DAKSHINA KANNADA
ಕಡಬ ರೆಂಜಿಲಾಡಿಯಲ್ಲಿ ಒಂಟಿ ಸಲಗದ ದಾಳಿಗೆ ಯುವತಿ ಸೇರಿ ಇಬ್ಬರ ಬಲಿ..!
ಇಂದು ಮುಂಜಾನೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಇಬ್ಬರು ಮೃತಪಟ್ಟ ದಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಯಾಲೂಕಿನ ಕುಟ್ರುಪಾಡಿ ಗ್ರಾಮದ ಮೀನಾಡಿ ಸಮೀಪ ನಡೆದಿದೆ.
ಕಡಬ : ಇಂದು ಮುಂಜಾನೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಇಬ್ಬರು ಮೃತಪಟ್ಟ ದಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಯಾಲೂಕಿನ ಕುಟ್ರುಪಾಡಿ ಗ್ರಾಮದ ಮೀನಾಡಿ ಸಮೀಪ ನಡೆದಿದೆ.
ಇಲ್ಲಿನ ಪೇರಡ್ಕ ಹಾಲು ಸೊಸೈಟಿಯಲ್ಲಿ ಸಿಬ್ಬಂದಿಯಾಗಿರುವ 21 ವರ್ಷದ ರಂಜಿತಾ ಹಾಗು 55 ವರ್ಷದ ರಮೇಶ್ ಅವರು ಆನೆ ದಾಳಿಯಿಂದ ಮೃತ ದುರ್ದೈವಿಗಳಾಗಿದ್ದಾರೆ.
ಆನೆಯ ದಾಳಿಯಿಂದ ರಮೇಶ್ ಅವರು ಸ್ಥಳದಲ್ಲೇ ಮೃತಪಟ್ಟರೆ.
ಆನೆಯ ದಾಳಿಗೆ ಒಳಗಾಗಿದ್ದ ಯುವತಿ ರಂಜಿತಾ ಅವರು ನೆಲ್ಯಾಡಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ರಂಜಿತಾ ಅವರು ತಮ್ಮ ಮನೆಯಿಂದ ಪೇರಡ್ಕದಲ್ಲಿರುವ ಹಾಲು ಸೊಸೈಟಿಗೆ ಕೆಲಸಕ್ಕೆಂದು ನೈಲ ಕಾಡಂಚಿನ ರಸ್ತೆಯ ಮೂಲಕವಾಗಿ ಕೆಲಸಕ್ಕೆಂದು ಸಾಗುವಾಗ ಆನೆ ದಾಳಿ ನಡೆಸಿದೆ.
ಈ ವೇಳೆ ಯುವತಿ ಬೊಬ್ಬೆ ಕೇಳಿ ಸ್ಥಳಕ್ಕೆ ಬಂದ ಸ್ಥಳೀಯ ನಿವಾಸಿಯಾಗಿರುವ ರಮೇಶ್ ರೈ ಎಂಬವರ ಮೇಲೆ ಆನೆ ಅಟ್ಟಹಾಸ ಮೆರೆದು ದಾಳಿ ಮಾಡಿ ಸಾಯಿಸಿದೆ.
ಕಾಡು ಪ್ರಾಣಿಗಳ ನಿರಂತರ ದಾಳಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಕಾಡಂಚಿನಲ್ಲಿರುವ ಜನರು ಭಯ ಭೀತರಾಗಿದ್ದು ,ಶಾಲಾ ಮಕ್ಕಳು ಮನೆಯಿಂದ ಶಾಲೆಗೆ ಹೋಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಅರಣ್ಯಾಧಿಕಾರಿ, ಪೊಲೀಸ್ ಇಲಾಖೆಯ ವಿರುದ್ಧ ಸ್ಥಳೀಯರ ಆಕ್ರೋಶ :
ಕಡಬ: ರೆಂಜಿಲಾಡಿ ಗ್ರಾಮದ ಇಬ್ಬರು ಆನೆ ದಾಳಿಗೆ ಒಳಗಾಗಿ ಮೃತಪಟ್ಟ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ವಿರುದ್ಧ ಸ್ಥಳೀಯರ ಆಕ್ರೋಶ ಹೆಚ್ಚಾಗಿದೆ.
ಸ್ಥಳಕ್ಕೆ ಸಚಿವರು, ಜಿಲ್ಲಾಧಿಕಾರಿ ಬಾರದೆ ಶವ ಸಂಸ್ಕಾರಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದು ಸಾರ್ವಜನಿಕರು ಪಟ್ಟು ಹಿಡಿದಿದ್ದಾರೆ.
ಈ ಭಾಗದಲ್ಲಿ ನಿರಂತರ ಆನೆ ಹಾವಳಿ ಆಗುತ್ತಿದ್ದರೂ ಅರಣ್ಯ ಇಲಾಖೆ ತೀವ್ರ ನಿರ್ಲಕ್ಷ್ಯ ವಹಿಸುತ್ತಿದೆ ಎಂಬ ಆರೋಪ ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ.
DAKSHINA KANNADA
WATCH : ಕದ್ರಿ ಪಾರ್ಕ್ ನ ರಸ್ತೆಯಲ್ಲಿ ‘ಅಪರೇಷನ್ ಹೆಬ್ಬಾವು’; ಭಾರಿ ಗಾತ್ರದ ಹಾವನ್ನು ಕಂಡು ಬೆಚ್ಚಿ ಬಿದ್ದ ಜನ
ಮಂಗಳೂರು: ಹಬ್ಬದ ಜೊತೆಯಲ್ಲಿ ವೀಕೆಂಡ್ ಮೂಡ್‌ನಲ್ಲಿಇಂದು ಮುಂಜಾನೆ ಕದ್ರಿ ಪಾರ್ಕ್‌ಗೆ ಬಂದ ಜನರು ಆ ಒಂದು ಅತಿಥಿಯನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ. ಮರದ ಮೇಲೆ ಹೆಬ್ಬಾವೊಂದು ಮಲಗಿದ್ದು ಜನರ ಈ ಆತಂಕಕ್ಕೆ ಕಾರಣವಾಗಿತ್ತು.
ತಕ್ಷಣ ಈ ವಿಚಾರವನ್ನು ಕದ್ರಿ ಪಾರ್ಕ್ ನಿರ್ವಾಹಕನ ಗಮನಕ್ಕೆ ತಂದಿದ್ದಾರೆ. ಬಳಿಕ ಅಗ್ನಿಶಾಮಕ ದಳದ ವಾಹನದ ಮೂಲಕ ಹೆಬ್ಬಾವಿನ ರಕ್ಷಣೆಗೆ ಮುಂದಾಗಿದ್ದಾರೆ. ಆದ್ರೆ, ಮರದ ಮೇಲೆ ಕೊಂಬೆಯಲ್ಲಿ ಸುತ್ತಿ ಮಲಗಿದ್ದ ಹೆಬ್ಬಾವನ್ನು ರಕ್ಷಣೆ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ. ಹೀಗಾಗಿ ಪಿಲಿಕುಳದಿಂದ ನುರಿತ ಉರಗತಜ್ಞ ಭುವನ್ ಅವರನ್ನು ಸ್ಥಳಕ್ಕೆ ಕರೆಯಿಸಲಾಗಿದೆ.
ಇದನ್ನೂ ಓದಿ : ಆಸ್ಪತ್ರೆಯ ಶುಲ್ಕ ಪಾವತಿಸಲಾಗದೆ ಮಗುವನ್ನೇ ಮಾರಾಟ ಮಾಡಿದ ತಂದೆ!
ಪಿಲಿಕುಳದ ಉರಗ ತಜ್ಞ ಭುವನ್ ಹಾಗೂ ಅಗ್ನಿಶಾಮಕ ದಳದ ಜಂಟಿ ಕಾರ್ಯಾಚರಣೆಯ ಬಳಿಕ ಹೆಬ್ಬಾವನ್ನು ಸುರಕ್ಷಿತವಾಗಿ ಮರದಿಂದ ಕೆಳಗೆ ಇಳಿಸಿ ರಕ್ಷಣೆ ಮಾಡಲಾಗಿದೆ. ಹೆಬ್ಬಾವು ಸುಮಾರು 7 ರಿಂದ 8 ಅಡಿಗಳಷ್ಟು ಉದ್ದವಿದ್ದು, ಯಾವುದೋ ಆಹಾರ ಸೇವಿಸಿ ಮರ ಏರಿರುವ ಸಾಧ್ಯತೆ ಇದೆ.
ವಿಡಿಯೋ ನೋಡಿ:
DAKSHINA KANNADA
ಬುರ್ದುಗೋಳಿಯ ಗುಳಿಗ-ಕೊರಗಜ್ಜ ಕ್ಷೇತ್ರಕ್ಕೆ ‘ದ್ವಾಪರ ದಾಟುತ’ ಹಾಡಿನ ಖ್ಯಾತಿಯ ಗಾಯಕ ಜಸ್ಕರನ್ ಸಿಂಗ್ ಭೇಟಿ
ಮಂಗಳೂರು : “ಕೃಷ್ಣಂ ಪಣಯ ಸಖಿ” ಚಿತ್ರದ ದ್ವಾಪರ ದಾಟುತ ಹಾಡಿನ ಖ್ಯಾತಿಯ ಗಾಯಕ ಜಸ್ಕರನ್ ಸಿಂಗ್ ತೊಕ್ಕೊಟ್ಟು ಕಲ್ಲಾಪುವಿನ ಬುರ್ದುಗೋಳಿಯ ಗುಳಿಗ-ಕೊರಗಜ್ಜ ಉದ್ಭವ ಶಿಲೆಯ ಆದಿಸ್ಥಳಕ್ಕೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದರು.
ಬಳಿಕ ಮಾಧ್ಯಮ ಜೊತೆ ಮಾತನಾಡಿದ ಅವರು, ಮಲಯಾಳಂ , ತಮಿಳು , ಕನ್ನಡ , ಪಂಜಾಬ್, ಚಲನಚಿತ್ರಗಳ ತಂಡದಿಂದ ಹಾಡು ಹಾಡಲು ಸಾಲು ಸಾಲಾಗಿ ಆಫರ್‌ಗಳು ಬಂದಿವೆ. ಪ್ರಮುಖವಾಗಿ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಜೊತೆಗೆ ಮತ್ತೊಂದು ಹಾಡು ರೆಕಾರ್ಡಿಂಗ್ ಪೂರ್ಣಗೊಂಡಿದೆ. ಎಲ್ಲರ ಆಶೀರ್ವಾದವಿದ್ದಲ್ಲಿ ಮತ್ತೊಮ್ಮೆ ಜನಮನ ಗೆಲ್ಲುವ ವಿಶ್ವಾಸ ನನ್ನಲ್ಲಿದೆ . ಮಂಗಳೂರಿನ ಕದ್ರಿ ಮತ್ತು ಬುರ್ದುಗೋಳಿಯ ಗುಳಿಗ – ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿದ ಬಳಿಕ ವಿಭಿನ್ನವಾದ ದೈವಿಕ ಭಾವನೆ ಜಾಗೃತಗೊಂಡಿದ್ದು, ಮಂಗಳೂರಿನ ಪ್ರದರ್ಶನದ ಯಶಸ್ಸಿಗೂ ದೈವ, ದೇವರಲ್ಲಿ ಪ್ರಾರ್ಥಿಸಿರುವುದಾಗಿ ಹೇಳಿದರು.
ಈ ವೇಳೆ ಬುರ್ದುಗೋಳಿ ಕ್ಷೇತ್ರದ ವತಿಯಿಂದ ಜಸ್ಕರನ್ ಸಿಂಗ್ ಅವರನ್ನು ಅಭಿನಂದಿಸಿ ಗೌರವಿಸಲಾಯಿತು.
ಇದನ್ನೂ ಓದಿ : ನಟ ದರ್ಶನ್ ಎರಡು ಮದುವೆ ಆಗಿದ್ದಾರೆ. ನಾನು ಆದರೆ ಏನ್ ತಪ್ಪು?; ಪತಿ ಕಿರುಕು*ಳಕ್ಕೆ ಪತ್ನಿ ಆತ್ಮಹ*ತ್ಯೆ
ಝೀ ಕನ್ನಡ ಸರಿಗಮಪ ಖ್ಯಾತಿಯ ಅಮಿಷ್ ಕುಮಾರ್ ಕೆ, ಕದ್ರಿ ಈವೆಂಟ್ಸ್ ನ ಪ್ರಮುಖರಾದ ಜಗದೀಶ್ ಕದ್ರಿ ಜಸ್ಕರನ್ ಸಿಂಗ್ ಜತೆಯಲ್ಲಿದ್ದರು. ಬುರ್ದುಗೋಳಿ ಗುಳಿಗ-ಕೊರಗಜ್ಜ ಉದ್ಭವ ಶಿಲೆಯ ಆದಿಸ್ಥಳ ಕ್ಷೇತ್ರದ ಆಡಳಿತ ಕಮಿಟಿಯ ಗೌರವ ಸಲಹೆಗಾರ ಚಂದ್ರಹಾಸ್ ಪಂಡಿತ್ ಹೌಸ್, ಕೋಶಾಧಿಕಾರಿ ನವೀನ್ ಕಾಯಂಗಳ,ಕಾರ್ಯದರ್ಶಿ ಜಯಶ್ರೀ ಕೊಟ್ಟಾರಿ, ಸದಸ್ಯರಾದ ಪ್ರಶಾಂತ್ ಕಾಯಂಗಲ, ಪುರುಷೋತ್ತಮ ಮೇಲಾಂಟ, ಪುರಷೋತ್ತಮ ಕಲ್ಲಾಪು, ಸಂಜಯ್, ಅಮಿತ ಕೊಟ್ಟಾರಿ, ವನಿತಾ ಗಂಡಿ, ದೀಕ್ಷಾ, ಹರೀಶ್ ಕೊಟ್ಟಾರಿ ಮೊದಲಾದವರು ಉಪಸ್ಥಿತರಿದ್ದರು.
