Connect with us

bangalore

MRG ಗ್ರೂಪ್‌ನ ಅಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿಗೆ SIHRA ಅವಾರ್ಡ್

Published

on

ಬೆಂಗಳೂರು: ಎಂ.ಆರ್.ಜಿ. ಗ್ರೂಪಿನ ಸ್ಥಾಪಕಾಧ್ಯಕ್ಷರು ಕೆ.ಪ್ರಕಾಶ್ ಶೆಟ್ಟಿ ಅವರಿಗೆ ದಕ್ಷಿಣ ಭಾರತದ ಆತಿಥ್ಯ ಕ್ಷೇತ್ರಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ ಎಸ್.ಐ.ಎಚ್.ಆರ್.ಎ. ಪ್ರಶಸ್ತಿ ನೀಡಿ ಗೌರವಿಸಲಾಯಿತು.


ದಕ್ಷಿಣ ಭಾರತದ ಹೊಟೇಲ್ ಮತ್ತು ರೆಸ್ಟೋರೆಂಟ್ ಗಳ ಸಂಘದ ವಾರ್ಷಿಕ ಸಮ್ಮೇಳನದಲ್ಲಿ ನಡೆದ ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕರ್ನಾಟಕದ ಪ್ರವಾಸೋದ್ಯಮ ಸಚಿವ ಆನಂದ ಸಿಂಗ್, ತಮಿಳುನಾಡಿನ ಪ್ರವಾಸೋದ್ಯಮ ಸಚಿವ ಡಾ. ಮತಿವೆಂತನ್, ಪುದುಚೇರಿ ಪ್ರವಾಸೋದ್ಯಮ ಸಚಿವ ಕೆ. ಲಕ್ಷ್ಮೀನಾರಾಯಣನ್ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.

ಈ ಸಮಾರಂಭದಲ್ಲಿ 60ಕ್ಕೂ ಹೆಚ್ಚಿನ ಪ್ರತಿನಿಧಿಗಳು ಭಾಗವಹಿಸಿದ್ದರು.

bangalore

ಶೋಭಾ ಕರಂದ್ಲಾಜೆ ಕಾರಿಗೆ ಸಿಕ್ಕಿ ಯುವಕನ ದುರ್ಮ*ರಣ..!

Published

on

ಬೆಂಗಳೂರು : ಬಿರುಸಿನ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಶೋಭಾ ಕರಂದ್ಲಾಜೆ ಅವರ ಕಾರಿಗೆ ಡಿಕ್ಕಿ ಹೊಡೆದು ಬೈಕ್ ಸವಾರನೊಬ್ಬ ಅಸು ನೀಗಿದ್ದಾನೆ.

ಟಿಸಿ ಪಾಳ್ಯ ನಿವಾಸಿ ಪ್ರಕಾಶ್( 35 ) ಎಂಬವರು ಅಸುನೀಗಿದ ದುರ್ದೈವಿ. ಬೆಂಗಳೂರಿನ ಕೆ.ಆರ್.ಪುರಂ ಸಮೀಪ ಈ ಅಪ*ಘಾತ ಸಂಭವಿಸಿದ್ದು, ಕೆ.ಆರ್‌.ಪುರಂ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ.  ದೇವಸಂದ್ರ ವಿನಾಯಕ ದೇವಸ್ಥಾನ ಬಳಿ ಕಾರು ನಿಲ್ಲಿಸಿದ ಕಾರಿನಿಂದ ಸಡನ್ ಆಗಿ ಬಾಗಿಲು ತೆರೆದು ಈ ದುರ್ಘಟನೆ ನಡೆದಿದೆ. ಕಾರಿನ ಡೋರ್ ತೆಗೆದಾಗ ಹಿಂಬಂದಿಯಿಂದ ಬಂದಿದ್ದ ಬೈಕ್‌ ಸವಾರ ಕಾರಿನ ಡೋರ್‌ಗೆ ತಾಗಿ ಕೆಳಗೆ ಬಿದ್ದಿದ್ದಾನೆ.

 

ತಲೆಗೆ ಗಂ*ಭೀರ ಗಾಯಗೊಂಡಿದ್ದ ಬೈಕ್ ಸವಾರ ಪ್ರಕಾಶ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೆ ಪ್ರಕಾಶ್ ಇಹಲೋಕ ತ್ಯಜಿಸಿದ್ದಾರೆ.

ಇದನ್ನೂ ಓದಿ : ಬೇಸಿಗೆಯ ಬಿಸಿ ತಡೆಯಲಾರದೆ 14 ಲಕ್ಷ ವೆಚ್ಚದಲ್ಲಿ ಕೂಲ್ ಹೋಮ್ ನಿರ್ಮಾಣ ಮಾಡಿದ ಯುವ ಇಂಜಿನಿಯರ್

