Connect with us

    DAKSHINA KANNADA

    ಕಡಬ: ಓಟಿಗಾಗಿ ಕ್ಯಾಲಿಕಟ್‌ನಿಂದ ದ್ವಿಚಕ್ರವಾಹದಲ್ಲಿ 300 ಕಿ.ಮೀ ಸಾಗಿ ಬಂದ ದಂಪತಿ..!

    Published

    on

    ದೂರದ ಕೇರಳದ ಕ್ಯಾಲಿಕಟ್ ನಿಂದ ದ್ವಿಚಕ್ರವಾಹನದಲ್ಲೇ ದಕ್ಷಿಣ ಕನ್ನಡದ ಕಡಬಕ್ಕೆ ಸರಿ ಸುಮಾರು 300 ಕಿ.ಮೀ ಕ್ರಮಿಸಿ ದಂಪತಿ ಆಗಮಿಸಿ ಸುದ್ದಿಯಾಗಿದ್ದಾರೆ.

    ಕಡಬ:ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಆನೇಲ ಸ್ವಾರಸ್ಯಕರ ಸನ್ನಿವೇಶಗಳು ನಡೆದಿವೆ. ದೂರದ ಊರಲ್ಲಿ ನೆಲೆಸಿರುವ ಮತ್ತು ಉದ್ಯೋಗ ಮಾಡಿಕೊಂಡಿರುವ ಜನರು ಮತದಾನ ಮಾಡಲು ತಮ್ಮ ಸ್ವ ಕ್ಷೇತ್ರಕ್ಕೆ ಆಗಮಿಸಿದ್ದರು.

    ಈ ಮಧ್ಯೆ ದೂರದ ಕೇರಳದ ಕ್ಯಾಲಿಕಟ್ ನಿಂದ ದ್ವಿಚಕ್ರವಾಹನದಲ್ಲೇ ದಕ್ಷಿಣ ಕನ್ನಡದ ಕಡಬಕ್ಕೆ ಸರಿ ಸುಮಾರು 300 ಕಿ.ಮೀ ಕ್ರಮಿಸಿ ದಂಪತಿ ಆಗಮಿಸಿ ಸುದ್ದಿಯಾಗಿದ್ದಾರೆ.

    ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಕೋರಿಯಾರ್ ಸಮೀಪ ವಾಸವಾಗಿರುವ, ಪ್ರಸ್ತುತ ಕೇರಳದ ಕ್ಯಾಲಿಕಟ್ ನಲ್ಲಿ ಉದ್ಯೋಗ ದಲ್ಲಿರುವ ಗೋಪಾಲಕೃಷ್ಣ ಮತ್ತು ಧನ್ಯ ಹಕ್ಕು ಚಲಾಯಿಸಲು ಬಹುದೂರ ದ್ವಿಚಕ್ರವಾಹನದಲ್ಲಿ ಬಂದ ದಂಪತಿಯಾಗಿದ್ದಾರೆ.

    ಕೋಡಿಂಬಾಳ ಗ್ರಾಮದ ಮಡ್ಯಡ್ಕ 95 ನಂ ಬೂತ್‌ನಲ್ಲಿ ಮತದಾನ ಮಾಡಿದ್ದಾರೆ.

    ಕ್ಯಾಲಿಕೆಟ್ ನಿಂದ ಮುಂಜಾನೆ 5:00ಗಂಟೆಗೆ ಹೊರಟು ಮಧ್ಯಾಹ್ನ 3:35ಕ್ಕೆ ಕೋಡಿಂಬಾಳ ಮತದಾನ ಕೇಂದ್ರ ತಲುಪಿರುವುದಾಗಿ ದಂಪತಿಗಳು ಮಾಹಿತಿ ನೀಡಿದ್ದಾರೆ.

    ತಮ್ಮ ಊರಿನಲ್ಲಿದ್ದರೂ ಮತದಾನ ಮಾಡಲು ನಿರ್ಲಕ್ಷ್ಯ ವಹಿಸುವವರಿಗೆ ಈ ದಂಪತಿ ಮಾದರಿಯಾಗಿದ್ದಾರೆ.

