದ್ದಾರೆ” ಎಂದು ತಿಳಿಸಿದರು.
ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದ ಆರೋಪಿಗಳು ‘ಮುಂದಿನ ವಾರ ಗೋವಾಕ್ಕೆ ಬರಬೇಕು. ಇಲ್ಲವಾದಲ್ಲಿ ವಿಡಿಯೋ ಪಬ್ಲಿಶ್ ಮಾಡುತ್ತೇವೆ. ದೂರು ಕೊಟ್ಟರೆ ಕೊ*ಲೆ ಮಾಡುತ್ತೇವೆ’ ಎಂದು ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ಬಾಲಕಿಯರು ಮನೆಯಲ್ಲಿ ಈ ವಿಚಾರ ತಿಳಿಸಿದ್ದಾರೆ. ಬಳಿಕ, ಸಂತ್ರಸ್ತ ಬಾಲಕಿ ತಮ್ಮ ಸೋದರ ಸಂಬಂಧಿ ಜೊತೆಗೆ ಬಂದು ಜನವರಿ 13ರಂದು ಹಾರೂಗೇರಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ಕೊಟ್ಟ 24 ಗಂಟೆಯೊಳಗೆ ಇಬ್ಬರು ಆರೋಪಿಯನ್ನ ಬಂಧಿಸಲಾಗಿದೆ. ನಂತರ, ಮತ್ತೋರ್ವ ಆರೋಪಿಯನ್ನು ಬಂಧಿಸಲಾಗಿದೆ. “ಆರೋಪಿಗಳ ಹಿನ್ನಲೆಯನ್ನು ಪರಿಶೀಲನೆ ಮಾಡುತ್ತೇವೆ. ಇನ್‌ಸ್ಟಾಗ್ರಾಂನಲ್ಲಿ ಹುಡಗಿ ಹಾಕಿದ್ದ ರೀಲ್ಸ್ ಪಾಲೋ ಮಾಡುತ್ತಿದ್ದ. ಅವರ ಮೊಬೈಲ್ಗಳನ್ನು ಜಪ್ತಿ ಮಾಡಿದ್ದು ಅದರಲ್ಲಿ ವಿಡಿಯೋಗಳು ಸಿಕ್ಕಿವೆ. ಗ್ಯಾಂಗ್ ರೇಪ್ ಪ್ರಕರಣ ಅಂತ ಕೇಸ್ ದಾಖಲಿಸಿದ್ದೇವೆ” ಎಂದು ಮಾಹಿತಿ ನೀಡಿದರು.
ಮಂಗಳೂರು/ಬೆಂಗಳೂರು : ‘ಬಿಗ್ ಬಾಸ್ ಕನ್ನಡ ಸೀಸನ್ 11’ ಇನ್ನೇನು ಕೆಲವೇ ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ. ಇದೇ ವೇಳೆ ಯಾರು ಫಿನಾಲೆ ತಲುಪಬಹುದು ಎನ್ನುವ ಲೆಕ್ಕಾಚಾರ ಸೋಷಿಯಲ್ ಮಿಡಿಯಾದಲ್ಲಿ ಶುರುವಾಗಿದೆ.
ಕನ್ನಡ ಬಿಗ್ ಬಾಸ್ 11ರ ಆರಂಭದಿಂದಲೇ ಹೊಸ ಹೊಸ ಮಾದರಿಯನ್ನು ವಿಕ್ಷಕರಿಗೆ ಪರಿಚಯಿಸಿದ್ದು, ಫಿನಾಲೆ ಕೂಡ ಹೊಸತನಕ್ಕೆ ನಾಂದಿ ಆಡಲಿದೆ.
ಮೂಲಗಳ ಪ್ರಕಾರ ಬಿಗ್ ಬಾಸ್ ಸೀಸನ್ 11 ಫಿನಾಲೆಗೆ ಭರ್ಜರಿ ಪ್ಲಾನ್ ಮಾಡಲಾಗಿದೆ. ಜನವರಿ 25 ಹಾಗೂ 26ರಂದು ಬಿಗ್ ಬಾಸ್ ಸೀಸನ್ 11ರ ಗ್ರ್ಯಾಂಡ್ ಫಿನಾಲೆ ನಡೆಯುತ್ತಿದೆ.
