Home ಪುತ್ತೂರು ಸುಬ್ರಹ್ಮಣ್ಯದಲ್ಲಿ ಮಹಿಳೆಗೆ ಸಾವಿಗೆ ಕಾರಣವಾದ ಕಾರನ್ನು 6 ತಿಂಗಳ ಬಳಿಕ ಪತ್ತೆ ಹಚ್ಚಿದ ಕಡಬ ಪೊಲೀಸರು

ಸುಬ್ರಹ್ಮಣ್ಯದಲ್ಲಿ ಮಹಿಳೆಗೆ ಸಾವಿಗೆ ಕಾರಣವಾದ ಕಾರನ್ನು 6 ತಿಂಗಳ ಬಳಿಕ ಪತ್ತೆ ಹಚ್ಚಿದ ಕಡಬ ಪೊಲೀಸರು

ಸುಬ್ರಹ್ಮಣ್ಯದಲ್ಲಿ ಮಹಿಳೆಗೆ ಸಾವಿಗೆ ಕಾರಣವಾದ ಕಾರನ್ನು 6 ತಿಂಗಳ ಬಳಿಕ ಪತ್ತೆ ಹಚ್ಚಿದ ಕಡಬ ಪೊಲೀಸರು

ಪುತ್ತೂರು : ಆರು ತಿಂಗಳ ಹಿಂದೆ ಮಹಿಳೆಯೊಬ್ಬರಿಗೆ ಡಿಕ್ಕಿ ಹೊಡೆದು ಪರಾರಿಯಾದ ಕಾರನ್ನು ಕಡಬ ಪೊಲೀಸರು ಪತ್ತೆಹಚ್ಚಿದ್ದಾರೆ.

ಈ ಕಾರು ಹಿಂದೂ  ಮುಖಂಡರಾಗಿ ಪುತ್ತೂರಿನಲ್ಲಿ ಗುರುತಿಸಿಕೊಂಡಿರುವ ಅರುಣ್ ಕುಮಾರ್ ಪುತ್ತಿಲ ಎಂಬವರಿಗೆ ಸೇರಿದ್ದಾಗಿದೆ ಎಂದು ಕಡಬ ಪೋಲೀಸರು ತಿಳಿಸಿದ್ದಾರೆ.

ಮಹಿಳೆಗೆ ಡಿಕ್ಕಿ ಹೊಡೆದು ಪರಾರಿಯಾದ ಕಾರನ್ನು ಸಿ.ಸಿ ಕ್ಯಾಮರಾ ದೃಶ್ಯಗಳನ್ನು ಆಧಾರಿಸಿ ಪತ್ತೆಹಚ್ಚಲಾಗಿದ್ದು, ಪೊಲೀಸರು ಕೊನೆಗೂ ಪ್ರಕರಣವನ್ನು ಬೇಧಿಸಿದ್ದಾರೆ.

2019 ರ ಸೆಪ್ಟೆಂಬರ್ 9 ರಂದು ಸುಬ್ರಹ್ಮಣ್ಯ- ಕಡಬ ರಾಜ್ಯ ಹೆದ್ದಾರಿಯ ನೆಟ್ಟಣ ಎಂಬಲ್ಲಿ ಮಹಿಳೆಗೆ ಡಿಕ್ಕಿ ಹೊಡೆದು ಕಾರು ಪರಾರಿಯಾಗಿತ್ತು.

ತೀವೃವಾಗಿ ಗಾಯಗೊಂಡ ಮಹಿಳೆ ಸುಮತಿ (48) ಎಂಬವರು ಮೃತಪಟ್ಟಿದ್ದರು.

ಇದೀಗ ಆರು ತಿಂಗಳುಗಳ ನಂತರ ವಾಹನವನ್ನು ಪೋಲೀಸರು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ. ತನಿಖೆ ಮುಂದುವರೆದಿದ್ದು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

ವಿಡಿಯೋಗಾಗಿ..