    DAKSHINA KANNADA

    ಇನ್ಮುಂದೆ ಶಾಲೆಗಳಲ್ಲಿ ಹುಟ್ಟುಹಬ್ಬ ಆಚರಿಸುವಂತಿಲ್ಲ; ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

    Published

    on

    ಬೆಂಗಳೂರು: ಕರ್ನಾಟಕದ ಎಲ್ಲಾ ಶಾಲೆಗಳಲ್ಲಿ ಹುಟ್ಟುಹಬ್ಬ ಆಚರಣೆ ಮಾಡದಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

    ಸರ್ಕಾರಿ, ಸರ್ಕಾರಿ ಅನುದಾನಿತ ಮತ್ತು ಖಾಸಗಿ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಸಂಸ್ಥೆಯ ಸಿಬ್ಬಂದಿ, ಅಧಿಕಾರಿಗಳು, ಖಾಸಗಿ ವ್ಯಕ್ತಿಗಳ ಅಂದ್ರೆ ಸೆಲೆಬ್ರಿಟಿಗಳು, ಗಣ್ಯವ್ಯಕ್ತಿಗಳು ಹಾಗೂ ಅವರ ಮಕ್ಕಳ ಹುಟ್ಟುಹಬ್ಬ ಆಚರಣೆಯನ್ನು ನಿಷೇಧಿಸಿದೆ ಎಂದು ಸುತ್ತೋಲೆ ಹೊರಡಿಸಿದೆ.

    ಗಣ್ಯವ್ಯಕ್ತಿಗಳು ಮಕ್ಕಳ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸಿ ಸಿಹಿ ಇತ್ಯಾದಿ ಹಂಚುವ ಅದ್ದೂರಿ ಕಾರ್ಯಕ್ರಮಗಳನ್ನು ಸಂಸ್ಥೆಯಲ್ಲಿ ಆಚರಿಸುವುದರಿಂದ ಮಕ್ಕಳಿಗೆ ಅವರ ಹುಟ್ಟು ಹಬ್ಬವನ್ನು ಈ ರೀತಿ ಆಚರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲವಲ್ಲ ಅಂತ ಬೇಜಾರು ಮಾಡಿಕೊಳ್ಳುತ್ತವೆ. ಇದರಿಂದ ಮನಸ್ಸಿಗೆ ಆಘಾತವಾಗಿ ಮಕ್ಕಳ ಮನಸ್ಸು ದುರ್ಬಲವಾಗುವ ಸಂಭವ ಹೆಚ್ಚಾಗಿರುತ್ತದೆ. ಹೀಗಾಗಿ ಸರ್ಕಾರ ಈ ಕ್ರಮ ಕೈಗೊಂಡಿದೆ.

    Continue Reading

    DAKSHINA KANNADA

    ತೊಳೆದ್ರು ಬಿಳಿ ಬಟ್ಟೆ ಮೇಲಿನ ಕಲೆ ಹೋಗ್ತಿಲ್ವಾ? ಹೀಗೆ ಮಾಡಿ

    Published

    on

    ಮಂಗಳೂರು: ಬಿಳಿ ಬಟ್ಟೆಯನ್ನು ಕಲೆಯಾಗದಂತೆ ನೋಡಿಕೊಳ್ಳುವುದು ಕಷ್ಟದ ಕೆಲಸ. ಕೆಲವೊಮ್ಮೆ ಕೈ ತಪ್ಪಿ ಟೀ ಕಾಫಿ ಚೆಲ್ಲಿಯೋ, ಪೆನ್ನಿನ ಇಂಕ್ ತಾಗಿಯೋ ಬಿಳಿ ಬಟ್ಟೆಯ ಅಂದವನ್ನು ಹಾಳು ಮಾಡುತ್ತದೆ. ಈ ವೇಳೆ ಯಾವುದೇ ಡಿಟರ್ಜೆಂಟ್, ಸೋಪ್ ಬಳಸಿ ತಿಕ್ಕಿ ತೊಳೆದರೂ ಪ್ರಯೋಜನವಂತೂ ಆಗುವುದೇ ಇಲ್ಲ. ಬಟ್ಟೆಯನ್ನು ಜಾಸ್ತಿ ಉಜ್ಜಿದರೆ, ಆ ಬಟ್ಟೆಗಳು ಹಾಳಾಗುವ ಸಾಧ್ಯತೆ ಇರುತ್ತದೆ. ನಿಮಗೂ ಈ ರೀತಿ ಅನುಭವವಾಗಿದ್ದರೆ ಟೆನ್ಶನ್ ಮಾಡಿಕೊಳ್ಬೇಡಿ, ಈ ವಸ್ತುಗಳನ್ನು ಬಳಸಿ ಕಲೆಯನ್ನು ನಿವಾರಿಸಿಕೊಳ್ಳಬಹುದು.

