Connect with us

    FILM

    ಕೆರಾಡಿ ಮೂಡುಗಲ್ಲು ಶ್ರೀ ಕೇಶವನಾಥೇಶ್ವರ ದೇವಸ್ಥಾನಕ್ಕೆ ಜೂ.ಎನ್ ಟಿ ಆರ್, ರಿಷಬ್ ಶೆಟ್ಟಿ ಭೇಟಿ

    Published

    on

    ಉಡುಪಿ : ನಟ ಜೂ.ಎನ್ ಟಿ ಆರ್ ಉಡುಪಿ ಜಿಲ್ಲೆ ಪ್ರವಾಸದಲ್ಲಿದ್ದಾರೆ. ನಟ ರಿಷಬ್ ಶೆಟ್ಟಿ, ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ಧಾರ್ಮಿಕ ಕ್ಷೇತ್ರಗಳಿಗೆ ಅವರು ಭೇಟಿ ನೀಡುತ್ತಿದ್ದಾರೆ.   ಕೃಷ್ಣಮಠ, ಕೊಲ್ಲೂರು ಕ್ಷೇತ್ರದ ನಂತರ ಇದೀಗ ಅವರು ಇತಿಹಾಸ ಪ್ರಸಿದ್ಧ ಕೆರಾಡಿ ಗ್ರಾಮದ ಮೂಡುಗಲ್ಲು ಕೇಶವನಾಥೇಶ್ವರ ಗುಹಾಂತರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಮೂವರೂ ತಮ್ಮ ತಮ್ಮ ಕುಟುಂಬಸ್ಥರ ಜೊತೆಗೆ ತೆರಳಿ ಕೇಶವನಾಥೇಶ್ವರನ ದರ್ಶನ ಮಾಡಿದ್ದಾರೆ.

    ಕ್ಷೇತ್ರಕ್ಕೆ ಭೇಟಿ ನೀಡಿದ ಅಪೂರ್ವ ಕ್ಷಣಗಳ ಡ್ರೋಣ್ ವೀಡಿಯೋವನ್ನು ನಟ ನಿರ್ದೇಶಕ ರಿಷಬ್ ಶೆಟ್ಟಿ ತಮ್ಮ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ. ಮಳೆಯಿಂದ ಚಿಗುರಿರುವ ಸುಂದರ ಸಸ್ಯರಾಶಿ, ಗದ್ದೆ ತೋಟ , ಬೆಟ್ಟದ ತಪ್ಪಲಿನಲ್ಲಿ ಮನೋಲ್ಲಾಸದಿಂದ ಸ್ಟಾರ್ ಗಳು  ಓಡಾಡುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಇದನ್ನೂ ಓದಿ : ಈ ದೇವಸ್ಥಾನದಲ್ಲಿದೆ ಬಣ್ಣ ಬದಲಾಯಿಸುವ ವಿಸ್ಮಯಕಾರಿ ಗಣೇಶನ ಮೂರ್ತಿ

    ಮೂಡುಗಲ್ಲು ಕ್ಷೇತ್ರದ ಬಗ್ಗೆ :

    ಮೂಡುಗಲ್ಲು ಶ್ರೀ ಕೇಶವನಾಥೇಶ್ವರ ದೇವಸ್ಥಾನ ಇತಿಹಾಸ ಪ್ರಸಿದ್ಧ ಕ್ಷೇತ್ರ. ಈ ದೇವಾಲಯ ಗುಹೆಯ ಮೂಲದಂತೆ ರೂಪುಗೊಂಡಿದೆ. ಈ ಕ್ಷೇತ್ರ ನೀರಿನಿಂದ ಆವೃತವಾಗಿದೆ. ಸುಮಾರು 20 ರಿಂದ 30 ಅಡಿ ವಿಶಾಲ ಜಾಗದಲ್ಲಿ ಹರಡಿಕೊಂಡಿದೆ.

