Tuesday, August 16, 2022

ಕೊನೆಗೂ ಬಂಧಮುಕ್ತಗೊಂಡ ಜಗತ್ತಿನ ಏಕೈಕ ಒಬ್ಬಂಟಿ ಆನೆ ಕಾವನ್..!

                  ಕೊನೆಗೂ ಬಂಧಮುಕ್ತಗೊಂಡ ಜಗತ್ತಿನ ಏಕೈಕ ಒಬ್ಬಂಟಿ ಆನೆ ಕಾವನ್..!

ಕರಾಚಿ : ಪಾಕಿಸ್ತಾನದಲ್ಲಿ 35 ವರ್ಷಗಳಿಂದ ಮೃಗಾಲಯದಲ್ಲಿ ಏಕಾಂಗಿಯಾಗಿ ಜೀವಿಸುತ್ತಿದ್ದ ಕಾವನ್ ಎಂಬ ಆನೆಗೆ ಅಂತಿಮವಾಗಿ  ವಿಮುಕ್ತಿ ದೊರೆತಿದೆ.ಪಾಕಿಸ್ಥಾನದ ಇಸ್ಲಾಮಾಬಾದ್‌ ‘ಝೂ’ ನಲ್ಲಿದ್ದ ಏಕೈಕ ಏಷ್ಯನ್‌ ಆನೆಯನ್ನು ಕಾಂಬೋಡಿಯಕ್ಕೆ ಸ್ಥಳಾಂತರ ಮಾಡಲು ಸಿದ್ದತೆ ನಡೆಸಲಾಗುತ್ತಿದೆ.“ಕಾವನ್‌’ ಹೆಸರಿನ ಈ ಆನೆಗೆ ಇಸ್ಲಾಮಾಬಾದ್‌ ಝೂ ನಲ್ಲಿ ಏರ್ಪಡಿಸಿದ್ದ ವಿದಾಯ ಸಮಾರಂಭದಲ್ಲಿ, ಶುಭ ಹಾರೈಸಲು ಪಾಕಿಸ್ತಾನದ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಮಂತ್ರಿಗಳು ಸೇರಿದ್ದು ವಿಶೇಷವಾಗಿತ್ತು.ಪ್ರಾಣಿ ಹಕ್ಕುಗಳ ನ್ಯಾಯವಾದಿ ಮತ್ತು ಪಾಪ್‌ ತಾರೆಯಾದ ‘ಚೆರ್‌’ ಅವರ ಹಲವು ವರ್ಷಗಳ ಪರಿಶ್ರಮ ಮತ್ತು ಅಭಿಯಾನದ ಫ‌ಲವಾಗಿ ಕಾವನ್‌ಗೆ ಏಕಾಂಗಿ ಜೀವನದಿಂದ ಬಿಡುಗಡೆ ದೊರೆತಿದೆ.ಇದೀಗ ಆನೆಯನ್ನು ಇಸ್ಲಾಮಾಬಾದ್‌ ಝೂ ನಿಂದ ಕಾಂಬೋಡಿಯದ ಅಭಯಾರಣ್ಯಕ್ಕೆ ಏರ್‌ಲಿಫ್ಟ್ ಮಾಡಲು ಅನುಮತಿ ದೊರೆತಿದೆ. ಕಾವನ್‌ನ ವಿದಾಯ ಕೂಟದಲ್ಲಿ ಪಾಕಿಸ್ತಾನದ ವಿವಿಧ ಇಲಾಖೆಯ ಮಂತ್ರಿಗಳು, ಶಾಸಕರು ಹಾಜರಿದ್ದು, ಬಲೂನು ಮತ್ತು ಆಕಾಶ ಬುಟ್ಟಿಯನ್ನು  ಶೃಂಗರಿಸುವ  ಮೂಲಕ ವಿದಾಯ  ಸಮಾರಂಭವನ್ನು ಮತ್ತಷ್ಟು ವಿಶೇಷವಾಗಿಸಿದ್ದಾರೆ.ಕಾವನ್‌ಗೆ ಸಂಗೀತ ಮತ್ತು ಪ್ರಾಣಿ ಪಾರುಗಾಣಿಕಾ ಸಂಸ್ಥೆ ಫೋರ್‌ ಪಾವ್ಸ್‌ನ ಪಶುವೈದ್ಯ ಅಮೀರ್‌ ಖಲಿಲ್‌ ಎಂದರೆ ತುಂಬಾ ಇಷ್ಟ. ಕಾವನ್‌ ಆನೆ ಕೋಪಗೊಂಡಾಗೆಲ್ಲ ಫ್ರಾಂಕ್‌ ಸಿನಾತ್ರಾ ಅವರ ಸಂಗೀತ ಕೇಳಿಸುವ ಮೂಲಕ ಖಲೀಲ್‌ ಸಮಾಧಾನಪಡಿಸುತ್ತಿದ್ದರು.