    • ಅರ್ಧ ಕಪ್ ನೀರಿಗೆ ಅರ್ಧ ಕಪ್ ವಿನೆಗರ್ ಮಿಶ್ರಣ ಮಾಡಿ ಬಿಳಿ ಬಟ್ಟೆಯ ಮೇಲೆ ಇರುವ ಕಲೆಗೆ ಸ್ಪ್ರೇ ಮಾಡಿ, ಸ್ವಲ್ಪ ಸಮಯ ಹಾಗೆ ಬಿಡಬೇಕು. ತದನಂತರದಲ್ಲಿ ಅದೇ ನೀರಿನಿಂದ ತಿಕ್ಕಿ ತೊಳೆದರೆ ಕಲೆ ಬಿಡುತ್ತದೆ.
    • ಬಿಳಿ ಬಟ್ಟೆ ಮೇಲಿನ ಕಲೆಯನ್ನು ತೆಗೆದು ಹಾಕಲು ಅಡುಗೆ ಸೋಡಾ ಬೆಸ್ಟ್ ಎನ್ನಬಹುದು. ನೀರಿಗೆ ಅಡುಗೆ ಸೋಡಾ ಸೇರಿಸಿ, ಕಲೆಯಾದ ಬಟ್ಟೆಯನ್ನು ಆ ನೀರಿನಲ್ಲಿ ನೆನೆಸಿಡಬೇಕು. ಸ್ವಲ್ಪ ಸಮಯದ ಬಳಿಕ ಬಟ್ಟೆಯನ್ನು ತೊಳೆದರೆ ಕಲೆಯೂ ಹೋಗುತ್ತದೆ.
    • ಬಿಳಿ ಬಟ್ಟೆಯಲ್ಲಿ ಕಲೆಯಿದ್ದರೆ ಆ ಜಾಗಕ್ಕೆ ನಿಂಬೆರಸ ಹಾಕಿ ಉಪ್ಪು ಮತ್ತು ಸೋಪಿನಿಂದ ಚೆನ್ನಾಗಿ ತೊಳೆದರೆ ಕಲೆಯೂ ಇಲ್ಲದಂತಾಗುತ್ತದೆ.
      ಬಿಸಿ ನೀರಿಗೆ ಸ್ವಲ್ಪ ನಿಂಬೆರಸ ಸೇರಿಸಿ ಉಜ್ಜುವುದರಿಂದ ಬಿಳಿ ಬಟ್ಟೆ ಮೇಲಿನ ಕಲೆಯೂ ನಿವಾರಣೆಯಾಗುತ್ತದೆ.
    • ಬಿಳಿ ಬಟ್ಟೆಯಲ್ಲಿ ಕಲೆಯಿದ್ದರೆ ಸ್ವಲ್ಪ ಬಿಸಿ ನೀರನ್ನು ಆ ಜಾಗಕ್ಕೆ ಹಾಕಿ, ಡಿರ್ಟಜೆಂಟ್‌ ನಿಂದ ಉಜ್ಜಿ ಕಲೆಯನ್ನು ತೆಗೆದು ಹಾಕಬಹುದು.
    • ಬಿಳಿ ಬಟ್ಟೆ ಮೇಲಿನ ಕಲೆ ನಿವಾರಣೆಗೆ ಟೂತ್ ಪೇಸ್ಟ್ ಬಳಸುವುದು ಪರಿಣಾಮಕಾರಿಯಾಗಿದೆ. ಕಲೆ ಮೇಲೆ ಟೂತ್ಪೇಸ್ಟ್ ಅನ್ವಯಿಸಿ, ಹತ್ತರಿಂದ ಹದಿನೈದು ನಿಮಿಷಗಳ ಕಾಲ ಹಾಗೆ ಬಿಡಬೇಕು. ಆ ಬಳಿಕ ಡಿಟೆರ್ಜಂಟ್ ಬಳಸಿ ಸ್ವಚ್ಛಗೊಳಿಸಿದರೆ ಕಲೆ ಉಳಿಯುವುದಿಲ್ಲ.
    Continue Reading