ಜನವರಿ 25ರ ಶನಿವಾರ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಹೊಸ ಟ್ವಿಸ್ಟ್ ಕೊಟ್ರೆ, ಜನವರಿ 26ರ ಬಿಗ್ ಬಾಸ್ ಸೀಸನ್ ಕಪ್ ಎತ್ತುವವರು ಯಾರು ಅನ್ನೋದು ಗೊತ್ತಾಗಲಿದೆ.
ಸದ್ಯ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ ಬಿಗ್ ಬಾಸ್ ಟಾಪ್ 5 ಸ್ಪರ್ಧಿಗಳಲ್ಲಿ ತ್ರಿವಿಕ್ರಮ್, ಧನರಾಜ್, ಹನುಮಂತ, ಮಂಜು, ಭವ್ಯ ಇರುವುದು ಪಕ್ಕಾ ಎಂದು ಹೇಳಲಾಗುತ್ತಿದೆ. ಇದರಿಂದ ಈ ವಾರದ ಮಿಡ್ ವೀಕ್ ಎಲಿಮಿನೇಷನ್ ನಲ್ಲಿ ಮೋಕ್ಷಿತಾ, ಗೌತಮಿ ಇಲ್ಲವಾದರೇ ರಜತ್ ಹೊರಹೋಗಬಹುದು ಎನ್ನಲಾಗಿದೆ.
ಅಂತಿಮವಾಗಿ ಈ ಶನಿವಾರ ಕಿಚ್ಚ ಸುದೀಪ್ ಅವರು ಕೊನೇ ವಾರದ ಪಂಚಾಯ್ತಿಯಲ್ಲಿ ಒಬ್ಬರಿಗೆ ಬಿಗ್ ಶಾಕ್ ಕೊಡಲಿದ್ದಾರೆ. ಉಳಿದ 6 ಸ್ಪರ್ಧಿಗಳಲ್ಲಿ ಬಿಗ್ ಬಾಸ್ ಫಿನಾಲೆ ಟಿಕೆಟ್ ಗಾಗಿ ಟಾಸ್ಕ್ ನಡೆಯಲಿದೆ. ಇದರಲ್ಲಿ ಒಬ್ಬರು ಎಲಿಮಿನೇಟ್ ಆಗುತ್ತಾರೆ. ಅಂತಿಮವಾಗಿ ಟಾಪ್ 5 ಸ್ಪರ್ಧಿಗಳು ಫಿನಾಲೆ ತಲುಪಲಿದ್ದಾರೆ.
ಬಿಗ್ ಬಾಸ್ ವಿನ್ನರ್ ಯಾರು?
‘ಬಿಗ್ ಬಾಸ್ ಕನ್ನಡ ಸೀಸನ್ 11’ರ ವಿನ್ನರ್ ಯಾರೆಂದು ಈಗಗಾಲೇ, ಬಿಗ್ ಬಾಸ್ ವೀಕ್ಷಕರಲ್ಲಿ ಕುತೂಹಲ ಕೆರಳಿಸಿದೆ. ಕಳೆದ ವಾರ ಬಿಗ್ ಬಾಸ್ ನೀಡಿದ ಟಿಕೆಟ್ ಟು ಫಿನಾಲೆ ಟಾಸ್ಕ್ ನಲ್ಲಿ ಹನುಮಂತ ಭರ್ಜರಿಯಾಗಿ ಆಟವಾಡಿ ಮೊದಲ ಫೈನಲಿಸ್ಟ್ ಆದರು. ಆ ಪ್ರಕಾರ ಸೋಷಿಯಲ್ ಮೀಡಿಯಾದಲ್ಲಿ ಈ ಬಾರಿ ಬಿಗ್ ಬಾಸ್ ವಿನ್ನರ್ ಹನುಮಂತ ಎಂದು ಚರ್ಚೆಯಾಗುತ್ತಿದೆ..