    ಗುಡಿಯ ಒಳಗೆ ಕತ್ತಲಿನಲ್ಲಿ ದೇವರ ದೀಪದ ಬೆಳಕು ಬಿಟ್ಟರೆ ಬೇರೆ ಏನೂ ನಿಮ್ಮ ಕಣ್ಣಿಗೆ ಕಾಣುವುದಿಲ್ಲ. ಭಕ್ತಿ ಭಾವದ ಜೊತೆಗೆ ಮೈ ಮನಕ್ಕೆ ಶ್ರೀಕ್ಷೇತ್ರ ಮುದ ನೀಡುತ್ತದೆ.

    FILM

    ನಟ ದರ್ಶನ್ ಮನವಿ ಪುರಸ್ಕರಿಸಿದ ಹೈಕೋರ್ಟ್; ಮಾಧ್ಯಮಗಳಿಗೆ ನಿರ್ಬಂಧ

    Published

    on

    ಮಂಗಳೂರು/ಬೆಂಗಳೂರು: ರೇಣುಕಾಸ್ವಾಮಿ ಕೊ*ಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಎಲ್ಲ 17 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ನ್ನು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಅದರಲ್ಲಿರುವ ಅಂಶಗಳ ಬಗ್ಗೆ ಈಗಾಗಲೇ ಸಾಕಷ್ಟು ವರದಿಗಳು ಮಾಧ್ಯಮಗಳಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ಬಿತ್ತರವಾಗುತ್ತಿತ್ತು.

    ಚಾರ್ಜ್ ಶೀಟ್ ನಲ್ಲಿರುವ ವರದಿಯನ್ನು ಪ್ರಕಟಿಸದಂತೆ ಮಾಧ್ಯಮಗಳಿಗೆ ನಿರ್ಬಂಧ ಹೇರಬೇಕೆಂದು ಕೋರಿ ನಟ ದರ್ಶನ್ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ ಆದೇಶವನ್ನು ಕಾಯ್ದಿರಿಸಿತ್ತು. ಇಂದು(ಸೆ.10) ಆದೇಶವನ್ನು ಪ್ರಕಟಿಸಿದ್ದು, ದರ್ಶನ್‌ ಮನವಿಯನ್ನು ಪುರಸ್ಕರಿಸಿ, ಅದನ್ನು ಮಾನ್ಯ ಮಾಡಿರುವ ನ್ಯಾಯಾಲಯ ಆರೋಪ ಪಟ್ಟಿಯ ಯಾವುದೇ ಮಾಹಿತಿಯನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ಆದೇಶಿಸಿದೆ.

    ಕಳೆದ ತಿಂಗಳು ಆಗಸ್ಟ್ 27 ರಂದು ದರ್ಶನ್ ಪತ್ನಿ ವಿಜಯಲಕ್ಷ್ಮಿ, ದರ್ಶನ್ ಅವರಿಗೆ ಸಂಬಂಧಿಸಿದ ಖಾಸಗಿ ಚಿತ್ರಗಳನ್ನು ಮಾಧ್ಯಮಗಳಲ್ಲಿ ಪ್ರದರ್ಶಿಸದಂತೆ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿ ಪ್ರತಿಬಂಧಕಾಜ್ಞೆ ತಂದಿದ್ದರು.

    ಇದನ್ನೂ ಓದಿ :ಮಗುವನ್ನು ಕೊಂ*ದು ವಾಷಿಂಗ್ ಮೆಷಿನ್ ನಲ್ಲಿಟ್ಟ ಮಹಿಳೆ!