ಆನೆಯನ್ನು ಏರ್‌ಲಿಫ್ಟ್ ಮಾಡುವುದಕ್ಕೂ ಮೊದಲು ಪಾಕಿಸ್ತಾನದ ಜನರಿಗೆ ಕಾವನ್‌ಗೆ ಶುಭ ವಿದಾಯ ಹೇಳಲು ಅವಕಾಶ ಮಾಡಿಕೊಡಲಾಗಿದೆ.4.8 ಟನ್‌ ತೂಕದ ಆನೆಯನ್ನು ಏರ್‌ಲಿಫ್ಟ್ ಮಾಡುವುದು ಅಷ್ಟು ಸುಲಭದ ಮಾತಲ್ಲ. ಇದಕ್ಕೆ ಬೇಕಾದ ತರಭೇತಿಯನ್ನು ಕಾವನ್‌ಗೆ ನೀಡಲಾಗಿದೆ ಎನ್ನುತ್ತಾರೆ ಫೋರ್‌ ಪಾವ್ಸ್‌ನ ವಕ್ತಾರ ಮರಿಯನ್‌ ಲೊಂಬಾರ್ಡ್‌.

10 ಗಂಟೆಗಳ ಹಾರಾಟ, ಸಣ್ಣ ಮತ್ತು ಅಧಿಕ ಪ್ರಮಾಣ ಶಬ್ದಕ್ಕೆ ಒಗ್ಗಿಕೊಳ್ಳುವಂತೆ ಶಸ್ತ್ರಸಜ್ಜಿತ ತರಬೇತುದಾರರ ತಂಡ ಕಾವನ್‌ಗೆ ಒಂದು ವಾರ ಕಾಲ ತರಬೇತಿ ನೀಡುತ್ತಿದೆ. ತದನಂತರದಲ್ಲಿ ಅದನ್ನು ಕಾಂಬೋಡಿಯಕ್ಕೆ ಏರ್‌ಲಿಫ್ಟ್ ಮಾಡಲಾಗುವುದು ಎಂದು ವರದಿಯಾಗಿದೆ.

LEAVE A REPLY

Please enter your comment!
Please enter your name here

Hot Topics

ಉಡುಪಿ ಜಿಲ್ಲಾಡಳಿತದಿಂದ ‘ಆಜಾದಿ ಕಾ ಅಮೃತ್‌ ಮಹೋತ್ಸವ’

ಉಡುಪಿ: ಉಡುಪಿ ಜಿಲ್ಲಾಡಳಿತದ ವತಿಯಿಂದ ಆಜಾದಿ ಕಾ ಅಮೃತ್‌ ಮಹೋತ್ಸವದ ಅಂಗವಾಗಿ ಸ್ವಾತಂತ್ರ್ಯೋತ್ಸವ ದಿನಾಚರಣೆ ಸಮಾರಂಭ ಇಂದು ಅಜ್ಜರಕಾಡಿನ ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಿತು.ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಅವರು ಧ್ವಜಾರೋಹಣ...

“ಇಂದು ಸೂರ್ಯಾಸ್ತದೊಳಗೆ ನಿಯಮಬದ್ಧವಾಗಿ ಧ್ವಜವನ್ನು ಸುರಕ್ಷಿತವಾಗಿ ಮಡಚಿಡಿ”

ಮಂಗಳೂರು: ಸ್ವಾತಂತ್ರ್ಯದ ಆಚರಣೆಯು ಈಗಾಗಲೇ ಮುಗಿದಿದ್ದು, ಇಂದು ಸಂಜೆ ಸೂರ್ಯಾಸ್ತಮಾನದೊಳಗೆ ನಿಯಮಬದ್ಧವಾಗಿ ತ್ರಿವರ್ಣ ಧ್ವಜವನ್ನು ಸುರಕ್ಷಿತವಾಗಿ ಮಡಚಿಡುವಂತೆ ಎಲ್ಲಾ ಸಾರ್ವಜನಿಕರಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಸೂಚನೆ ನೀಡಿದ್ದಾರೆ.ಈ ಬಗ್ಗೆ...

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆ ಕೆಂಪು ಕೋಟೆಯಲ್ಲಿ ಹಾರಾಡಿದ ತಿರಂಗಾ

ನವದೆಹಲಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ದೆಹಲಿಯ ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಧ್ವಜಾರೋಹಣ ಮಾಡಿದರು. ಪ್ರಧಾನಿಯಾದ ಬಳಿಕ ಅವರು ಇಂದು 9ನೆ ಬಾರಿ ರಾಷ್ಟ್ರಧ್ವಜಾರೋಹಣ ಮಾಡಿದರು.ಬಳಿಕ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ...