ಬಂಟ್ವಾಳ : ಬಂಟ್ವಾಳ ಪೊಲೀಸರು ಅಕ್ರಮ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. ಕಡ್ಲೆ ಇಕ್ಬಾಲ್ ಎಂವವನು ಅಕ್ರಮವಾಗಿ ಈ ಗಾಂಜಾವನ್ನು ಇಟ್ಟುಕೊಂಡಿದ್ದ,. ಆರೋಪಿ ಇಕ್ಬಾಲ್ @ ಕಡ್ಲೆ ಇಕ್ಬಾಲ್ ನನ್ನು ದಸ್ತಗಿರಿ ಮಾಡಲಾಗಿರುತ್ತದೆ.
ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸ್ ನಿರೀಕ್ಷಕರಾದ ಟಿ.ಡಿ ನಾಗರಾಜ್ ರವರ ನೇತೃತ್ವದ ತಂಡ ಸಜೀಪನಡು ಗ್ರಾಮದ ಕಂಚಿನಡ್ಕ ಪದವು ಎಂಬಲ್ಲಿ ಈ ಕಾರ್ಯಾಚರಣೆ ನಡೆಸಿದ್ದಾರೆ.
ಸುಮಾರು 30,000/- ಮೌಲ್ಯದ 1 ಕೆ.ಜಿ 150 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣದ ಸಹ ಆರೋಪಿಗಳಾದ ಸಜೀಪನಡುವಿನ ಎಸ್.ಕೆ ರಫೀಕ್ ಮತ್ತು ಕಂಚಿನಡ್ಕ ಪದವಿನ ಮೋನು @ ಪಿಲಿ ಮೋನು ತಲೆಮರೆಸಿಕೊಂಡಿರುತ್ತಾರೆ. ಆರೋಪಿಗಳು ಈ ಹಿಂದೆ ಕೂಡ ಡ್ರಗ್ ಮಾಫಿಯಾದಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಪ್ರಕರಣದಲ್ಲಿ ಬಂಟ್ವಾಳ ಗ್ರಾಮಾಂತರ ಠಾಣಾ ಪಿ.ಎಸ್.ಐ ಪ್ರಸನ್ನ. ಎಂ.ಎಸ್, ವಿಶೇಷ ತಂಡದ ಸದಸ್ಯರಾದ ಉದಯ ರವಿ, ಜನಾರ್ಧನ, ಸುರೇಶ್, ಪ್ರವೀಣ್, ಗೋಣಿಬಸಪ್ಪ, ಇರ್ಷಾದ್, ವಿವೇಕ್, ಕುಮಾರ್ ರವರ ತಂಡ ಪಾಲ್ಗೊಂಡಿರುತ್ತಾರೆ.