    ಈಗ ಅದೇ ಅರ್ಜಿಯನ್ನು ಉಲ್ಲೇಖಿಸಿ, ಆರೋಪ ಪಟ್ಟಿಯಲ್ಲಿರುವ ಮಾಹಿತಿ ಹಾಗೂ ಹರಿದಾಡುತ್ತಿರುವ ಕೆಲವು ಚಿತ್ರಗಳನ್ನು ಪ್ರದರ್ಶಿಸದಂತೆ ಸೂಚನೆ ನೀಡುವಂತೆ ಮನವಿ ಮಾಡಲಾಗಿತ್ತು. ಅದರಂತೆ ಹೈಕೋರ್ಟ್ ಏಕಸದಸ್ಯ ಪೀಠ ಮುಂದಿನ ವಿಚಾರಣೆಯವರೆಗೂ ಆರೋಪ ಪಟ್ಟಿಯಲ್ಲಿರುವ ಮಾಹಿತಿಯನ್ನು ಪ್ರಸಾರ ಮಾಡದಂತೆ ಸೂಚನೆ ನೀಡಿ ಆದೇಶ ಹೊರಡಿಸಿದೆ.

    Continue Reading

    FILM

    ರಶ್ಮಿಕಾ ಮಂದಣ್ಣಗೆ ಆಕ್ಸಿಡೆಂಟ್‌..! ಈ ಬಗ್ಗೆ ನಟಿ ಹೇಳಿದ್ದೇನು?

    Published

    on

    ಮುಂಬೈ/ಮಂಗಳೂರು: ಕಿರಿಕ್ ಪಾರ್ಟಿ ಸಿನೆಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಇದೀಗ ನ್ಯಾಷನಲ್ ಕ್ರಷ್ ಆಗಿ ಹೊರಹೊಮ್ಮಿದ್ದಾರೆ. ಅಲ್ಲದೇ ಸ್ಯಾಂಡಲ್‌ವುಡ್‌ ನಿಂದ ಬಾಲಿವುಡ್‌ ತನಕ ಉತ್ತಮ ನಟಿ ಪಟ್ಟವನ್ನೂ ಅಲಂಕರಿಸಿದ್ದಾರೆ.

    ಚಿತ್ರರಂಗದ ಬಿಗ್ ಸ್ಟಾರ್ ಗಳ ಜೊತೆ ಸ್ಕ್ರೀನ್‌ ಹಂಚಿಕೊಂಡಿರುವ ರಶ್ಮಿಕಾ ಇದೀಗ ಮುಂಬೈ, ಹೈದರಾಬಾದ್ ಗೆ ಸುತ್ತಾಡುತ್ತಿದ್ದಾರೆ. ಸದ್ಯಕ್ಕೆ ರಶ್ಮಿಕಾ ಕೈಯಲ್ಲಿ ಆರು ಸಿನೆಮಾಗಳಿದ್ದು ಆಭಿಮಾನಿಗಳು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಪುಷ್ಪ-2 ಹಾಗೂ ಚಾವ ಸಿನೆಮಾಗಳು ಡಿ.6ಕ್ಕೆ ಒಂದೇ ದಿನ ರಿಲೀಸ್ ಆಗಲಿದ್ದು ಎರಡೂ ಸಿನೆಮಾಗಳ ಟೀಸರ್‌ಗಳು ಕೂಡಾ ಭಾರೀ ಸುದ್ದಿ ಮಾಡ್ತಿದೆ. ರೈನ್‌ ಬೋ, ದಿ ಗರ್ಲ್‌ ಫ್ರೆಂಡ್ ಎಂಬ ಎರಡು ಮಹಿಳಾ ಪ್ರಧಾನ ಸಿನೆಮಾಗಳಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಇನ್ನು ಸಲ್ಮಾನ್ ಖಾನ್ ಜೋಡಿಯಾಗಿ ‘ಸಿಖಂದರ್’ ಹಾಗೂ ಧನುಷ್‌ಗೆ ಜೋಡಿಯಾಗಿ ‘ಕುಬೇರ’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

    ವಿಕ್ಕಿ ಕೌಶಲ್-ರಶ್ಮಿಕಾ ನಟನೆಯ ಸಿನೆಮಾ ಟೀಸರ್ ರಿಲೀಸ್..! ಛತ್ರಪತಿ ಲುಕ್‌ನಲ್ಲಿ ವಿಕ್ಕಿ…

    ಸದಾ ಸೋಶಿಯಲ್ ಮೀಡಿಯಾಗಳಲ್ಲಿ ಆ್ಯಕ್ಟಿವ್ ಆಗಿರುವ ರಶ್ಮಿಕಾ ಇತ್ತೀಚೆಗೆ ಸೋಶಿಯಲ್ ಮೀಡಿಯಾದಿಂದ ದೂರ ಉಳಿದಿದ್ದರು. ಇದೀಗ ಸ್ವತಃ ರಶ್ಮಿಕಾ ಇದಕ್ಕೆ ಕಾರಣವೇನು ಎಂಬುದನ್ನು ತಿಳಿಸಿದ್ದಾರೆ.

