Saturday, July 2, 2022

ಕಡಬದಲ್ಲಿ ಕ್ರೈಸ್ತ ಪ್ರಾರ್ಥನಾ ಮಂದಿರಕ್ಕೆ ಹಾನಿ ಪ್ರಕರಣ: SDPI ನಿಯೋಗ ಭೇಟಿ

ಕಡಬ: ಕಡಬ ತಾಲೂಕಿನ ರೆಂಜಲಾಡಿ ಗ್ರಾಮದ ಪೇರಡ್ಕದಲ್ಲಿ ಇತ್ತೀಚೆಗೆ ಸಂಘಪರಿವಾರದ ಕಿಡಿಗೇಡಿಗಳಿಂದ ದಾಳಿಗೊಳಗಾದ ಇಮ್ಯಾನ್ಯುಯೆಲ್ ಅಸೆಂಬ್ಲಿ ಆಫ್ ಗಾಡ್ ಎಂಬ ಕ್ರೈಸ್ತ ಧರ್ಮದ ಪ್ರಾರ್ಥನಾ ಮಂದಿರಕ್ಕೆ SDPI ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷರೂ ,

ರೈತ ಮುಖಂಡರು ಆದ ವಿಕ್ಟರ್ ಮಾರ್ಟೀಸ್ ರವರ ನೇತೃತ್ವದ ನಿಯೋಗವು ಇಂದು ಭೇಟಿ ನೀಡಿ ಅಲ್ಲಿನ ಧರ್ಮ ಗುರುಗಳಾದ ಫಾದರ್ ಜೋಸ್ ವರ್ಗೀಸ್ ಹಾಗೂ ಸ್ಥಳೀಯ ಮುಖಂಡರೊಂದಿಗೆ ಮಾತುಕತೆ ನಡೆಸಿದರು.


ಧರ್ಮ ಮಂದಿರಗಳ ಮೇಲೆ ಇತ್ತೀಚೆಗೆ ಫ್ಯಾಸಿಸ್ಟ್ ಶಕ್ತಿಗಳು ನಡೆಸುತ್ತಿರುವ ದಾಳಿಗಳು ಮಿತಿ ಮೀರುತ್ತಿದ್ದು ಸರಕಾರದ ಹಾಗೂ ಜನಪ್ರತಿನಿಧಿಗಳ ಮೌನವೇ ದುಷ್ಟ ಶಕ್ತಿಗಳಿಗೆ ಇಂತಹ ಕೃತ್ಯ ನಡೆಸಲು ಸಹಕಾರಿಯಾಗುತ್ತಿದೆ.

ರಾಜ್ಯದಲ್ಲಿ ಬೊಮ್ಮಾಯಿ ಸರಕಾರ ಬಂದ ನಂತರ ಉತ್ತರ ಪ್ರದೇಶದ ರೀತಿಯಲ್ಲಿ ಅಲ್ಪಸಂಖ್ಯಾತರ ಮೇಲೆ ದಾಳಿಗಳು ನಡೆಯುತ್ತಿದ್ದು ಇದನ್ನು ಪ್ರಜಾಸತ್ತಾತ್ಮಕ ರೀತಿಯಲ್ಲಿ ಎದುರಿಸಲು SDPI ಸನ್ನದ್ದವಾಗಿದೆ.

ಅದ್ದರಿಂದ ಯಾವುದೇ ಕಾರಣಕ್ಕೂ ಇಂತಹ ಹೇಡಿಗಳ ದಾಳಿಯಿಂದ ಯಾರು ಭಯಪಡದೇ ಇವರ ವಿರುದ್ಧ ಕಾನೂನಾತ್ಮಕ ಹೋರಾಟವನ್ನು ನಡೆಸಬೇಕು SDPI ಇದಕ್ಕಾಗಿ ಮುಂಚೂಣಿಯಲ್ಲಿ ನಿಲ್ಲಲಿದೆ ಎಂದು SDPI ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಸಹಿತ ಸದಸ್ಯರು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಘಟನೆಗೆ ಸಂಬಂಧಿಸಿದಂತೆ ಕಡಬ ಠಾಣಾಧಿಕಾರಿಗೆ ದೂರು ನೀಡಲಾಯಿತು.