Continue Reading

bangalore

ಮೆಡಿಕಲ್ ಕಾಲೇಜಿನ 47 ವಿದ್ಯಾರ್ಥಿನಿಯರು ದಿಢೀರ್ ಅಸ್ವ*ಸ್ಥ..!! ಆಸ್ಪತ್ರೆ ದಾಖಲು

Published

on

ಬೆಂಗಳೂರು:  47 ವಿದ್ಯಾರ್ಥಿನಿಯರು ಅಸ್ವ*ಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬೆಂಗಳೂರಿನ ಹಾಸ್ಟೆಲ್‌ನಲ್ಲಿ ನಡೆದಿದೆ. ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ(BMCRI) ಹಾಸ್ಟೆಲ್ ವಿದ್ಯಾರ್ಥಿಗಳು ಅಸ್ವ*ಸ್ಥಗೊಂಡಿದ್ದು ಕೂಡಲೇ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

medical college of bangalore

ವಾಂತಿ-ಭೇದಿಯಿಂದ ತೀವ್ರ ಅಸ್ವಸ್ಥಗೊಂಡಿದ್ದು, 28 ವಿದ್ಯಾರ್ಥಿನಿಯರಿಗೆ ಟ್ರಾಮಾ ಕೇರ್ ಸೆಂಟರ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಐವರಿಗೆ ಹೆಚ್​​ ಬ್ಲಾಕ್ ಹಾಗೂ ನಾಲ್ವರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ.  ಅಸ್ವಸ್ಥಗೊಂಡ ವಿದ್ಯಾರ್ಥಿಗಳಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಸದ್ಯ ವಿದ್ಯಾರ್ಥಿಗಳು ಆರೋಗ್ಯದಲ್ಲಿ ಚೇತರಿಸಿಕೊಂಡಿದ್ದಾರೆ. ಅಷ್ಟಕ್ಕೂ ವಿದ್ಯಾರ್ಥಿನಿಯರು ಅಸ್ವ*ಸ್ಥಗೊಳ್ಳಲು ಕಾರಣವೇನು ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಬಿಎಂಸಿಆರ್‌ಐ ಮುಖ್ಯಸ್ಥ ಮತ್ತು ನಿರ್ದೇಶಕ ಡಾ.ರಮೇಶ್‌ ಕೃಷ್ಣ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಕಾಲರ ಭೀತಿ ಶುರುವಾಗಿದ್ದು, ಈ ಮಧ್ಯೆ ಹಾಸ್ಟೆಲ್ ವಿದ್ಯಾರ್ಥಿನಿಯರ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಅಸ್ವಸ್ಥಗೊಂಡಿರುವುದು ಆತಂಕಕ್ಕೆ ಎಡೆ ಮಾಡಿದೆ.

ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿರುವುದಕ್ಕೆ ನೈಜ ಕಾರಣವೇನು ಅನ್ನೋದು ತನಿಖೆ ಬಳಿಕವಷ್ಟೇ ತಿಳಿಯಬೇಕಿದೆ.

Continue Reading

bangalore

ಧಗಧಗನೇ ಹೊ*ತ್ತಿ ಉ*ರಿದ ಖಾಸಗಿ ಕಂಪನಿಯ ಕಟ್ಟಡ!

Published

on

ಬೆಂಗಳೂರು : ಶುಕ್ರವಾರ ಮಧ್ಯಾಹ್ನ 1:50ರ ಸುಮಾರಿಗೆ ಬೆಂಗಳೂರಿನ ಆರ್‌.ಟಿ ನಗರದ 80 ಅಡಿ ರಸ್ತೆಯಲ್ಲಿರುವ ಮಿರಾಕಲ್ ಡ್ರಿಂಕ್ಸ್ ಕಟ್ಟಡದ ಕೆಳ ಮಹಡಿಯಲ್ಲಿ ಬೆಂ*ಕಿ ಅವಘ*ಡ ಸಂಭವಿಸಿದೆ.

ಕೂಡಲೇ ಘಟನಾ ಸ್ಥಳಕ್ಕೆ ಎರಡು ಅ*ಗ್ನಿಶಾಮಕ ವಾಹನ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಿದೆ. ಬೆಂಕಿ ಅವಘ*ಡ ಸಂಭವಿಸಿದಾಗ ಕೆಲ ಉದ್ಯೋಗಿಗಳು ಕಟ್ಟಡದಲ್ಲಿ ಸಿಲುಕಿದ್ದರು. ಕೂಡಲೇ ಸ್ಥಳಕ್ಕೆ ಮೂರು ಅಗ್ನಿಶಾಮಕ ವಾಹನಗಳು, RT ನಗರ ಪೊಲೀಸರು ದೌಡಾಯಿಸಿ ರಕ್ಷಣಾ ಕಾರ್ಯ ಆರಂಭಿಸಿದರು.

ಅ*ಗ್ನಿಶಾಮಕ ಸಿಬ್ಬಂದಿ ಬೆಂಕಿ ಆರಿಸುವಲ್ಲಿ ಯಶಸ್ವಿಯಾಗಿದ್ದು, ಸದ್ಯ ಯಾರಿಗೂ ಪ್ರಾಣಾಪಾಯವಿಲ್ಲ. ಲಕ್ಷಾಂತರ ಮೌಲ್ಯದ ಆಯುರ್ವೇದಿಕ್ ಮೆಡಿಸಿನ್ ಅ*ಗ್ನಿಗೆ ಆ*ಹುತಿಯಾಗಿದೆ. ಅ*ಗ್ನಿ ಅ*ನಾಹುತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.

Continue Reading

LATEST NEWS

Trending