    ರಶ್ಮಿಕಾಗೆ ಸಣ್ಣದಾದ ಅಫಘಾತ ಉಂಟಾಗಿ ಚಿಕಿತ್ಸೆಗೆ ಒಳಪಟ್ಟಿದ್ದರೆಂಬುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಅವರು, “ಹಾಯ್‌ ಎಲ್ಲರೂ ಹೇಗಿದ್ದೀರಾ? ನಾನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ ಮಾಡಿ ಜೊತೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡು ಬಹಳ ಸಮಯವಾಗಿದೆ. ಕಳೆದ ತಿಂಗಳು ನಾನು ಹೆಚ್ಚು ಸಕ್ರಿಯವಾಗಿಲ್ಲದೇ ಇರಲು ಕಾರಣ ನನಗೆ ಸಣ್ಣ ಅಪಘಾತವಾಗಿ ಪೆಟ್ಟಾಗಿತ್ತು. ವೈದ್ಯರು ಹೇಳಿದಂತೆ ನಾನು ವಿಶ್ರಾಂತಿ ಪಡೆದು ಚೇತರಿಸಿಕೊಳ್ಳುತ್ತಿದ್ದೇನೆ” ಎಂದು ಹೇಳಿದ್ದಾರೆ. ಈಗ ನಾನು ಚೆನ್ನಾಗಿದ್ದೇನೆ, ನಾನು ಸೂಪರ್ ಆ್ಯಕ್ಟೀವ್‌ ಆಗಿರುವ ಹಂತದಲ್ಲಿದ್ದೇನೆ. ಆದ್ದರಿಂದ ನನ್ನ ಚಟುವಟಿಕೆ ಮತ್ತೆ ಆರಂಭವಾಗಿದೆ. ಯಾವಾಗಲೂ ನೀವು ನಿಮ್ಮ ಬಗ್ಗೆ ಕಾಳಜಿ ವಹಿಸಲು ಆದ್ಯತೆ ನೀಡಿ. ಯಾಕಂದ್ರೆ ಜೀವನವು ತುಂಬಾ ಸೂಕ್ಷ್ಮ ಮತ್ತು ಚಿಕ್ಕದು. ನಮಗೆ ನಾಳೆ ಇರುತ್ತೋ ಇಲ್ಲವೋ ಗೊತ್ತಿಲ್ಲ. ಆದ್ದರಿಂದ ಪ್ರತಿದಿನ ನಾವು ಸಂತೋಷವಾಗಿರಬೇಕು ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ. ಅಲ್ಲದೇ ಕೊನೆಗೆ ‘ಇನ್ನೊಂದು ವಿಷಯ.. ನಾನು ಈಗ ಹೆಚ್ಚು ಲಡ್ಡುಗಳನ್ನು ತಿನ್ನುತ್ತಿದ್ದೇನೆ’ ಎಂದು ತಮಾಷೆಯಾಗಿ ಬರೆದುಕೊಂಡು ಇಮೊಜಿ ಹಾಕಿದ್ದಾರೆ.

    ರಶ್ಮಿಕಾ ಪೋಸ್ಟ್‌ ನೋಡಿ ಹಲವು ಅಭಿಮಾನಿಗಳು ಆದಷ್ಟು ಚೇತರಿಸಿಕೊಳ್ಳಿ ಎಂದು ಕಾಮೆಂಟ್ ಮೂಲಕ ಶುಭಹಾರೈಸಿದ್ದಾರೆ.