- Advertisment -

RECENT NEWS

 ಪಿ.ಯು.ಸಿ ಪರೀಕ್ಷೆ – ನಿಷೇಧಾಜ್ಞೆ ಜಾರಿಗೊಳಿಸಿದ ಡಿಸಿ ಸಿಂಧೂ ರೂಪೇಶ್

 ಪಿ.ಯು.ಸಿ ಪರೀಕ್ಷೆ - ನಿಷೇಧಾಜ್ಞೆ ಜಾರಿಗೊಳಿಸಿದ ಡಿಸಿ ಸಿಂಧೂ ರೂಪೇಶ್ ಮಂಗಳೂರು : ಮಾರ್ಚ್ 4 ರಿಂದ 23 ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯ 51 ಪರೀಕ್ಷಾ ಕೇಂದ್ರಗಳಲ್ಲಿ ಪಿ.ಯು.ಸಿ. ಪರೀಕ್ಷೆಗಳು ನಡೆಯಲಿದ್ದು,  ಪರೀಕ್ಷೆಯನ್ನು...

ಮಂಗಳೂರಿನಲ್ಲಿ ಲಕ್ಷಾಂತರ ಮೌಲ್ಯದ ಅಕ್ರಮ ಚಿನ್ನ ಮತ್ತು US ಡಾಲರ್‌ ಬೇಟೆಯಾಡಿದ ಕಸ್ಟಮ್ಸ್‌ ಅಧಿಕಾರಿಗಳು..!

ಮಂಗಳೂರಿನಲ್ಲಿ ಲಕ್ಷಾಂತರ ಮೌಲ್ಯದ ಅಕ್ರಮ ಚಿನ್ನ ಮತ್ತು US ಡಾಲರ್‌ ಬೇಟೆಯಾಡಿದ ಕಸ್ಟಮ್ಸ್‌ ಅಧಿಕಾರಿಗಳು..!   ಮಂಗಳೂರು :  ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು ಪ್ರತ್ಯೇಕ ಪ್ರಕರಣಗಳನ್ನು ಕಸ್ಟಮ್ಸ್‌ ಅಧಿಕಾರಿಗಳು ಭೇಧಿಸಿದ್ದಾರೆ. ಗುದದ್ವಾರದಲ್ಲಿ ಚಿನ್ನವನ್ನು ಪೇಸ್ಟ್‌...

ಮದುವೆ ಸಮಾರಂಭಕ್ಕೆ ತೆರಳುತ್ತಿದ್ದ ಬಸ್ ನದಿಗೆ ಬಿದ್ದು 25 ಮಂದಿ ಸಾವು

ಮದುವೆ ಸಮಾರಂಭಕ್ಕೆ ತೆರಳುತ್ತಿದ್ದ ಬಸ್ ನದಿಗೆ ಬಿದ್ದು 25 ಮಂದಿ ಸಾವು ರಾಜಸ್ಥಾನ: ಮದುವೆ ಸಮಾರಂಭಕ್ಕೆ ತೆರಳುತ್ತಿದ್ದ ವೇಳೆ ಖಾಸಗಿ ಬಸ್ ನದಿಗೆ ಬಿದ್ದ ಪರಿಣಾಮ 25 ಮಂದಿ ಸಾವನ್ನಪ್ಪಿದ್ದು, ಮೂರು ಜನರು ಗಾಯಗೊಂಡಿರುವ...

ವೈಭವದ ರಥೋತ್ಸವಕ್ಕೆ ಸಾಕ್ಷಿಯಾಯಿತು ಪಲಿಮಾರು ಶ್ರೀಮಹಾಲಿಂಗೇಶ್ವರ ದೇವಸ್ಥಾನ

ವೈಭವದ ರಥೋತ್ಸವಕ್ಕೆ ಸಾಕ್ಷಿಯಾಯಿತು ಪಲಿಮಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪಡುಬಿದ್ರೆ: ವರ್ಷಾವಧಿ ರಥೋತ್ಸವ ಪ್ರಯುಕ್ತ ಪಡುಬಿದ್ರಿಯ ಪಲಿಮಾರು ಶ್ರೀಮಹಾಲಿಂಗೇಶ್ವರ ಮಹಾಗಣಪತಿ ಶ್ರೀ ಧರ್ಮಶಾಸ್ತ ದೇವಸ್ಥಾನದಲ್ಲಿ ಸಂಭ್ರಮದ ರಥೋತ್ಸವ ನಡಯಿತು. ಊರ-ಪರವೂರ ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ನಡೆದ...