    DAKSHINA KANNADA

    ಕಟೀಲು ಶ್ರೀದುರ್ಗಾ ಪರಮೇಶ್ವರಿ ಕ್ಷೇತ್ರಕ್ಕೆ ಸ್ವರ್ಣಪಾದುಕೆ ಸಮರ್ಪಣೆ

    Published

    on

    ಮಂಗಳೂರು: ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠದ 36ನೆಯ ಅಧಿಪತಿಗಳಾದ ಜಗದ್ಗುರು ಶ್ರೀಭಾರತೀ ತೀರ್ಥ ಮಹಾಸ್ವಾಮಿಗಳವರ ಸನ್ಯಾಸ ಸ್ವೀಕಾರ ಸುವರ್ಣಮಹೋತ್ಸವದ ಸ್ಮರಣಾರ್ಥ ಕಟೀಲು ಶ್ರೀದುರ್ಗಾ ಪರಮೇಶ್ವರಿ ಕ್ಷೇತ್ರಕ್ಕೆ ಶೃಂಗೇರಿ ಶಾರದಾಪೀಠದ ವತಿಯಿಂದ 40 ಲಕ್ಷ ರೂಪಾಯಿ ಮೌಲ್ಯದ ಸ್ವರ್ಣಪಾದುಕೆ ಹಾಗೂ ಒಡ್ಯಾಣವನ್ನು ಸಮರ್ಪಿಸಲಾಗಿದೆ.

    ಶ್ರೀಭಾರತೀ ತೀರ್ಥ ಮಹಾಸ್ವಾಮಿಗಳವರು 1974 ರಲ್ಲಿ ಸನ್ಯಾಸ ಸ್ವೀಕರಿಸಿದ್ದು, 2024 ಕ್ಕೆ 50 ವರ್ಷಗಳಾಗುತ್ತಿವೆ. ಶೃಂಗೇರಿಯಲ್ಲಿ ಉಭಯ ಜಗದ್ಗುರುಗಳು ಈ ಪಾದುಕೆ ಹಾಗೂ ಒಡ್ಯಾಣವನ್ನು ಕಟೀಲು ದೇವಳದ ಆನುವಂಶಿಕ ಅರ್ಚಕ ಶ್ರೀಹರಿನಾರಾಯಣದಾಸ ಅಸ್ರಣ್ಣ ಅವರಿಗೆ ಹಸ್ತಾಂತರಿಸಿದರು. ಇದನ್ನು ಜೂ.19 ರಂದು ಶ್ರೀದೇವಿಗೆ ತೊಡಿಸಿ ಅಲಂಕಾರ ಮಾಡಲಾಯಿತು. ಈ ಸೇವೆಯನ್ನು ಶೃಂಗೇರಿ ಶ್ರೀಮಠದ ಶಿಷ್ಯರಾದ ಆಂಧ್ರಪ್ರದೇಶದ ಶ್ರೀಪೋಲಿಸೆಟ್ಟಿ ಶ್ಯಾಮ್ ಸುಂದರ್ ಅವರು ನೀಡಿರುತ್ತಾರೆ.

    Read More..; ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕ್ರಿಕೆಟಿಗ ಮಯಂಕ್ ಅಗರವಾಲ್ ಭೇಟಿ

    Continue Reading

    LATEST NEWS

    Trending