ಆದರೆ, ವೈಲ್ಡ್ ಕಾರ್ಡ್ ಎಂಟ್ರಿ ಆದವರು ವಿನ್ನರ್ ಆಗುವುದಿಲ್ಲ ಎನ್ನುವುದು ಇನ್ನೂ ಕೆಲವರ ವಾದ. ಅಂತಿಮವಾಗಿ ಫೈನಲ್ ನಲ್ಲಿ ಯಾರು ಕಪ್ ಗೆಲ್ಲುತ್ತಾರೆ ಎಂದು ಕಾದು ನೋಡಬೇಕಿದೆ.
ಸಂದೇಶ್ ಉಣಕಲ್ (27) ಮೃ*ತ ವ್ಯಕ್ತಿ ಎಂದು ಗುರುತಿಸಲಾಗಿದೆ. ಶನಿವಾರ ಮನೆಯಿಂದ ನಾ*ಪತ್ತೆಯಾಗಿದ್ದ ಸಂದೇಶ, ಉಣಕಲ್ ಕೆರೆಗೆ ಬಿ*ದ್ದು ಆ*ತ್ಮಹ*ತ್ಯೆ ಮಾಡಿಕೊಂಡಿದ್ದು, ಅದಕ್ಕೂ ಮುನ್ನ ತನ್ನ ತಾಯಿಗೆ ವಾಯ್ಸ್ ಮೆಸೇಜ್ ಮಾಡಿ ‘ನನ್ನ ಸಾ*ವಿಗೆ ಸಂಜನಾ(ಪ್ರೇಯಸಿ) ಕಾರಣ’ ಎಂದು ತಿಳಿಸಿದ್ದಾನೆ.
ಮೋಟಾರ್ ಬೈಕ್ ಶೋ ರೂಮ್ ನಲ್ಲಿ ಕೆಲಸ ಮಾಡುತ್ತಿದ್ದ ಸಂದೇಶ್ ಏಕಾಏಕಿ ಶನಿವಾರ ಮನೆಯಿಂದ ನಾ*ಪತ್ತೆಯಾಗಿದ್ದ. ಈ ಕುರಿತು ಕುಟುಂಬಸ್ಥರು ನವನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು, ಆದರೆ ಇದೀಗ ಸಂದೇಶ ಶ*ವವಾಗಿ ಪ*ತ್ತೆಯಾಗಿದ್ದಾನೆ. ಆ*ತ್ಮಹ*ತ್ಯೆಗೂ ಮುನ್ನ ತನ್ನ ಪ್ರೇಯಸಿಯ ಜೊತೆಗಿನ ಖಾ*ಸಗಿ ವಿಡಿಯೋ, ವಾಟ್ಸಪ್ ಚಾಟ್, ಸಂಭಾಷಣೆ ಮತ್ತು ಫೋಟೋಗಳನ್ನು ತನ್ನ ಸ್ನೇಹಿತರಿಗೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾನೆ. ಇನ್ನು ಮಗನನ್ನು ಕ*ಳೆದುಕೊಂಡ ತಾಯಿಯ ಕೂಗು ಮುಗಿಲು ಮುಟ್ಟಿದೆ.
ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಈ ಘಟನೆ ಕುರಿತು ಪ್ರಕರಣ ದಾಖಲಾಗಿದೆ, ಏಕಾಏಕಿ ಸಂದೇಶ್ ಆ*ತ್ಮಹ*ತ್ಯೆ ಮಾಡಿಕೊಂಡ ಹಿಂದಿನ ನಿಜವದ ಕಾರಣ ತಿಳಿದಿಲ್ಲ. ಈ ಕುರಿತು ಅನುಮಾನಗಳು ಹುಟ್ಟಿಕೊಂಡಿದ್ದು, ಪೊಲೀಸ್ ತನಿಖೆಯಲ್ಲಿ ಸಾವಿಗೆ ಕಾರಣ ತಿಳಿದು ಬರಬೇಕಷ್ಟೇ.