    Continue Reading

    FILM

    ಅಮೆರಿಕದ ಖ್ಯಾತ ನಟ ಜೇಮ್ಸ್ ಎರ್ಲ್ ಜೋನ್ಸ್ ಇನ್ನಿಲ್ಲ

    Published

    on

    ಮಂಗಳೂರು/ವಾಷಿಂಗ್ಟನ್ : ಅಮೆರಿಕದ ಖ್ಯಾತ ನಟ ಜೇಮ್ಸ್ ಎರ್ಲ್ ಜೋನ್ಸ್(93) ವಿ*ಧಿವಶರಾಗಿದ್ದಾರೆ.  ದೀರ್ಘಕಾಲದ ಮಧುಮೇಹದಿಂದ ಜೋನ್ಸ್ ಬಳಲುತ್ತಿದ್ದರು. ಸೋಮವಾರ(ಸೆ.9) ರಾತ್ರಿ ಇಹಲೋಕ ತ್ಯಜಿಸಿದ್ದಾರೆ ಎಂದು ವರದಿಯಾಗಿದೆ.

    ಜೋನ್ಸ್ ನಿ*ಧನದ ಕುರಿತು ಅವರ ಮಗ ಹ್ಯಾಮಿಲ್ ಎಕ್ಸ್ ನಲ್ಲಿ #RIP Dad ಎಂದು ಹೃದಯ ಒಡೆದಿರುವ ಎಮೋಜಿ ಪೋಸ್ಟ್ ಮಾಡಿದ್ದಾರೆ.

    ಆಸ್ಕರ್ ಪ್ರಶಸ್ತಿ ವಿಜೇತ ಕಲಾವಿದ :

    ಜೇಮ್ಸ್ ಎರ್ಲ್ ಜೋನ್ಸ್ ಅವರು ‘ದಿ ಲಯನ್ ಕಿಂಗ್’, ‘ಸ್ಟಾರ್ ವಾರ್ಸ್’ ಸೇರಿದಂತೆ  ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಟಿವಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದರು. ಜೊತೆಗೆ ರಂಗಭೂಮಿ ಕಲಾವಿದನಾಗಿಯೂ ಖ್ಯಾತಿ ಗಳಿಸಿದ್ದರು.

    ಇದನ್ನೂ ಓದಿ : ಆಟೋ ರಿಕ್ಷಾ ಅಪಘಾತದಲ್ಲಿ ತಾಯಿಯನ್ನು ರಕ್ಷಿಸಿದ ಬಾಲಕಿಯ ಧೈರ್ಯ ಶ್ಲಾಘಿಸಿದ ಸಿಎಂ

    1969 ರಲ್ಲಿ ‘ದಿ ಗ್ರೇಟ್ ವೈಟ್ ಹೋಪ್’, 1987 ರಲ್ಲಿ ‘ಫೆನ್ಸಸ್’ ಚಿತ್ರಕ್ಕೆ ಪ್ರಶಸ್ತಿ ಬಂದಿವೆ. 19991ರಲ್ಲಿ ದೂರದರ್ಶನದಲ್ಲಿ ಪ್ರಸಾರವಾದ ‘ಗೇಬ್ರಿಯಲ್ಸ್ ಫೈರ್’,  ‘ಹೀಟ್ ವೇವ್’ ಕಾರ್ಯಕ್ರಮಗಳು ಯಶಸ್ಸು ಗಳಿಸಿದ್ದವು.

    1977ರಲ್ಲಿ ‘ಗ್ರೇಟ್ ಅಮೇರಿಕನ್ ಡಾಕ್ಯುಮೆಂಟ್ಸ್’ ಎಂಬ ಆಲ್ಬಂಗಾಗಿ ಗ್ರ್ಯಾಮಿ ಪ್ರಶಸ್ತಿ ಪಡೆದಿದ್ದ ಅವರು, 2011 ರಲ್ಲಿ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.

    Continue Reading

    LATEST NEWS

    Trending