DAKSHINA KANNADA
ಬಂಟ್ವಾಳ :ನವದಂಪತಿ ಪ್ರಯಾಣಿಸುತ್ತಿದ್ದ ಕಾರು ಅಪಘಾ*ತ; ಪತ್ನಿ ಸಾ*ವು; ಪತಿ ಗಂಭೀ*ರ
ಬಂಟ್ವಾಳ : ನವದಂಪತಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ ಸಂಭವಿಸಿ ಪತ್ನಿ ಸಾ*ವನ್ನಪ್ಪಿದ್ದು, ಪತಿ ಗಂ*ಭೀರವಾಗಿ ಗಾ*ಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ ಮಂಗಳೂರು-ಬೆಂಗಳೂರು ರಸ್ತೆಯ ಬಂಟ್ವಾಳದ ತಲಪಾಡಿ ಎಂಬಲ್ಲಿ ನಡೆದಿದೆ. ಪೆರ್ನೆ ಸಮೀಪದ ಒಡ್ಯದಗಯ ನಿವಾಸಿ ಅನಿಶ್ ಕೃಷ್ಣ ಎಂಬವರ ಪತ್ನಿ ಮಾನಸ ಸಾ*ವನ್ನಪ್ಪಿದ ನವವಿವಾಹಿತೆ. ಘಟನೆಯಿಂದ ಅನಿಶ್ ಕೃಷ್ಣ ಗಂಭೀ*ರವಾಗಿ ಗಾ*ಯಗೊಂಡಿದ್ದಾರೆ.
ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿಸಿರೋಡಿನ ಕಡೆಯಿಂದ ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದ ನವದಂಪತಿಯ ಆಲ್ಟೋ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆಯಿಂದ ಡಿವೈಡರ್ ಮೇಲಿನಿಂದ ಇನ್ನೊಂದು ಬದಿಗೆ ಹಾರಿದೆ. ಬಳಿಕ ಮಂಗಳೂರು ಕಡೆಯಿಂದ ಬಿಸಿರೋಡಿನ ಕಡೆಗೆ ಬರುತ್ತಿದ್ದ ಕೆ.ಎಸ್.ಆರ್‌ಟಿ.ಸಿ ಬಸ್ ಗೆ ಡಿ*ಕ್ಕಿ ಹೊಡೆದಿದೆ.
ಡಿ*ಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದ್ದು, ಘಟನೆಯಿಂದ ಹೆದ್ದಾರಿಯಲ್ಲಿ ಕೆಲಹೊತ್ತು ಸಂಚಾರಕ್ಕೆ ಅಡಚಣೆ ಉಂಟಾಯಿತು.
ಎರಡು ದಿನದ ಹಿಂದಷ್ಟೇ ಮದುವೆ :
ಸೆ.5 ರಂದು ದೇಂತಡ್ಕ ದೇವಸ್ಥಾನದಲ್ಲಿ ಮಾನಸ ಹಾಗೂ ಅನಿಶ್ ಕೃಷ್ಣ ಮದುವೆ ನಡೆದಿತ್ತು. ಮದುವೆ ಕಾರ್ಯಕ್ರಮದ ವಿಚಾರವಾಗಿ ಇಂದು ಅಲ್ಲಿನ ಕೆಲವೊಂದು ಲೆಕ್ಕಾಚಾರ ಮಾಡಲು ದೇಂತಡ್ಕ ದೇವಸ್ಥಾನಕ್ಕೆ ಬಂದು ವಾಪಸ್ ಮಾವನ ಮನೆಗೆ ಹೋಗುವ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಇಬ್ಬರು ಮಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎಂದು ಹೇಳಲಾಗಿದೆ. ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ
- LATEST NEWS5 days ago
ಪೇಟಿಎಂ ಮೂಲಕ ಲಕ್ಷ ಹಣ ವರ್ಗಾವಣೆ..! ಆರೋಪಿಯ ಬಂಧನ
- FILM4 days ago
ಅಮ್ಮನಾದ ಮಿಲನಾ ನಾಗರಾಜ್; ಸಂತಸ ಹಂಚಿಕೊಂಡ ನಟ ಡಾರ್ಲಿಂಗ್ ಕೃಷ್ಣ
- DAKSHINA KANNADA4 days ago
ದ.ಕ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪಟ್ಟಿ ಪ್ರಕಟ; 21 ಶಿಕ್ಷಕರಿಗೆ ಪ್ರಶಸ್ತಿ
- LATEST NEWS6 days ago
ವೇಲಾಂಕಣಿ ಮಡಗಾಂವ್ ಮಧ್ಯೆ ವಿಶೇಷ ರೈಲು ಓಡಾಟ; ಕೋಟ ಮನವಿಗೆ ಸ್ಪಂದಿಸಿದ ರೈಲ್ವೇ ಇಲಾಖೆ