ಭೇಟಿ ನೀಡಿದ ನಿಯೋಗದಲ್ಲಿ ಕಡಬ ಬ್ಲಾಕ್ SDPI ಅಧ್ಯಕ್ಷರಾದ ಬಶೀರ್ ಆತೂರು, ಕಾರ್ಯದರ್ಶಿ ನಬಿಶಾನ್ ಕಡಬ ಹಾಗೂ ಸ್ಥಳೀಯ ಮುಖಂಡರಾದ ನೌಶಾದ್ ಕಡಬ , ನವಾಝ್, ಹಾರಿಸ್ ಕಳಾರ, ಆರಿಫ್ ಕೂಯಿಲ ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here

Hot Topics

ಬಾಕ್ರಬೈಲಿನ ಗತ್ತಿನ ಗುತ್ತುಮನೆಗಿದೆ 987 ವರ್ಷದ ಇತಿಹಾಸ…

ಮಂಗಳೂರು: ಹಿಂದಿನ ಕಾಲದಲ್ಲಿ 'ಗುತ್ತು ಮನೆ' ಎಂದರೆ ವಿಶೇಷ ತೆರನಾದ ಗೌರವ. ಆ ಮನೆಯವರಿಗೆ ಒಂದು ತೆರನಾದ ಸ್ಥಾನಮಾನ. ಕಾಲ ಅದೆಷ್ಟೇ ಗತಿಸಿ ಹೋದರೂ ಆ ಮನೆಯ ಮೇಲಿನ ಅಭಿಮಾನ, ಮಾನ್ಯತೆ ಒಂದು...

ಭಾರತ- ಚೀನಾ ಯುದ್ದಕ್ಕೆ 60 ವರ್ಷ: ‘ರೇಖೆ ದಾಟಿದ ಗಡಿ’ ಪುಸ್ತಕ ಬಿಡುಗಡೆ

ಮಂಗಳೂರು: 1962ರಲ್ಲಿ ನಡೆದ ಭಾರತ ಚೀನಾ ಯುದ್ದಕ್ಕೆ 60 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸಂಪೂರ್ಣ ಮಾಹಿತಿಯನ್ನೊಳಗೊಂಡ ವಟಿಕುಟಿರ ಪ್ರಕಾಶನ ಬೆಂಗಳೂರು ಪ್ರಸ್ತುತಿಯ ರೇಖೆ ದಾಟಿದ ಗಡಿ ಪುಸ್ತಕ ಬಿಡುಗಡೆ ಕಾರ್ಯಕ್ರಮವು ಮಂಗಳೂರಿನ ಬಾವುಟಗುಡ್ಡದ...

ನೂಪುರ್‌ ಶರ್ಮಾ ಬೆಂಬಲಿಸಿ ಪೋಸ್ಟ್‌ ಹಾಕಿದ್ದ ಮತ್ತೋರ್ವನ ಕೊಲೆ..!

ಮುಂಬೈ: ರಾಜಸ್ಥಾನದ ಉದಯಪುರದಲ್ಲಿ ಟೈಲರ್​ ಕನ್ಹಯ್ಯ ಲಾಲ್​ ಹತ್ಯೆಗೂ ಮುನ್ನವೇ ಮಹಾರಾಷ್ಟ್ರದಲ್ಲಿ ಮತ್ತೊಬ್ಬ ವ್ಯಕ್ತಿಯ ಕತ್ತು ಸೀಳಿ ದುಷ್ಕರ್ಮಿಗಳು ಕೊಂದಿದ್ದಾರೆ ಎಂಬ ಆಘಾತಕಾರಿ ವಿಷಯ ತಡವಾಗಿ ಬೆಳಕಿಗೆ ಬಂದಿದೆ.ಪ್ರವಾದಿ ಮುಹಮ್ಮದ್​ ಕುರಿತು ಹೇಳಿಕೆ...